Viral Video: ಬೀದಿ ಶ್ವಾನಗಳ ಮೇಲೆ ಪೈಶಾಚಿಕ ಕೃತ್ಯ! ಕಿಡಿಗೇಡಿಗೆ ಬಿತ್ತು ಗೂಸಾ- ವಿಡಿಯೊ ವೈರಲ್
ದೆಹಲಿಯ ಕೈಲಾಶ್ ನಗರದಲ್ಲಿ ಹೆಣ್ಣು ನಾಯಿಗಳ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ಸ್ಥಳೀಯರು ಹಾಗೂ ಪ್ರಾಣಿ ಪ್ರಿಯರು ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.


ನವದೆಹಲಿ: ಇತ್ತೀಚೆಗೆ ಮೂಕ ಪ್ರಾಣಿಗಳ ಮೇಲೆ ಪೈಶಾಚಿಕ ಕೃತ್ಯಗಳು ಹೆಚ್ಚಾಗುತ್ತಿವೆ. ಇದೀಗ ಅಂತಹ ವಿಚಿತ್ರ ಮತ್ತು ಆಘಾತಕಾರಿ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ದೆಹಲಿಯ ಕೈಲಾಶ್ ನಗರದಲ್ಲಿ ಹೆಣ್ಣು ನಾಯಿಗಳ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ಸ್ಥಳೀಯರು ಹಾಗೂ ಪ್ರಾಣಿ ಪ್ರಿಯರು ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.ವ್ಯಕ್ತಿಯು ನಾಯಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ನೋಡುಗರೊಬ್ಬರು ಈ ಕೃತ್ಯದ ವಿಡಿಯೊ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಘಟನೆಯ ವೇಳೆ ಸ್ಥಳೀಯರು ವ್ಯಕ್ತಿಯನ್ನು ಥಳಿಸುವುದರ ಜೊತೆಗೆ ಆತನ ಬಟ್ಟೆಗಳನ್ನು ಜನರು ಹರಿದುಹಾಕಿದ್ದಾರೆ. ವಿಡಿಯೊದಲ್ಲಿ ಮಹಿಳೆಯೊಬ್ಬಳು ಅವನು 13 ನಾಯಿಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾಳೆ. ಹಾಗೇ ಆತ ಮಹಿಳೆಯ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದಕ್ಕೆ ಆಕೆ ಆತನನ್ನು ದಪ್ಪ ಬಿದಿರಿನ ಕೋಲಿನಿಂದ ಹೊಡೆದಿದ್ದಾಳೆ.
@LtGovDelhi @CMODelhi @DelhiPolice @CrimeBranchDP @DelhiPoliceCom1 @CPDelhi @CellDelhi @DCPNewDelhi @joedelhi @RishiDevarch @JesudossAsher @asharmeet02 @PetaIndia @pfaindia @Manekagandhibjp @AmbikaShukla15 @PMOIndia @HMOIndia @SupremeCourtIND @narendramodi pic.twitter.com/JVztR6zE4o
— voiceforanimals11 (@vfanimals11) April 10, 2025
ಆ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದ್ದು, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ 1960ರ ಸೆಕ್ಷನ್ 377 (ಅಸ್ವಾಭಾವಿಕ ಲೈಂಗಿಕತೆ) ಮತ್ತು 429 (ಪ್ರಾಣಿಗಳಿಗೆ ಹಾನಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೀಗ ಆತನನ್ನು ಬಂಧಿಸಲಾಗಿದೆ. ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ಕುಳಿತಿರುವ ವಿಡಿಯೊ ಕೂಡ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ.
ಬೀದಿ ನಾಯಿಗಳ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣಗಳು ಇತ್ತೀಚೆಗೆ ಹೆಚ್ಚು ವರದಿಯಾಗಿದೆ. ಕಳೆದ ತಿಂಗಳು ಬೆಂಗಳೂರಿನ ಜಯನಗರದಲ್ಲಿ ಬೀದಿ ನಾಯಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಬಿಹಾರ ಮೂಲದ 23 ವರ್ಷದ ದಿನಗೂಲಿ ಕಾರ್ಮಿಕ ಎಂದು ಹೇಳಲಾದ ವ್ಯಕ್ತಿ, ಅತ್ಯಾಚಾರದ ವೇಳೆ ನಾಯಿಯ ಖಾಸಗಿ ಭಾಗಗಳನ್ನು ಹಾನಿಗೊಳಿಸಿದ್ದಾನೆ ಎಂದು ಆರೋಪಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ಇನ್‌ಸ್ಟಾಗ್ರಾಂ ಸ್ನೇಹಿತನನ್ನು ಮದುವೆಯಾಗಲು ಅಮೆರಿಕದಿಂದ ಬಂದ ಮಹಿಳೆ; ಅದ್ಭುತ ಲವ್‌ಸ್ಟೋರಿ ಇಲ್ಲಿದೆ
ಮುಂಬೈನ ಉಪನಗರ ಅಂಧೇರಿ ಪಶ್ಚಿಮದಲ್ಲಿ 30 ಕ್ಕೂ ಹೆಚ್ಚು ಬೀದಿ ನಾಯಿಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 67 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಜುಹು ಗಲ್ಲಿಯ ತರಕಾರಿ ಮಾರಾಟಗಾರ ಅಹ್ಮದ್ ಶಾ ಅವನನ್ನು ಅಂಧೇರಿ ಬಳಿ ಬೀದಿ ನಾಯಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿತ್ತು. ಬಾಂಬೆ ಅನಿಮಲ್ ರೈಟ್ಸ್ ಎಂಬ ಎನ್‍ಜಿಒದ ವಿಜಯ್ ಮೊಹ್ನಾನಿ ಪೊಲೀಸರಿಗೆ ದೂರು ನೀಡಿದ್ದು, ಸ್ಥಳೀಯರು ಹಲವು ಬಾರಿ ಎಚ್ಚರಿಕೆ ನೀಡಿದರೂ, ಅವನು ಮಾತ್ರ ಈ ಘೋರ ಕೃತ್ಯ ಮುಂದುವರಿಸಿದ್ದಾನಂತೆ.