Viral Video: ಯುವಕನೊಬ್ಬನನ್ನು ಕಟ್ಟಿ ಹಾಕಿ ಮುಖಾಮೂತಿ ನೋಡ್ದೇ ಚಚ್ಚಿದ್ರು- ಅಪ್ಪ ಎಂದು ಕರೆಯುವಂತೆ ಧಮ್ಕಿ- ಈ ವಿಡಿಯೊ ನೋಡಿ
Brutally assaulting a youth: ದುಷ್ಕರ್ಮಿಗಳು ಯುವಕನೊಬ್ಬನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ಆರೋಪಿಗಳು ಯುವಕನನ್ನು ಥಳಿಸಿ, ಕೂದಲು ಹಿಡಿದು ಎಳೆದಾಡಿದ್ದಾರೆ. ಅಷ್ಟೇ ಅಲ್ಲ, ಅಪ್ಪ ಎಂದು ಕರೆಯುವಂತೆ ಆತನಿಕೆ ಧಮ್ಕಿ ಹಾಕಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿಗಳ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.


ಗ್ವಾಲಿಯರ್: ದುಷ್ಕರ್ಮಿಗಳು ಯುವಕನೊಬ್ಬನ ಮೇಲೆ ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ಆಘಾತಕಾರಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಆರೋಪಿಗಳು ಯುವಕನನ್ನು ಥಳಿಸಿ, ಕೂದಲು ಹಿಡಿದು ಎಳೆದಾಡಿದ್ದು, ಬಲವಂತವಾಗಿ ತಮ್ಮ ಪಾದಗಳನ್ನು ಮುಟ್ಟುವಂತೆ ಮಾಡಿದ್ದಾರೆ. ಈ ಘಟನೆ ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‌ನ ಅಮಾಖೋ ಪ್ರದೇಶದಲ್ಲಿ ನಡೆದಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ, ದುಷ್ಕರ್ಮಿಗಳು ಯುವಕನನ್ನು ನಿರ್ದಯವಾಗಿ ಹೊಡೆದು, ಕಟ್ಟಿಹಾಕಿ ರಸ್ತೆಯಲ್ಲಿ ಎಳೆದೊಯ್ದಿದ್ದಾರೆ. ಸಂತ್ರಸ್ತ ಥಳಿಸದಂತೆ ಬೇಡಿಕೊಂಡಿದ್ದಾನೆ. ಆದರೂ ಕರುಣೆ ತೋರದ ಆರೋಪಿಗಳು ಕೂದಲು ಹಿಡಿದು ಎಳೆದು, ತಮ್ಮ ಪಾದಗಳನ್ನು ಮುಟ್ಟಿ ಅಪ್ಪ ಎಂದು ಕರೆಯುವಂತೆ ಧಮ್ಕಿ ಹಾಕಿದ್ದಾರೆ. ದುಷ್ಕರ್ಮಿಗಳು ಯುವಕನಿಗೆ ಬೆದರಿಕೆ ಹಾಗೂ ಅವಮಾನ ಮಾಡುವುದನ್ನು ವಿಡಿಯೊದಲ್ಲಿ ನೋಡಬಹುದು. ಅಲ್ಲದೆ ಇಡೀ ಕೃತ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಡಿಯೊ ವೀಕ್ಷಿಸಿ:
6 miscreants brutally thrash youth, forced him to touch their feet and call them ‘Papa,’ in Gwalior#MPNews #Gwalior #MadhyaPradesh #FPJ pic.twitter.com/xTBviaHwrU
— Free Press Madhya Pradesh (@FreePressMP) August 19, 2025
ವಿಡಿಯೊ ವೈರಲ್ ಆದ ಬೆನ್ನಲ್ಲೇ ಪೊಲೀಸರು ಸ್ವತಃ ಸಂತ್ರಸ್ತನನ್ನು ಸಂಪರ್ಕಿಸಿ ಪ್ರಕರಣ ದಾಖಲಿಸಿದ್ದಾರೆ. ಯುವಕನನ್ನು ಗುಡಾ ನಿವಾಸಿ ಅನ್ಶುಲ್ ಗುರ್ಜರ್ ಎಂದು ಗುರುತಿಸಲಾಗಿದೆ. ಬೆಳಗಿನ ಜಾವ 2 ಗಂಟೆ ಸುಮಾರಿಗೆ ವೀರ್ ಸಿಂಗ್ ತೋಮರ್, ವಿಕ್ರಮ್ ಸಿಂಗ್ ತೋಮರ್, ದೇವರಾಜ್ ಪರ್ಮಾರ್, ಮಾಂಟಿ ಚೌಹಾಣ್, ಅಂಕಿತ್ ತೋಮರ್ ಮತ್ತು ಇನ್ನೊಬ್ಬ ವ್ಯಕ್ತಿ ಈತನನ್ನು ಆಮ್ಖೋ ರಸ್ತೆಗೆ ಕರೆದೊಯ್ದರು. ಅಲ್ಲಿ ಅವರು ಅನ್ಶುಲ್‍ಗೆ ಸುಮಾರು ಒಂದು ಗಂಟೆಗಳ ಕಾಲ ಹೊಡೆದಿದ್ದಲ್ಲದೆ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಇದರ ಬಗ್ಗೆ ಪೊಲೀಸ್ ದೂರು ನೀಡಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಯುವಕ ಅನ್ಶುಲ್ ದೂರು ದಾಖಲಿಸಿರಲಿಲ್ಲ.
ಇನ್ನು ವಿಡಿಯೊ ವೈರಲ್ ಆಗುತ್ತಿದ್ದಂತೆ, ಸಿಎಸ್ಪಿ ಇಂದರ್ಗಂಜ್ ರಾಬಿನ್ ಜೈನ್ ತನಿಖೆಗೆ ಆದೇಶಿಸಿದರು. ಪೊಲೀಸರು ಸಂತ್ರಸ್ತನನ್ನು ಗುರುತಿಸಿ ಆತನನ್ನು ಠಾಣೆಗೆ ಕರೆಸಿ, ದೂರನ್ನು ಸ್ವೀಕರಿಸಿದರು. ಎಲ್ಲಾ ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯುಳ್ಳವರು ಎನ್ನಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದು, ಶೀಘ್ರದಲ್ಲೇ ಅಪರಾಧಿಗಳನ್ನು ಪತ್ತೆಹಚ್ಚಲಾಗುವುದು ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಶೂ ಧರಿಸಿ ಹವನದಲ್ಲಿ ಪಾಲ್ಗೊಂಡ ಲಾಲು ಪ್ರಸಾದ್ ಯಾದವ್; ನೆಟ್ಟಿಗರಿಂದ ತರಾಟೆ