ಹಿಜಾಬ್ ಇಲ್ಲದೆ ಸಾರ್ವಜನಿಕವಾಗಿ ಜಿಮ್ನಾಸ್ಟಿಕ್ಸ್ ಪ್ರದರ್ಶಿಸಿದ ಇರಾನಿನ ಯುವತಿ; ಆಕೆಯ ಧೈರ್ಯಕ್ಕೆ ನೆಟ್ಟಿಗರಿಂದ ಶ್ಲಾಘನೆ, ಇಲ್ಲಿದೆ ವಿಡಿಯೊ
Iranian woman performs gymnastics: ಇರಾನ್‍ನಲ್ಲಿ ಹಿಜಾಬ್ ಇಲ್ಲದೆ ಸಾರ್ವಜನಿಕವಾಗಿ ಜಿಮ್ನಾಸ್ಟಿಕ್ಸ್ ಪ್ರದರ್ಶಿಸಿದ ಯುವತಿಯೊಬ್ಬಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಠಿಣ ಕಾನೂನುಗಳು ಮತ್ತು ನೈತಿಕ ಪೊಲೀಸ್‌ಗಿರಿಯ ನಿಗಾವಿರುವ ನಡುವೆಯೂ ಆಕೆಯ ಧೈರ್ಯದ ಹೆಜ್ಜೆಗೆ ನೆಟ್ಟಿಗರು ಭಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ಟೆಹ್ರಾನ್: ಇರಾನಿನ (Iran) ಯುವತಿಯೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಜಿಮ್ನಾಸ್ಟಿಕ್ಸ್ (Gymnastics) ಪ್ರದರ್ಶಿಸುತ್ತಿರುವ ವಿಡಿಯೊ ವೈರಲ್ ಆಗಿದ್ದು (viral video), ಈ ಘಟನೆ ಇರಾನ್‌ನ ಕಟ್ಟುನಿಟ್ಟಾದ ನೈತಿಕ ಕಾನೂನುಗಳಿಗೆ ದಿಟ್ಟ ಸವಾಲಾಗಿ ಕಂಡುಬರುತ್ತದೆ. ಮಹಿಳೆಯರ ದೇಹ ಮತ್ತು ಚಲನೆಗಳನ್ನು ಹೆಚ್ಚು ನಿಯಂತ್ರಿಸುವ ದೇಶದಲ್ಲಿ, ಈ ಪ್ರದರ್ಶನವು ಧಿಕ್ಕಾರ, ಆಕರ್ಷಕ, ನಿರ್ಭೀತದ ಸ್ಪಷ್ಟ ಸೂಚನೆಯಾಗಿ ಎದ್ದು ಕಾಣುತ್ತದೆ.
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಈ ವಿಡಿಯೊ, ಯುವತಿಯು ಸಾರ್ವಜನಿಕವಾಗಿ ಆತ್ಮವಿಶ್ವಾಸದಿಂದ ಜಿಮ್ನಾಸ್ಟಿಕ್ ಪ್ರದರ್ಶಿಸುತ್ತಿರುವುದನ್ನು ತೋರಿಸುತ್ತದೆ. ಇದು ಎಲ್ಲಿ ಮಾತ್ತು ಯಾವಾಗ ನಡೆಯುತು ಎಂಬ ಬಗ್ಗೆ ಸ್ಪಷ್ಟವಾಗಿಲ್ಲದಿದ್ದರೂ, ವಿಡಿಯೊ ಮಾತ್ರ ನೆಟ್ಟಿಗರ ಗಮನಸೆಳೆದಿದೆ.
ಜಿಮ್ನಾಸ್ಟಿಕ್ ಪ್ರದರ್ಶನದ ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಶ್ಲಾಘಿಸಲಾಗಿದೆ. ನೆಟ್ಟಿಗರು ಇದನ್ನು ಪ್ರತಿರೋಧ ಮತ್ತು ಸ್ವಾತಂತ್ರ್ಯದ ಪ್ರಬಲ ಸಂಕೇತ ಎಂದು ಕರೆದಿದ್ದಾರೆ. ಈ ರೀತಿಯ ಪ್ರದರ್ಶನಗಳು ಸ್ವಾತಂತ್ರ್ಯದ ಚೈತನ್ಯವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ತೋರಿಸುತ್ತದೆ. ಬದಲಾವಣೆಯು ಧೈರ್ಯದಿಂದ ಪ್ರಾರಂಭವಾಗುತ್ತದೆ ಎಂದು ಎಕ್ಸ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ಬಹುತೇಕ ಬಳಕೆದಾರರು, ಆ ಯುವತಿಯನ್ನು ಧೈರ್ಯಶಾಲಿ ಮತ್ತು ಎಲ್ಲರಿಗೂ ಸ್ಫೂರ್ತಿದಾಯಕವಾಗಿದ್ದಾರೆ ಎಂದು ಕರೆದಿದ್ದಾರೆ.
ಮಹಿಳೆಯರಿಗೆ ಇರಾನ್‌ನ ಕಠಿಣ ಕಾನೂನುಗಳು
ಇರಾನ್‌ನಲ್ಲಿ ಮಹಿಳೆಯರ ಉಡುಗೆ-ತೊಡುಗೆ, ನಡವಳಿಕೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅವರು ಓಡಾಡುವುದನ್ನು ನಿಯಂತ್ರಿಸುವ ಕಠಿಣ ಇಸ್ಲಾಮಿಕ್ ಕಾನೂನುಗಳಿವೆ. ಕಡ್ಡಾಯ ಹಿಜಾಬ್ ನಿಯಮಗಳ ಪ್ರಕಾರ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಾ ಸಮಯದಲ್ಲೂ ತಮ್ಮ ಮುಖವನ್ನು ಮುಚ್ಚಿಕೊಳ್ಳಬೇಕು ಮತ್ತು ಸಾಧಾರಣವಾಗಿ ಉಡುಗೆ ತೊಡಬೇಕು. ನೃತ್ಯ, ಹಾಡುಗಾರಿಕೆ ಅಥವಾ ಸಾರ್ವಜನಿಕವಾಗಿ ದೈಹಿಕ ಪ್ರದರ್ಶನಗಳನ್ನು ಒಳಗೊಂಡಂತೆ ಇಸ್ಲಾಮಿಕ್ ಅಲ್ಲದ ಚಟುವಟಿಕೆಗಳು- ದಂಡ, ಬಂಧನ, ವಿಚಾರಣೆ ಅಥವಾ ಜೈಲು ಶಿಕ್ಷೆಯಂತಹ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು.
ವಿಡಿಯೊ ವೀಕ್ಷಿಸಿ:
I love this! A Brave Iranian girl stands up to the Islamic regime and performs gymnastics in public.
— dahlia kurtz ✡︎ דליה קורץ (@DahliaKurtz) December 30, 2025
This is punishable by imprisonment.
It's courage like hers that will help FREE IRAN.
Soon. pic.twitter.com/FPBJLpntkf
ನೈತಿಕ ಪೊಲೀಸ್ ಹಾಗೂ ಭದ್ರತಾ ಪಡೆಗಳು ಸಾರ್ವಜನಿಕ ಸ್ಥಳಗಳನ್ನು ನಿಯಮಿತವಾಗಿ ನಿಗಾ ವಹಿಸುತ್ತವೆ. ಈ ಸಾಮಾಜಿಕ ನಿಯಮಗಳನ್ನು ಉಲ್ಲಂಘಿಸುವ ಮಹಿಳೆಯರು ಕಿರುಕುಳ ಮತ್ತು ಕಾನೂನು ಕ್ರಮಗಳ ಅಪಾಯವನ್ನು ಎದುರಿಸಬೇಕಾಗುತ್ತದೆ. ಇಂತಹ ಕೃತ್ಯಗಳನ್ನು ತೋರಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಸಹ ಈ ಹಿಂದೆ ಬಂಧನಗಳಿಗೆ ಕಾರಣವಾಗಿವೆ. ಸಾರ್ವಜನಿಕವಾಗಿ ಇಂತಹ ವರ್ತನೆ ತೋರಿಸುವುದು ಅತ್ಯಂತ ಅಪಾಯಕಾರಿ ಎನ್ನಲಾಗಿದೆ.
ಅಂದಹಾಗೆ, ಇರಾನ್‌ನಲ್ಲಿ ಹೆಚ್ಚುತ್ತಿರುವ ಹಣದುಬ್ಬರ, ನಿರುದ್ಯೋಗ ಮತ್ತು ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಗಳ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿರುವ ಮಧ್ಯೆಯೇ ಈ ಘಟನೆ ನಡೆದಿದೆ. ವೈಯಕ್ತಿಕ ಸ್ವಾತಂತ್ರ್ಯಗಳ ಮೇಲೆ, ವಿಶೇಷವಾಗಿ ಮಹಿಳೆಯರಿಗೆ ದೀರ್ಘಕಾಲದ ನಿರ್ಬಂಧಗಳು ಸಾರ್ವಜನಿಕ ಕೋಪಕ್ಕೆ ಕಾರಣವಾಗಿವೆ.
ವೈರಲ್ ಆದ ವಿಡಿಯೊಗೆ ಅಧಿಕಾರಿಗಳು ಅಧಿಕೃತವಾಗಿ ಪ್ರತಿಕ್ರಿಯಿಸದಿದ್ದರೂ, ಯುವತಿಯು ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಹಲವರು ಭೀತಿಪಟ್ಟಿದ್ದಾರೆ.