ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಛೇ...ಇವಳೆಂಥಾ ಸೊಸೆ; ವಯಸ್ಸಾದ ಅತ್ತೆಗೆ ಹಿಗ್ಗಾಮುಗ್ಗ ಥಳಿಸಿದ ಮಹಿಳೆ

ಉತ್ತರ ಪ್ರದೇಶದ ಗಾಜಿಯಾಬಾದ್‌ನ ಕವಿ ನಗರದ ಮನೆಯೊಂದರಲ್ಲಿ ಸೊಸೆಯೊಬ್ಬಳು ತನ್ನ ವೃದ್ಧ ಅತ್ತೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ಎಳೆದಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಂದು ನಿಮಿಷ 28 ಸೆಕೆಂಡ್‌ಗಳ ಈ ದೃಶ್ಯಾವಳಿಯಲ್ಲಿ ಮೂವರು ಮಹಿಳೆಯರು ಜಗಳದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಇದರಲ್ಲಿ ಒಬ್ಬ ಮಹಿಳೆ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾಳೆ.

ಅತ್ತೆಯನ್ನು ಎಳೆದಾಡಿ ಹಲ್ಲೆ ನಡೆಸಿದ ಸೊಸೆ; ವಿಡಿಯೊ ವೈರಲ್‌

Profile Sushmitha Jain Jul 7, 2025 6:06 PM

ಲಖನೌ: ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನ (Ghaziabad) ಕವಿ ನಗರದ ಮನೆಯೊಂದರಲ್ಲಿ ಸೊಸೆಯೊಬ್ಬಳು ತನ್ನ ವೃದ್ಧ ಅತ್ತೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ಎಳೆದಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 1 ನಿಮಿಷ 28 ಸೆಕೆಂಡ್‌ಗಳ ಈ ದೃಶ್ಯದಲ್ಲಿ ಮೂವರು ಮಹಿಳೆಯರು ಜಗಳದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಇದರಲ್ಲಿ ಒಬ್ಬ ಮಹಿಳೆ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾಳೆ.

ವಿಡಿಯೊದಲ್ಲಿ ಆಕಾಂಕ್ಷಾ ಎಂಬ ಮಹಿಳೆ ತನ್ನ ಅತ್ತೆಯ ಜತೆ ವಾಗ್ವಾದ ನಡೆಸುತ್ತಿರುವುದು ಕಂಡುಬಂದಿದೆ. ಆಕಾಂಕ್ಷಾ ಎರಡು ಸಣ್ಣ ಬ್ಯಾಗ್‌ಗಳನ್ನು ತೆಗೆದುಕೊಂಡು ಎಲ್ಲಿಂದಲೋ ಬಂದಂತೆ ಕಾಣುತ್ತಾಳೆ. ಆಕೆಯ ತಾಯಿ ಜಗಳದ ಸಂಪೂರ್ಣ ವಿಡಿಯೊವನ್ನು ಮೊಬೈಲ್‌‌ನಲ್ಲಿ ರೆಕಾರ್ಡ್ ಮಾಡಿದ್ದಾಳೆ. ಆಕಾಂಕ್ಷಾ ತನ್ನ ಅತ್ತೆಯ ಮೇಲೆ ಕೂಗಾಡುತ್ತಾಳೆ. ಬಳಿಕ ಮೆಟ್ಟಿಲುಗಳ ಕಡೆಗೆ ನಡೆದುಕೊಂಡು ಹೋಗಿದ್ದಾಳೆ. ವಿಡಿಯೊ ರೆಕಾರ್ಡಿಂಗ್ ಗಮನಿಸಿದ ಅತ್ತೆ ಫೋನ್ ಕಿತ್ತುಕೊಳ್ಳಲು ಯತ್ನಿಸುತ್ತಾರೆ.



ಈ ವೇಳೆ ಆಕಾಂಕ್ಷಾ ಮಧ್ಯ ಪ್ರವೇಶಿಸಿ ಅತ್ತೆಯ ಕಪಾಳಕ್ಕೆ ಹೊಡೆದಿದ್ದಾಳೆ. ಅಲ್ಲದೆ ಅತ್ತೆಯನ್ನು ತಳ್ಳಿ ತಲೆಗೆ ಪದೇ ಪದೆ ಹೊಡೆಯುವುದನ್ನು ವಿಡಿಯೊದಲ್ಲಿ ಕಾಣಬಹುದು. ಆಕಾಂಕ್ಷಾ ತನ್ನ ಬ್ಯಾಗ್‌ಗಳನ್ನು ಕೆಳಗಿಟ್ಟು, ಅತ್ತೆಯನ್ನು ಬಾಗಿಲ ಬಳಿಗೆ ಎಳೆದು ಗೋಡೆಗೆ ಒತ್ತಿ ಕೈಯನ್ನು ಗಟ್ಟಿಯಾಗಿ ಎಳೆಯುತ್ತಾಳೆ. ಇದರಿಂದ ವೃದ್ಧೆ ತಿರುಗಿ ಬೀಳುತ್ತಾಳೆ. ಈ ವೇಳೆ ಅತ್ತೆಯ ಚಪ್ಪಲಿಗಳು ಜಾರಿದ್ದು, ಆಕಾಂಕ್ಷಾ ಅವುಗಳನ್ನು ಒದ್ದು, ತನ್ನ ಅತ್ತೆಯನ್ನು ಮೆಟ್ಟಿಲುಗಳಿಂದ ಕೆಳಗೆ ಎಳೆಯುತ್ತಾಳೆ. ಇನ್ನು ಬಾಗಿಲು ತೆಗೆದು ಅತ್ತೆಯನ್ನು ಒಳಗೆ ಎಳೆದೊಯ್ಯುತ್ತಾಳೆ.

ಆಕಾಂಕ್ಷಾ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು ಎರಡೂವರೆ ವರ್ಷಗಳ ಹಿಂದೆ ಅಂತರಿಕ್ಷ ಎಂಬಾತನನ್ನು ಮದುವೆಯಾಗಿದ್ದಾಳೆ ಎಂದು ತಿಳಿದುಬಂದಿದೆ. ಅಂತರಿಕ್ಷ ಗುರಗಾಂವ್‌ನಲ್ಲಿ ಕೆಲಸ ಮಾಡಿದರೆ, ಆಕಾಂಕ್ಷಾ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾಳೆ. ಘಟನೆ ಬಗ್ಗೆ ಕವಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.