ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಲಿಫ್ಟ್‌ನಲ್ಲಿ ಸಿಲುಕಿದ್ದ ಮಕ್ಕಳ ರಕ್ಷಣೆ: ಪುಟ್ಟ ಬಾಲಕಿಯ ಧೈರ್ಯಕ್ಕೆ ಹ್ಯಾಟ್ಸ್ ಆಫ್ ಎಂದ ನೆಟ್ಟಿಗರು

Viral Video: ಬಾಲಕಿಯೊಬ್ಬಳು ಪುಟ್ಟ ಮಕ್ಕಳಿಗೆ ಚಾಚಿದ ಸಹಾಯ ಹಸ್ತದ ವಿಡಿಯೊ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಲಿಫ್ಟ್‌ನೊಳಗೆ ಸಿಲುಕಿಕೊಂಡಿರುವ ಇಬ್ಬರು ಮಕ್ಕಳನ್ನು ಈ ಪುಟ್ಟ ಬಾಲಕಿ‌ ರಕ್ಷಿಸಿದ ಹೃದಯಸ್ಪರ್ಶಿ ಘಟನೆ ಇದಾಗಿದ್ದು, ಆಕೆಯ ಧೈರ್ಯ ಮತ್ತು ಸಮಯ ಪ್ರಜ್ಞೆಗೆ ವ್ಯಾಪಕ ಪ್ರಶಂಸೆ ಗಳಿಸುತ್ತಿದೆ.

ಲಿಫ್ಟ್‌ನಲ್ಲಿ ಸಿಲುಕಿದ್ದ ಮಕ್ಕಳನ್ನು ರಕ್ಷಿಸಿದ ಪುಟ್ಟ ಬಾಲಕಿ

ಲಿಫ್ಟ್‌ನಲ್ಲಿ ಸಿಲುಕಿದ್ದ ಮಕ್ಕಳ ರಕ್ಷಣೆ ಮಾಡಿದ ಬಾಲಕಿ -

Profile
Pushpa Kumari Feb 22, 2026 6:18 PM

ನವದೆಹಲಿ, ಫೆ. 22: ಕಷ್ಟಕಾಲದಲ್ಲಿ ಸಹಾಯ ಮಾಡುವ ಮಾನವೀಯ ವಿಡಿಯೊಗಳು (Viral Video) ಆಗಾಗ ಇಂಟರ್‌ನೆಟ್‌ನಲ್ಲಿ ಕಾಣಿಸಿಕೊಂಡು ನೆಟ್ಟಿಗರ ಗಮನ ಸೆಳೆಯುತ್ತವೆ. ಇದೀಗ ಬಾಲಕಿಯೊಬ್ಬಳು ಪುಟ್ಟ ಮಕ್ಕಳಿಗೆ ನೀಡಿದ ಸಹಾಯ ಹಸ್ತ ಎಲ್ಲರ ಮೆಚ್ಚುಗೆ ಗಳಿಸುವಂತೆ ಮಾಡಿದೆ. ಲಿಫ್ಟ್‌ನೊಳಗೆ ಸಿಲುಕಿಕೊಂಡಿರುವ ಇಬ್ಬರು ಮಕ್ಕಳನ್ನು ಪುಟ್ಟ ಬಾಲಕಿ‌ಯೊಬ್ಬಳು ರಕ್ಷಿಸಿದ ಹೃದಯಸ್ಪರ್ಶಿ ಘಟನೆ ಇದಾಗಿದೆ. ಈಕೆಯ ಧೈರ್ಯ ಮತ್ತು ಸಮಯ ಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಲಿಫ್ಟ್‌ನ ಒಳಗೆ ಸಿಲುಕಿಕೊಳ್ಳುವ ಹಂತದಲ್ಲಿದ್ದ ಇಬ್ಬರು ಪುಟ್ಟ ಮಕ್ಕಳನ್ನು ತನ್ನ ಪ್ರಾಣವನ್ನು ಲೆಕ್ಕಿಸದೆ ಸಹಾಯ ಮಾಡಿದ ಬಾಲಕಿಯ ನಡೆಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಶೇರ್ ಮಾಡಲಾದ 41 ಸೆಕೆಂಡುಗಳ ದೃಶ್ಯದಲ್ಲಿ ಲಿಫ್ಟ್ ಬಾಗಿಲು ಮುಚ್ಚುತ್ತಿದ್ದಂತೆ ಇಬ್ಬರು ಮಕ್ಕಳು ಸಿಕ್ಕಿಹಾಕಿಕೊಳ್ಳುವ ಹಂತದಲ್ಲಿದ್ದರು. ಇದನ್ನು ನೋಡಿದ ಪುಟ್ಟ ಬಾಲಕಿ ಹಿಂಜರಿಕೆಯಿಲ್ಲದೆ ಮುಂದೆ ಬಂದು, ಬಾಗಿಲ ನಡುವೆ ತನ್ನ ಕೈಯನ್ನು ಇರಿಸಿ ತೆರೆಯಲು ಪ್ರಯತ್ನಿಸಿದ್ದಾಳೆ.

ವಿಡಿಯೊ ನೋಡಿ:

ಲಿಫ್ಟ್ ಬಾಗಿಲು ಸ್ವಲ್ಪ ತೆರೆದ ಕೂಡಲೇ ಬಾಲಕಿ ಅದರ ಮಧ್ಯೆ ನಿಂತು ಬಾಗಿಲು ಪೂರ್ತಿ ಮುಚ್ಚದಂತೆ ತಡೆದು ನಿಲ್ಲಿಸಿದ್ದಾಳೆ. ಬಳಿಕ ಮಹಿಳೆಯೊಬ್ಬರು ಮಕ್ಕಳನ್ನು ತಕ್ಷಣ ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಈ ಘಟನೆ ನಡೆದ ಸ್ಥಳ ಬಹಿರಂಗವಾಗಿಲ್ಲ.

ರಾಕ್ಷಸಿಯಂತೆ ವರ್ತಿಸಿದ ಬಿಜೆಪಿ ಕಾರ್ಯಕರ್ತೆಯ ಇನ್ನೊಂದು ವಿಡಿಯೊ ಬಯಲು

ಈ ವಿಡಿಯೊ ವೈರಲ್ ಆಗಿದ್ದು, ಬಾಲಕಿಯ ಧೈರ್ಯಕ್ಕೆ ಜನರು ಫಿದಾ ಆಗಿದ್ದಾರೆ. ಹಲವರು ಲಿಫ್ಟ್‌ನಿಂದ ಇಬ್ಬರು ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾದ ಬಾಲಕಿಯ ಧೈರ್ಯವನ್ನು ಶ್ಲಾಘಿಸಿದ್ದಾರೆ. ಅನೇಕರು ಅವಳನ್ನು ಧೈರ್ಯಶಾಲಿ ಎಂದು ಬಣ್ಣಿಸಿದ್ದರೆ ಕೆಲವರು ಅವಳನ್ನು ದೇವತೆ ದುರ್ಗಾಗೆ ಹೋಲಿಸಿದ್ದಾರೆ.