ಕ್ರಿಕೆಟ್ ಬ್ಯಾಟ್ ಶೇಪ್‌ನ ಕಾರ್ ಇದು: ಯುವಕನ ಕ್ರಿಯೇಟಿವಿಟಿಗೆ ನೆಟ್ಟಿಗರು ಫಿದಾ
ಯುವನೊರ್ವನ ಆವಿಷ್ಕಾರವೊಂದು ಎಲ್ಲರ ಗಮನ ಸೆಳೆದಿದೆ. ಹೈದರಾಬಾದ್‌ನ ಸುಧಾ ಕಾರ್ಸ್ ಮ್ಯೂಸಿಯಂನಲ್ಲಿ 21 ಅಡಿ ಬ್ಯಾಟ್ ಅನ್ನು ಎಂಜಿನ್ ಕಾರು ಆಗಿ ಈತ ರೂಪಾಂತರಗೊಳಿಸಿದ್ದಾನೆ. ಸುಧಾ ಕಾರ್ಸ್ ವಸ್ತು ಸಂಗ್ರಹಾಲಯದ ಸದಸ್ಯರೊಬ್ಬರು 21 ಅಡಿ ಉದ್ದದ ಬೃಹತ್ ಕ್ರಿಕೆಟ್ ಬ್ಯಾಟ್ ಅನ್ನು ರಸ್ತೆಯಲ್ಲಿ ಓಡಿಸಬಹುದಾದ ಎಂಜಿನ್ ಕಾರ್ ಆಗಿ ಪರಿವರ್ತಿಸಿದ್ದಾರೆ. ಸದ್ಯ ಈ ವಿಡಿಯೊ ಭಾರಿ ವೈರಲ್ ಆಗಿದೆ.
ಕ್ರಿಕೆಟ್ ಬ್ಯಾಟ್ ರೀತಿಯ ಕಾರ್ -
ನವದೆಹಲಿ, ಡಿ. 15: ಸೃಜನಶೀಲತೆ ಎಂಬುದು ಒಂದು ಕಲೆ. ಎಲ್ಲರಲ್ಲೂ ಒಂದೊಂದು ರೀತಿಯ ಕ್ರಿಯೇಟಿವ್ ಯೋಚನೆಗಳಿದ್ದು ಕೆಲವರು ಅದನ್ನು ಕ್ರಿಯಾತ್ಮಕವಾಗಿ ಬಳಸಿ ಖ್ಯಾತಿ ಗಳಿಸುತ್ತಾರೆ. ಇದೀಗ ಯುವಕನೋರ್ವನ ವಿಶಿಷ್ಟ ಆವಿಷ್ಕಾರವೊಂದು ಎಲ್ಲರ ಗಮನ ಸೆಳೆದಿದೆ. ಹೈದರಾಬಾದ್‌ನ ಸುಧಾ ಕಾರ್ಸ್ ಮ್ಯೂಸಿಯಂನಲ್ಲಿ 21 ಅಡಿ ಬ್ಯಾಟ್ ಅನ್ನು ಎಂಜಿನ್ ಕಾರು ಆಗಿ ಈತ ರೂಪಾಂತರ ಗೊಳಿಸಿದ್ದಾನೆ. ಸುಧಾ ಕಾರ್ಸ್ ವಸ್ತು ಸಂಗ್ರಹಾಲಯದ ಸದಸ್ಯ 21 ಅಡಿ ಉದ್ದದ ಬೃಹತ್ ಕ್ರಿಕೆಟ್ ಬ್ಯಾಟ್ ಅನ್ನು ರಸ್ತೆಯಲ್ಲಿ ಓಡಿಸಬಹುದಾದ ಎಂಜಿನ್ ಕಾರ್ ಆಗಿ ಪರಿವರ್ತಿಸಿದ್ದಾನೆ. ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊ ಭಾರಿ ವೈರಲ್ (Viral Video) ಆಗಿದೆ.
ಒಂದು ಸಣ್ಣ ಬ್ಯಾಟ್‌ನಿಂದ ದೈತ್ಯ ವಾಹನವಾಗಿ ಮಾರ್ಪಡಿಸಿದ ಯುವಕ ಕಲಾತ್ಮಕತೆ ಎಲ್ಲರ ಗಮನ ಸೆಳೆದಿದೆ. ಬ್ಯಾಟ್ ಗಾತ್ರವು ವಿಚಿತ್ರವಾಗಿ ತೋರುತ್ತಿದ್ದರೂ ವಸ್ತುಸಂಗ್ರಹಾಲಯದ ಯುವಕ ಎಂಜಿನ್ ಕಾರ್ ಎಂದು ಹೇಳುವ ಮೂಲಕ ಜನರನ್ನು ಮೂಕವಿಸ್ಮಿತಗೊಳಿಸಿದ್ದಾನೆ. 2007ರಲ್ಲಿ ಕೆರಿಬಿಯನ್ ದ್ವೀಪದಲ್ಲಿ ನಡೆದಂತಹ ಐಸಿಸಿ ವಿಶ್ವಕಪ್‌ಗೂ ಮೊದಲು ಬಳಸಲಾದ ಈ ಬ್ಯಾಟ್ ಅನ್ನು ಕಾರಾಗಿ ರಚನೆ ಮಾಡಲಾಗಿದೆ.
ವಿಡಿಯೊ ನೋಡಿ:
ಈ ಕಾರಿನ ಮೇಲೆ ಟೂರ್ನಮೆಂಟ್‌ನ ಲೋಗೋವನ್ನು ಸಹ ಕ್ರಿಯೇಟ್ ಮಾಡಲಾಗಿದೆ. ಇದರಲ್ಲಿ ಬ್ಯಾಟ್‌ಗೆ ಚಲಾಯಿಸಲು ವೃತ್ತಾಕಾರದ ಚಕ್ರದೊಂದಿಗೆ ಒಂದು ಸಣ್ಣ ಡ್ರೈವಿಂಗ್ ಕ್ಯಾಬಿನ್ ರಚಿಸಸಲಾಗಿದೆ. ಬ್ಯಾಟ್‌ನ ಕೆಳಗೆ ನಾಲ್ಕು ಚಕ್ರಗಳನ್ನು ಅಳವಡಿಸಲಾಗಿದೆ. ಈ ಕಾರು ಸುಮಾರು 30 ರಿಂದ 40 ಕಿ.ಮಿ. ಗಂಟೆ ವೇಗದಲ್ಲಿ ಚಲಿಸುತ್ತದೆ.
ಇಂಡಿಗೋ ವಿಮಾನ ರದ್ದು; ಪುತ್ರನಿಗಾಗಿ 800 ಕಿ.ಮೀ. ದೂರ ಕಾರು ಚಲಾಯಿಸಿದ ತಂದೆ!
ಬ್ಯಾಟ್ ಕಾರ್ ಅನ್ನು ರಸ್ತೆಯಲ್ಲಿ ಓಡಿಸುತ್ತಿಲ್ಲ. ಸದ್ಯ ಇದು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ಮ್ಯೂಸಿಯಂ ಆವರಣದಲ್ಲಿ ನಿಂತಿದೆ. ಇದೇ ಮ್ಯೂಸಿಯಂನಲ್ಲಿ 2003ರ ವಿಶ್ವಕಪ್‌ಗಾಗಿ ತಯಾರಿಸಿದ ಕ್ರಿಕೆಟ್ ಬಾಲ್ ಆಕಾರದ ಎಂಜಿನ್ ಕಾರ್ ಕೂಡ ಇದೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಇವರ ಕ್ರಿಯೇಟಿವ್ ಮೈಂಡ್‌ಗೆ ನಿಜವಾಗಿಯೂ ಶಹಬಾಸ್ ಹೇಳಲೇಬೇಕು ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಬ್ಯಾಟ್ ಅನ್ನೂ ಕೂಡ ಚಲಿಸುವ ಕಾರು ಆಗಿ ಪರಿವರ್ತನೆ ಮಾಡ ಬಹುದೇ? ಇವರ ಯೋಚನಾ ಶೈಲಿ ವಿಭಿನ್ನವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.