ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ ಇಲ್ಲಿದೆ
Viral Video: ಇಲ್ಲೊಂದು ಮ್ಯಾರಾಥಾನ್ ನಲ್ಲಿ ಸೋಲು- ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಯುವ ಕ್ರೀಡಾ ಪಟುಗಳಿಬ್ಬರು ತೋರಿಸಿಕೊಟ್ಟಿದ್ದಾರೆ. ತಮ್ಮ ವೈಯಕ್ತಿಕ ಪ್ರಯತ್ನ ಬದಿಗೆ ತಳ್ಳಿ ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಕುಸಿದು ಬಿದ್ದ ಆಟಗಾರರಿಗೆ ನೆರವಿಗಾಗಿ ಧಾವಿಸಿದ ಸಹ ಸ್ಪರ್ಧಿಗಳು -
ಬೋಸ್ಟನ್,ಏ.23: ಕ್ರೀಡೆ ಅಂದಾಗ ಅಲ್ಲಿ ಎದುರಾಳಿಗಳ ವಿರುದ್ಧ ನಾವು ಗೆಲ್ಲಬೇಕು ಎನ್ನುವ ಹಠ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಮ್ಯಾರಾಥಾನ್ ನಲ್ಲಿ ಸೋಲು- ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಯುವ ಕ್ರೀಡಾ ಪಟುಗಳಿಬ್ಬರು ತೋರಿಸಿಕೊಟ್ಟಿದ್ದಾರೆ. ತಮ್ಮ ವೈಯಕ್ತಿಕ ಪ್ರಯತ್ನ ಬದಿಗೆ ತಳ್ಳಿ ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಸುಮಾರು ಮೂರು ಗಂಟೆಗಳ ಓಟದ ನಂತರ ಮ್ಯಾರಥಾನ್ ಓಟಗಾರ ಅಜಯ್ ಹರಿದಾಸ್ಸೆ ತೀವ್ರ ಆಯಾಸದಿಂದಾಗಿ 26-ಮೈಲಿ ಗಡಿಯ ಹತ್ತಿರ ಕುಸಿದು ಬಿದ್ದರು. ಆತ ಪದೇ ಪದೇ ಎದ್ದು ನಿಲ್ಲಲು ಪ್ರಯತ್ನಿಸಿದರೂ ಮತ್ತು ವಿಫಲರಾಗುವುದನ್ನು ಪ್ರೇಕ್ಷಕರು ಆತಂಕದಿಂದ ವೀಕ್ಷಿಸುತ್ತಿದ್ದರು. ಈ ಸಂದರ್ಭದಲ್ಲಿ ಸಹಾಯಕ್ಕೆ ಇಬ್ಬರು ಸಹ ಆಟಗಾರರು ಮುಂದೆ ಬಂದಿದ್ದಾರೆ.
ವಿಡಿಯೋ ನೋಡಿ:
Moments like this are why the Boston Marathon is more than just a race. Shoutout to Ajay Haridasse (bib 1636) for the incredible determination to keep pushing through severe cramps near the finish line. And massive respect to Aaron Beggs (bib 2289) and another runner (bib unseen)… pic.twitter.com/FfszEogESN
— Tio ZONA (@Zona_G1) April 21, 2026
ಬೋಸ್ಟನ್ ಮ್ಯಾರಥಾನ್‌ನಲ್ಲಿ (Boston Marathon) ಅಜಯ್ ಹರಿದಾಸ್ಸೆ ಎಂಬ ಓಟಗಾರ ನಿರಂತರವಾಗಿ ಓಡಿ ತೀವ್ರ ಆಯಾಸದಿಂದ ಕುಸಿದು ಬಿದ್ದರು. 26ನೇ ಮೈಲಿ ದೂರ ತಲುಪು ವಷ್ಟರಲ್ಲಿ ಅವರ ದೇಹ ಸಂಪೂರ್ಣ ಬಳಲಿತ್ತು. ಎಳಲೂ ಪ್ರಯತ್ನಿಸಿದರೂ ಅವರಿಗೆ ಸಾಧ್ಯ ವಾಗಿಲ್ಲ. ಈ ಸಂದರ್ಭದಲ್ಲಿ ಉತ್ತರ ಐರ್ಲೆಂಡ್‌ನ ಓಟಗಾರ ಆರನ್ ಬೆಗ್ಸ್ ಓಟವನ್ನು ನಿಲ್ಲಿಸಿ ಅಜಯ್ ಅವರಿಗೆ ಸಹಾಯ ಮಾಡಲು ಮುಂದಾದರೂ. ಅಜಯ್ ಅವರನ್ನು ನಿಲ್ಲಿಸಲು ಪ್ರಯತ್ನ ಪಟ್ಟಾಗ ಬ್ರೆಜಿಲ್‌ನ ರಾಬ್ಸನ್ ಡಿ ಒಲಿವೇರಾ ಎಂಬ ಮತ್ತೊಬ್ಬ ಓಟಗಾರ ಕೂಡ ಸಹಾಯಕ್ಕೆ ಮುಂದೆ ಬಂದರು.
Viral Video: ಅಸೆಂಬ್ಲಿಯಲ್ಲೇ ಬಿಟ್ಟಿ ಹಣಕ್ಕಾಗಿ ಮುಗಿಬಿದ್ದ ಪಾಕ್ ಸಂಸದರು; ವಿಡಿಯೋ ನೋಡಿ
ಒಟ್ಟಿಗೆ, ಇಬ್ಬರು ಓಟಗಾರರು ಹರಿದಾಸ್ಸೆಯ ತೋಳುಗಳನ್ನು ತಮ್ಮ ಭುಜಗಳತ್ತ ಇಟ್ಟುಕೊಂಡು ಎಚ್ಚರಿಕೆಯಿಂದ ಅಂತಿಮ ಗೆರೆಯ ಕಡೆಗೆ ಬರುವಲ್ಲಿ ಅವರನ್ನು ಬೆಂಬಲಿಸಿದರು. ವಿಶೇಷವೆಂದರೆ, ರಾಬ್ಸನ್ ಅವರು ದಾಖಲಿಸುವ ಹಾದಿಯಲ್ಲಿದ್ದರು. ಆದರೂ, ದಾಖಲೆಗಿಂತ ಮಾನವೀಯತೆಯೇ ಮುಖ್ಯ ಎಂದು ಅಜಯ್ ಅವರನ್ನು ತಮ್ಮ ಹೆಗಲ ಮೇಲೆ ಹೊತ್ತು ಅಂತಿಮ ಗೆರೆ ತಲುಪಲು ನೆರವಾಗಿದ್ದಾರೆ.
ಈ ಮೂವರು ಕ್ರೀಡಾಪಟುಗಳ ಅಂತಿಮ ಹೆಜ್ಜೆಗಳಿಗೆ ಪ್ರೇಕ್ಷಕರಿಂದ ಜೋರಾಗಿ ಹರ್ಷೋದ್ಗಾರ ಕೇಳಿ ಬಂದವು. ಸ್ಪರ್ಧಾತ್ಮಕ ಕ್ರೀಡೆಯಲ್ಲಿ ಏಕತೆಯ ಈ ಅಪರೂಪದ ಕ್ಷಣವನ್ನು ಶ್ಲಾಘಿಸಿದರು. ಹಲವಾರು ವೀಕ್ಷಕರು ಈ ಭಾವನಾತ್ಮಕ ಕ್ಷಣವನ್ನು ಸೆರೆಹಿಡಿದ್ದು ನಿಜವಾದ ಕ್ರೀಡಾಪಟುಗಳು ಎಂದು ಕರೆದರು. ಘಟನೆಯ ವೀಡಿಯ ತ್ವರಿತವಾಗಿ ವೈರಲ್ ಆಗಿ ಆನ್‌ಲೈನ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ.