Viral Video: ಚಲಿಸುವ ರೈಲಿನಿಂದ ಕಸ ಎಸೆದ ಸಿಬ್ಬಂದಿ- ಆಮೇಲೆ ಆಗಿದ್ದೇ ಬೇರೆ! ವಿಡಿಯೊ ನೋಡಿ
ಐಆರ್‌ಸಿಟಿಸಿ ಸಿಬ್ಬಂದಿಯೊಬ್ಬ ರೈಲ್ವೆ ಹಳಿಗಳ ಮೇಲೆ ಕಸವನ್ನು ಎಸೆಯುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ರೈಲ್ವೆ ಶುಚಿತ್ವದ ಬಗ್ಗೆ ಗಮನಹರಿಸದೆ ಬೇಜವಾಬ್ದಾರಿತನ ತೋರಿಸಿದ್ದಕ್ಕೆ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಮತ್ತು ಆತನಿಗೆ ಭಾರೀ ದಂಡ ವಿಧಿಸಲಾಗಿದೆ.


ನವದೆಹಲಿ: ರೈಲ್ವೆಯ ಶುಚಿತ್ವದ ಬಗ್ಗೆ ಗಮನಹರಿಸಬೇಕಾಗಿದ್ದ ಐಆರ್‌ಸಿಟಿಸಿ ಸಿಬ್ಬಂದಿಯೊಬ್ಬ ರೈಲ್ವೆ ಹಳಿಗಳ ಮೇಲೆ ಕಸವನ್ನು ಎಸೆಯುವ ಮೂಲಕ ತನ್ನ ಬೇಜವಾಬ್ದಾರಿತನವನ್ನು ತೋರಿಸಿದ್ದಾನೆ. ಅವನು ಕಸವನ್ನು ಎಸೆಯುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇದರಿಂದ ಆತ ಕೆಲಸ ಕಳೆದುಕೊಂಡು ದಂಡ ತೆರುವಂತಾಗಿದೆ ಎನ್ನಲಾಗಿದೆ. ಈ ವಿಡಿಯೊ ಈಗ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿದೆ. ವಿಡಿಯೊದಲ್ಲಿ ಐಆರ್‌ಸಿಟಿಸಿ ಸಿಬ್ಬಂದಿ ಚಲಿಸುತ್ತಿದ್ದ ರೈಲಿನಿಂದ ಹಳಿಗಳ ಮೇಲೆ ಕಸದ ರಾಶಿಯನ್ನು ಹಾಕುತ್ತಿರುವುದು ಸೆರೆಯಾಗಿದೆ. ಕಸವನ್ನು ಎಸೆಯಲು ರೈಲ್ವೆ ನಿಲ್ದಾಣದಲ್ಲಿ ಅಲ್ಲಲ್ಲಿ ಕಸದ ಬುಟ್ಟಿಗಳಿದ್ದರೂ ಆತ ಅದನ್ನು ಕಸದ ಬುಟ್ಟಿಗೆ ಹಾಕದೆ ರೈಲು ಹಳಿಗಳ ಮೇಲೆ ಹಾಕಿದ್ದಾನೆ. ಈ ವಿಡಿಯೊ ವೈರಲ್ ಆದ ನಂತರ, ರೈಲ್ವೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಮತ್ತು ಆತನಿಗೆ ಭಾರೀ ದಂಡವನ್ನು ಸಹ ವಿಧಿಸಲಾಗಿದೆಯಂತೆ.
A senior IRCTC official throws garbage right from a moving train despite warnings. Scary to even imagine. pic.twitter.com/VLEQf7Rd7w
— Lord Immy Kant (Eastern Exile) (@KantInEast) March 5, 2025
ವಿಡಿಯೊದಲ್ಲಿ ರೈಲಿನ ಕೆಲವು ಪ್ರಯಾಣಿಕರು ಹಳಿಗಳ ಮೇಲೆ ಕಸವನ್ನು ಎಸೆಯದಂತೆ ಐಆರ್‌ಸಿಟಿಸಿ ಸಿಬ್ಬಂದಿಯನ್ನು ಒತ್ತಾಯಿಸಿದ್ದಾರೆ. ಆದರೆ ಆತ ಮಾತ್ರ ಕಸವನ್ನು ಹಾಕಲು ಬೇರೆ ಸ್ಥಳವಿಲ್ಲದ ಕಾರಣ ಕಸದ ಬುಟ್ಟಿಯನ್ನು ಇಲ್ಲಿಯೇ ಖಾಲಿ ಮಾಡಬೇಕು ಎಂದು ಉಡಾಫೆಯ ಉತ್ತರ ನೀಡಿದ್ದಾನಂತೆ. ವಿಡಿಯೊ ವೈರಲ್ ಆದ ನಂತರ ಭಾರತೀಯ ರೈಲ್ವೆ ಇಲಾಖೆ "ನಮ್ಮ ಭಾರತೀಯ ರೈಲ್ವೆಯಲ್ಲಿ ಕಸ ವಿಲೇವಾರಿಗೆ ಉತ್ತಮವಾದ ಕಾರ್ಯವಿಧಾನವಿದೆ. ಇದನ್ನು ಉಲ್ಲಂಘಿಸಿದ ಒಬಿಎಚ್ಎಸ್ ಸಿಬ್ಬಂದಿಯನ್ನು ತೆಗೆದುಹಾಕಲಾಗಿದೆ ಮತ್ತು ಭಾರೀ ದಂಡ ವಿಧಿಸಲಾಗಿದೆ. ಇದಲ್ಲದೆ, ರೈಲುಗಳು ಮತ್ತು ರೈಲ್ವೆ ಆವರಣದ ಸರಿಯಾದ ಶುಚಿತ್ವವನ್ನು ಖಚಿತಪಡಿಸಿಕೊಳ್ಳಲು ಸಿಬ್ಬಂದಿಗೆ ಸಲಹೆ ನೀಡಲಾಗುತ್ತಿದೆ" ಎಂದು ಟ್ವೀಟ್ ಮಾಡಿದೆ.
ಈ ವಿಡಿಯೊಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಎಕ್ಸ್ ಬಳಕೆದಾರರೊಬ್ಬರು, "ಕಸವನ್ನು ಈ ರೀತಿ ರೈಲಿನಿಂದ ಹೊರಗೆ ಎಸೆಯುವುದಾದರೆ ಕಸದ ಬುಟ್ಟಿಯನ್ನು ಇಟ್ಟುಕೊಳ್ಳುವುದರಲ್ಲಿ ಏನು ಅರ್ಥವಿದೆ!" ಎಂದು ಕೇಳಿದ್ದಾರೆ. ಇನ್ನೊಬ್ಬರು, "ಇದು ಒಬ್ಬರು ಪಾಲಿಸಬೇಕಾದ ಕ್ರಮವಲ್ಲ. ಹಾಗಾಗಿ ಅಧಿಕೃತ ಕ್ರಮ ಕೈಗೊಂಡರೂ ಅಂತಹ ನಡವಳಿಕೆಯನ್ನು ಬದಲಾಯಿಸಲಾಗುವುದಿಲ್ಲ.” ಎಂದು ತಿಳಿಸಿದ್ದಾರೆ.
ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಡಿಸೆಂಬರ್ 2023 ರಲ್ಲಿ, ರೈಲ್ವೆ ಸಿಬ್ಬಂದಿಯೊಬ್ಬರು ಚಲಿಸುವ ರೈಲಿನಿಂದ ಹಳಿಗಳ ಮೇಲೆ ಕಸವನ್ನು ಎಸೆಯುವ ಇದೇ ರೀತಿಯ ವಿಡಿಯೊ ಸೊಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ಒಡಿಶಾದ ಕಟಕ್ ರೈಲ್ವೆ ನಿಲ್ದಾಣ ನೋಡಿ ಫಿದಾ ಆದ ನಾರ್ವೇಜಿಯನ್ ಮಾಜಿ ರಾಜತಾಂತ್ರಿಕ ಉದ್ಘರಿಸಿದ್ದು ಹೀಗೆ...
ಇತ್ತೀಚೆಗೆ ಮಾಜಿ ನಾರ್ವೇಜಿಯನ್ ರಾಜತಾಂತ್ರಿಕ ಎರಿಕ್ ಸೋಲ್ಹೈಮ್ ಭಾರತದ ರೈಲ್ವೆ ನಿಲ್ದಾಣಗಳಲ್ಲಿ ಒಂದನ್ನು ಹೊಗಳಿದ್ದಾರೆ. ಒಡಿಶಾದ ಕಟಕ್ ರೈಲ್ವೆ ನಿಲ್ದಾಣದ ದೃಶ್ಯಗಳು ಅದರ ಉತ್ತಮವಾದ ಮೂಲಸೌಕರ್ಯಕ್ಕಾಗಿ ಎಕ್ಸ್‌ನಲ್ಲಿ ವೈರಲ್ ಆಗಿದೆ. ಆ ದೃಶ್ಯ ನೋಡಿ ಎರಿಕ್ ಪ್ರತಿಕ್ರಿಯಿಸಿದ್ದು, ಭಾರತೀಯ ರೈಲ್ವೆಯ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. "ಭಾರತೀಯ ರೈಲು ದಿನದಿಂದ ದಿನಕ್ಕೆ ಸುಧಾರಿಸುತ್ತಿದೆ!" ಎಂದು ಬರೆದಿದ್ದಾರೆ.