Kapurthala Maharaja: ಈ ರಾಜ ತನ್ನ ರಾಣಿಯನ್ನು ಪುರುಷನನ್ನಾಗಿ ಬದಲಾಯಿಸಿದ್ದು ಏಕೆ ಗೊತ್ತೇ?
ಭಾರತೀಯರ ವಿದೇಶಿ ಪ್ರವಾಸಕ್ಕೆ ನಿಷೇಧ ಹೇರಿದ್ದ ಬ್ರಿಟಿಷರ ನಿಯಮಗಳನ್ನು ಉಲ್ಲಂಘಿಸಿ ಕಪುರ್ತಲದ ಮಹಾರಾಜನು ತನ್ನ ರಾಣಿಯನ್ನು ಯುರೋಪ್‌ಗೆ ಹೋಗಲು ಅವಕಾಶ ಮಾಡಿಕೊಟ್ಟ. ಇದಕ್ಕಾಗಿ ಆತ ತನ್ನ ರಾಣಿಯನ್ನು ಪುರುಷನನ್ನಾಗಿ ಮಾಡಿದನು. ಈ ಮೂಲಕ ಬ್ರಿಟಿಷರನ್ನು ವಂಚಿಸಿದನು. ಈ ಪ್ರಯಾಣ ಹೇಗಿತ್ತು, ಇದರ ಹಿಂದಿನ ಕಥೆ ಏನು ಇಲ್ಲಿದೆ ಸಂಪೂರ್ಣ ಮಾಹಿತಿ.


ಬ್ರಿಟಿಷರ ಆಡಳಿತದ (British rule in india) ಕಾಲದಲ್ಲಿ ಭಾರತೀಯ ಮಹಾರಾಜನೊಬ್ಬ ತನ್ನ ರಾಣಿಯನ್ನು ಪುರುಷನಂತೆ ಮಾಡಿ ಯುರೋಪ್ ಗೆ (Eurppe tour) ಕರೆದುಕೊಂಡು ಹೋಗಿದ್ದ. ಅದು ಬ್ರಿಟಿಷರಿಗೆ ವಂಚಿಸಿ. ತನ್ನ ಪತ್ನಿಯನ್ನು ಯುರೋಪ್ ಗೆ ಕರೆದುಕೊಂಡು ಹೋಗಲು ಮೊದಲು ಆತ ಬ್ರಿಟಿಷ್ ಅಧಿಕಾರಿಗಳ ಅನುಮತಿ ಕೇಳಿದ್ದನು. ಆದರೆ ಬ್ರಿಟಿಷರು ಮಹಾರಾಜರ ಬೇಡಿಕೆಯನ್ನು ನಿರಾಕರಿಸಿದರು. ಆದರೂ ರಾಜ ಎದೆಗುಂದದೆ ತನ್ನ ರಾಣಿಯನ್ನು ಪುರುಷನನ್ನಾಗಿ ಮಾಡಿ ಯುರೋಪ್ ಪ್ರವಾಸಕ್ಕೆ ತನ್ನ ಜೊತೆ ಕರೆದುಕೊಂಡು ಹೋಗಿದ್ದ. ಈ ರಾಜ ಬೇರೆ ಯಾರೂ ಅಲ್ಲ ಪಂಜಾಬ್‌ನ ಕಪುರ್ತಲದ (Maharaja Jagjit Singh) ಮಹಾರಾಜ.
ಸ್ವಾತಂತ್ರ್ಯದ ಮೊದಲಿನ ಭಾರತದ ಕೆಲವು ರಾಜ, ಮಹಾರಾಜರ ಕಥೆಗಳು ಸಾಕಷ್ಟು ರೋಚಕವಾಗಿರುತ್ತಿತ್ತು. ಅಂತಹ ಒಂದು ಕಥೆ ಪಂಜಾಬ್‌ನ ಕಪುರ್ತಲದ ಮಹಾರಾಜನದ್ದು. ಆತ ತನ್ನ ಅತ್ಯಂತ ಸುಂದರ ರಾಣಿಯನ್ನು ಪುರುಷ ವೇಷದಲ್ಲಿ ವಿದೇಶಕ್ಕೆ ಕರೆದೊಯ್ದ ಕಥೆ ಇಂದಿಗೂ ಇಲ್ಲಿನ ಜನರು ಗರ್ವದಿಂದ ನೆನಪಿಸಿಕೊಳ್ಳುತ್ತಾರೆ.
ಈ ಕಥೆಯನ್ನು ಆಗಿನ ಕಾಲದಲ್ಲಿ ದಿವಾನರಾಗಿ ಸೇವೆ ಸಲ್ಲಿಸಿದ ಜರ್ಮಾನಿ ದಾಸ್ ಅವರ "ಮಹಾರಾಣಿ" ಪುಸ್ತಕದಲ್ಲಿ ಹೇಳಲಾಗಿದೆ. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ವೈಸರಾಯ್ ಗಳು ಭಾರತದಲ್ಲಿ ಸರ್ವೋಚ್ಚ ಅಧಿಕಾರ ಹೊಂದಿದ್ದರು. ಮಹಾರಾಜರು ಕೂಡ ಅವರ ಆಜ್ಞೆಗಳನ್ನು ಉಲ್ಲಂಘಿಸುವಂತಿರಲಿಲ್ಲ. ಆಗ ಲಾರ್ಡ್ ಕರ್ಜನ್ ಭಾರತದ ವೈಸರಾಯ್ ಆಗಿದ್ದರು. ಈ ವೇಳೆ ಪಂಜಾಬ್‌ನ ಕಪುರ್ತಲದ ಮಹಾರಾಜರು ವಿದೇಶಕ್ಕೆ ಪ್ರಯಾಣಿಸುವ ಯೋಜನೆ ಹಾಕಿಕೊಂಡರು. ಇದಕ್ಕೆ ಕರ್ಜನ್ ತಡೆದರು. ಆದರೂ ಮಹಾರಾಜರು ವೈಸರಾಯ್ ಅವರ ವಿಶೇಷ ಅನುಮತಿಯೊಂದಿಗೆ ವಿದೇಶಿ ಪ್ರವಾಸ ಕೈಗೊಳ್ಳುವಲ್ಲಿ ಯಶಸ್ವಿಯಾದರು.
ಈ ವೇಳೆ ಅವರು ತಮ್ಮ ರಾಣಿಯನ್ನು ಮಾರುವೇಷದಲ್ಲಿ ಕರೆದುಕೊಂಡು ಹೋಗಿರುವುದು ವಿಶೇಷ. ಕಪುರ್ತಲಾದ ಮಹಾರಾಜ ಜಗಜಿತ್ ಸಿಂಗ್ ಯುರೋಪ್‌ಗೆ ಭೇಟಿ ನೀಡಲು ಅವಕಾಶ ಸಿಕ್ಕಿತು. ಆದರೆ ಈ ವೇಳೆ ಅವರು ತಮ್ಮೊಂದಿಗೆ ಕೇವಲ ಸಹಾಯಕರನ್ನು ಮಾತ್ರ ಕರೆದುಕೊಂಡು ಹೋಗಬಹುದಿತ್ತು. ಯಾವುದೇ ರಾಣಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗದಂತೆ ಷರತ್ತು ವಿಧಿಸಿ ಲಾರ್ಡ್ ಕರ್ಜನ್ ಮಹಾರಾಜರ ಪ್ರವಾಸಕ್ಕೆ ಅನುಮತಿ ನೀಡಿದನು.
ಆರು ರಾಣಿಯರನ್ನು ಹೊಂದಿದ್ದ ಮಹಾರಾಜ ಜಗಜಿತ್ ಸಿಂಗ್ ಇದರಿಂದ ತುಂಬಾ ದುಃಖಗೊಂಡರು. ಅವರು ತಮ್ಮೊಂದಿಗೆ ತಮ್ಮ ಅತ್ಯಂತ ಸುಂದರ ರಾಣಿ ಕನರಿಯನ್ನು ಕರೆದುಕೊಂಡು ಹೋಗಲು ಉದ್ದೇಶಿಸಿದ್ದರು. ಕೊನೆಗೆ ಅವರು ಒಂದು ಯೋಜನೆಯನ್ನು ರೂಪಿಸಿದರು.

ಕಪುರ್ತಲದ ದಿವಾನ್ ಆಗಿದ್ದ ಜರ್ಮಾನಿ ದಾಸ್ ಅವರ ತಂದೆ ದೌಲತ್ರಾಮ್ ಅವರು ರಾಣಿಗೆ ಪುರುಷನ ವೇಷ ಧರಿಸಿ ಕರೆದುಕೊಂಡು ಹೋಗಲು ಸಲಹೆ ನೀಡಿದರು. ಪ್ರಾರಂಭದಲ್ಲಿ ಮಹಾರಾಜರು ಹಿಂಜರಿದರೂ ಕೊನೆಗೆ ಒಪ್ಪಿ ಕರೆದುಕೊಂಡು ಹೋದರು.
ರಾಣಿ ಕನರಿ
ಅಪ್ರತಿಮ ಸುಂದರಿಯಾಗಿದ್ದ ರಾಣಿ ಕನರಿ ಶಿಮ್ಲಾ ಬಳಿಯ ರಾಜ್ಯದ ದಿವಾನರ ಮಗಳಾಗಿದ್ದಳು. ಪುರುಷರ ಉಡುಪು, ಅಚ್ಕನ್, ಪೈಜಾಮಾ, ಪೇಟ, ನಕಲಿ ಗಡ್ಡವನ್ನು ಧರಿಸಿ ಆಕೆಯನ್ನು ಸಿಖ್ ಪುರುಷನಂತೆ ಕಾಣುವ ಹಾಗೆ ಮಾಡಲಾಯಿತು. ಬಳಿಕ ಇದೇ ವೇಷದಲ್ಲಿ ಆಕೆ ವಿದೇಶ ಪ್ರವಾಸಕ್ಕೆ ರಾಜನೊಂದಿಗೆ ಹೊರಟಳು. ಪ್ರಯಾಣದ ಉದ್ದಕ್ಕೂ ಯಾರಿಗೂ ಯಾವುದೇ ಅನುಮಾನ ಬರಲಿಲ್ಲ. ರಾಣಿ ಸುರಕ್ಷಿತವಾಗಿ ಯುರೋಪ್ ತಲುಪಿದ್ದಳು.
ಇದನ್ನೂ ಓದಿ: ಶ್ವಾಸನಾಳದಲ್ಲಿ ಸಿಲುಕಿದ ಕಡಲೆಕಾಯಿ! ಉಬ್ಬಸದಿಂದ ಬಳಲುತ್ತಿದ್ದ ವ್ಯಕ್ತಿಗೆ ಯಶಸ್ವಿ ಚಿಕಿತ್ಸೆ
ಯುರೋಪ್ ಪ್ರವಾಸದಲ್ಲಿರುವಾಗ ರಾಜರು ತಮ್ಮೊಂದಿಗೆ ರಾಣಿ ಬಂದಿರುವುದಾಗಿ ಹೇಳಿಕೊಂಡರೂ ಎಲ್ಲರ ದೃಷ್ಟಿಯಿಂದ ಆಕೆಯನ್ನು ತಪ್ಪಿಸಿಡಲು ಸದಾ ಪುರುಷ ವೇಷದಲ್ಲೇ ಇರುವಂತೆ ಮಾಡಿದರು. ಬ್ರಿಟಿಷ್ ಅಧಿಕಾರಿಗಳಿಗೆ ಯಾವುದೇ ಸೂಚನೆ ನೀಡದೆ ಹಲವಾರು ತಿಂಗಳ ಕಾಲ ಮಹಾರಾಜರು ರಾಣಿಯೊಂದಿಗೆ ವಿದೇಶದಲ್ಲಿ ಕಳೆದರು.
ಭಾರತಕ್ಕೆ ಅವರು ಮರಳುವಾಗಲು ಯಾವುದೇ ಸಮಸ್ಯೆ ಬರಲಿಲ್ಲ. ಅವರು ಬಾಂಬೆಗೆ ಆಗಮಿಸಿದಾಗ ಗವರ್ನರ್‌ನ ಮಿಲಿಟರಿ ಕಾರ್ಯದರ್ಶಿ ವೈಸ್‌ರಾಯ್ ಪರವಾಗಿ ಅವರನ್ನು ಸ್ವಾಗತಿಸಿದರು. ಈ ವೇಳೆ ಪುರುಷನ ವೇಷ ಧರಿಸಿದ್ದ ರಾಣಿ ಕನರಿಯನ್ನು ಯಾರೂ ಗುರುತಿಸಲಿಲ್ಲ.