ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ‘ಜೋಶಿ ಜಾಧವ್ ಭೋಲ್ ರಹಾ ಹ್ಞೂಂ..!’ – ವೈರಲ್ ಆಯ್ತು ಗಾಯಾಳು ಏರ್‌ಫೋರ್ಸ್‌ ಯೋಧನ ಮೊಬೈಲ್ ಸಂಭಾಷಣೆ

ಭಾರತೀಯ ವಾಯು ಪಡೆಯ ಮಿರಾಜ್ 2000 ಯುದ್ಧ ವಿಮಾನ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಗದ್ದೆಯೊಂದರಲ್ಲಿ ಪತನಗೊಂಡ ಸಂದರ್ಭದಲ್ಲಿ ಗಾಯಗೊಂಡು ಬಿದ್ದಿದ್ದ ಅದರ ಪೈಲಟ್ ತನ್ನ ಅಧಿಕಾರಿಗಳೊಂದಿಗೆ ಮೊಬೈಲ್ ನಲ್ಲಿ ನಡೆಸಿದ ಸಂಭಾಷಣೆಯ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮಿರಾಜ್ ಫೈಟರ್ ಜೆಟ್ ಪತನ – ಪೈಲಟ್ ಫೋನ್ ಸಂಭಾಷಣೆ ವೈರಲ್

ಮಿರಾಜ್ ಫೈಟರ್ ಜೆಟ್ ಪತನ

Profile Sushmitha Jain Feb 7, 2025 11:54 AM

ಭೋಪಾಲ್: ಭಾರತೀಯ ವಾಯು ಸೇನೆಯ (Indian Air Force) ಪೈಲಟ್ ಗಳ ತರಬೇತಿ ಹಾರಾಟ ಸಂದರ್ಭದಲ್ಲಿ ಫೈಟರ್ ಜೆಟ್ ಗಳು (Fighter Jet) ಪತನಗೊಳ್ಳುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಪೈಲಟ್ ಯೋಧರ ಪ್ರಾಣ ಹಾನಿಯಾದರೆ ಇನ್ನು ಕೆಲವು ಸಂದರ್ಭಗಳಲ್ಲಿ ಅವರು ಅಪಘಾತಗೊಂಡ ಜೆಟ್ ನಿಂದ ಹೊರ ಜಿಗಿದು ತಪ್ಪಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಗಾಯಗಳಾಗುವ ಸಾಧ್ಯತೆಗಳಿರುತ್ತವೆ. ಅಂತಹ ಒಂದು ಫೈಟರ್ ಜೆಟ್ ಅಪಘಾತ ಪ್ರಕರಣದಲ್ಲಿ ಗಾಯಗೊಂಡ ಯೋಧರೊಬ್ಬರು ಘಟನಾ ಸ್ಥಳದಲ್ಲಿದ್ದ ಗ್ರಾಮಸ್ಥರ ಮೊಬೈಲ್ ಫೋನ್ ಮೂಲಕ ತಮ್ಮ ಹಿರಿಯ ಅದಿಕಾರಿಗಳಿಗೊಂದಿಗೆ ಸಂಭಾಷಣೆ ನಡೆಸಿರುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ.

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮಿರಾಜ್ 2000 ಪೈಟರ್ ಜೆಟ್ ಒಂದು ಫೆ.06ರ ಗುರುವಾರ ಪತನಗೊಂಡ ಸಂದರ್ಭದಲ್ಲಿ ಅದರಲ್ಲಿದ್ದ ಪೈಲಟ್ ಗಾಯಗೊಂಡು ನೆಲದ ಮೇಲೆ ಬಿದ್ದಿರುತ್ತಾರೆ. ಈ ಸಂದರ್ಭದಲ್ಲಿ ಗಾಯಗೊಂಡ ಆ ಪೈಲಟ್ ಅಲ್ಲಿದ್ದ ಗ್ರಾಮಸ್ಥರಿಂದ ಮೊಬೈಲ್ ಪಡೆದುಕೊಂಡು ಗ್ವಾಲಿಯರ್ ವಾಯು ನೆಲೆಯಲ್ಲಿದ್ದ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ್ದಾರೆ.

ಎರಡು ನಿಮಿಷಗಳ ಸುದೀರ್ಘ ಸಂಭಾಷಣೆಯ ಆಡಿಯೋ – ವಿಡಿಯೋ ಇದಿಗ ವೈರಲ್ ಆಗಿದೆ. ಇದನ್ನು ಅಲ್ಲಿದ್ದವರು ಯಾರೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಬರ್ಹೆತಾ ಸುನಾರಿ ಗ್ರಾಮದ ಸಮೀಪದಲ್ಲಿ ಈ ಅಪಘಾತ ಘಟನೆ ನಡೆದಿದೆ.



‘ಜೊಶಿ, ಜಾಧವ್ ಬೋಲ್ ರಹಾ ಹ್ಞೂಂ.. (ಜೋಶಿ, ನಾನು ಜಾದವ್ ಮಾತನಾಡುತ್ತಿದ್ದೇನೆ..) ನಾನು ಜೆಟ್ ನಿಂದ ಹೊರ ಬಿದ್ದಿದ್ದೆನೆ. ನಾನಿಲ್ಲಿ ನದಿಯ ದಕ್ಷಿಣ ಭಾಗದಲ್ಲೆಲ್ಲೋ ಇದ್ದೇನೆ. ನನ್ನ ವಿಮಾನ ಅಪಘಾತಗೊಂಡಿದೆ. ಮೇರಾ ಸಾಥ್ ಭೋಲಾ ಸರ್ ಥಾ (ನನ್ನ ಜೊತೆ ಭೋಲಾ ಸರ್ ಇದ್ದರು). ‘ನಾನು ನನ್ನ ಸಹಾಯಕರನ್ನು ಕಳುಹಿಸುತ್ತೇನೆ. ನನ್ನ ಲೊಕೆಶನ್ 2542 ಎಇ ಆಗಿದೆ. ವಿಮಾನ ಹೊತ್ತಿಹೋಗಿದೆ ಮತ್ತದು ಮೇಲಿನಿಂದ ಕಾಣಿಸುತ್ತಿದೆ. ಭೋಲಾ ಸರ್ ನನ್ನಿಂದ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿರಬಹುದು. ನಾನು ಹೆಚ್ಚಿನಂಶ ವಿಮಾನದ ಪಶ್ಚಿಮ ದಿಕ್ಕಿನಲ್ಲಿದ್ದೇನೆ. ಭೊಲಾ ಸರ್ ಬಹುಷಃ ವಿಮಾನದ ಪೂರ್ವ ದಿಕ್ಕಿನಲ್ಲಿರಬಹುದು’ ಎಂದು ಈ ಪೈಲಟ್ ಯೋಧ ತನ್ನ ಅಧಿಕಾರಿಗಳೊಂದಿಗೆ ತಮಗಾದ ಅಪಘಾತದ ಬೇಸಿಕ್ ಮಾಹಿತಿಗಳನ್ನು ಹಂಚಿಕೊಳ್ಳುವ ಸಂಭಾಷಣೆಯ ವಿಡಿಯೋ ಇದೀಗ ವೈರಲ್ ಆಗಿದೆ.

ಇದನ್ನೂ ಓದಿ: Sunita Williams: ಸ್ಪೇಸ್ ಸೆಲ್ಫಿ; ತನ್ನ9ನೇ ‘ಸ್ಪೇಸ್ ವಾಕ್’ನಲ್ಲಿ ‘ಅಲ್ಟಿಮೇಟ್ ಸೆಲ್ಫಿʼ ಕ್ಲಿಕ್ಕಿಸಿದ ಸುನೀತಾ ವಿಲಿಯಮ್ಸ್

ತಾನು ತನ್ನ ಅಧಿಕಾರಿಗಳೊಂದಿಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಈ ಗಾಯಗೊಂಡ ಪೈಲಟ್, ಅಲ್ಲಿ ತನ್ನ ಸುತ್ತ ಸೇರಿದ್ದ ಗ್ರಾಮಸ್ಥರಿಗೆ ಮಾತನಾಡದಂತೆ ಸೂಚಿಸಿದ್ದಾರೆ. ಆ ಮೂಲಕ ತಾನು ಹೇಳುವ ಮಾಹಿತಿ ತನ್ನ ಅಧಿಕಾರಿಗಳಿಗೆ ಸ್ಪಷ್ಟವಾಗಿ ಕೇಳಿಸಲಿ ಎಂಬ ಉದ್ದೇಶ ಅವರದ್ದಾಗಿರಬಹುದು. ಘಟನೆಯ ಮಾಹಿತಿಯನ್ನು ಸಂಕ್ಷಿಪ್ತವಾಗಿ ತನ್ನ ಅಧಿಕಾರಿಗಳಿಗೆ ತಿಳಿಸಿದ ಬಳಿಕ ಆ ಪೈಲಟ್ ಯೋಧ ಮೊಬೈಲನ್ನು ಅಲ್ಲೇ ಕುಳಿತಿದ್ದ ಗ್ರಾಮಸ್ಥರಿಗೆ ವಾಪಾಸು ಕೊಡುತ್ತಾರೆ.



ಗಾಯಗೊಂಡು ಬಿದ್ದಿದ್ದ ಪೈಲಟ್ ಯೋಧನಿಗೆ ಗ್ರಾಮಸ್ಥರು ವೈದ್ಯಕೀಯ ನೆರವು ನೀಡುತ್ತೇವೆಂದು ಹೇಳಿದಾಗ, ತನ್ನನ್ನು ಕರೆದುಕೊಂಡು ಹೋಗಲು ಸೇನಾ ವಾಹನ ಬರುತ್ತಿದೆ ಎಂದು ಹೇಳಿ, ತನ್ನ ಸಹ ಪೈಲಟ್ ಅನ್ನು ಹುಡುಕುವಂತೆ ಅವರು ಗ್ರಾಮಸ್ಥರಿಗೆ ಸೂಚಿಸುತ್ತಾರೆ.

ಭಾರತೀಯ ವಾಯು ಸೇನೆಗೆ () ಸೇರಿದೆ ಮಿರಾಜ್ 2000 ಏರ್ ಕ್ರಾಫ್ಟ್ ಇಲ್ಲಿನ ಗದ್ದೆಯಲ್ಲಿ ಪತನಗೊಂಡಿತು ಎಂದು ರಕ್ಷಣಾ ವಿಭಾಗದ ವಕ್ತಾರರು ಮಾಹಿತಿ ನೀಡಿದ್ದಾರೆ. ಎರಡು ಸೀಟುಗಳ ಈ ತರಬೇತು ವಿಮಾನವು ತನ್ನ ನಿಗದಿತ ಹಾರಾಟದಲ್ಲಿದ್ದ ಸಂದರ್ಭದಲ್ಲಿ, ಆಗಸದಲ್ಲೇ ಬೆಂಕಿ ಹತ್ತಿಕೊಂಡು ಮಧ್ಯಾಹ್ನ 2.40ರ ಸುಮಾರಿಗೆ ಪತನಗೊಂಡಿತು ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಫೈಟರ್ ಜೆಟ್ ಗ್ವಾಲಿಯರ್ ವಾಯು ಸೇನಾ ನೆಲೆಯಿಂದ ಟೇಕಾಫ್ ಆಗಿತ್ತು.

ಈ ಜೆಟ್ ನಲ್ಲಿದ್ದ ಇಬ್ಬರು ಪೈಲಟ್ ಗಳೂ ಸಹ ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಾಯಾಯದಿಂದ ಪಾರಾಗಿದ್ದು, ಇವರನ್ನು ಇದೀಗ ಗ್ವಾಲಿಯರ್ ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.