ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರೀಲ್ಸ್‌ ಹುಚ್ಚಾಟ! ಚಲಿಸುವ ರೈಲಿನಲ್ಲಿ ಈತನ ದುಸ್ಸಾಹಸವನ್ನೊಮ್ಮೆ ನೋಡಿ- ಎದೆ ಝಲ್ಲೆನಿಸುವ ವಿಡಿಯೊ

Man Performs Daring Stunt: ಚಲಿಸುವ ರೈಲಿನಿಂದ ಇಳಿದು, ಕಿರಿದಾದ ಅಂಚಿನಲ್ಲಿ ಯುವಕನೊಬ್ಬ ಓಡುತ್ತಿರುವ ಆಘಾತಕಾರಿ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಅಪಾಯಕಾರಿ ಕೃತ್ಯವು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿಯನ್ನು ಪಡೆಯಲು ಕೆಲವರು ಎಂತೆಂಥಾ ದುಸ್ಸಾಹಸಕ್ಕೆ ಮುಂದಾಗುತ್ತಾರೆ ಎಂದು ನೆಟ್ಟಿಗರು ಕೆಂಡಕಾರಿದ್ದಾರೆ.

ರೀಲ್‌ಗಾಗಿ ಹುಚ್ಚಾಟ! ಚಲಿಸುವ ರೈಲಿನಲ್ಲಿ ವ್ಯಕ್ತಿಯೊಬ್ಬನ ದುಸ್ಸಾಹಸ

Priyanka P Priyanka P Aug 4, 2025 3:35 PM

ನವದೆಹಲಿ: ರೈಲಿನಿಂದ ಇಳಿದು, ಕಿರಿದಾದ ಅಂಚಿನಲ್ಲಿ ಯುವಕನೊಬ್ಬ ಓಡುತ್ತಿರುವ ಆಘಾತಕಾರಿ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ, ಆ ವ್ಯಕ್ತಿ ಬಿಳಿ ಬಣ್ಣದ ಚೆಕ್ಡ್ ಶರ್ಟ್, ನೀಲಿ ಜೀನ್ಸ್ ಮತ್ತು ಚಪ್ಪಲಿಗಳನ್ನು ಧರಿಸಿರುವುದು ಕಂಡುಬರುತ್ತದೆ. ಅವನು ನಗುತ್ತಾ ನಿರ್ಭಯವಾಗಿ ಓಡಿದ್ದಾನೆ. ಜಾರಿ ಬಿದ್ದರೆ ಉಂಟಾಗುವ ಗಂಭೀರ ಅಪಾಯವಾಗುವ ಬಗ್ಗೆ ಯಾವುದೇ ಯೋಚನೆ ಮಾಡಿದಂತಿಲ್ಲ.ಇನ್ನು ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗುತ್ತಿದೆ. ನದಿಯ ಸೇತುವೆಯ ಮೇಲೆ ರೈಲು ನಿಧಾನವಾಗಿ ಚಲಿಸುತ್ತಿದ್ದು, ಆಗ ರೈಲಿನಿಂದ ಇಳಿದು ಯುವಕ ಓಡುತ್ತಿರುವುದನ್ನು ಕಾಣಬಹುದಾಗಿದೆ.

ಲೈಕ್ಸ್‌ ಮತ್ತು ವ್ಯೂಸ್‌ಗಾಗಿ ಮಾಡಲಾದ ಈ ಅಪಾಯಕಾರಿ ಕೃತ್ಯವು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿಯನ್ನು ಪಡೆಯಲು ಕೆಲವರು ಎಂತೆಂಥಾ ದುಸ್ಸಾಹಸಕ್ಕೆ ಮುಂದಾಗುತ್ತಾರೆ ಎಂದು ನೆಟ್ಟಿಗರು ಕೆಂಡ ಕಾರಿದ್ದಾರೆ.

ವಿಡಿಯೊ ಇಲ್ಲಿದೆ:

ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿ ಪಡೆಯುವುದಕ್ಕಾಗಿ ಜನರು ಎಷ್ಟರ ಮಟ್ಟಿಗೆ ಹೋಗಲು ಸಿದ್ಧರಿದ್ದಾರೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇಂತಹ ಸಾಹಸಗಳು ಮಾರಕವಾಗುವ ಮೊದಲು ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: International Yoga Day:‌ ಸಿಕ್ಕಾಪಟ್ಟೆ ವೈರಲ್‌ ಆಯ್ತು ಶ್ವಾನದ ಈ ಯೋಗಾಸನ; ವಿಡಿಯೊ ವೈರಲ್!

ಒಬ್ಬ ಬಳಕೆದಾರರು ಇಂತಹ ಖಾತೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ. ಮತ್ತೊಬ್ಬರು, ಈ ವ್ಯಕ್ತಿಯನ್ನು ಬಂಧಿಸಬೇಕು ಮತ್ತು ಶಿಕ್ಷೆಯ ವಿಡಿಯೊವನ್ನು ಹಂಚಿಕೊಳ್ಳಬೇಕು. ಇದರಿಂದ ಈ ಚಟುವಟಿಕೆಯನ್ನು ಮಾಡುವ ಭಯವಿರುವ ಯಾರೂ ಇಂಥವುಗಳನ್ನು ಪುನರಾವರ್ತಿಸಬಾರದು ಎಂದು ಕಾಮೆಂಟ್ ಮಾಡಿದ್ದಾರೆ. ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಬದುಕಲು ಇದೇ ಕಾರಣ ಎಂದು ಮೂರನೇ ವ್ಯಕ್ತಿ ವ್ಯಂಗ್ಯವಾಡಿದ್ದಾರೆ.