ವ್ಯಾಲೆಂಟೈನ್ಸ್ ಡೇ ದಿನ ಯುವಕರಿಗೆ ಕಿವಿಮಾತು ಹೇಳಿದ ಕ್ರಿಕೆಟಿಗ ಇಶಾಂತ್ ಶರ್ಮಾ: ಹಳೆಯ ವಿಡಿಯೊ ಮತ್ತೆ ವೈರಲ್
Viral Video: ಪ್ರೀತಿಯ ದಿನವನ್ನು ನಿಜವಾಗಿಯೂ ಹೇಗೆ ಆಚರಿಸಬೇಕು ಎಂಬುದರ ಕುರಿತು ಕ್ರಿಕೆಟಿಗ ಇಶಾಂತ್ ಶರ್ಮಾ ಯುವಕರಿಗೆ ಕಿವಿ ಮಾತನ್ನು ಹೇಳಿದ್ದಾರೆ. ಇಂದಿನ ದಿನವನ್ನು ನಿಮ್ಮ ಸಂಗಾತಿ, ಪ್ರಿಯತಮೆ ಜತೆ ಕಳೆಯುವ ಬದಲು, ನಿಮ್ಮ ತಂದೆ-ತಾಯಿಯೊಂದಿಗೆ ಕಳೆಯಿರಿ ಎಂದು ಅವರು ಮನವಿ ಮಾಡಿದ್ದಾರೆ.
ಕ್ರಿಕೆಟಿಗ ಇಶಾಂತ್ ಶರ್ಮಾ -
ನವದೆಹಲಿ, ಫೆ. 14: ಫೆಬ್ರವರಿ 14 ಬಂತೆಂದರೆ ಸಾಕು. ಎಲ್ಲೆಡೆ ಪ್ರೇಮಿಗಳ ದಿನಾಚರಣೆಯ ಸಂಭ್ರಮ. ಪ್ರೇಮಿಗಳು ಈ ದಿನವನ್ನು ತಮ್ಮ ಪ್ರೀತಿ ಪಾತ್ರರು, ಸಂಗಾತಿ ಜತೆಗೆ ಅದ್ಧೂರಿಯಾಗಿ ಆಚರಿಸಲು ಪ್ಲ್ಯಾನ್ ಮಾಡುತ್ತಾರೆ. ಜೋಡಿ ಹಕ್ಕಿಗಳು ಪ್ರೀತಿಯ ಸಂಭ್ರಮದಲ್ಲಿ ತೇಲಾಡುತ್ತಿದ್ದರೆ, ಇಂತಹ ಆಚರಣೆಗೆ ನಿಷೇಧ ಹೇರಬೇಕು ಎನ್ನುವರೂ ಇದ್ದಾರೆ. ಈ ನಡುವೆ ಪ್ರೇಮಿಗಳ ದಿನಾಚರಣೆಯ ಹಲವು ವಿಡಿಯೊಗಳು ವೈರಲ್ (Viral Video) ಆಗಿದ್ದು, ಟೀಮ್ ಇಂಡಿಯಾದ ವೇಗಿ ಇಶಾಂತ್ ಶರ್ಮಾ ಅವರ ಹಳೆಯ ವಿಡಿಯೊವೊಂದು ಮತ್ತೆ ಮುನ್ನೆಲೆಗೆ ಬಂದಿದೆ.
ಪ್ರೀತಿಯ ದಿನವನ್ನು ನಿಜವಾಗಿಯೂ ಹೇಗೆ ಆಚರಿಸಬೇಕು ಎಂಬುದರ ಕುರಿತು ಈ ವಿಡಿಯೊ ಹೊಸ ಚರ್ಚೆ ಹುಟ್ಟು ಹಾಕಿದೆ. ಕ್ರಿಕೆಟಿಗ ಇಶಾಂತ್ ಶರ್ಮಾ ಯುವಕರಿಗೆ ಕಿವಿ ಮಾತನ್ನು ಹೇಳಿದ್ದಾರೆ. ಇಂದಿನ ದಿನವನ್ನು ನಿಮ್ಮ ಸಂಗಾತಿ, ಪ್ರಿಯತಮೆ ಜತೆ ಕಳೆಯುವ ಬದಲು, ನಿಮ್ಮ ತಂದೆ-ತಾಯಿಯೊಂದಿಗೆ ಕಳೆಯಿರಿ ಎಂದು ಅವರು ಮನವಿ ಮಾಡಿದ್ದಾರೆ. ಅವರ ಪ್ರಕಾರ ತಾಯಿ ಮತ್ತು ತಂದೆಯೊಂದಿಗೆ ಪ್ರೇಮಿಗಳ ದಿನವನ್ನು ಆಚರಿಸುವುದು ಹೆಚ್ಚು ಅರ್ಥಪೂರ್ಣವಾಗಿರುತ್ತದೆ.
ವಿಡಿಯೊ ನೋಡಿ:
Mandatory Valentine’s Day post 😂pic.twitter.com/xph4qiiee0
— Out Of Context Cricket (@GemsOfCricket) February 14, 2026
ಪೋಷಕರು ತಮ್ಮ ಮಕ್ಕಳನ್ನು ಯಶಸ್ಸು ಅಥವಾ ವೈಫಲ್ಯ ಎಂದು ಲೆಕ್ಕಿಸದೆ ಪ್ರೀತಿಸುತ್ತಾರೆ. ಹಾಗಾಗಿ ಪೋಷಕರು ಇಂತಹ ವಿಶೇಷ ಭಾವನೆಗೆ ಅರ್ಹರು. ಈ ಪ್ರೇಮಿಗಳ ದಿನದಂದು ತಂದೆ-ತಾಯಿಗೆ ಉಡುಗೊರೆ ನೀಡಿ ಅವರೊಂದಿಗೆ ಸಮಯ ಕಳೆಯುವ ಮೂಲಕ ಗೌರವ ನೀಡಿ. ಪೋಷಕರ ಆಶೀರ್ವಾದ ನಮ್ಮ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ ಎಂದು ಇಶಾಂತ್ ಅವರ ಅಭಿಪ್ರಾಯವಾಗಿದೆ.
ಶ್ರೀಮಂತ ಹುಡುಗರು ಬಿಸಿ ಸಮೋಸ ಇದ್ದಂತೆ! ಸಂಗಾತಿ ಆಯ್ಕೆ ಬಗ್ಗೆ ಸಲಹೆ ನೀಡಿದ ಯುವತಿ!
ವಿಡಿಯೊದಲ್ಲಿ ಮಾತನಾಡುತ್ತಾ ಇಶಾಂತ್ ಶರ್ಮಾ, ಪ್ರೇಮಿಗಳ ದಿನವು ಪೋಷಕರ ಕಡೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವೂ ಆಗಿರಬಹುದು ಎಂದು ಗಮನ ಸೆಳೆದಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಇಶಾಂತ್ ಅವರ ಈ ಸಲಹೆ ಇಂದಿನ ತಲೆಮಾರಿಗೆ ಅತ್ಯಂತ ಅಗತ್ಯ ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಪ್ರಸ್ತುತ ರಾಷ್ಟ್ರೀಯ ತಂಡದಿಂದ ಹೊರಗಿರುವ ಇಶಾಂತ್ ಕೊನೆಯ ಬಾರಿಗೆ ವೃತ್ತಿಪರ ಐಪಿಎಲ್‌ನಲ್ಲಿ ಕಾಣಿಸಿಕೊಂಡಿದ್ದರು. 2025ರಲ್ಲಿ ಅವರು ಗುಜರಾತ್ ಟೈಟಾನ್ಸ್ ಪ್ರತಿನಿಧಿಸಿದ್ದರು.