Viral News: ಎಂಟು ವರ್ಷಗಳಿಂದ ದೇಹದೊಳಗೆ ಅಡಗಿತ್ತು ಈ ಹರಿತವಾದ ಚಾಕು! ಎಕ್ಸ್ ರೇ ನೋಡಿ ಬೆಚ್ಚಿ ಬಿದ್ದ ಡಾಕ್ಟರ್
Knife inside a man's chest: ಎಂಟು ವರ್ಷಗಳಿಂದ ಗಮನಿಸದೆ ಉಳಿದಿದ್ದ ವ್ಯಕ್ತಿಯೊಬ್ಬರ ಎದೆಯೊಳಗೆ ಚಾಕುವನ್ನು ವೈದ್ಯರು ಕಂಡುಹಿಡಿದಿದ್ದಾರೆ. 44 ವರ್ಷದ ರೋಗಿಯು ತನ್ನ ಮೊಲೆತೊಟ್ಟುಗಳಲ್ಲಿ ನೋವು ಮತ್ತು ಕೀವು ಸ್ರವಿಸುತ್ತಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಪರಿಶೀಲಿಸಿದ ವೈದ್ಯರಿಗೆ ಮೇಲ್ನೋಟಕ್ಕೆ ಏನೂ ಕಂಡುಬಾರದ ಕಾರಣ ಎಕ್ಸ್-ರೇ ತೆಗೆದಿದ್ದಾರೆ. ಈ ವೇಳೆ ಲೋಹದ ವಸ್ತು ಇರುವುದು ಪತ್ತೆಯಾಗಿದೆ.


ಟಾಂಜಾನಿಯಾ: ವ್ಯಕ್ತಿಯೊಬ್ಬರ ಎದೆಯಲ್ಲಿ ಚಾಕು (Knife) ಇರುವುದನ್ನು ವೈದ್ಯರು ಪತ್ತೆಹಚ್ಚಿದ್ದಾರೆ. ಟಾಂಜಾನಿಯಾದ ಮುಹಿಂಬಿಲಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಎಂಟು ವರ್ಷಗಳಿಂದ ಗಮನಿಸದೇ ಉಳಿದಿದ್ದ ವ್ಯಕ್ತಿಯ ಎದೆಯೊಳಗೆ ದೊಡ್ಡ ಚಾಕುವಿನ ಬ್ಲೇಡ್ ಅನ್ನು ರಾಷ್ಟ್ರೀಯ ಆಸ್ಪತ್ರೆಯ ವೈದ್ಯರು ಕಂಡುಹಿಡಿದಿದ್ದಾರೆ. 44 ವರ್ಷದ ರೋಗಿಯು ತನ್ನ ಮೊಲೆತೊಟ್ಟುಗಳಲ್ಲಿ ನೋವು ಮತ್ತು ಕೀವು ಸ್ರವಿಸುತ್ತಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ರೋಗಿಯನ್ನು ಪರೀಕ್ಷಿಸಿದ ವೈದ್ಯರು ಎಕ್ಸ್-ರೇ (X-ray) ತೆಗೆದಿದ್ದು, ಅವರ ಎದೆಯಲ್ಲಿ (chest) ಲೋಹದ ವಸ್ತು ಇರುವುದನ್ನು ಪತ್ತೆಹಚ್ಚಿದ್ದಾರೆ.
ರೋಗಿಯು ಆಸ್ಪತ್ರೆಗೆ ಭೇಟಿ ನೀಡುವ ಮೊದಲು ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಗಳಿರಲಿಲ್ಲ. ಆದರೆ. ಕಳೆದ ಹತ್ತು ದಿನಗಳಿಂದ ಅವರ ಬಲ ಮೊಲೆತೊಟ್ಟುಗಳಿಂದ ಬಿಳಿ ಕೀವು ಹೊರಬರುತ್ತಿತ್ತು. ಇದರ ಹೊರತಾಗಿ ಅವರಿಗೆ ಎದೆ ನೋವು, ಉಸಿರಾಟದ ತೊಂದರೆ, ಕೆಮ್ಮು ಅಥವಾ ಜ್ವರ ಇರಲಿಲ್ಲ. ಇನ್ನು ಚಾಕು ಹೇಗೆ ಹೊಕ್ಕಿರಬಹುದು ಎಂಬ ಬಗ್ಗೆ ಆತನಲ್ಲಿ ಪ್ರಶ್ನಿಸಿದಾಗ, ಆ ವ್ಯಕ್ತಿ ಎಂಟು ವರ್ಷಗಳ ಹಿಂದೆ ನಡೆದ ಹಿಂಸಾತ್ಮಕ ಘಟನೆಯನ್ನು ನೆನಪಿಸಿಕೊಂಡಿದ್ದಾನೆ. ಆ ಸಮಯದಲ್ಲಿ ಅವನ ಮುಖ, ಬೆನ್ನು, ಎದೆ ಮತ್ತು ಹೊಟ್ಟೆಗೆ ತೀವ್ರವಾದ ಗಾಯಗಳಾಗಿದ್ದವು. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಆ ವ್ಯಕ್ತಿಯ ಗಾಯಗಳಿಗೆ ಹೊಲಿಗೆ ಹಾಕಲಾಗಿತ್ತು. ಆದರೆ, ಮತ್ತೇನೂ ಸಮಸ್ಯೆ ಬಂದಿರಲಿಲ್ಲ.
ಈ ಸುದ್ದಿಯನ್ನೂ ಓದಿ: Viral Video: ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ; ಮೊಮ್ಮಗನಿಗಾಗಿ ಕೈಯಲ್ಲೇ ಡ್ರಿಪ್ಸ್ ಬಾಟಲ್ ಹಿಡಿದು ನಿಂತ ಅಜ್ಜಿ
ಆಶ್ಚರ್ಯಕರ ಸಂಗತಿಯೆಂದರೆ, ಚಾಕುವಿನ ಬ್ಲೇಡ್ ಎಂಟು ವರ್ಷಗಳ ಕಾಲ ಯಾವುದೇ ಸಮಸ್ಯೆಗಳನ್ನು ಉಂಟುಮಾಡಲಿಲ್ಲ. ಸೋಂಕಿನ ಕಾರಣವನ್ನು ಗುರುತಿಸಲು ವೈದ್ಯರು ಎಕ್ಸ್-ರೇ ಮಾಡಲು ನಿರ್ಧರಿಸಿದರು. ಈ ವೇಳೆ ವ್ಯಕ್ತಿಯ ಎದೆಯ ಮಧ್ಯ ಭಾಗದಲ್ಲಿ ಲೋಹದ ವಸ್ತು ಕಂಡಿದೆ. ಚಾಕು ಗಾಯದ ಪರಿಣಾಮವಾಗಿ ಮೊಲೆ ತೊಟ್ಟಿನಲ್ಲಿ ಬಿಳಿ ಕೀವು ಅಥವಾ ಹೆಮಟೋಮಾ ಅಥವಾ ಪೋಸ್ಟ್-ಟ್ರಾಮಾಟಿಕ್ ಫೈಬ್ರೋಸಿಸ್ ಕಾಣಿಸಿಕೊಂಡಿದೆ.
ಈ ಕೀವು, ಚಾಕು ಇದ್ದ ಸುತ್ತಲೂ ಸತ್ತ ಅಂಗಾಂಶಗಳು ಸಂಗ್ರಹವಾಗುವುದರಿಂದ ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಶಸ್ತ್ರಚಿಕಿತ್ಸೆ ವೇಳೆ ಚಾಕುವನ್ನು, ಸತ್ತ ಅಂಗಾಂಶ ಮತ್ತು ಕೀವು ಜೊತೆಗೆ ವೈದ್ಯರು ಎಚ್ಚರಿಕೆಯಿಂದ ಹೊರತೆಗೆದಿದ್ದಾರೆ. 24 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿದ್ದ ಅವರನ್ನು ನಂತರ ವಾರ್ಡ್‌ಗೆ ವರ್ಗಾಯಿಸಲಾಯಿತು. 10 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಇದೀಗ ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.