ವೃದ್ಧೆಗಾಗಿ ಮಿಡಿದ ಹೃದಯ; ಓಡೋಡಿ ಬಂದ ಮಹಿಳೆಗಾಗಿ ರೈಲು ನಿಲ್ಲಿಸಿದ ಲೋಕೋ ಪೈಲಟ್ ನಡೆಗೆ ನೆಟ್ಟಿಗರಿಂದ ಮೆಚ್ಚುಗೆ
Loco Pilot Stops Train: ವೃದ್ಧೆಯೊಬ್ಬರು ಹೊರಡಲು ಸಿದ್ಧವಾಗಿದ್ದ ರೈಲನ್ನು ಹತ್ತಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಲೋಕೋ ಪೈಲಟ್ ತಕ್ಷಣ ರೈಲನ್ನು ನಿಲ್ಲಿಸಿದ್ದಾರೆ. ಈ ಹೃದಯಸ್ಪರ್ಶಿ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಲೋಕೋ ಪೈಲಟ್‍ನ ಮಾನವೀಯತೆ ಮತ್ತು ಸಹಾನುಭೂತಿಯ ಕ್ಷಣವು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ವೃದ್ಧೆಗಾಗಿ ರೈಲು ನಿಲ್ಲಿಸಿದ ಲೋಕೋ ಪೈಲಟ್. -
ಮುಂಬೈ, ಜ. 18: ಲೋಕಲ್ ರೈಲಿನ ಲೋಕೋ ಪೈಲಟ್ (Loco Pilot) ವೃದ್ಧ ಮಹಿಳೆಯೊಬ್ಬರು ಸುರಕ್ಷಿತವಾಗಿ ಹತ್ತಲು ಅನುಕೂಲವಾಗುವಂತೆ ರೈಲನ್ನು ನಿಲ್ಲಿಸುತ್ತಿರುವ ಹೃದಯಸ್ಪರ್ಶಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆಗಿದೆ. ಈ ಘಟನೆಯು ಜನನಿಬಿಡ ಮುಂಬೈ ರೈಲು ನಿಲ್ದಾಣದಲ್ಲಿ (Mumbai Train Station) ನಡೆದಿದ್ದು, ವಾಣಿಜ್ಯ ನಗರದಲ್ಲಿ ಲೋಕೋ ಪೈಲಟ್‍ನ ಮಾನವೀಯತೆಯ ನಡೆ ಎಂದು ವ್ಯಾಪಕವಾಗಿ ಪ್ರಶಂಸೆಗೆ ಒಳಗಾಗಿದೆ.
ಹೌದು, ಸಾಮಾನ್ಯವಾಗಿ ಬಸ್ ಹೊರಡುತ್ತಿದ್ದರೆ, ಪ್ರಯಾಣಿಕರನ್ನು ಗಮನಿಸುವ ಚಾಲಕ ಕೂಡಲೇ ಬಸ್ ಅನ್ನು ನಿಲ್ಲಿಸುತ್ತಾರೆ. ಆದರೆ ರೈಲುಗಳು ಮಾತ್ರ ಒಮ್ಮೆ ಹೊರಟಿತೆಂದರೆ ಮತ್ತೆ ಮುಂದಿನ ನಿಲ್ದಾಣ ಬಂದಾಗಲೇ ನಿಲ್ಲಿಸುವುದು. ಇದೀಗ ಮುಂಬೈ ರೈಲು ನಿಲ್ದಾಣದಲ್ಲಿ ವೃದ್ಧೆಗಾಗಿ ರೈಲನ್ನು ನಿಲ್ಲಿಸಲಾಗಿದೆ.
ಹನುಮಾನ್ ಮಂದಿರದಲ್ಲಿ ಸುತ್ತು ಹಾಕಿದ ಶ್ವಾನಕ್ಕೆ ಭಕ್ತರಿಂದ ಪೂಜೆ
ವಿಡಿಯೊಗ್ರಾಫರ್ ಓಂ ತ್ರಿಪಾಠಿ ಎಂಬವವರು ಸೆರೆಹಿಡಿದ ಈ ವಿಡಿಯೊದಲ್ಲಿ, ವೃದ್ಧೆಯೊಬ್ಬರು ಹೊರಡಲು ಸಿದ್ಧವಾಗಿದ್ದ ರೈಲಿಗೆ ಹತ್ತಲು ಮುಂದಾಗಿರುವುದು ಕಂಡು ಬಂದಿದೆ. ಕೈಯಲ್ಲಿ ವಾಕಿಂಗ್ ಸ್ಟಿಕ್ ಹಿಡಿದುಕೊಂಡು ಅವರು ಪ್ಲಾಟ್‌ಫಾರ್ಮ್‌ನಿಂದ ನಿಧಾನವಾಗಿ ಚಲಿಸುತ್ತಿದ್ದ ರೈಲಿನತ್ತ ಸಾಗಿದ್ದಾರೆ. ಮಾನವೀಯತೆ ಮತ್ತು ಸಹಾನುಭೂತಿಯ ನಿದರ್ಶನವಾಗಿ ಲೋಕೋ ಪೈಲಟ್ ಕೂಡಲೇ ರೈಲಿನ ವೇಗವನ್ನು ಕಡಿಮೆ ಮಾಡಿ ನಿಲ್ಲಿಸಿದ್ದಾರೆ. ಇದರಿಂದ ವೃದ್ಧೆ ಯಾವುದೇ ಆತಂಕವಿಲ್ಲದೆ, ಸುರಕ್ಷಿತವಾಗಿ ರೈಲಿಗೆ ಹತ್ತುವಂತಾಯ್ತು.
ಇಲ್ಲಿದೆ ವಿಡಿಯೊ:
ಮಾನವೀಯತೆ ಇನ್ನೂ ಅಸ್ತಿತ್ವದಲ್ಲಿದೆ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡ ಈ ವಿಡಿಯೊ 1.4 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಇದು ಕೇವಲ ರೈಲು ನಿಂತಿದ್ದಲ್ಲ, ಬದಲಾಗಿ ಕರುಣೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಪುರಾವೆ ಎಂದು ಬರೆಯಲಾಗಿದೆ.
ಕಟ್ಟುನಿಟ್ಟಾದ ವೇಳಾಪಟ್ಟಿಗಿಂತ ಕರುಣೆಗೆ ಆದ್ಯತೆ ನೀಡಿದ್ದಕ್ಕಾಗಿ ಸಾಮಾಜಿಕ ಮಾಧ್ಯಮ ಬಳಕೆದಾರರು, ಲೋಕೋ ಪೈಲಟ್ ಅವರನ್ನು ನಿಜ ಜೀವನದ ನಾಯಕ ಎಂದು ಕರೆದಿದ್ದಾರೆ. ಇಂತಹ ಕರುಣೆಯ ಕಾರ್ಯಗಳು ಮುಂಬೈನಲ್ಲಿ ಇನ್ನೂ ಮಾನವೀಯತೆ ಜೀವಂತವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.
ಈ ರೈಲು ಹೊರಟಿದ್ದರೆ ಮುಂದಿನ ಎರಡು ಗಂಟೆಗಳ ಕಾಲ ಕಾಯಬೇಕಿತ್ತು. ಹೀಗಾಗಿ ಲೋಕೋ ಪೈಲಟ್ ಅವರ ಕಾರ್ಯವು ನಿಜಕ್ಕೂ ಮೆಚ್ಚುವಂಥದ್ದು ಎಂದು ಒಬ್ಬರು ಬರೆದಿದ್ದಾರೆ. ಮುಂಬೈ ಸ್ಥಳೀಯ ಲೋಕೋ ಪೈಲಟ್‌ಗಳು ಕರುಣೆಯುಳ್ಳವರು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಈ ರೈಲು ನಿಲ್ದಾಣದಲ್ಲಿ ಒಂದೇ ಒಂದು ಕಸದ ತುಂಡಿಲ್ಲ
ಭಾರತದ ರೈಲ್ವೆ ನಿಲ್ದಾಣ ಸಾಮಾನ್ಯವಾಗಿ ಗದ್ದಲ ಮತ್ತು ಕಸದಿಂದ ತುಂಬಿರುತ್ತದೆ. ಆದರೆ ಕೇರಳದ ಒಂದು ನಿಲ್ದಾಣವು ಅದರ ವಿಶಿಷ್ಟ ಸ್ವಚ್ಛತೆ ಮತ್ತು ಶಾಂತ ವಾತಾವರಣದಿಂದ ಎಲ್ಲರ ಗಮನ ಸೆಳೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೊ ರೈಲು ನಿಲ್ದಾಣದ ನಿರ್ವಹಣೆ, ಸ್ವಚ್ಛತೆ ಮತ್ತು ಸಾರ್ವಜನಿಕ ಜಾಗೃತಿಯಿಂದ ಗಮನ ಸೆಳೆದಿದೆ.
ಈ ದೃಶ್ಯ ಹಲವರನ್ನು ಅಚ್ಚರಿಗೊಳಿಸಿದೆ. ಯಾವುದೇ ವಿಶೇಷ ಕಾರ್ಯಕ್ರಮ ಅಥವಾ ಶುಚಿಗೊಳಿಸುವ ಅಭಿಯಾನ ನಡೆಯುತ್ತಿರಲಿಲ್ಲ. ಪ್ರತಿಯೊಬ್ಬರೂ ಜಾಗವನ್ನು ಜವಾಬ್ದಾರಿಯುತವಾಗಿ ಬಳಸುತ್ತಿದ್ದರಿಂದ ಇದು ಸಾಮಾನ್ಯ ದಿನದಂತೆ ಕಂಡು ಬರುತ್ತಿದೆ. ವಿಡಿಯೊವು ಸ್ಪಷ್ಟವಾದ ಸೈನ್‌ಬೋರ್ಡ್‌ಗಳು ಮತ್ತು ಹೊಳಪುಳ್ಳ ನೆಲವನ್ನು ಸಹ ಎತ್ತಿ ತೋರಿಸುತ್ತದೆ.