Viral Video: 'ಸೈಯಾನ್' ಹಾಡಿಗೆ ಕುಣಿದು ಕುಪ್ಪಳಿಸಿದ 'ಡ್ಯಾನ್ಸಿಂಗ್ ದಾದಿ'- ಈ ಅಜ್ಜಿಯ ಜೋಶ್‌ಗೆ ಎಲ್ರೂ ಫಿದಾ!
ಕೈಲಾಶ್ ಖೇರ್ ಅವರ 'ಸೈಯಾನ್' ಹಾಡಿಗೆ 'ಡ್ಯಾನ್ಸಿಂಗ್ ದಾದಿ' ಎಂದು ಕರೆಯಲ್ಪಡುವ ಮಹಿಳೆ ರವಿ ಬಾಲಾ ಶರ್ಮಾ ಸಖತ್ ಆಗಿ ಹೆಜ್ಜೆ ಹಾಕಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral video) ಆಗಿ ಅನೇಕ ನೆಟ್ಟಿಗರ ಹೃದಯ ಗೆದ್ದಿದೆ.

ಡಾನ್ಸಿಂಗ್ ದಾದಿಯ ನೃತ್ಯ ಕೌಶಲ್ಯ

ನವದೆಹಲಿ: ಡ್ಯಾನ್ಸ್‌ಗೆ ವಯಸ್ಸಿನ ಹಂಗಿಲ್ಲ. ಹಿತವಾದ ಸಂಗೀತ ಕಿವಿಗೆ ಬಿದ್ದರೆ ಕಾಲುಗಳು ಆ ಸಂಗೀತದ ಲಯಕ್ಕೆ ತಕ್ಕ ಹಾಗೇ ಹೆಜ್ಜೆ ಹಾಕುತ್ತವೆ. ಅದೇರೀತಿ ಜನರು ಪ್ರೀತಿಯಿಂದ 'ಡ್ಯಾನ್ಸಿಂಗ್ ದಾದಿ' ಎಂದು ಕರೆಯಲ್ಪಡುವ ಮಹಿಳೆಯೊಬ್ಬಳು ಗಾಯಕ ಕೈಲಾಶ್ ಖೇರ್ ಭಾವಪೂರ್ಣ ಟ್ರ್ಯಾಕ್ 'ಸೈಯಾನ್' ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾಳೆ. ಆಕೆಯ ಈ ಹೃದಯಸ್ಪರ್ಶಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಇದು ಅನೇಕ ನೆಟ್ಟಿಗರ ಹೃದಯವನ್ನು ಗೆದ್ದಿದೆ.
ರವಿ ಬಾಲಾ ಶರ್ಮಾ ಎಂದು ಗುರುತಿಸಲ್ಪಟ್ಟ ಹಿರಿಯ ನರ್ತಕಿಯ 'ಸೈಯಾನ್' ಹಾಡಿಗೆ ಅದ್ಭುತವಾಗಿ ಹೆಜ್ಜೆ ಹಾಕಿ ನೆಟ್ಟಿಗರ ಹೃದಯ ಗೆದ್ದಿದ್ದಾಳೆ. ಈ ಮೂಲಕ ಲೈಫನ್ನು ಎಂಜಾಯ್ ಮಾಡೋಕೆ ವಯಸ್ಸಿನ ಹಂಗಿಲ್ಲ ಎಂದು ಸಾಬೀತುಪಡಿಸಿದ್ದಾಳೆ. ಸಾಂಪ್ರದಾಯಿಕ ಸ್ಕರ್ಟ್ ಮತ್ತು ಎಥ್ನಿಕ್ ಜಾಕೆಟ್ ಧರಿಸಿದ ಶರ್ಮಾ ಟ್ರೆಂಡಿಂಗ್ ಹಾಡಿಗೆ ಸಖತ್ ಆಗಿ ಹೆಜ್ಜೆಗಳನ್ನು ಹಾಕಿದ್ದಾಳೆ.
ಅವಳ ನೃತ್ಯ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಆಕೆಯ ನೃತ್ಯ ನೋಡಿ ನೆಟ್ಟಿಗರು ಕಾಮೆಂಟ್ ವಿಭಾಗಗಳಲ್ಲಿ 'ಹಾರ್ಟ್' ಮತ್ತು 'ಚಪ್ಪಾಳೆ' ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಒಂದು ಗಂಟೆಯೊಳಗೆ ಇದು ಸುಮಾರು ಒಂದು ಸಾವಿರ ಲೈಕ್‍ಗಳನ್ನು ಗಳಿಸಿದೆ. ಕೈಲಾಶ್ ಖೇರ್ ಅವರ 'ಸೈಯಾನ್ʼ 2007ರಲ್ಲಿ ಜನಪ್ರಿಯ ಆಲ್ಬಂ 'ತೇರಿ ದೀವಾನಿ' ಅಡಿಯಲ್ಲಿ ಬಿಡುಗಡೆಯಾಯಿತು. ಈ ಹಾಡು ಅನೇಕರ ಮನಗೆದ್ದಿತ್ತು. ಇದೀಗ ಈ ಅಜ್ಜಿ ಹಾಡಿನ ಲಯಕ್ಕೆ ಕುಣಿದು ಆ ಹಾಡಿಗೆ ಮತ್ತಷ್ಟು ಜೀವ ತುಂಬಿದ್ದಾಳೆ.
ಈ ಹಿಂದೆ, ಶರ್ಮಾ ವಾಟ್ ಜುಮ್ಕಾ?, ಐನ್ವಾಯಿ ಐನ್ವಾಯಿ, ಮೇರೆ ಧೋಲ್ ನಾ ಸೇರಿದಂತೆ ಹಲವಾರು ಬಾಲಿವುಡ್ ಹಾಡುಗಳಿಗೆ ನೃತ್ಯ ಮಾಡಿದ್ದಾಳೆ. ಈಕೆಯ ಅಭಿನಯವು ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡಲೇ ಹಿಟ್ ಆಗುತ್ತದೆ. ಡ್ಯಾನ್ಸಿಂಗ್ ದಾದಿ ಸಲ್ಮಾನ್ ಖಾನ್ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ 'ದಬಾಂಗ್'ನ ಹಾಡೊಂದಕ್ಕೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಡ್ಯಾನ್ಸ್ ವಿಡಿಯೊ ಇದುವರೆಗೆ 16 ಲಕ್ಷ ವೀಕ್ಷಣೆಗಳನ್ನು ಮತ್ತು ಸಾವಿರಾರು ಲೈಕ್ಸ್‌ಗಳನ್ನು ಗಿಟ್ಟಿಸಿಕೊಂಡಿದೆ.