ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ಮುದ್ದಾಗಿ ಆಟ ಆಡ್ತಾ ಏಕಾಏಕಿ ಅಟ್ಯಾಕ್‌ ಮಾಡಿದ ಹಸ್ಕಿ; ಇಲ್ಲಿದೆ ಶಾಕಿಂಗ್‌ ವಿಡಿಯೊ!

ಪೆಟ್ ಶಾಪ್‌ವೊಂದರಲ್ಲಿ ಯುವಕನ ಜೊತೆ ಆಟವಾಡುತ್ತಾ ಇದ್ದ ಶ್ವಾನವೊಂದು ಬಳಿಕ ಏಕಾಏಕಿ ಯುವಕರ ಮೇಲೆ ಭೀಕರ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಸದ್ಯ ನಾಯಿಯ ಈ ಭೀಕರ ವರ್ತನೆ ಕಂಡು ನೆಟ್ಟಿಗರು ಶಾಕ್‌ ಆಗಿದ್ದು, ಈ ದೃಶ್ಯ ಬಹಳಷ್ಟು ವೈರಲ್ ಆಗುತ್ತಿದೆ.

ಏಕಾಏಕಿ ನಾಯಿಯ ಡೆಡ್ಲಿ ಅಟ್ಯಾಕ್‌! ಶಾಕಿಂಗ್‌ ವಿಡಿಯೊ ವೈರಲ್‌

Profile Pushpa Kumari Feb 16, 2025 2:21 PM

ನವದೆಹಲಿ: ಇತ್ತೀಚಿಗೆ ತಾವು ಪ್ರೀತಿಯಿಂದ ಸಾಕಿದ ಮುದ್ದಿನ ಪ್ರಾಣಿಗಳಿಂದಲೇ ಜನರು ಅಪಾಯಕ್ಕೆ ಸಿಲುಕುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ಇಂತವುದೇ ಘಟನೆಯೊಂದು ನಡೆದಿದ್ದು ಆಟವಾಡುತ್ತಲೇ ಏಕಾಏಕಿ ಸಾಕು ನಾಯಿಯೊಂದು ಯುವಕನ ಮೇಲೆ ದಾಳಿ ಮಾಡಿದ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಪೆಟ್ ಶಾಪ್‌ವೊಂದರಲ್ಲಿ ಈ ಘಟನೆ ನಡೆದಿದ್ದು, ಯುವಕನ ಜೊತೆ ನಾಯಿ ಮುದ್ದಾಡಿ ಆಟವಾಡುತ್ತಾ ಬಳಿಕ ಏಕಾಏಕಿ ಯುವಕರ ಮೇಲೆ ಭೀಕರ ದಾಳಿ ನಡೆಸಿದೆ. ಸದ್ಯ ನಾಯಿಯ ಈ ವರ್ತನೆ ಕಂಡು ನೆಟ್ಟಿಗರು ಬೆರಗಾಗಿದ್ದು ಈ ದೃಶ್ಯ ಬಹಳಷ್ಟು ವೈರಲ್(Viral Video) ಆಗುತ್ತಿದೆ.

ಮನುಷ್ಯರಂತೆ ಸಾಕು ಪ್ರಾಣಿಗಳ ಆರೈಕೆಗೂ ಕೂಡ ಪೆಟ್ ಶಾಪ್‌ಗಳಿದ್ದು ಇಬ್ಬರು ಯುವಕರು ಪೆಟ್ ಕ್ಲಿನಿಕ್ ಒಳಗೆ ಸೋಫಾದಲ್ಲಿ ಆರಾಮ ವಾಗಿ ಕುಳಿತಿದ್ದಾರೆ.ಆರಂಭದಲ್ಲಿ ನಾಯಿ ಅತ್ತಿಂದಿತ್ತ ಉತ್ಸಾಹದಿಂದ ಯುವಕರಿಬ್ಬರ ಸುತ್ತ ಚಲಿಸಿ ಯುವಕನ ಮುದ್ದಾಟವನ್ನು ಆನಂದಿಸುತ್ತದೆ. ಹೀಗೆ ಆಟವಾಡುತ್ತಾ ಬಳಿಕ ಏಕಾಏಕಿ ಯುವಕನ ಮೇಲೆ ದಾಳಿ ನಡೆಸುತ್ತದೆ.



ವೈರಲ್ ಆದ ವಿಡಿಯೊದಲ್ಲಿ ಇಬ್ಬರು ಯುವಕರು ಪೆಟ್ ಕ್ಲಿನಿಕ್ ಒಳಗೆ ಕುಳಿತಿರುವಂತೆ ಹಸ್ಕಿ ನಾಯಿಯೊಂದು ಬಹಳ ಪ್ರೀತಿಯಿಂದ ಅವರ ಬಳಿ ಬರುತ್ತದೆ. ಬಳಿಕ ಯುವಕರು ನಾಯಿ ಯನ್ನುಮುದ್ದಿಸಿ, ಜೊತೆಗಿದ್ದ ಇನ್ನೊಬ್ಬ ಯುವಕ ತಮ್ಮ ಮೊಬೈಲ್‌ ನಲ್ಲಿ ನಾಯಿಯ ದೃಶ್ಯ ರೆಕಾರ್ಡ್‌ ಮಾಡುತ್ತಿರುವುದನ್ನು ಕಾಣಬಹುದು. ಆರಂಭದಲ್ಲಿ ನಾಯಿ ಅತ್ತಿಂದಿತ್ತ ಉತ್ಸಾಹದಿಂದ ಹೋದರೂ ಯುವಕನ ಮುದ್ದಾಟವನ್ನು ಆನಂದಿಸಿ ಆಟವಾಡುತ್ತಾ ಬಳಿಕ ಹಸ್ಕಿ ನಾಯಿಯು ಏಕಾಏಕಿ ಯುವಕನ ಮೇಲೆ ಎರಗಿ ಯುವಕನ ಕೈಗೆ ಕಚ್ಚುತ್ತದೆ.

ಹೀಗೆ ನಾಯಿಯನ್ನು ಮುದ್ದಿಸಿರುವಾಗಲೇ ಹಸ್ಕಿ ನಾಯಿಯು ಯುವಕನ ಮೇಲೆ ಏಕಾಏಕಿ ದಾಳಿ ಮಾಡಲು ಮುಂದಾಗುತ್ತದೆ. ಇದನ್ನು ಕಂಡ ಇನ್ನೊಬ್ಬ ಯುವಕ ಕೂಡ ದೂರ ಓಡುತ್ತಾನೆ. ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಯುವಕ ಸಾಕಷ್ಟು ಪ್ರಯತ್ನಪಟ್ಟರು ಕಚ್ಷಲು ಹೋಗುವ ಆಕ್ರಮಣಕಾರಿ ಭಯಾನಕ ದೃಶ್ಯಗಳನ್ನು ವಿಡಿಯೊದಲ್ಲಿ ಕಾಣಬಹುದು

ಇದನ್ನು ಓದಿ: Viral News: 84 ವರ್ಷಗಳ ಸುದೀರ್ಘ ದಾಂಪತ್ಯ; ವಿಶ್ವ ದಾಖಲೆಗೆ ಸೇರಿದ ಈ ಜೋಡಿಯ ನಂಟಿನ ಗುಟ್ಟೇನು?

ಹಸ್ಕಿ ನಾಯಿಯನ್ನು ಹ್ಯುಮನ್ ಫ್ರೆಂಡ್ಲಿ ಎಂದು ಪರಿಗಣಿಸಿದರೂ ಈ ರೀತಿ ದಾಳಿ ಏಕೆ ಮಾಡಿರಬಹುದು ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ಚರ್ಚೆಗಳಾಗುತ್ತಿವೆ. ಈ ವಿಡಿಯೊವನ್ನು @gharkekalesh ಎಂಬ ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಬಳಕೆದಾರರು ಈ ಬಗ್ಗೆ ನಾನಾ ರೀತಿಯ ‌ಪ್ರತಿಕ್ರಿಯೆ ನೀಡಿದ್ದಾರೆ ‌.ಈ ಬಗ್ಗೆ ನೆಟ್ಟಿಗ ರೊಬ್ಬರು ಪ್ರತಿಕ್ರಿಯೆ ನೀಡಿದ್ದು, ಹಸ್ಕಿ ನಾಯಿಯನ್ನು ಆತ ಕೆರಳಿಸಿರ ಬಹುದು ಎಂದು ಪ್ರತಿಕ್ರಿಯೆ ‌ನೀಡಿದ್ದಾರೆ. ಇನ್ನು ಕೆಲವರು ಸಾಕು ಪ್ರಾಣಿ ಗಳು ಯಾವಾಗ ದಾಳಿ ಮಾಡುತ್ತವೆ ಎಂದು ನಿರೀಕ್ಷಿಸಲು ಅಸಾಧ್ಯ‌ ಎಂದು ಕಮೆಂಟ್ ಹಾಕಿದ್ದಾರೆ.