Viral Video: ಬೀದಿನಾಯಿಗಳ ಡೆಡ್ಲಿ ಅಟ್ಯಾಕ್‌ಗೆ ಪ್ರಾಣಪಕ್ಷಿಯೇ ಹಾರಿಹೋಯ್ತು! ಶಾಕಿಂಗ್ ವಿಡಿಯೊ ಫುಲ್ ವೈರಲ್
Stray Dog Attack: ಸೂರತ್‌ನಲ್ಲಿ ನಡೆದ ಆತಂಕಕಾರಿ ಘಟನೆಯಲ್ಲಿ, ವ್ಯಕ್ತಿಯೊಬ್ಬರು ಬೀದಿನಾಯಿಗಳ ದಾಳಿಯಿಂದ ತಪ್ಪಿಸಿಕೊಂಡು ಓಡುತ್ತಿದ್ದ ವೇಳೆ ಎಡವಿಬಿದ್ದು ಮೃತಪಟ್ಟಿದ್ದಾರೆ. ಈ ಘಟನೆ ನಗರದಲ್ಲಿ ಬೀದಿನಾಯಿಗಳ ನಿಯಂತ್ರಣ ಮತ್ತು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸಿದೆ.
ವ್ಯಕ್ತಿಯನ್ನು ಬೀದಿ ನಾಯಿಗಳು ಅಟ್ಟಾಡಿಸಿಕೊಂಡು ಹೋಗುತ್ತಿರುವ ದೃಶ್ಯ -
ಸೂರತ್: ಬೀದಿ ನಾಯಿಗಳ ಗುಂಪೊಂದು (Stray Dog Attack) ಬೆನ್ನಟ್ಟಿದ ಪರಿಣಾಮ 38 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟ ದಾರುಣ ಘಟನೆ ಗುಜರಾತ್‌ನ ಸೂರತ್‌ನಲ್ಲಿ (Surat) ನಡೆದಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್ (Viral Video) ಆಗಿದೆ. ನಾಯಿಗಳು ಬೆನ್ನಟ್ಟಿದಾಗ ಓಟಕ್ಕಿತ್ತ ಅವರು ಎಡವಿಬಿದ್ದು ತೀವ್ರ ಗಾಯಗೊಂಡಿದ್ದರ ಪರಿಣಾಮ ಮೃತಪಟ್ಟಿದ್ದಾರೆ.
ಇಬ್ರಾಹಿಂ ಅಲಿಯಾಸ್ ಎಜಾಜ್ ಅಹ್ಮದ್ ಅನ್ಸಾರಿ ಮೃತ ದುರ್ದೈವಿ. ಅಕ್ಟೋಬರ್ 24ರಂದು ಸೂರತ್‌ನ ಸಯ್ಯದ್‌ಪುರ ಪ್ರದೇಶದ ಭಂಡಾರಿವಾಡ್‌ನಲ್ಲಿ ಈ ಘಟನೆ ನಡೆದಿತ್ತು. ಇಬ್ರಾಹಿಂ ಬೆಳಗ್ಗಿನ ಪ್ರಾರ್ಥನೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ, ಆರರಿಂದ ಏಳು ಬೀದಿ ನಾಯಿಗಳ ಗುಂಪು ಅವರನ್ನು ಆಕ್ರಮಣಕಾರಿಯಾಗಿ ಬೆನ್ನಟ್ಟಲು ಪ್ರಾರಂಭಿಸಿತು.
ಬೀದಿನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ, ಅವರು ಒಂದೇಸಮನೆ ಓಟಕ್ಕಿತ್ತರು. ಪರಿಣಾಮ, ಎಡವಿ ರಸ್ತೆಗೆ ಬಿದ್ದಿದ್ದಾರೆ. ಬಿದ್ದ ತೀವ್ರತೆಗೆ ಅವರ ಬೆನ್ನುಮೂಳೆಯ ಪ್ರಮುಖ ನರವು ಹಾನಿಗೊಳಗಾಗಿ ಮೆದುಳಿನಲ್ಲಿ ರಕ್ತಸ್ರಾವ ಮತ್ತು ಪಾರ್ಶ್ವವಾಯು ಉಂಟಾಯಿತು. ಆಸ್ಪತ್ರೆಯಲ್ಲಿ ದಿನಗಳ ಕಾಲ ಚಿಕಿತ್ಸೆ ನೀಡಲಾಗಿದ್ದರೂ, ಘಟನೆಯ ಕೆಲವು ದಿನಗಳ ನಂತರ ಅವರು ಮೃತಪಟ್ಟರು.
ಇದನ್ನೂ ಓದಿ: Viral Video: ಪಕ್ಕದಲ್ಲಿ ಕುಳಿತ ಯುವತಿಯ ಬ್ಲೌಸ್ ಒಳಗೆ ಕೈ ಹಾಕಿದ ಕಾಮುಕ! ಕಿಡಿಗೇಡಿ ಕೃತ್ಯದ ವಿಡಿಯೊ ನೋಡಿ
SMC ಪೋರ್ಟಲ್‌ನಲ್ಲಿ ಅಥವಾ ಸಿವಿಲ್ ಆಸ್ಪತ್ರೆ ಮತ್ತು SMIMER ಆಸ್ಪತ್ರೆಯಲ್ಲಿನ ದೂರುಗಳ ಸಂಖ್ಯೆಯನ್ನು ನೋಡಿದರೆ, ಈ ಬೀದಿನಾಯಿಗಳು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರು ಮತ್ತು ಹಿರಿಯ ನಾಗರಿಕರವರೆಗೆ ಎಲ್ಲರ ಮೇಲೆ ದಾಳಿ ಮಾಡುತ್ತಿವೆ, ಕೆಲವರು ಜೀವ ಕಳೆದುಕೊಂಡಿದ್ದಾರೆ. ಇದಕ್ಕೆ ಕಡಿವಾಣ ಹಾಕುವವರು ಯಾರು ಎಂದು ಮೃತರ ಕುಟುಂಬ ಸದಸ್ಯರು ಪ್ರಶ್ನಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
Surat man dies from fall injury while running away from stray dog packhttps://t.co/csLgVGwHmv pic.twitter.com/z9dbwg0a07
— DeshGujarat (@DeshGujarat) November 6, 2025
ಇಬ್ರಾಹಿಂ ಅನ್ಸಾರಿ ಅವರ ದುರಂತ ಸಾವು, ನಗರದಾದ್ಯಂತ ವಸತಿ ಪ್ರದೇಶಗಳಲ್ಲಿ ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿ ಬೀದಿ ನಾಯಿ ನಿರ್ವಹಣೆ ಮತ್ತು ಸೂಕ್ತ ಕ್ರಮಗಳನ್ನು ಜಾರಿಗೊಳಿಸುವ ತುರ್ತು ಅಗತ್ಯವನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.
ಬೀದಿನಾಯಿ ದಾಳಿಯಿಂದ ಗಾಯಗೊಂಡಿದ್ದ ಇಬ್ಬರು
ಇತ್ತೀಚೆಗೆ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಬೀದಿ ನಾಯಿ ದಾಳಿಯಿಂದ ಇಬ್ಬರು ಗಾಯಗೊಂಡಿದ್ದ ಘಟನೆ ನಡೆದಿತ್ತು. ಹಾವೇರಿಯ ಸೌಜನ್ಯ ಜಿಜೆ ಮತ್ತು ತೆಲಂಗಾಣದ ರೇಗಾ ನಿಕ್ಷಿತಾ ಇಬ್ಬರೂ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯದ ಇಂಟಿಗ್ರೇಟೆಡ್ ಎಂಎಸ್ಸಿ ಇನ್ ಎಕನಾಮಿಕ್ಸ್ ಕೋರ್ಸ್‌ನ ಮೂರನೇ ವರ್ಷದ ವಿದ್ಯಾರ್ಥಿಗಳು. ಇಬ್ಬರನ್ನೂ ನಾಯಿಗಳು ದಾಳಿ ಮಾಡಿ ಕಚ್ಚಿ ಗಾಯಗೊಳಿಸಿತ್ತು. ದಾರಿಹೋಕರು ಇದನ್ನು ಕಂಡು ಬಿಡಿಸಿದ್ದು, ಆಸ್ಪತ್ರೆಗೆ ಸೇರಿಸಿದ್ದರು.
ಈ ಸುದ್ದಿಯನ್ನೂ ಓದಿ: Viral Video: ಮಗುವಿನ ತಂದೆಗೆ ಕಪಾಳಮೋಕ್ಷ ಮಾಡಿ ಚಿಕಿತ್ಸೆ ನೀಡಲು ನಿರಾಕರಿಸಿದ ವೈದ್ಯೆ; ವಿಡಿಯೊ ವೈರಲ್
ಸುಪ್ರೀಂ ಕೋರ್ಟ್ ನಿರ್ದೇಶನ
ಸುಪ್ರೀಂ ಕೋರ್ಟ್ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದ ನಾಗರಿಕ ಅಧಿಕಾರಿಗಳಿಗೆ ಬೀದಿ ನಾಯಿಗಳನ್ನು ಹಿಡಿಯಲು, ಸಂತಾನಹರಣ ಮಾಡಲು ಮತ್ತು ಶಾಶ್ವತವಾಗಿ ಆಶ್ರಯ ನೀಡುವಂತೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿತ್ತು. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು ಬೀದಿ ನಾಯಿಗಳನ್ನು ಜನನಿಬಿಡ ಪ್ರದೇಶಗಳಿಂದ ಆದ್ಯತೆಯ ಮೇಲೆ ತೆರವುಗೊಳಿಸಬೇಕು ಅದಕ್ಕೆ ಶಾಶ್ವತ ಆಶ್ರಯ ನೀಡಬೇಕು ಎಂದು ಹೇಳಿತ್ತು.