ಭಾರತದ ಈ ವೈಶಿಷ್ಟ್ಯ ಜಗತ್ತಿಗೇ ಮಾದರಿ: ವಿದೇಶಿ ಮಹಿಳೆಯ ಮೆಚ್ಚುಗೆ
Viral Video: ಹತ್ತು ವರ್ಷಗಳಿಂದ ಭಾರತದಲ್ಲಿ ಬದುಕು ಕಟ್ಟಿರುವ ಪೋಲೆಂಡ್‌ನ ಮಹಿಳೆಯೊಬ್ಬರು ಇಲ್ಲಿನ ದೈನಂದಿನ ಜೀವನದದ ಸೌಕರ್ಯಗಳ ಬಗ್ಗೆ ವಿಡಿಯೊ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದ ಈ ಅಭ್ಯಾಸವನ್ನು ಇತರ ರಾಷ್ಟ್ರಗಳು ನೋಡಿ ಕಲಿಯಬೇಕು ಎಂದು ಅವರು ಇಲ್ಲಿನ ಹಲವು ವೈಶಿಷ್ಟ್ಯವನ್ನು ತೋರ್ಪಡಿಸಿದ್ದಾರೆ.
ಭಾರತದ ಸೌಕರ್ಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪೋಲೆಂಡ್ ಮಹಿಳೆ -
ನವದೆಹಲಿ, ಮೇ 4: ಭಾರತದ ಸಂಸ್ಕೃತಿ, ಆತಿಥ್ಯ ಮತ್ತು ಜೀವನಶೈಲಿಯ ಬಗ್ಗೆ ಅನೇಕ ವಿದೇಶಿಗರು ಫಿದಾ ಆಗಿದ್ದಾರೆ. ಭಾರತದ ಸುರಕ್ಷತೆ, ಇಲ್ಲಿನ ಸೌಲಭ್ಯ, ಆಚರಣೆಯ ಬಗ್ಗೆ ತಮ್ಮ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ನಡುವೆ ಹತ್ತು ವರ್ಷಗಳಿಂದ ಭಾರತದಲ್ಲಿ ಬದುಕು ಕಟ್ಟಿರುವ ಪೋಲೆಂಡ್‌ನ ಮಹಿಳೆಯೊಬ್ಬರು ಇಲ್ಲಿನ ದೈನಂದಿನ ಜೀವನದ ಸೌಕರ್ಯಗಳ ಬಗ್ಗೆ ವಿಡಿಯೊ ಮಾಡಿ ಶೇರ್ (Viral News) ಮಾಡಿದ್ದಾರೆ.
ಭಾರತದ ಈ ಅಭ್ಯಾಸವನ್ನು ಇತರ ರಾಷ್ಟ್ರಗಳು ನೋಡಿ ಕಲಿಯಬೇಕು ಎಂದು ಅವರು ಇಲ್ಲಿನ ಹಲವು ವೈಶಿಷ್ಟ್ಯವನ್ನು ಎತ್ತಿ ತೋರಿಸಿದ್ದಾರೆ. ಡೊಮಿನಿಕಾ ಪಟಾಲಸ್-ಕಲ್ರಾ ಎಂಬ ಮಹಿಳೆ ಭಾರತದಲ್ಲಿನ ದೈನಂದಿನ ಅನುಕೂಲಗಳ ಬಗ್ಗೆ ಮಾತನಾಡಿದ್ದು,ಅವರ ಪ್ರಕಾರ ಈ ಸೌಲಭ್ಯಗಳು ದಿನನಿತ್ಯದ ಜೀವನವನ್ನು ಸುಲಭವಾಗಿಸುತ್ತವೆ ಎಂದಿದ್ದಾರೆ.
ವಿಡಿಯೊ ನೋಡಿ:
ದಿನಸಿ, ಎಲೆಕ್ಟ್ರಾನಿಕ್ಸ್ ಪರಿಕರಗಳು ಮತ್ತು ಐಫೋನ್ ಸೇರಿ ಎಲ್ಲವನ್ನೂ 10 ನಿಮಿಷಗಳಲ್ಲಿ ಮನೆ ಬಾಗಿಲಿಗೆ ತರಿಸಿಕೊಳ್ಳುವ ಡೆಲಿವರಿ ಆ್ಯಪ್ ಇಲ್ಲಿದ್ದು, ಈ ವ್ಯವಸ್ಥೆಯನ್ನು ಅವರು ಅತ್ಯಂತ ಉತ್ತಮ ಆಯ್ಕೆ ಎಂದು ಹೇಳಿಕೊಂಡಿದ್ದಾರೆ. ಯಾವುದೇ ಅಗತ್ಯ ವಸ್ತು ಬೇಕೆಂದಾಗ ಮನೆಯಿಂದ ಹೊರಗೆ ಹೋಗುವ ಅವಶ್ಯ ಕತೆಯೇ ಇಲ್ಲದಿರುವುದು ನಿಜಕ್ಕೂ ಉತ್ತಮ ಸೌಲಭ್ಯ ಎಂದು ಹೊಗಳಿದ್ದಾರೆ.
ವಿಡಿಯೊ ಮಾಡುತ್ತ ಮೈಮರೆತು ಚರಂಡಿಗೆ ಬಿದ್ದ ಯುವತಿ
ನಂತರ ಅವರು ಭಾರತೀಯ ಮನೆಗಳಲ್ಲಿ ಕಂಡುಕೊಂಡ ಮತ್ತೊಂದು ಅತ್ಯುತ್ತಮ ಸೌಕರ್ಯ ಎಂದರೆ ಅದು ಅಟ್ಯಾಚ್ಡ್ ಬಾತ್‌ರೂಮ್. ಈ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಭಾರತದ ಬಹುತೇಕ ಪ್ರತಿಯೊಂದು ಮನೆಯಲ್ಲೂ ಮಲಗುವ ಕೋಣೆಗೆ ಸ್ನಾನ ಗೃಹವಿದ್ದು ಬಹಳಷ್ಟು ಅನುಕೂಲವಾಗಿದೆ ಎಂದಿದ್ದಾರೆ.
ಇನ್ನು ಭಾರತದಲ್ಲಿ ಉತ್ಪನ್ನಗಳ ಮೇಲೆ ಮುದ್ರಿಸಲಾಗುವ ಬೆಲೆಯನ್ನು ಶ್ಲಾಘಿಸಿದ್ದಾರೆ. ಗ್ರಾಹಕರನ್ನು ವಂಚನೆಯಿಂದ ರಕ್ಷಿಸುವ ಉದ್ದೇಶದಿಂದ ವಸ್ತುವಿನ ಮೇಲೆ ಗರಿಷ್ಠ ಮಾರಾಟ ಬೆಲೆ MRPಯನ್ನು ಮುದ್ರಿಸುತ್ತಾರೆ. ಇದರಿಂದ ಅಂಗಡಿಯವರು ಗ್ರಾಹಕರಿಂದ ನಿಗದಿತ ಬೆಲೆಗಿಂತ ಹೆಚ್ಚು ಹಣ ಪಡೆಯಲು ಸಾಧ್ಯವಿಲ್ಲ. ಈ ವ್ಯವಸ್ಥೆಯು ಜಗತ್ತಿನ ಇತರ ದೇಶಗಳಲ್ಲೂ ಜಾರಿಗೆ ಬರಬೇಕು ಎಂದು ಹೇಳಿದ್ದಾರೆ.