Marathon: ಅಪರೂಪದ ರೋಗಗಳ ವಿರುದ್ಧ ರೋಗನಿರೋಧಕತೆ (ಪ್ರೊಫಿಲ್ಯಾಕ್ಸಿಸ್) ಮುಂಚೂಣಿಗೆ ತರಲು ಭಾರತವನ್ನು ಒಟ್ಟುಗೂಡಿಸುವ ʻರೇಸ್ ಫಾರ್ 7ʼ ಜಾಗೃತಿ ಓಟ
ಅಪರೂಪದ ರೋಗಗಳ ದಿನʼದ ಅಂಗವಾಗಿ ʻಆರ್ಗನೈಸೇಶನ್ ಫಾರ್ ರೇರ್ ಡಿಸೀಸ್ ಇಂಡಿ ಯಾʼ(ಒಆರ್‌ಡಿಐ) ಸಂಘಟನೆಯು ʻನೊವೊ ನಾರ್ಡಿಸ್ಕ್ ಇಂಡಿಯಾʼ ಸಂಸ್ಥೆಯ ಬೆಂಬಲ ದೊಂದಿಗೆ ಭಾರತದ 21 ನಗರಗಳಲ್ಲಿ 'ರೇಸ್ ಫಾರ್ 7' ಜಾಗೃತಿ ಓಟದ 10ನೇ ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸಿತು. ಈ ಕಾರ್ಯಕ್ರಮವು ಅಪರೂಪದ ಕಾಯಿ ಲೆಗಳೊಂದಿಗೆ ಜೀವಿಸುತ್ತಿರುವ ರೋಗಿಗಳು, ಆರೈಕೆದಾರರು, ಆರೋಗ್ಯ ವೃತ್ತಿಪರರು ಮತ್ತು ನೀತಿ ನಿರೂಪಕ ರಿಂದ ಅದ್ಭುತ ಸ್ಪಂದನೆಗೆ ಸಾಕ್ಷಿಯಾಯಿತು


ಪ್ರಚಲಿತದಲ್ಲಿರುವ 7000 ಅಪರೂಪದ ಕಾಯಿಲೆಗಳ ಬಗ್ಗೆ ಜಾಗೃತಿ
ಬೆಂಗಳೂರು: ʻಅಪರೂಪದ ರೋಗಗಳ ದಿನʼದ ಅಂಗವಾಗಿ ʻಆರ್ಗನೈಸೇಶನ್ ಫಾರ್ ರೇರ್ ಡಿಸೀಸ್ ಇಂಡಿಯಾʼ(ಒಆರ್‌ಡಿಐ) ಸಂಘಟನೆಯು ʻನೊವೊ ನಾರ್ಡಿಸ್ಕ್ ಇಂಡಿಯಾʼ ಸಂಸ್ಥೆ ಯ ಬೆಂಬಲದೊಂದಿಗೆ ಭಾರತದ 21 ನಗರಗಳಲ್ಲಿ 'ರೇಸ್ ಫಾರ್ 7' ಜಾಗೃತಿ ಓಟದ 10ನೇ ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸಿತು. ಈ ಕಾರ್ಯಕ್ರಮವು ಅಪರೂಪದ ಕಾಯಿ ಲೆಗಳೊಂದಿಗೆ ಜೀವಿಸುತ್ತಿರುವ ರೋಗಿಗಳು, ಆರೈಕೆದಾರರು, ಆರೋಗ್ಯ ವೃತ್ತಿಪರರು ಮತ್ತು ನೀತಿ ನಿರೂಪಕರಿಂದ ಅದ್ಭುತ ಸ್ಪಂದನೆಗೆ ಸಾಕ್ಷಿಯಾಯಿತು. ಎಲ್ಲರೂ ಒಟ್ಟುಗೂಡಿ, ಅಪರೂಪದ ಕಾಯಿಲೆಗಳೊಂದಿಗೆ ಜೀವಿಸುತ್ತಿರುವ ವ್ಯಕ್ತಿಗಳಿಗೆ ಉತ್ತಮ ಆರೋಗ್ಯ ಸೇವೆ ಲಭ್ಯತೆಯನ್ನು ಪ್ರತಿಪಾದಿಸಿದರು.
ಇದನ್ನೂ ಓದಿ: Mid night Marathon: ಮಿಡ್‌ನೈಟ್ ಮ್ಯಾರಥಾನ್ ನಲ್ಲಿ ಡೋಝೀ ತಂಡ
ಭಾರತದಲ್ಲಿ ಅಪರೂಪದ ರೋಗ ನಿರ್ವಹಣೆಗಾಗಿ, ರೋಗ ತಡೆಗಟ್ಟುವ ಚಿಕಿತ್ಸೆಯ ಪರ್ಯಾಯಗಳ ಅಗತ್ಯವನ್ನು ಒತ್ತಿಹೇಳಿದ ʻನೊವೊ ನಾರ್ಡಿಸ್ಕ್ ಇಂಡಿಯಾʼದ ವ್ಯವ ಸ್ಥಾಪಕ ನಿರ್ದೇಶಕರಾದ ವಿಕ್ರಾಂತ್ ಶ್ರೋತ್ರಿಯಾ ಅವರು "ಭಾರತದಲ್ಲಿ ಪ್ರಚಲಿತದಲ್ಲಿ ರುವ ಅಪರೂಪದ ರಕ್ತಸ್ರಾವದ ಅಸ್ವಸ್ಥತೆ ಮತ್ತು ಇತರ ಅಪರೂಪದ ಕಾಯಿಲೆಗಳನ್ನು ನಿರಂತರ ಜಾಗೃತಿ, ಆರಂಭಿಕ ರೋಗನಿರ್ಣಯ ಮತ್ತು ಪರಿಣಾಮಕಾರಿ ನಿರ್ವಹಣೆಯಿಂದ ಮಾತ್ರ ಎದುರಿಸಬಹುದು. ʻಹಿಮೋಫಿಲಿಯಾʼದೊಂದಿಗೆ ಜೀವಿಸುತ್ತಿರುವ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲು ರೋಗನಿರೋಧಕ ಚಿಕಿತ್ಸೆ ಅತ್ಯಗತ್ಯ. ದೇಶದಲ್ಲಿ ಅಪ ರೂಪದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಉತ್ತಮ ಆರೋಗ್ಯ ಪರಿಹಾರಗಳ ಬಗ್ಗೆ ಪ್ರಮುಖ ಚರ್ಚೆಗಳನ್ನು ನಡೆಸುತ್ತಿರುವ ʻಒಆರ್‌ಡಿಐʼ ಉಪಕ್ರಮಗಳನ್ನು ಬೆಂಬಲಿಸಲು ನಾವು ಹೆಮ್ಮೆಪಡುತ್ತೇವೆ,ʼʼ ಎಂದು ಹೇಳಿದರು.
ʻಒಆರ್‌ಡಿಐʼನ ಸಹ-ಸಂಸ್ಥಾಪಕರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಪ್ರಸನ್ನ ಶಿರೋಲ್ ಅವರು ಮಾತನಾಡಿ, "ಅಪರೂಪದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರೋಗಿಗಳು ಹಾಗೂ ಅವರ ಕುಟುಂಬಗಳನ್ನು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಸಂಪನ್ಮೂಲಗಳ ಜೊತೆ ನಂಟು ಮಾಡಿ ಅವರನ್ನು ಸಬಲೀಕರಣಗೊಳಿಸುವ ದೃಷ್ಟಿಕೋನದೊಂದಿಗೆ 2016ರಲ್ಲಿ ʻರೇಸ್ ಫಾರ್ 7ʼ ಪ್ರಾರಂಭಿಸಲಾಯಿತು. ಈ ಉಪ ಕ್ರಮದ ಮೂಲಕ, ನಾವು ಮತ್ತೊಮ್ಮೆ ರೋಗಪೀಡಿತರ ಧ್ವನಿಯನ್ನು ಮುನ್ನೆಲೆಗೆ ತಂದಿ ದ್ದೇವೆ ಮತ್ತು ಆರಂಭಿಕ ರೋಗನಿರ್ಣಯ, ಚಿಕಿತ್ಸೆಗಳಿಗೆ ಪ್ರವೇಶ ಮತ್ತು ಅಪರೂಪದ ರೋಗ ನಿರ್ವಹಣೆಯನ್ನು ಬೆಂಬಲಿಸುವ ನೀತಿಗಳ ನಿರ್ಣಾಯಕ ಅಗತ್ಯವನ್ನು ಬಲಪಡಿಸಿ ದ್ದೇವೆ. ʻನೊವೊ ನಾರ್ಡಿಸ್ಕ್ ಇಂಡಿಯಾʼದ ನಿರಂತರ ಬೆಂಬಲಕ್ಕಾಗಿ ನಾವು ಧನ್ಯವಾದ ಗಳನ್ನು ಅರ್ಪಿಸುತ್ತೇವೆ ಮತ್ತು ರೋಗಿಗಳ ಜೀವನದಲ್ಲಿ ಅರ್ಥಪೂರ್ಣ ಪರಿಣಾಮ ಬೀರಲು ಉದ್ದೇಶಿಸಿದ್ದೇವೆ,ʼʼ ಎಂದು ಹೇಳಿದರು.
ಭಾರತದಲ್ಲಿ, ಸರಿಸುಮಾರು 70 ದಶಲಕ್ಷ ಜನರು ಅಪರೂಪದ ಕಾಯಿಲೆಗಳಿಂದ ಬಳಲು ತ್ತಿದ್ದಾರೆ ಎಂದು ಅಂದಾಜಿಸಲಾಗಿದೆ, ಇದು ಜನಸಂಖ್ಯೆಯ ಗಮನಾರ್ಹ ಭಾಗವನ್ನು ಸೂಚಿಸುತ್ತದೆ. 'ರೇಸ್ ಫಾರ್ 7' ಭಾರತದಲ್ಲಿ 7000 ಅಪರೂಪದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಇದರ ಭಾಗವಾಗಿ, 7000 ಜನರು 7 ಕಿ.ಮೀ ನಡೆಯುತ್ತಾರೆ. ಅಪರೂಪದ ಕಾಯಿಲೆಗಳ ಸಮುದಾಯ ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸುವ ಗುರಿಯನ್ನು ಈ ವಾಕಥಾನ್ ಹೊಂದಿದೆ. ಈ ಕಾರ್ಯಕ್ರಮವು ಅಪರೂಪದ ರೋಗ ನಿರ್ವಹಣೆಯಲ್ಲಿ ರೋಗನಿರೋಧಕತೆಯ ಮಹತ್ವವನ್ನು ಒತ್ತಿ ಹೇಳಿತು, ರೋಗಿ ಗಳು ತಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಮಯೋಚಿತ ಆರೈಕೆ ಮತ್ತು ಚಿಕಿತ್ಸೆಯನ್ನು ಪಡೆಯುವುದನ್ನು ಇದು ಖಚಿತಪಡಿಸುತ್ತದೆ.
ಅಪರೂಪದ ಕಾಯಿಲೆಯ ರೋಗಿಗಳಿಗೆ ಆರೋಗ್ಯ ರಕ್ಷಣೆಯ ಲಭ್ಯತೆಯನ್ನು ಸುಧಾರಿ ಸುವ ನೀತಿಗಳು ಮತ್ತು ಕಾರ್ಯಕ್ರಮಗಳಿಗಾಗಿ ಪ್ರತಿಪಾದನೆಯನ್ನು ಮುಂದುವರಿಸುವ ನವೀಕರಿಸಿದ ಬದ್ಧತೆಯೊಂದಿಗೆ ಈ ಕಾರ್ಯಕ್ರಮವು ಕೊನೆಗೊಂಡಿತು. ʻರೇಸ್ ಫಾರ್ 7ʼ ಬದಲಾವಣೆಗಾಗಿ ಪ್ರಬಲ ವೇದಿಕೆಯಾಗಿ ಉಳಿದಿದ್ದು, ರೋಗಿಗಳು, ಆರೋಗ್ಯ ಆರೈಕೆ ಪೂರೈಕೆದಾರರು ಮತ್ತು ನೀತಿ ನಿರೂಪಕರ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ.