ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂಡಿಗೊ ಬಿಕ್ಕಟ್ಟು; ವಿಮಾನ ನಿಲ್ದಾಣದಲ್ಲೇ ಲೈವ್ ಕಾನ್ಸರ್ಟ್, ಇಲ್ಲಿದೆ ನೋಡಿ ವಿಡಿಯೊ

IndiGo crisis 2025: ಇಂಡಿಗೊ ವಿಮಾನಯಾನದ ನಿರಂತರ ರದ್ದು-ವಿಳಂಬದಿಂದಾಗಿ ಪ್ರಯಾಣಿಕರು ತಲೆ ಮೇಲೆ ಕೈಹೊತ್ತು ವಿಮಾನ ನಿಲ್ದಾಣದಲ್ಲಿಯೇ ಕುಳಿತುಕೊಂಡಿದ್ದಾರೆ. ಈ ನಡುವೆ ಮುಂಬೈ ವಿಮಾನ ನಿಲ್ದಾಣವು ಲೈವ್ ಕಾನ್ಸರ್ಟ್ ತಾಣವಾಗಿ ಬದಲಾದ ಘಟನೆ ನಡೆಯಿತು. ಗಾಯಕರೊಬ್ಬರು ಗಿಟಾರ್ ಹಿಡಿದು, ಹಾಡು ಹಾಡಿದ್ದಾರೆ. ಈ ಮೂಲಕ ಪ್ರಯಾಣಿಕರ ಮನಸ್ಸಿಗೆ ಕೊಂಚ ಉಲ್ಲಾಸ ತಂದಿದ್ದಾರೆ.

ವಿಮಾನ ನಿಲ್ದಾಣದಲ್ಲೇ ಲೈವ್ ಕಾನ್ಸರ್ಟ್, ಇಲ್ಲಿದೆ ನೋಡಿ ವಿಡಿಯೊ

ಮುಂಬೈ ವಿಮಾನ ನಿಲ್ದಾಣದಲ್ಲೇ ಲೈವ್ ಕಾನ್ಸರ್ಟ್ -

Priyanka P
Priyanka P Dec 7, 2025 4:31 PM

ಮುಂಬೈ, ಡಿ. 7: ಇಂಡಿಗೊದ ಕಾರ್ಯಾಚರಣೆಯ ಬಿಕ್ಕಟ್ಟಿನಿಂದಾಗಿ ಸಾವಿರಾರು ಪ್ರಯಾಣಿಕರು ಚಿಂತೆಯಲ್ಲಿರುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಅಪರೂಪದ ಘಟನೆಯೊಂದು ನಡೆಯಿತು. ಚಿಂತೆಯಲ್ಲಿದ್ದ ಪ್ರಯಾಣಿಕರ ಮನಸ್ಥಿತಿಯನ್ನು ಉಲ್ಲಾಸಗೊಳಿಸಲು ಗಾಯಕರೊಬ್ಬರು ಮುಂದಾದರು. ಹೌದು, ಹತಾಶೆಯಿಂದ ಕಾಯುವ ಬದಲು, ಗಾಯಕ ಝಯಾನ್ ರಾಝಾ ತಮ್ಮ ಗಿಟಾರ್ ಎತ್ತಿಕೊಂಡು ಟರ್ಮಿನಲ್ ಲೈವ್ ಕಾನ್ಸರ್ಟ್ ಆಗಿ ಪರಿವರ್ತಿಸಿದರು. ಇದರ ವಿಡಿಯೊ ಸೋಶಿಯಲ್‌ ಮೀಡಿಯಾದಲಲಿ ವೈರಲ್ (Viral Video) ಆಗಿದೆ.

ದಣಿದ ಪ್ರಯಾಣಿಕರ ನಡುವೆ ಕುಳಿತು, 2000ದ ದಶಕದ ಜನಪ್ರಿಯʼ ವೋ ಲಮ್ಹೆʼ ಹಿಂದಿ ಹಾಡನ್ನು ಅವರು ಪ್ರಸ್ತುತಪಡಿಸಿದರು. ಇದರ ವಿಡಿಯೊವನ್ನು ರಾಝಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರ ಸುತ್ತಲಿನ ಜನರು, ತಮ್ಮ ಲಗೇಜ್ ಬಳಿ ಕುಳಿತು, ಸದ್ದಿಲ್ಲದೆ ಆಲಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಕೆಲವರು ನಗುತ್ತಾ ತಮ್ಮ ಫೋನ್‌ಗಳಲ್ಲಿ ಆ ಕ್ಷಣವನ್ನು ರೆಕಾರ್ಡ್ ಮಾಡುತ್ತಿದ್ದಾರೆ.

ಇಂಡಿಗೋ ವಿಮಾನ ಹಾರಾಟ ವ್ಯತ್ಯಯ: ಪಿಜಿ ನೀಟ್‌ ಪರೀಕ್ಷೆ ಮುಂದೂಡಿಕೆ

ʼʼಫ್ಲೈಟ್ ವಿಳಂಬ ಥಾ... ತೋ ಲೈವ್ ಕಾನ್ಸರ್ಟ್ ಶುರು ಕರ್ ದಿಯಾ. ಇಂಡಿಗೊ ನೆ ತಡ ದಿಯಾ, ಮೈನೆ ಮೆಲೋಡಿ ದಿಯಾ. ಮುಂಬೈ ಟು ಪಾಟ್ನಾ, ಮುಂಬೈ ಟು ಪಟಾ ನಹೀ ಕಬ್ ಜಾಯೇಂಗೆʼʼ ಎಂದು ಹಾಡಿದ್ದಾರೆ.

ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಸ್ತವ್ಯಸ್ತವಾಗಿರುವ ಪ್ರಯಾಣದ ದಿನದಂದು ಒತ್ತಡವನ್ನು ಕಡಿಮೆ ಮಾಡುವ ಗಾಯಕನ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಆ ಗೊಂದಲದ ಪರಿಸ್ಥಿತಿಯಲ್ಲಿರುವ ಎಲ್ಲರ ಮನಸ್ಥಿತಿಯನ್ನು ಬದಲಾಯಿಸುವವನು. ಸಂಗೀತ ಯಾವಾಗಲೂ ಅದ್ಭುತಗಳನ್ನು ಮಾಡುತ್ತದೆ ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಈ ಅಸ್ತವ್ಯಸ್ತ ಪರಿಸ್ಥಿತಿಯಲ್ಲಿಯೂ ನಮಗೆ ಬುದ್ಧಿವಂತ ವ್ಯಕ್ತಿಯೊಬ್ಬರು ಸಿಕ್ಕರು. ನೀವು ಅವರ ಮನಸ್ಸನ್ನು ಬೇರೆಡೆಗೆ ತಿರುಗಿಸುವಲ್ಲಿ ಉತ್ತಮ ಕೆಲಸ ಮಾಡಿದ್ದೀರಿ ಎಂದು ಮತ್ತೊಬ್ಬರು ಬರೆದಿದ್ದಾರೆ.

ವಿಡಿಯೊ ವೀಕ್ಷಿಸಿ:

ನಿಜವಾದ ಕಲಾವಿದ ಮಾತ್ರ ಇಂಥದ್ದರ ಬಗ್ಗೆ ಯೋಚಿಸಬಲ್ಲ. ಅದಕ್ಕಾಗಿಯೇ ಅವರನ್ನು ಜೀವನದ ಕಲಾವಿದರು ಎಂದು ಕರೆಯಲಾಗುತ್ತದೆ ಎಂದು ಮಗದೊಬ್ಬರು ಅಭಿಪ್ರಾಯಪಟ್ಟರು. ಇತರರು ಅವರು ತಂದ ಸಕಾರಾತ್ಮಕತೆಯನ್ನು ಮೆಚ್ಚುತ್ತ, ಮನಸ್ಸು ಪ್ರಕ್ಷುಬ್ಧಗೊಂಡ ಪರಿಸ್ಥಿತಿಗಳಲ್ಲಿ ತರ್ಕಬದ್ಧವಾಗಿ ಮತ್ತು ಸಕಾರಾತ್ಮಕವಾಗಿ ಯೋಚಿಸುವ ಜನರು ನಮ್ಮಲ್ಲಿ ಇನ್ನೂ ಇದ್ದಾರೆ ಎಂದು ಹೇಳಿದರು.

ಇಂಡಿಗೊ ತನ್ನ ಕಾರ್ಯಾಚರಣೆಯ ಅತಿದೊಡ್ಡ ಅಡೆತಡೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಹೃದಯಸ್ಪರ್ಶಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಕಳೆದ ಕೆಲವು ದಿನಗಳಿಂದ ವಿಮಾನಯಾನ ಸಂಸ್ಥೆ ನೂರಾರು ವಿಮಾನಗಳನ್ನು ರದ್ದುಗೊಳಿಸಿದೆ. ಶುಕ್ರವಾರ ಮಾತ್ರ 1,000ಕ್ಕೂ ಹೆಚ್ಚು ವಿಮಾನಗಳು ಹಾರಾಡಿಲ್ಲ.

ಇನ್ನು ಇಂಡಿಗೊ ವಿಮಾನಗಳ ರದ್ದತಿ ಹಿನ್ನೆಲೆಯಲ್ಲಿ ಪ್ರಯಾಣಿಕರು ಅಂತಾರಾಜ್ಯ ಪ್ರಯಾಣದಲ್ಲಿ ಅನಾನುಕೂಲತೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ ಪ್ರಯಾಣಿಕರಿಗೆ ತುಸು ರಿಲೀಫ್‌ ನೀಡಿದೆ. ಈಗಾಗಲೇ ಹೆಚ್ಚುವರಿ ಎಸಿ ಬೋಗಿಗಳ ಸೇವೆ ಆರಂಭಿಸಿದ್ದು, ಜತೆಗೆ ದೆಹಲಿ, ಪುಣೆ ಮತ್ತು ಚೆನ್ನೈಗೆ ವಿಶೇಷ 8 ರೈಲುಗಳ ವ್ಯವಸ್ಥೆ ಮಾಡಿದೆ.