Viral Video: ನಡುರಸ್ತೆಯಲ್ಲೇ ಮಗುವಿನ ಕಿಡ್ನ್ಯಾಪ್‌ಗೆ ಯತ್ನ! ಶಾಕಿಂಗ್ ದೃಶ್ಯ ಸಿಸಿಟಿವಿಯಲ್ಲಿ ಸೆರೆ
Man attempts to kidnap child: ಮಹಿಳೆಯೊಬ್ಬರ್ ಸ್ಟ್ರೋಲರ್‌ನಲ್ಲಿ ಮಗುವನ್ನು ಹಿಡಿದುಕೊಂಡು ಹೋಗುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಹಾಡಹಗಲೇ ಮಗು ಅಪಹರಿಸಲು ಮುಂದಾದ ಆಘಾತಕಾರಿ ಘಟನೆ ನಡೆದಿದೆ. ಆ ಮಗು ತನ್ನದು, ತನಗೆ ಕೊಡಬೇಕು ಎಂದು ಹೇಳುತ್ತಾ ಮಗುವನ್ನು ಎತ್ತಿಕೊಳ್ಳಲು ಮುಂದಾಗಿದ್ದಾನೆ. ಈ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಅಪರಿಚಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.


ವಾಷಿಂಗ್ಟನ್: ಮಹಿಳೆಯೊಬ್ಬರ ಸ್ಟ್ರೋಲರ್‌ನಲ್ಲಿ ಮಗುವನ್ನು ಹಿಡಿದುಕೊಂಡು ಹೋಗುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಮಗು ಅಪಹರಿಸಲು ಮುಂದಾದ ಆಘಾತಕಾರಿ ಘಟನೆ ಅಮೆರಿಕದ (America) ಉತಾಹ್ ರಾಜ್ಯದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಮಗುವನ್ನು ಅಪಹರಣಕ್ಕೆ ಯತ್ನಿಸಿದ ಕಿಡಿಗೇಡಿಯನ್ನು ಪೊಲೀಸರು (Police) ಬಂಧಿಸಿದ್ದಾರೆ. ಆ ಮಗು ತನ್ನದು ಎಂದು ಆ ವ್ಯಕ್ತಿ ಹೇಳಿಕೊಂಡು ತನಗೆ ಕೊಡುವಂತೆ ಕೇಳಲು ಪ್ರಾರಂಭಿಸಿದ್ದಾನೆ. ಈ ವೇಳೆ ಮಗುವಿನ ತಾಯಿ ಭಯಭೀತರಾಗಿ ಸಹಾಯಕ್ಕಾಗಿ ಕೂಗಲು ಪ್ರಾರಂಭಿಸಿದ್ದಾಳೆ. ಆಗ ಅಲ್ಲಿದ್ದವರು ಮುಂದೆ ಬಂದಾಗ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video) ಆಗಿದೆ.
ಆರೋಪಿಯನ್ನು 56 ವರ್ಷದ ಬೆಂಜಮಿನ್ ಡಿಲ್ಮನ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಜುಲೈ 29 ರಂದು ಮಗುವನ್ನು ಅಪಹರಿಸಲು ಪ್ರಯತ್ನಿಸಿದ ಮತ್ತು ಮಗುವಿನ ತಾಯಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಕೇಸ್ ದಾಖಲಾಗಿದೆ. ಸ್ಟ್ರಾಲರ್ ಅನ್ನು ತಳ್ಳಿಕೊಂಡು ಹೋಗುತ್ತಿದ್ದ ಮಹಿಳೆಯ ಕಡೆಗೆ ಡಿಲ್ಮನ್ ನಡೆದುಕೊಂಡು ಹೋಗಿದ್ದಾನೆ. ನಂತರ ಇದು ನನ್ನ ಮಗು, ನನಗೆ ಕೊಡು ಎಂದು ಕೇಳಿದ್ದಾನೆ. ಇದರಿಂದ ಹೆದರಿದ ಮಹಿಳೆ ಅವನಿಂದ ದೂರ ಹೋಗಲು ಮುಂದಾಗಿದ್ದಾಳೆ. ಆದರೆ, ಆರೋಪಿ ಮಹಿಳೆಯನ್ನು ಹಿಂಬಾಲಿಸಿದ್ದಾನೆ.
ವಿಡಿಯೊ ವೀಕ್ಷಿಸಿ:
Benjamin Dillman, 56, was arrested after allegedly trying to kidnap a baby from a stroller in Utah. He allegedly said, "This is my baby, give her to me." pic.twitter.com/dHSsil9cPA
— Fox News (@FoxNews) August 19, 2025
ಮಹಿಳೆ ಭಯದಿಂದ ದೂರ ಸರಿದರೂ ಬಿಡದ ಆರೋಪಿ, ಸ್ಟ್ರೋಲರ್‌ನ ಸೀಟ್ ಬೆಲ್ಟ್ ಪಟ್ಟಿಗಳನ್ನು ತೆಗೆಯಲು ಪ್ರಯತ್ನಿಸಿದ್ದಾನೆ. ಅಷ್ಟೇ ಅಲ್ಲ, ಮಹಿಳೆಯನ್ನು ತಳ್ಳಿ ಮಗುವನ್ನು ಹಿಡಿದುಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಮಹಿಳೆ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ. ಈ ವೇಳೆ ಅಲ್ಲೇ ಇದ್ದ ಕೆಲವರು ಏನು ನಡೆಯುತ್ತಿದೆ ಎಂದು ತಿಳಿಯಲು ಮುಂದಾಗಿದ್ದಾರೆ. ಕೂಡಲೇ ಆರೋಪಿಯು ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಫಾಕ್ಸ್ ನ್ಯೂಸ್ ಈ ವಿಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಉತಾಹ್‌ನಲ್ಲಿ ಸ್ಟ್ರೋಲರ್‌ನಿಂದ ಮಗುವನ್ನು ಅಪಹರಿಸಲು ಯತ್ನಿಸಿದ ಆರೋಪದ ಮೇಲೆ 56 ವರ್ಷದ ಬೆಂಜಮಿನ್ ಡಿಲ್ಮನ್ ಎಂಬಾತನನ್ನು ಬಂಧಿಸಲಾಗಿದೆ. ಇದು ನನ್ನ ಮಗು, ಅವಳನ್ನು ನನಗೆ ಕೊಡು ಎಂದು ಆತ ಕೇಳಿದ್ದ ಎನ್ನಲಾಗಿದೆ ಎಂದು ವಿಡಿಯೊಗೆ ಶೀರ್ಷಿಕೆ ನೀಡಲಾಗಿದೆ. ಇನ್ನು ಸ್ಥಳದಿಂದ ಹೊರನಡೆದಿದ್ದ ಆರೋಪಿಯನ್ನು ಉತಾಹ್ ಪೊಲೀಸರು ಶೀಘ್ರದಲ್ಲೇ ಬಂಧಿಸಿದರು. ಆತ ನಿರಾಶ್ರಿತ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Viral Video: ಶೂ ಧರಿಸಿ ಹವನದಲ್ಲಿ ಪಾಲ್ಗೊಂಡ ಲಾಲು ಪ್ರಸಾದ್ ಯಾದವ್; ನೆಟ್ಟಿಗರಿಂದ ತರಾಟೆ