ಭಾರತದ ಡಿಸೈನ್ ಬಳಸಿದ ಹ್ಯಾಂಡ್ ಬ್ಯಾಗ್ ಬರೋಬ್ಬರಿ 8.3 ಲಕ್ಷ ರೂಪಾಯಿಗೆ ಮಾರಾಟ: ಇಟಲಿಯ ಫೆಂಡಿ ಸಂಸ್ಥೆ ವಿರುದ್ಧ ಹರ್ಷ್ ಗೋಯೆಂಕಾ, ಕಿರಣ್ ಮಜುಂದಾರ್ ಷಾ ಟೀಕೆ
Viral News: ಇಟಲಿಯ ಖ್ಯಾತ ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ಫೆಂಡಿ 8.3 ಲಕ್ಷ ರೂಪಾಯಿಯ 'ಮಲ್ಟಿಕಲರ್ ಬ್ಯಾಗೆಟ್' ಹ್ಯಾಂಡ್‌ಬ್ಯಾಗ್ ವಿನ್ಯಾಸ ಮಾಡಿದೆ. ಇದರ ಕನ್ನಡಿ ಮತ್ತು ಮಣಿಗಳ ವಿನ್ಯಾಸವನ್ನು, ಸಾಮಾನ್ಯವಾಗಿ ಭಾರತೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಬ್ಯಾಗ್‌ನಂತೆ ರೂಪಿಸಲಾಗಿದೆ. ಇದು ಭಾರತದ ಗುಜರಾತ್ ಹಾಗೂ ನವರಾತ್ರಿ ಹಬ್ಬದ ಸಮಯದಲ್ಲಿ ಬೀದಿ ಬದಿ ಮಾರುಕಟ್ಟೆಗಳಲ್ಲಿ ಸಿಗುವ ಸಾಂಪ್ರದಾಯಿಕ ಬ್ಯಾಗ್‌ನಂತಿದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.
ಭಾರತೀಯ ವಿನ್ಯಾಸದ ಹ್ಯಾಂಡ್ ಬ್ಯಾಗ್ -
ನವದೆಹಲಿ, ಸೆ. 16: ಇದೀಗ ಇಟಲಿಯ ಐಷಾರಾಮಿ ಫ್ಯಾಷನ್ ಸಂಸ್ಥೆಯಾದ ಫೆಂಡಿ (Fendi) ವಿನ್ಯಾಸಗೊಳಿಸಿರುವ ದುಬಾರಿ ಬೆಲೆಯ ಬ್ಯಾಗ್ ಇದೀಗ ಹಲವರ ಹುಬ್ಬೇರಿಸಿದ್ದು, ಚರ್ಚೆಗೆ (Viral News) ಕಾರಣವಾಗಿದೆ. ಈ ಬ್ಯಾಗ್‌ನಲ್ಲಿ ಬಳಸಲಾದ ಡಿಸೈನ್ ಭಾರತದ ಗುಜರಾತ್ ಹಾಗೂ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಬೀದಿ ಬದಿ ಮಾರುಕಟ್ಟೆಗಳಲ್ಲಿ ಸಿಗುವ ಸಾಂಪ್ರದಾಯಿಕ ಬ್ಯಾಗ್‌ನಂತೆ ಕಂಡು ಬರುತ್ತಿದೆ ಎಂದು ಹಲವರು ಟೀಕೆ ವ್ಯಕ್ತ ಪಡಿಸಿದ್ದಾರೆ. ಇದರ ಬೆಲೆ ಸುಮಾರು 8.3 ಲಕ್ಷ ರೂಪಾಯಿ ಆಗಿದ್ದು, ಭಾರತೀಯ ಕರಕುಶಲತೆಗೆ ಯಾವುದೇ ಮನ್ನಣೆ ನೀಡದೆ ಈ ವಿನ್ಯಾಸವನ್ನು ಬಳಸಿದ್ದಕ್ಕಾಗಿ ಉದ್ಯಮಿಗಳಾದ ಹರ್ಷ್ ಗೋಯೆಂಕಾ ಮತ್ತು ಕಿರಣ್ ಮಜುಂದಾರ್ ಷಾ ಇಟಲಿ ಸಂಸ್ಥೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ
ಇಟಲಿಯ ಖ್ಯಾತ ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ 'ಫೆಂಡಿ' ದುಬಾರಿ ಬೆಲೆಯ 8.3 ಲಕ್ಷದ 'ಮಲ್ಟಿಕಲರ್ ಬ್ಯಾಗೆಟ್' ಹ್ಯಾಂಡ್‌ಬ್ಯಾಗ್ ವಿನ್ಯಾಸ ಮಾಡಿದೆ. ಇದರ ಕನ್ನಡಿ ಮತ್ತು ಮಣಿಗಳ ವಿನ್ಯಾಸವನ್ನು, ಸಾಮಾನ್ಯವಾಗಿ ಭಾರತೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಬ್ಯಾಗ್ ನಂತೆ ರೂಪಿಸಲಾಗಿದೆ. ಇದು ಭಾರತದ ಗುಜರಾತ್ ಹಾಗೂ ನವರಾತ್ರಿ ಹಬ್ಬದ ಸಮಯದಲ್ಲಿ ಬೀದಿ ಬದಿ ಮಾರುಕಟ್ಟೆಗಳಲ್ಲಿ ಸಿಗುವ ಸಾಂಪ್ರದಾಯಿಕ ಚೀಲಗಳಂತೆ ಇದೆ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.
ಫೆಂಡಿ ಕಂಪನಿಯು ಈ ಬ್ಯಾಗ್‌ಗೆ ದುಬಾರಿ ಮೊತ್ತ ನಿಗದಿಪಡಿಸಿದ್ದು, ʼಮೇಡ್ ಇನ್ ಇಟಲಿʼ ಎಂದು ಹೇಳಿಕೊಂಡಿದೆ. ಸಂಸ್ಥೆಯ ಉತ್ಪನ್ನ ವಿವರಣೆಯ ಪ್ರಕಾರ, ಈ ಬ್ಯಾಗ್ ಸಂಪೂರ್ಣವಾಗಿ ಕೈಯಿಂದ ಕಸೂತಿ ಮಾಡಲಾಗಿದ್ದು, 39,500 ಮಣಿಗಳು ಹಾಗೂ 475 ಕನ್ನಡಿಗಳನ್ನು ಬಳಸಲಾಗಿದೆ. ವರದಿಯ ಪ್ರಕಾರ, ಇದರ ಕರಕುಶಲ ಕೆಲಸವನ್ನು ಪೂರ್ಣಗೊಳಿಸಲು 138 ಗಂಟೆಗಳಿಗೂ ಹೆಚ್ಚು ಸಮಯ ಬೇಕಾಯಿತು ಎಂದು ತಿಳಿಸಿದೆ.
ವಾಹನ ಸಂಚರಿಸುತ್ತಿದ್ದಂತೆ ಬಿರುಕು ಬಿಟ್ಟು ರಸ್ತೆಯಿಂದ ಜಿನುಗಿತು ನೀರು
ಇದೀಗ ಆರ್‌ಪಿಜಿ (RPG) ಗ್ರೂಪ್‌ನ ಅಧ್ಯಕ್ಷ ಗೋಯೆಂಕಾ ಫೆಂಡಿ ಬ್ಯಾಗ್ ಚಿತ್ರವನ್ನು ಹಂಚಿಕೊಂಡಿದ್ದು"ಗುಜರಾತ್‌ನ ಬೀದಿಗಳಲ್ಲಿ ಕೇವಲ 500 ರೂಪಾಯಿಗೆ ಸಿಗುವ ವಿನ್ಯಾಸವನ್ನು ಹೋಲುವ ಬ್ಯಾಗ್‌ಗೆ 8.3 ಲಕ್ಷ ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಭಾರತೀಯ ಕುಶಲಕರ್ಮಿಗಳಿಗೆ ಯಾವುದೇ ರೀತಿಯ ಮನ್ನಣೆ ಇಲ್ಲ. ಐಷಾರಾಮಿ ಬ್ರ್ಯಾಂಡ್‌ಗಳು ನಮ್ಮ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವುದನ್ನು ಯಾವಾಗ ನಿಲ್ಲಿಸುತ್ತವೆ?ʼʼ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಷಾ, "ಇದು ಭಾರತೀಯ ಕಲೆಯ ಕಳವುʼʼ ಎಂದು ಬರೆದಿದ್ದಾರೆ. ʼʼಭಾರತದ ಕಲೆಯನ್ನು ಕಾಪಾಡಿಕೊಂಡು ಬಂದ ಕುಶಲ ಕರ್ಮಿಗಳಿಗೆ ಯಾವುದೇ ಕ್ರೆಡಿಟ್ ನೀಡದೆ, ತಮ್ಮ ಉತ್ಪನ್ನವೆಂದು ಬಿಂಬಿಸುವುದು ಸರಿಯಾದ ಕ್ರಮವಲ್ಲʼʼ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಳಕೆದಾರರು ಕೂಡ ಐಷಾರಾಮಿ ಕಂಪನಿ ಉತ್ಪನ್ನ ಬಹಿಷ್ಕರಿಸುವಂತೆ ಕರೆ ನೀಡಿದರು. ಇಡೀ ಭಾರತವು ಫೆಂಡಿ, ಅದರ ಎಲ್ಲ ಉತ್ಪನ್ನಗಳು, ಅದರ ಎಲ್ಲ ಶೋರೂಮ್‌ಗಳನ್ನು ಬಹಿಷ್ಕರಿಸಬೇಕು ಎಂದು ಕಿಡಿಕಾರಿದ್ದಾರೆ.