ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Father’s Clever Trick: ಮಗನಿಗಾಗಿ ತಂದೆ ಮಾಡಿದ್ದೇನು ಗೊತ್ತೆ? ಶಾಲೆಗೆ ಕಳುಹಿಸಲು ಇದಕ್ಕಿಂತ ಒಳ್ಳೆಯ ಐಡಿಯಾ ಬೇಕಾ?

Viral Video: ಶಾಲೆಗೆ ಹೋಗುವ ಪುಟ್ಟ ಮಕ್ಕಳು ಬೆಳಗ್ಗೆ ಏಳುವುದೇ ಕಷ್ಟ. ಅಲ್ಲದೆ ಕೆಲವು ಮಕ್ಕಳಂತೂ ಶಾಲೆಗೆ ಹೋಗುವುದಿಲ್ಲ ಎಂದು ರಚ್ಚೆ ಹಿಡಿಯುತ್ತಾರೆ. ಅವರನ್ನು ಸಮಾಧಾನ ಮಾಡಿ ಶಾಲೆಗೆ ಕಳುಹಿಸುವುದು ಒಂದು ಹರಸಾಹಸ. ಆದರೆ ಇಲ್ಲೊಬ್ಬ ತಂದೆ ಉಪಾಯವಾಗಿ ತನ್ನ ಮಗನನ್ನು ಶಾಲಾ ಬಸ್ ಹತ್ತಿಸಿದ್ದಾನೆ.

ಮಕ್ಕಳನ್ನು ಶಾಲೆಗೆ ಕಳುಹಿಸಲು ತಂದೆಯ ಐಡಿಯಾ

-

Priyanka P Priyanka P Aug 30, 2025 7:17 PM

ದೆಹಲಿ: ಸಾಮಾಜಿಕ ಜಾಲತಾಣದಲ್ಲಿ (Social media) ಅನೇಕ ವಿಭಿನ್ನ ವಿಡಿಯೊಗಳು ವೈರಲ್ ಆಗುತ್ತಿರುತ್ತವೆ. ಇತ್ತೀಚೆಗೆ ವೈರಲ್ ಆಗಿರುವ ವಿಡಿಯೊವೊಂದು (Viral Video) ನೆಟ್ಟಿಗರ ಮನಗೆದ್ದಿದೆ. ಅಲ್ಲದೆ ಹಲವರು ಈ ವಿಡಿಯೊ ನೋಡಿ ನಕ್ಕಿದ್ದಾರೆ. ವೈರಲ್ ಆದ ವಿಡಿಯೊ ತಂದೆ ಮತ್ತು ಅವರ ಪುಟ್ಟ ಮಗನದ್ದು. ಇದು ಯಾರೂ ಊಹಿಸದ ಅನಿರೀಕ್ಷಿತ ತಿರುವು ಪಡೆದಿದೆ. ಇದು ಒಂದು ಥ್ರಿಲ್ಲರ್ ಚಲನಚಿತ್ರಕ್ಕೆ ಸ್ಪರ್ಧೆ ನೀಡಬಲ್ಲದು. ಅಂಥದ್ದೇನಿದೆ ಅಂತೀರಾ? ಈ ಸ್ಟೋರಿ ಓದಿ.

ಶಾಲೆಗೆ ಹೋಗುವ ಪುಟ್ಟ ಮಕ್ಕಳು ಬೆಳಗ್ಗೆ ಏಳುವುದೇ ಕಷ್ಟ. ಅಲ್ಲದೆ ಕೆಲವು ಮಕ್ಕಳಂತೂ ಶಾಲೆಗೆ ಹೋಗುವುದಿಲ್ಲ ಎಂದು ರಚ್ಚೆ ಹಿಡಿಯುತ್ತಾರೆ. ಅವರನ್ನು ಸಮಾಧಾನ ಮಾಡಿ ಶಾಲೆಗೆ ಕಳುಹಿಸುವುದು ಒಂದು ಹರಸಾಹಸವೇ ಹೌದು. ಆದರೆ ಇಲ್ಲೊಬ್ಬ ತಂದೆ ಉಪಾಯವಾಗಿ (Father’s Clever Trick) ತನ್ನ ಮಗನನ್ನು ಶಾಲಾ ಬಸ್ ಹತ್ತಿಸಿದ್ದಾರೆ. ಆರಂಭದಲ್ಲಿ ಅವರು ಪಾದಚಾರಿ ಮಾರ್ಗದಲ್ಲಿ ಸುಮ್ಮನೆ ನಡೆದುಕೊಂಡು ಹೋಗಿದ್ದಾರೆ. ಈ ವೇಳೆ ಅವರ ಮಗ ಬೆಳಗ್ಗಿನ ವಾಕಿಂಗ್ ಇರಬೇಕು ಎಂದು ಹಿಂಬಾಲಿಸಿದ್ದಾನೆ.

ಇದ್ದಕ್ಕಿದ್ದಂತೆ, ತಂದೆ ದಿಕ್ಕನ್ನು ಬದಲಾಯಿಸುತ್ತಾ ರಸ್ತೆಯ ಕಡೆಗೆ ಹೋಗಿದ್ದಾರೆ. ಅಂದರೆ ಆ ವೇಳೆಗೆ ಶಾಲಾ ಬಸ್ ಬಂದಿದೆ. ಬಾಲಕನಿಗೆ ಏನಾಗುತ್ತಿದೆ ಎಂದು ಅರಿವಾಗುಷ್ಟರಲ್ಲಿ ಆತನನ್ನು ಎತ್ತಿ ಬಸ್‍ನಲ್ಲಿ ಕೂರಿಸಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ತಮಾಷೆ ಮಾಡಿದರೆ, ಕೆಲವರು ಸಹಾನುಭೂತಿ ತೋರಿಸಿದ್ದಾರೆ. ತಂದೆಯ ಈ ಕ್ರಮ ನನ್ನ ಹೃದಯವನ್ನು ಆವರಿಸಿತು. ಪೋಷಕರಾಗಿ ನಾವು ನಮ್ಮ ಮಕ್ಕಳಿಗೆ ನೀಡಬಹುದಾದ ಅತ್ಯುತ್ತಮ ವಿಷಯವೆಂದರೆ ನೆನಪುಗಳನ್ನು ಕೊಡುವುದು ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Viral Video: ಸುಖಾಸುಮ್ಮನೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಇನ್ಸ್‌ಪೆಕ್ಟರ್‌- ವಿಡಿಯೋ ವೈರಲ್

ಇದು ತುಂಬಾ ಶಾಂತಿಯುತವಾಗಿದೆ. ತಂದೆಯೆಂದರೆ ಭಯಪಡುತ್ತಿದ್ದ ಪೀಳಿಗೆಯವನು ನಾನು. ಆದರೆ ಈಗಿನ ಮಕ್ಕಳು ಅದೃಷ್ಟವಂತರು ಎಂದು ಮತ್ತೊಬ್ಬ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ಹಂಚಿಕೊಂಡ ಮತ್ತೊಂದು ವಿಡಿಯೊದಲ್ಲಿ, ಒಬ್ಬ ಹುಡುಗಿ ತನ್ನ ತಂದೆಯನ್ನು ಮನೆಗೆ ಸ್ವಾಗತಿಸುವ ವಿಶಿಷ್ಟ ವಿಧಾನವು ನೆಟ್ಟಿಗರ ಮನಗೆದ್ದಿತ್ತು. ತಂದೆ ಮನೆಗೆ ಆಗಮಿಸುತ್ತಿದ್ದಂತೆ ಆಕೆ ಇಂಗ್ಲಿಷ್‌ ಹಾಡು ಹಾಡಿದ್ದಾಳೆ. ತಂದೆ ಕೂಡ ಖುಷಿಯಿಂದ ನೃತ್ಯ ಮಾಡಿದ್ದಾರೆ. ಇದು ಎಲ್ಲರ ಮನಗೆದ್ದಿತ್ತು.

ಮೊದಲಿಗೆ ತಂದೆ ಅವಳ ಅನಿರೀಕ್ಷಿತ ಅಭಿನಯವನ್ನು ನೋಡಿ ಆಶ್ಚರ್ಯಚಕಿತರಾದರು. ಆದರೆ ಕೆಲವೇ ಸೆಕೆಂಡುಗಳಲ್ಲಿ, ಅವರು ತನ್ನ ಮಗಳೊಂದಿಗೆ ನೃತ್ಯ ಮಾಡಲು ಪ್ರಾರಂಭಿಸಿದರು. ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ಮಾಡಿದ ನೃತ್ಯ ಹಾಗೂ ನಿಷ್ಕಲ್ಮಶ ಮನಸ್ಸು ಹಾಗೂ ತಂದೆ-ಮಗಳ ಬಾಂಧವ್ಯವು ನೆಟ್ಟಿಗರನ್ನು ಭಾವುಕರನ್ನಾಗಿಸಿತು.

ವಿಡಿಯೊ ವೀಕ್ಷಿಸಿ: