ಮಾನವೀಯತೆ ಸಾಕ್ಷಿಯಾದ ಮುಂಬೈ ಲೋಕಲ್ ರೈಲು: ಬಾಯಾರಿದ ಬೀದಿ ನಾಯಿಗೆ ನೀರು ಕುಡಿಸಿದ ಪ್ರಯಾಣಿಕ
Viral Video: ಮುಂಬೈಯ ಲೋಕಲ್ ಟ್ರೈನ್‌ನಲ್ಲಿ ಪ್ರಯಾಣಿಕರೊಬ್ಬರ ಮಾನವೀಯ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬಾಯಾರಿಕೆಯಿಂದ ಬಳಲುತ್ತಿದ್ದ ಬೀದಿ ನಾಯಿಗೆ ಅವರು ತಾಳ್ಮೆಯಿಂದ ನೀರು ಕುಡಿಸಿದ್ದು, ಸದ್ಯ ಈ ಘಟನೆ ವಿಡಿಯೊ ವೈರಲ್ ಆಗಿದೆ.
ಮುಂಬೈ ಲೋಕಲ್ ರೈಲಿನಲ್ಲಿ ನಾಯಿಗೆ ನೀರು ಕುಡಿಸಿದ ಪ್ರಯಾಣಿಕ -
ಮುಂಬೈ, ಎ. 1: ರೈಲು ಪ್ರಯಾಣ ಅಂದಾಗ ಅಲ್ಲಿ ಕಿಕ್ಕಿರಿದ ಜನ ಸಾಗರ ಇರುತ್ತೆ. ಅದರಲ್ಲೂ ಲೋಕಲ್ ಟ್ರೈನ್ ಎಂದಾಗ ಒಮ್ಮೆಲೆ ನೂರಾರು ಪ್ರಯಾಣಿಕರು ಪ್ರಯಾಣ ಬೆಳೆಸುತ್ತಾರೆ. ಈ ನಡುವೆ ಮುಂಬೈಯ ಲೋಕಲ್ ಟ್ರೈನ್‌ನಲ್ಲಿ ಪ್ರಯಾಣಿಕರೊಬ್ಬರು ತೋರಿದ ಮಾನವೀಯತೆಯ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬಾಯಾರಿಕೆಯಿಂದ ಬಳಲುತ್ತಿದ್ದ ಬೀದಿ ನಾಯಿಗೆ ಅವರು ತಾಳ್ಮೆಯಿಂದ ನೀರು ಕುಡಿಸಿದ್ದು, ವಿಡಿಯೊ ವೈರಲ್ (Viral News) ಆಗಿದೆ.
ಮುಂಬೈ ಲೋಕಲ್ ರೈಲಿನಲ್ಲಿ ಸೆರೆಹಿಡಿಯಲಾದ ಹೃದಯಸ್ಪರ್ಶಿ ಕ್ಷಣವು ನೆಟ್ಟಿಗರ ಗಮನ ಸೆಳೆದಿದೆ. ಅತ್ಯಂತ ಜನದಟ್ಟಣೆ ಇದ್ದರು ಸಹ ಪ್ರಯಾಣಿಕ ಮಾನವೀಯತೆ ಪ್ರದರ್ಶಿಸಿದ್ದಾನೆ. ಟುಮಾರೋ 11.11 ಇನ್ ಸ್ಟಾಗ್ರಾಮ್ ಪೇಜ್ ಹಂಚಿಕೊಂಡಿರುವ ವಿಡಿಯೊದಲ್ಲಿ ಪ್ರಯಾಣಿಕರೊಬ್ಬರು ಜನದಟ್ಟಣೆಯ ರೈಲು ಕಂಪಾರ್ಟ್‌ಮೆಂಟ್‌ನಲ್ಲಿ ಬೀದಿ ನಾಯಿ ಶಾಂತವಾಗಿ ಕುಳಿತಿರುವುದನ್ನು ನೋಡಿದ್ದಾರೆ. ನಾಯಿಗೆ ಬಾಯಾರಿಕೆಯಾಗುತ್ತಿರುವುದನ್ನು ಗಮನಿಸಿ ಸಹಾಯ ಮಾಡಲು ನಿರ್ಧರಿಸಿದ್ದಾರೆ.
ವಿಡಿಯೊ ನೋಡಿ:
ಬಳಿಕ ತನ್ನ ಬಳಿ ಇದ್ದ ನೀರಿನ ಬಾಟಲಿಯಿಂದಲೇ ಅತ್ಯಂತ ತಾಳ್ಮೆಯಿಂದ ಅದಕ್ಕೆ ನೀರನ್ನು ಕುಡಿಸಿದ್ದಾರೆ. ಆ ನಾಯಿ ಹರಿಯುತ್ತಿದ್ದ ನೀರಿನ ಹನಿಯನ್ನು ಗುಟುಕರಿಸುತ್ತಿರುವ ದೃಶ್ಯ ನೋಡುಗರನ್ನು ಭಾವುಕರನ್ನಾಗಿಸಿತು. ಸದ್ಯ ವಿಡಿಯೊ ಆನ್‌ಲೈನ್‌ನಲ್ಲಿ ಗಮನ ಸೆಳೆಯುತ್ತಿದ್ದು, ಪ್ರಯಾಣಿಕನ ಸಹಾನುಭೂತಿಯನ್ನು ಅನೇಕರು ಹೊಗಳಿದ್ದಾರೆ.
ಪಾಕಿಸ್ತಾನಿ ಮದುವೆಯಲ್ಲಿ ಧುರಂಧರ್ ಸಿನಿಮಾದ ಹವಾ; ಟೈಟಲ್ ಸಾಂಗ್‌ಗೆ ಸೆಪ್ಟ್ ಹಾಕಿದ ಯುವಕರು
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ಸಾವಿರಾರು ಲೈಕ್ ಮತ್ತು ಮೆಚ್ಚುಗೆಯ ಕಮೆಂಟ್ ಗಲಿಸಿದೆ. ಒಬ್ಬರು ಈ ಸಹಾಯ ಮಾಡಿದ್ದಕ್ಕೆ ಯುವಕನನ್ನು ಹೃದಯವಂತ ವ್ಯಕ್ತಿ ಎಂದು ಕರೆದಿದ್ದಾರೆ. ಮತ್ತೊಬ್ಬರು ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.