Viral Video: 4 ವರ್ಷದ ಬಾಲಕನಿಗೆ ಸಿಗರೇಟ್ ಸೇದಿಸಿದ ಕುಡುಕ ಡಾಕ್ಟರ್- ವಿಡಿಯೊ ವೈರಲ್
ಉತ್ತರ ಪ್ರದೇಶದ ಜಲೌನ್‍ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ವೈದ್ಯ ಡಾ.ಸುರೇಶ್ ಚಂದ್ರ ಎಂಬಾತ ಸಣ್ಣ ಬಾಲಕನಿಗೆ ಸಿಗರೇಟ್ ಸೇದುವುದು ಹೇಗೆ ಎಂದು ಕಲಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಲಖನೌ: ದುಶ್ಚಟಗಳಿಂದ ದೂರವಿರಿ... ಆರೋಗ್ಯ ಕಾಪಾಡಿಕೊಳ್ಳಿ ಎಂದು ರೋಗಿಗಳಿಗೆ ಸಲಹೆ ನೀಡಬೇಕಿದ್ದ ವೈದ್ಯನೇ ಹೀನ ಕೃತ್ಯವೊಂದನ್ನು ನಡೆಸಿರುವ ಘಟನೆ ವರದಿಯಾಗಿದೆ. ಉತ್ತರ ಪ್ರದೇಶದ ಜಲೌನ್‍ನಲ್ಲಿ ವೈದ್ಯನೊಬ್ಬ ಸಣ್ಣ ಬಾಲಕನಿಗೆ ಸಿಗರೇಟ್ ಸೇದುವುದು ಹೇಗೆ ಎಂದು ಕಲಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಸಿಗರೇಟಿನ ಹೊಗೆಯನ್ನು ಉಸಿರಾಡುವಂತೆ ಮಾಡುವ ಮೂಲಕ ಬಾಲಕನ ಕೆಮ್ಮು ಮತ್ತು ಶೀತಕ್ಕೆ ಚಿಕಿತ್ಸೆ ನೀಡುತ್ತಿದ್ದೇನೆ ಎಂದು ವೈದ್ಯ ಹೇಳಿದ್ದಾನೆ. ವೈರಲ್ ವಿಡಿಯೊದಲ್ಲಿ ವೈದ್ಯ ಸಿಗರೇಟನ್ನು ಹಚ್ಚಿ ಬಾಲಕನಿಗೆ ಧೂಮಪಾನ ಮಾಡಲು ನೀಡುವುದು ವಿಡಿಯೊದಲ್ಲಿ ಸೆರೆಯಾಗಿದೆ. ಸಿಗರೇಟ್ ಸೇದುವುದು ಹೇಗೆ ಎಂಬುದರ ಕುರಿತು ಸಣ್ಣ ಬಾಲಕನಿಗೆ ಆತ ಹೇಳಿಕೊಡುವುದು ವಿಡಿಯೊದಲ್ಲಿ ರೆಕಾರ್ಡ್ ಆಗಿದೆ.
ವೈದ್ಯ ಬಾಲಕನಿಗೆ ಧೂಮಪಾನ ಮಾಡಿದ ದೃಶ್ಯ ಇಲ್ಲಿದೆ ನೋಡಿ...
#Jalaun : शराबी डॉक्टर की आपत्तिजनक करतूत
— News1India (@News1IndiaTweet) April 16, 2025
सिरफिरा डॉक्टर बच्चे को सिगरेट पिला कर रहा है जुकाम का ईलाज
डॉ की करतूत कैमरे में हुई कैद वीडियो सोशल मीडिया पर वायरल
सामुदायिक स्वास्थ्य केन्द्र कुठौंद में तैनात है डॉक्टर सुरेश चंद्र@brajeshpathakup | @CMOfficeUP | @UPGovt |… pic.twitter.com/9AKL4PfvlP
ಇಂತಹ ದುಷ್ಕೃತ್ಯ ಎಸಗಿದ ವೈದ್ಯನನ್ನು ಡಾ.ಸುರೇಶ್ ಚಂದ್ರ ಎಂದು ಗುರುತಿಸಲಾಗಿದೆ. ಜಲೌನ್‍ನಲ್ಲಿರುವ ಕುಥೌಂಡ್‍ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಸಿಎಚ್‍ಸಿ)ಈ ವೈದ್ಯನನ್ನು ನಿಯೋಜಿಸಲಾಗಿತ್ತು. ಈ ಘಟನೆಯ ನಂತರ ಸಿಎಂಒ ಎನ್.ಡಿ.ಶರ್ಮಾ ಈತನನ್ನು ಬೇರೆ ಕಡೆಗೆ ವರ್ಗಾಯಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಮತ್ತು ಆರೋಪಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಎಸಿಎಂಒಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ, 4 ವರ್ಷದ ಬಾಲಕನನ್ನು ಅವನ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಬಂದು ನಂತರ ಬಾಲಕನನ್ನು ಅಲ್ಲೇ ಕೂರಿಸಿ ಪೋಷಕರು ವೈದ್ಯರನ್ನು ನೋಡಲು ಹೋಗಿದ್ದಾರಂತೆ. ಆಗ ಆಸ್ಪತ್ರೆಯಲ್ಲಿದ್ದ ಡಾ.ಸುರೇಶ್ ಚಂದ್ರ ಬಾಲಕನನ್ನು ಗಮನಿಸಿ ಆತನಿಗೆ ಜೇಬಿನಿಂದ ಸಿಗರೇಟನ್ನು ತೆಗೆದು ನೀಡಿದ್ದಾನೆ. ಘಟನೆ ನಡೆದಾಗ ವೈದ್ಯನು ಮದ್ಯದ ಅಮಲಿನಲ್ಲಿದ್ದಾನೆ ಎಂದು ವರದಿಗಳಲ್ಲಿ ತಿಳಿಸಲಾಗಿದೆ. ನಂತರ ಅವನು ಸಿಗರೇಟನ್ನು ಬಾಯಿಗೆ ಹಾಕಿ ಅದನ್ನು ಸೇದಲು ಬಾಲಕನಿಗೆ ಹೇಳಿದ್ದಾನೆ. ಹೊಗೆಯನ್ನು ಒಳಗೆ ತೆಗೆದುಕೊಳ್ಳುವುದು ಹೇಗೆ ಎಂದು ಅವನು ಬಾಲಕನಿಗೆ ಕಲಿಸಿದ್ದಾನೆ. ನಂತರ ಅವನು ಬಾಲಕನಿಂದ ಸಿಗರೇಟ್ ತೆಗೆದುಕೊಂಡು ಸೇದಿ ಧೂಮಪಾನ ಮಾಡುವುದು ಹೇಗೆ ಎಂದು ತೋರಿಸಿದನು. ನಂತರ ಆತ ಸಿಗರೇಟನ್ನು ಬಾಲಕನಿಗೆ ನೀಡಿದ್ದಾನೆ.
ಈ ಸುದ್ದಿಯನ್ನೂ ಓದಿ:Viral Video: ದೇವಾಲಯದ ಆವರಣದಲ್ಲಿ ಅನುಚಿತ ವರ್ತನೆ; ಒಪ್ಪಿಗೆ ಇಲ್ಲದೆ ಯುವತಿಯ ಫೋಟೊ ಕ್ಲಿಕ್ಕಿಸಿದ ಮಧ್ಯ ವಯಸ್ಕ
ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಫೋನ್ ಕ್ಯಾಮೆರಾದಲ್ಲಿ ವಿಡಿಯೊವನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಂತರ ಈ ವಿಡಿಯೊ ವೈರಲ್ ಆಗಿದೆ. ವಿಡಿಯೊವನ್ನು ಗಮನಿಸಿದ ಪೊಲೀಸರು ಅದಕ್ಕೆ ಪ್ರತಿಕ್ರಿಯಿಸಿ ಈ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿದ್ದಾರೆ.