IT ಉದ್ಯೋಗಿಗಳನ್ನೇ ಮೀರಿಸುವಂತೆ ಈತನ ಗಳಿಕೆ; ಬೆಂಗಳೂರಿನ ಉಬರ್ ಚಾಲಕನ ಆದಾಯ ಕೇಳಿದ್ರೆ ಶಾಕ್ ಆಗ್ತೀರಾ!
Viral News: ಕೇವಲ ಟ್ಯಾಕ್ಸಿ ಚಾಲನೆ ಮಾಡುವ ಮೂಲಕ ವಾರಕ್ಕೆ ಬರೋಬ್ಬರಿ 46,000 ರೂಪಾಯಿ ಗಳಿಸುತ್ತಾರೆ ಅಂದ್ರೆ ನೀವು ನಂಬುತ್ತೀರಾ? ಉಬರ್ ಚಾಲಕ ಹ್ಯಾಮ್ಟರ್ ಡೆಬ್ಬರ್ಮ ಎಂಬುವವರು ತಮ್ಮ ದಿನನಿತ್ಯದ ಕೆಲಸದ ಶೈಲಿ ಮತ್ತು ಗಳಿಕೆಯ ವಿವರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಹೆಚ್ಚು ಹಣ ಸಂಪಾದನೆ ಮಾಡಲು ನಾವು ತೋರುವ ಆಸಕ್ತಿ ಕೂಡ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಉಬರ್ ಚಾಲಕನ ಗಳಿಕೆ ಕಂಡು ಐಟಿ ಉದ್ಯೋಗಿಗಳು ಶಾಕ್ -
ಬೆಂಗಳೂರು,ಸೆ.3: ಪ್ರತಿಯೊಬ್ಬರು ಉದ್ಯೋಗ ಅಂದಾಗ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಕನಸು ಕಾಣುತ್ತಾರೆ. ಆದರೆ ಹೆಚ್ಚು ಹಣ ಸಂಪಾದನೆ ಮಾಡಲು ಕೇವಲ ಶಿಕ್ಷಣ, ಅಥವಾ ಪ್ರತಿಷ್ಠಿತ ಕಂಪನಿ ಮಾತ್ರ ಮುಖ್ಯವಲ್ಲ ಅನ್ನೋದನ್ನು ಇಲ್ಲೊಬ್ಬ ಉಬರ್ ಚಾಲಕರು ತೋರಿಸಿ ಕೊಟ್ಟಿದ್ದಾರೆ. ಕೇವಲ ಟ್ಯಾಕ್ಸಿ ಚಾಲನೆ ಮಾಡುವ ಮೂಲಕ ವಾರಕ್ಕೆ ಬರೋಬ್ಬರಿ 46,000 ರೂಪಾಯಿ ಗಳಿಸುತ್ತಾರೆ ಅಂದ್ರೆ ನೀವು ನಂಬುತ್ತೀರಾ? ಉಬರ್ ಚಾಲಕ ಹ್ಯಾಮ್ಟರ್ ಡೆಬ್ಬರ್ಮ ಎಂಬುವವರು ತಮ್ಮ ದಿನನಿತ್ಯದ ಕೆಲಸದ ಶೈಲಿ ಮತ್ತು ಗಳಿಕೆಯ ವಿವರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ (Viral News) ಮಾಡಿದ್ದು ಹೆಚ್ಚು ಹಣ ಸಂಪಾದನೆ ಮಾಡಲು ನಾವು ತೋರುವ ಆಸಕ್ತಿ ಕೂಡ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ "ಉಬರ್ ಚಾಲಕನಾಗಿ ಒಂದು ಸಾಮಾನ್ಯ ದಿನ" ಎಂಬ ಶೀರ್ಷಿಕೆ ಬರೆದು ವಿಡಿಯೊ ಹಂಚಿಕೊಂಡಿದ್ದಾರೆ. ಬೆಳಿಗ್ಗೆ ಎದ್ದು ಬ್ರೆಷ್ ಮಾಡುವುದು, ಸ್ನಾನ, ತಿಂಡಿ ಇಸ್ತ್ರಿ ಮಾಡಿದ ಬಟ್ಟೆ ಧರಿಸುವುದು ಸೇರಿದಂತೆ ತಮ್ಮ ಬೆಳಗ್ಗಿನ ದಿನಚರಿಯನ್ನು ತೋರಿಸಿದ್ದಾರೆ. ನಂತರ ಉಬರ್ ಚಾಲಕ ಸಮವಸ್ತ್ರಕ್ಕೆ ಸಂಬಂಧಿಸಿದ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿ ಬೆಂಗಳೂರಿನ ರಸ್ತೆಗಳಲ್ಲಿ ತನ್ನ ದಿನವನ್ನು ಪ್ರಾರಂಭಿಸುತ್ತಾರೆ.
ವಿಡಿಯೋ ನೋಡಿ:
ದಿನದಲ್ಲಿ ಪ್ರಯಾಣಿಕರೊಂದಿಗೆ ಸವಾರಿಗಳನ್ನು ಪೂರೈಸುವ ದೃಶ್ಯ ಹಾಗೂ ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ನಲ್ಲಿ ಮಧ್ಯಾಹ್ನದ ಭೋಜನ ಸವಿಯುವ ಕ್ಷಣಗಳನ್ನೂ ವಿಡಿಯೋದಲ್ಲಿ ಸೆರೆಹಿಡಿದಿದ್ದಾರೆ. ಯೆನೆಪೋಯ ವಿಶ್ವವಿದ್ಯಾಲಯದಲ್ಲಿ ಕೇವಲ ಬಿ.ಕಾಂ ಪದವಿ ಪಡೆದಿರುವ ಅವರು ತಮ್ಮ ವಾರದ ಗಳಿಕೆಯನ್ನು ಮೊಬೈಲ್ ನಲ್ಲಿ ತೋರಿಸಿದ್ದಾರೆ. ಇದು ವಿಶೇಷವಾಗಿ ವೀಕ್ಷಕರನ್ನು ಆಶ್ಚರ್ಯ ಉಂಟುಮಾಡಿದೆ. ಅವರ ಫೋನ್ ನಲ್ಲಿ ಒಂದು ವಾರಕ್ಕೆ 46,022.30 ರೂ. ಗಳಿಕೆಯನ್ನು ತೋರಿಸಿದೆ.
Viral Video: ಮೈ ಜುಮ್ಮೆನಿಸುವ ದೃಶ್ಯ; ಸ್ಮಶಾನದಲ್ಲಿ ಸುಡುತ್ತಿದ್ದ ಹೆಣದ ಮಾಂಸ ತಿಂದ ಮಹಿಳೆ!
ವಿಡಿಯೋದ ಕೊನೆಯಲ್ಲಿ, "ಯಾವಾಗಲೂ ವಿನಮ್ರವಾಗಿರಿ, ಯಾವುದೇ ಜಾಬ್ ಶಾಶ್ವತವಲ್ಲ" ಎಂದು ಅವರು ಸಂದೇಶ ನೀಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ''ಸಹೋದರನ ಜೀವನ ನನ್ನದಕ್ಕಿಂತ ಅದ್ಭುತವಾಗಿದೆ" ಎಂದು ಒಬ್ಬ ಬಳಕೆದಾರರು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು ಬರೆದಿದ್ದಾರೆ, ಕಾರ್ಪೊರೇಟ್ ಕೆಲಸಕ್ಕಿಂತ ನೂರು ಪಟ್ಟು ಉತ್ತಮ ಬೆಳೆಯುತ್ತಲೇ ಇರಿ ಎಂದಿದ್ದಾರೆ.