ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ನೀರಿನಲ್ಲಿ ಮುಳುಗುತ್ತಿದ್ದ ಯುವಕನ ಜೀವ ಉಳಿಸಿದ ಮಹಿಳೆ! ಈಕೆಯ ಸಾಹಸಕ್ಕೆ ಶಹಬ್ಬಾಸ್‌ ಎಂದ ನೆಟ್ಟಿಗರು

ಮಲೇಷಿಯಾದ ಫರಾಹ್ ಪುತ್ರಿ ಮೂಲ್ಯನಿ ಎಂದು ಗುರುತಿಸಲ್ಪಟ್ಟ ಯೂಟ್ಯೂಬರ್‌ ರಜೆ ಕಳೆಯಲು ಶ್ರಿಲಂಕಾದ ರಮಣೀಯವಾದ ದಿಯಾ ಲುಮಾ ಜಲಪಾತಕ್ಕೆ ಭೇಟಿ ನೀಡಿದ್ದರು‌. ಈ ಸಂದರ್ಭದಲ್ಲಿ ಯುವಕನೊಬ್ಬಈಜಲು ‌ಹೋಗಿ ನೀರಿನ ಆಳದಲ್ಲಿ ಸಿಲುಕಿ ಸಹಾಯಕ್ಕಾಗಿ ಕೂಗುತ್ತಿರುವಾಗ ಯುವಕನ ರಕ್ಷಣೆಗೆ ಈಕೆ ಮುಂದಾಗಿದ್ದಾಳೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌ ಆಗುತ್ತಿದೆ.

ಈ ಯೂಟ್ಯೂಬರ್‌ ಸಾಹಸಕ್ಕೆ ಸಮನಾರು? ನೆಟ್ಟಿಗರು ಪುಲ್‌ ಫಿದಾ!

Profile Pushpa Kumari Feb 16, 2025 6:30 PM

ಶ್ರೀಲಂಕಾ: ಜಲಪಾತವೊಂದಕ್ಕೆ ತನ್ನ ಸ್ನೇಹಿತರ ಜೊತೆ ಈಜಲು ಹೋಗಿದ್ದ ಯುವಕ ನೀರು ಪಾಲು ಆಗುತ್ತಿದ್ದಂತೆ ‌ಮಲೇಷಿಯಾದ ಯೂಟ್ಯೂಬರ್‌ವೊಬ್ಬರು ರಕ್ಷಿಸಿ ಯುವಕನ‌ ಪ್ರಾಣ ಉಳಿಸಿದ್ದಾರೆ‌. ಶ್ರೀಲಂಕಾದ ದಿಯಾಲುಮಾ ಜಲಪಾತವೊಂದರಲ್ಲಿ ಈ ಘಟನೆ ನಡೆದಿದ್ದು ಈಜಾಡಲು ಹೋಗಿದ್ದ ಯುವಕ ನೀರಿನ ರಭಸಕ್ಕೆ ಸಿಲುಕಿ ಸಹಾಯಕ್ಕಾಗಿ ಕೂಗುತ್ತಿದ್ದನು. ಇದನ್ನು ಗಮನಿಸಿದ ಮಹಿಳಾ ವ್ಲಾಗರ್ ತಕ್ಷಣ ಆತನನ್ನು ರಕ್ಷಣೆ ಮಾಡಿದ್ದಾರೆ. ಮಹಿಳೆಯ ಸಮಯಪ್ರಜ್ಞೆ ಹಾಗೂ ಸಾಹಸದಿಂದಾಗಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ಜೀವ ಉಳಿದಿದ್ದು ಸದ್ಯ ಮಹಿಳೆಯ ಧೈರ್ಯ ಸಾಹಸಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗುತ್ತಿದೆ

ಮಲೇಷಿಯಾದ ಫರಾಹ್ ಪುತ್ರಿ ಮೂಲ್ಯನಿ ಎಂದು ಗುರುತಿಸಲ್ಪಟ್ಟ ಮಹಿಳಾ ವ್ಲಾಗರ್ ರಜೆಯ ದಿನವನ್ನು ಕಳೆಯಲು ಶ್ರಿಲಂಕಾದ ರಮಣೀಯವಾದ ದಿಯಾ ಲುಮಾ ಜಲಪಾತಕ್ಕೆ ಬೇಟಿ ನೀಡಿದ್ದರು‌. ಈ ಸಂದರ್ಭದಲ್ಲಿ ಯುವಕ ನೊಬ್ಬ ಈಜಲು ‌ಹೋಗಿ ನೀರಿನ ಆಳದಲ್ಲಿ ಸಿಲುಕಿ ಸಹಾಯಕ್ಕಾಗಿ ಕೂಗುತ್ತಿರುವಾಗ ಯುವಕನ ರಕ್ಷಣೆಗೆ ಈಕೆ ಮುಂದಾಗಿದ್ದಾಳೆ. ವಿಡಿಯೊದಲ್ಲಿ ಯುವಕನು ಜಲಪಾತದ ಆಳವಾದ ಪ್ರದೇಶದಲ್ಲಿ ಸಿಲುಕಿ‌ ಸಹಾಯಕ್ಕಾಗಿ ಕೂಗುತ್ತಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ಮಹಿಳೆಯು ಯಾವುದೇ ಹಿಂಜರಿಕೆ ಯಿಲ್ಲದೆ ಯುವಕನ ಪ್ರಾಣ ರಕ್ಷಣೆ ಮಾಡಿದ್ದು ಮುಳುಗುತ್ತಿರುವ ಯುವಕನನ್ನು ಯಶಸ್ವಿಯಾಗಿ ದಡಕ್ಕೆ ಕರೆತರುತ್ತಾಳೆ. ಆ ಬಳಿಕ ಆತನ ಸ್ನೇಹಿತರು ಬದಿಗೆ ಧಾವಿಸಿ ಆತನನ್ನು ಕರೆದೊಯ್ಯುಯುವ ದೃಶ್ಯ ನೀವು ನೋಡಬಹುದು‌

ಈ ಘಟನೆಯ ನಂತರ, ಮಹಿಳಾ ವ್ಲಾಗರ್ ಈ ಬಗ್ಗೆ ವಿಡಿಯೊ ಹಂಚಿಕೊಂಡಿದ್ದು ಈ ಜಲಪಾತದ ಆಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ನೀವು ಈಜುಗಾರರಲ್ಲದಿದ್ದರೆ, ಇದು ನಿಮ್ಮನ್ನು ಇನ್ನಷ್ಟು ಅಪಾಯಕ್ಕೆ ತಳ್ಳುತ್ತದೆ. ಹಾಗಾಗಿ ನೀರಿಗೆ ಇಳಿಯುವ ಮುನ್ನವೇ ಜಾಗೃತೆ ವಹಿಸಿ ಎಂದು ಮಹಿಳಾ ವ್ಲಾಗರ್ ಬರೆದುಕೊಂಡಿದ್ದಾರೆ.

ಇದನ್ನು ಓದಿ: Viral Video: ಮುದ್ದಾಗಿ ಆಟ ಆಡ್ತಾ ಏಕಾಏಕಿ ಅಟ್ಯಾಕ್‌ ಮಾಡಿದ ಹಸ್ಕಿ; ಇಲ್ಲಿದೆ ಶಾಕಿಂಗ್‌ ವಿಡಿಯೊ!

ಸದ್ಯ ಈ ವಿಡಿಯೊ ಬಹಳಷ್ಟು ವೈರಲ್ ಆಗಿದ್ದು 2.2 ಮಿಲಿಯನ್ ಅಧಿಕ ವೀಕ್ಷಣೆ ಗಳಿಸಿದ್ದು ನೆಟ್ಟಿಗರು ಮಹಿಳೆಯ ಧೈರ್ಯವನ್ನು ಶ್ಲಾಘಿ ಸಿದ್ದಾರೆ‌. ಈ ಬಗ್ಗೆ ನೆಟ್ಟಿಗ ರೊಬ್ಬರು ಈ ಮಹಿಳೆ ನಿಜ ಜೀವನದ ನಾಯಕಿ! ಅಪರಿಚಿತರ ಜೀವ ಉಳಿಸಲು ಅವಳು ತನ್ನ ಜೀವವನ್ನೇ ಪಣಕ್ಕಿಡಲು ಸಿದ್ದಳಾಗಿದ್ದಾಳೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ‌. ಇನ್ನೊಬ್ಬರು ನೀರಿಗೆ ಇಳಿಯುವ ಮುನ್ನ ನಿಮ್ಮ ಜೀವದ ಬಗ್ಗೆ ಯೋಚಿಸಿಕೊಳ್ಳಿ ಎಂದು ಕಮೆಂಟ್ ಮಾಡಿದ್ದಾರೆ‌. ಜಲಪಾತಗಳು ಸುಂದರವಾಗಿ ಕಾಣಿಸಬಹುದು. ಆದರೆ ನೀವು ಏನು ಮಾಡುತ್ತಿದ್ದೀರಿ ಎಂದು ತಿಳಿಯದಿದ್ದರೆ ಅವುಗಳು ಮಾರಕವಾಗಬಹುದು ಎಂದು ಬಳಕೆದಾರರೊಬ್ಬರು ಎಚ್ಚರಿಸಿದ್ದಾರೆ. ಮತ್ತೊಬ್ಬರು, ಜಲಪಾತಗಳ ಸುತ್ತಲೂ ಆಳದ ಬಗ್ಗೆ ಎಚ್ಚರಿಕೆ ನೀಡುವ ಹೆಚ್ಚಿನ ಫಲಕಗಳನ್ನು ಹಾಕಬೇಕು ಎಂದು ಬರೆದುಕೊಂಡಿದ್ದಾರೆ.