Viral Video: ನೋಡ... ನೋಡ ಎಷ್ಟು ಚಂದ ಅಲಾ! ಶ್ರೀಕೃಷ್ಣನ ಅವತಾರದಲ್ಲಿ ವಿದೇಶಿ ಯುವಕ
Korean man dresses up as Krishna: ಭಾರತದಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಹಲವಾರು ಮಂದಿ ಕೃಷ್ಣ, ರಾಧೆ ವೇಷಭೂಷಣ ತೊಟ್ಟು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದರು. ಇದೀಗ ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬ ಶ್ರೀಕೃಷ್ಣನ ವೇಷ ಧರಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.


ನವದೆಹಲಿ: ಕಳೆದ ವಾರ ಭಾರತದಾದ್ಯಂತ ಜನರು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿ ಸಂಭ್ರಮಿಸಿದ್ದಾರೆ. ಮಕ್ಕಳು, ಹಿರಿಯರು ಕೃಷ್ಣನ ವೇಷಭೂಷಣವನ್ನು ಧರಿಸಿ ಹಬ್ಬ ಆಚರಿಸಿದ್ದಾರೆ. ಇದೀಗ ದಕ್ಷಿಣ ಕೊರಿಯಾದ (South Korea) ವ್ಯಕ್ತಿಯೊಬ್ಬ ಶ್ರೀಕೃಷ್ಣನ ವೇಷ ಧರಿಸಿದ್ದಾನೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೊ ಭಾರಿ ವೈರಲ್ (Viral Video) ಆಗಿದ್ದು, ನೆಟ್ಟಿಗರ ಮನಗೆದ್ದಿದೆ. ಫ್ಯಾಷನ್ ಡಿಸೈನರ್ ಆಂಚಲ್ ಅವೇರ್ ಹಂಚಿಕೊಂಡ ಈ ವಿಡಿಯೊ ತ್ವರಿತವಾಗಿ ವೈರಲ್ ಆಗಿದ್ದು, ಬೇ-ಯುನ್ಸೂ ಎಂಬಾತ ಕೃಷ್ಣನ ವೇಷ ಧರಿಸಿ ಮಿಂಚಿದ್ದಾನೆ.
ಕೃಷ್ಣನಂತೆ ಧೋತಿಯನ್ನು ಧರಿಸಿ, ತಲೆಗೆ ಪೇಟ-ನವಿಲುಗರಿ, ಆಭರಣಗಳನ್ನು ತೊಟ್ಟಿದ್ದಾನೆ. ಅಷ್ಟೇ ಅಲ್ಲ ಕೈಯಲ್ಲಿ ಕೊಳಲನ್ನು ಹಿಡಿದುಕೊಂಡಿದ್ದಾನೆ. ಕೊರಿಯಾ ಮೂಲದ ವ್ಯಕ್ತಿಯಾಗಿರುವ ಯುನ್ಸೂ ಕೃಷ್ಣನ ವೇಷಭೂಷಣದಲ್ಲಿ ಸುಂದರವಾಗಿ ಕಾಣುತ್ತಿದ್ದಾನೆ.
ವಿಡಿಯೊ ವೀಕ್ಷಿಸಿ:
ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡ ಫ್ಯಾಷನ್ ಡಿಸೈನರ್, ಯುನ್ಸೂ ನಿಜವಾಗಿಯೂ ಕೃಷ್ಣನಂತೆ ಕಾಣುತ್ತಿದ್ದಾನೆ. ಕೃಷ್ಣನಂತೆ ವೇಷ ಧರಿಸಿದ್ದ ಅವನನ್ನು ನೋಡಿ ಸಂತೋಷವಾಯಿತು. ನಾನು ಊಹಿಸಿದ್ದಕ್ಕಿಂತ ಹೆಚ್ಚು ಸುಂದರವಾಗಿ ಕಾಣುತ್ತಿದ್ದ ಎಂದು ತಿಳಿಸಿದ್ದಾರೆ. ಈ ವಿಡಿಯೊ ನೋಡಿದ ನೆಟ್ಟಿಗರು ಕೂಡ ಕೃಷ್ಣನಿಗೆ ಮನಸೋತಿದ್ದಾರೆ.
ಈ ವಿಡಿಯೊ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳಿಂದ ತುಂಬಿ ತುಳುಕಿದೆ. ಕೊರಿಯನ್ ವ್ಯಕ್ತಿ ನೀಡಿರುವ ಗೌರವವನ್ನು ನೆಟ್ಟಿಗರು ಶ್ಲಾಘಿಸಿದರು. ಕೃಷ್ಣನ ಪ್ರತಿರೂಪದಂತೆ ಕಂಡುಬಂದ ಅವನ ಬಗ್ಗೆ ಅನೇಕರು ಅಚ್ಚರಿಗೊಂಡರು. ಇದುವರೆಗಿನ ಅತ್ಯಂತ ಮುದ್ದಾದ ಕೃಷ್ಣ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಅವನ ಆ ನಗು ಹೃದಯ ಗೆಲ್ಲುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Video Viral: ಗಾಲ್ಫ್ ಕೋರ್ಸ್‌ನಲ್ಲಿ ನೆಲಕ್ಕಪ್ಪಳಿಸಿದ ಲಘು ವಿಮಾನ; ಭಯಾನಕ ವಿಡಿಯೊ ವೈರಲ್