ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಲ್ಲಂಗಡಿ ಹಣ್ಣು ವಿಷಕಾರಿಯೆ? ಮುಂಬೈ ಘಟನೆ ಬಳಿಕ ಕೊಳೆತು ಹೋಗಿರುವ ಹಣ್ಣಿನ ವಿಡಿಯೊ ಶೇರ್ ಮಾಡಿದ ನಟ

Viral Video: ಮುಂಬೈಯಲ್ಲಿ ಅಬ್ದುಲ್ಲ ದಕೋಡಿಯಾ ಕುಟುಂಬ ಇತ್ತೀಚೆಗೆ ತಡರಾತ್ರಿ ಕಲ್ಲಂಗಡಿ ಹಣ್ಣು ತಿಂದು ಸಾವೀಗಿಡಾಗಿತ್ತು. ಇದರ ಬೆನ್ನಲ್ಲೇ ಇದೀಗ ಮರಾಠಿ ನಟ ಶಶಾಂಕ್ ಕೇತ್ಕರ್ ಕಲ್ಲಂಗಡಿ ಹಣ್ಣಿನಿಂದ ನೊರೆ ಹೊರ ಬರುತ್ತಿರುವುದನ್ನು ತೋರಿಸುವ ವಿಡಿಯೊವೊಂದು ಶೇರ್ ಮಾಡಿದ್ದಾರೆ. ಸದ್ಯ ಈ ದೃಶ್ಯ ನೋಡಿದ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ.

ಕಲ್ಲಂಗಡಿ ಹಣ್ಣು ವಿಷಕಾರಿಯೇ? ಖ್ಯಾತ ನಟ ವಿಡಿಯೊದಲ್ಲಿ ಹೇಳಿದ್ದೇನು?

ಕೊಳೆತ ಕಲ್ಲಂಗಡಿ ಹಣ್ಣು -

Profile
Pushpa Kumari May 3, 2026 9:16 PM

ಮುಂಬೈ, ಮೇ 3: ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಕಲ್ಲಂಗಡಿ ಹಣ್ಣು (Watermelon) ತಿಂದು ಇಬ್ಬರು ಮಕ್ಕಳು ಸೇರಿ ನಾಲ್ವರು ಮೃತಪಟ್ಟ ಘಟನೆ ದೇಶಾದ್ಯಂತ ಆತಂಕವನ್ನು ಉಂಟು ಮಾಡಿತ್ತು. ಮುಂಬೈಯಲ್ಲಿ ಅಬ್ದುಲ್ಲ ದಕೋಡಿಯಾ ಕುಟುಂಬ ತಡರಾತ್ರಿ ಕಲ್ಲಂಗಡಿ ಹಣ್ಣು ತಿಂದು ಸಾವೀಗಿಡಾಗಿತ್ತು. ಇದರ ಬೆನ್ನಲ್ಲೇ ಇದೀಗ ಮರಾಠಿ ನಟ ಶಶಾಂಕ್ ಕೇತ್ಕರ್ ಕಲ್ಲಂಗಡಿ ಹಣ್ಣಿನಿಂದ ನೊರೆ ಹೊರ ಬರುತ್ತಿರುವುದನ್ನು ತೋರಿಸುವ ವಿಡಿಯೊವೊಂದು ಶೇರ್ (Viral News) ಮಾಡಿದ್ದಾರೆ. ಸದ್ಯ ಈ ದೃಶ್ಯ ನೋಡಿದ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ.

ಮುಂಬೈಯ ಪೈಧೋನಿ ಪ್ರದೇಶದಲ್ಲಿ ರಾತ್ರಿ 1 ಗಂಟೆಗೆ ಕಲ್ಲಂಗಡಿ ತಿಂದ ನಾಲ್ವರು ಸಾವನ್ನಪ್ಪಿದ್ದು ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಸುದ್ದಿ ವೈರಲ್‌ ಆದ ಬೆನ್ನಲ್ಲೇ ಹಲವರು ಕಲ್ಲಂಗಡಿ ಹಣ್ಣುಗಳನ್ನು ಖರೀದಿಸಲು ಭಯ ಪಡುತ್ತಿದ್ದಾರೆ. ಇದೀಗ ನಟ ಶಶಾಂಕ್ ಕೇತ್ಕರ್ ವಿಡಿಯೊ ಶೇರ್ ಮಾಡಿದ್ದು ಹಣ್ಣಿನಿಂದ ಬಿಳಿಯಾದ ನೊರೆ ಹೊರಬರುತ್ತಿರುವುದನ್ನು ಕಂಡುಬಂದಿದೆ.

ವಿಡಿಯೊ ನೋಡಿ:



ಕಲ್ಲಂಗಡಿ ಹಣ್ಣಿನಲ್ಲಿ ಸಕ್ಕರೆಯ ನೈಸರ್ಗಿಕ ಅಂಶ ಹೆಚ್ಚಾಗಿ ಇರುತ್ತದೆ. ಈ ಬೇಸಗೆಗೆ ಹಣ್ಣಿನ ಒಳಗೆ ಬ್ಯಾಕ್ಟೀರಿಯಾ ಸೇರಿಕೊಂಡಾಗ ಸಕ್ಕರೆಯನ್ನು ಆಲ್ಕೋಹಾಲ್ ಮತ್ತು ಕಾರ್ಬನ್ ಡೈ ಆಕ್ಸೈಡ್ ಆಗಿ ಬದಲಾಯಿಸುತ್ತದೆ. ಹಣ್ಣನ್ನು ಕತ್ತರಿಸಿದಾಗ ಆ ಗ್ಯಾಸ್ ಬಿಳಿ ನೊರೆಯ ರೂಪದಲ್ಲಿ ಹೊರಬರುತ್ತದೆ ಎಂದು ಅವರು ವಿವರಿಸಿದ್ದಾರೆ.

ರೀಲ್ಸ್‌ಗಾಗಿ ಮೊಸಳೆಯ ಬಾಲ ಹಿಡಿಯಲು ಯತ್ನಿಸಿದ ಯುವಕ

ಕೊಳೆತು ಹಣ್ಣು ತಿಂದರೆ ವಾಂತಿ, ಭೇದಿ ಉಂಟಾಗಿ ಫುಡ್ ಪಾಯಿಸನಿಂಗ್ ಆಗುವ ಸಾಧ್ಯತೆ ಇದೆ. ಕೆಲವೊಮ್ಮೆ ಲಾಭ ಗಳಿಸುವ ಸಲುವಾಗಿ ಇವುಗಳನ್ನು ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಲಾಗುತ್ತಿದೆ ಎಂದಿದ್ದಾರೆ. ಆದರೆ ಡೋಕಾಡಿಯಾ ಕುಟುಂಬದ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಮೃತದೇಹದ ವಿಧಿವಿಜ್ಞಾನ ವರದಿಯಲ್ಲಿ ಮಾರ್ಫಿನ್‌ ರಾಸಾಯನಿಕದಂತಹ ಅಂಶಗಳು ಪತ್ತೆಯಾಗಿವೆ. ಹಣ್ಣಿನ ಮೂಲಕ ವಿಷ ನೀಡಲಾಗಿದೆಯೇ? ಎನ್ನುವ ಅನುಮಾನ ಕೂಡ ಮೂಡಿದೆ. ಕಲ್ಲಂಗಡಿ ಖರೀದಿಸುವ ಮೊದಲ ಹಣ್ಣು ನೋಡಲು ಚಿಕ್ಕದಿದ್ದರೂ ಎತ್ತಿದಾಗ ಭಾರವಾದ ಅನುಭವ ಆಗಬೇಕು.‌ ಕತ್ತರಿಸಿದ ತಕ್ಷಣ ಹಣ್ಣಿನ ವಾಸನೆ ನೋಡಿ ಹುಳಿ ವಾಸನೆ ಬಂದರೆ ತಿನ್ನಲು ಹೋಗಬೇಡಿ ಎಂದು ಟಿಪ್ಸ್‌ ನೀಡಿದ್ದಾರೆ.