ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶ್ರೀಮಂತಿಕೆ ಇದ್ದರೆ ಸಾಲದು ನಾಗರಿಕ ಪ್ರಜ್ಞೆಯೂ ಬೇಕು; ಮನಾಲಿಯ ಚಾರ್ಜಿಂಗ್ ಪಾಯಿಂಟ್ ಕಸದ ಬುಟ್ಟಿಯನ್ನಾಗಿಸಿದ ಪ್ರವಾಸಿಗರು

Viral Video: ಹಿಮಾಚಲ ಪ್ರದೇಶದ ಪ್ರವಾಸಿ ಸ್ಥಳ ಮನಾಲಿಯಲ್ಲಿ ಚಾರ್ಜಿಂಗ್ ಪಾಯಿಂಟ್ ಸ್ಥಳವನ್ನು ಕಸದ ಬುಟ್ಟಿಯಾಗಿ ಜನರು ಬಳಸಿಕೊಂಡಿದ್ದಾರೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಶಿಸ್ತಿನ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನಾಲಿಯ ಚಾರ್ಜಿಂಗ್ ಪಾಯಿಂಟ್ ಈಗ ಕಸದ ಬುಟ್ಟಿ!

ಮನಾಲಿಯ ಚಾರ್ಜಿಂಗ್ ಪಾಯಿಂಟ್ ಈಗ ಕಸದ ಬುಟ್ಟಿ -

Profile
Pushpa Kumari May 2, 2026 6:38 PM

ಶಿಮ್ಲಾ, ಮೇ 2: ಎಲ್ಲೆಂದರಲ್ಲಿ ಕಸ ಎಸೆಯುವ ಅಭ್ಯಾಸವನ್ನು ಈಗಲೂ ಜನರು ರೂಢಿಸಿಕೊಂಡಿದ್ದಾರೆ. ಸರ್ಕಾರ ದಂಡ ವಿಧಿಸಿದರೂ ಕೆಲವರು ಕ್ಯಾರೇ ಎನ್ನದೆ ಪ್ಲಾಸ್ಟಿಕ್‌ಗಳನ್ನು ಎಸೆಯುವುದು, ತಿಂದ ಸಿಪ್ಪೆಗಳನ್ನು ಬಿಸಾಡುವುದು ಹೀಗೆ ನಾಗರಿಕ ಪ್ರಜ್ಞೆ ಇಲ್ಲದಂತೆ ವರ್ತಿಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರವಾಸಿ ಸ್ಥಳ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಚಾರ್ಜಿಂಗ್ ಪಾಯಿಂಟ್ ಸ್ಥಳವನ್ನು ಕಸದ ಬುಟ್ಟಿಯಾಗಿ ಜನರು ಬಳಸಿಕೊಂಡಿದ್ದಾರೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು ಸಾರ್ವಜನಿಕ ಸ್ಥಳದಲ್ಲಿ ಶಿಸ್ತಿನ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನಾಲಿಯಲ್ಲಿ ಪ್ರವಾಸಿ ಮೂಲಸೌಕರ್ಯವನ್ನು ಆಧುನೀಕರಿಸುವ ನಿಟ್ಟಿನಲ್ಲಿ ಚಾರ್ಜಿಂಗ್ ಪಾಯಿಂಟ್ ಅನ್ನು ನಿರ್ಮಾಣ ಮಾಡಲಾಗಿತ್ತು. ಪ್ರಯಾಣಿಕರ ಫೋನ್‌ ಮತ್ತು ಗ್ಯಾಜೆಟ್‌ಗಳಿಗಾಗಿ ಇತ್ತೀಚೆಗೆ ಹೊಚ್ಚಹೊಸ ಚಾರ್ಜಿಂಗ್ ಪಾಯಿಂಟ್ ಸ್ಥಾಪಿಸಲಾಗಿದೆ. ಆದರೆ ಈ ಚಾರ್ಜಿಂಗ್‌ ಪಾಯಿಂಟ್‌ ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ ಈ ತಾಣವು ಕಸದ ರಾಶಿಯಿಂದ ತುಂಬಿ ಹೋಗಿದೆ. ಅಲ್ಲಲ್ಲಿ ಪ್ಲಾಸ್ಟಿಕ್ ಪ್ಯಾಕೇಟ್, ತಿಂಡಿ ಕವರ್ ಹರಡಿ ಕಸದ ಬುಟ್ಟಿಯಾಗಿ ಪರಿವರ್ತಿಸಲಾಗಿದೆ.

ವಿಡಿಯೊ ನೋಡಿ:



ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರ ಅಶಿಸ್ತಿನ ನಡೆ, ಬೇಜವ್ದಾರಿ ವರ್ತನೆ ಬಗ್ಗೆ ಅನೇಕರು ಆಕ್ರೋಶವನ್ನು ಹೊರ ಹಾಕಿದ್ದಾರೆ. ಯಾವುದೇ ಸ್ವಚ್ಛ ಭಾರತ ಅಥವಾ ಯಾವುದೇ ಯೋಜನೆ ಈ ದೇಶವನ್ನು ಸರಿಪಡಿಸಲು ಸಾಧ್ಯವಿಲ್ಲ. ಜನರ ಮನಸ್ಥಿತಿ ಬದಲಾಗದೆ ಸರ್ಕಾರದ ಯಾವ ಯೋಜನೆ ತಂದರೂ ಪ್ರಯೋಜನವಾಗಲ್ಲ ಎಂದು ಕೆಲವರು ಕಿಡಿಕಾರಿದ್ದಾರೆ. ನಿಖಿಲ್ ಸೈನಿ ಈ ದೃಶ್ಯವನ್ನು ಶೇರ್ ಮಾಡಿದ್ದಾರೆ.

ಮುಸ್ಲಿಂ ಪತ್ರಕರ್ತನ ಮನೆ ನೆಲಸಮ; ತನ್ನ ಭೂಮಿಯನ್ನೇ ಗಿಫ್ಟ್‌ ಕೊಟ್ಟ ಹಿಂದೂ ವ್ಯಕ್ತಿ!

ಈ ವಿಡಿಯೊ ನೋಡಿದ ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬರು, ʼʼನೀವು ಐಷಾರಾಮಿ, ದುಬಾರಿ ಲೂಯಿ ವಿಟಾನ್ ಬ್ಯಾಗ್‌ ಹೊತ್ತುಕೊಂಡು ತಿರುಗುತ್ತೀರಿ. ಆದರೆ ಸಾರ್ವಜನಿಕ ಆಸ್ತಿಯನ್ನು ನಿಮ್ಮ ವೈಯಕ್ತಿಕ ಕಸದ ಟ್ರಕ್‌ನಂತೆ ಪರಿಗಣಿಸುತ್ತೀರಿ. ಅಷ್ಟು ಜವಾಬ್ದಾರಿ ಇಲ್ಲವೆ?ʼʼ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ʼʼಇಂತಹ ಕೃತ್ಯ ಎಸಗುವವರಿಗೆ ಅದೇ ಕ್ಷಣದಲ್ಲಿ ದಂಡ ವಿಧಿಸಬೇಕು. ಆಗ ಮಾತ್ರ ಬದಲಾಗುತ್ತಾರೆʼʼ ಎಂದು ಸಲಹೆ ನೀಡಿದ್ದಾರೆ. ಈ ಸುಂದರ ಪ್ರದೇಶವನ್ನು ಪ್ರವಾಸಿಗರು ಹಾಳು ಹಾಳು ಮಾಡುತ್ತಿದ್ದಾರೆ ಎಂಬುದು ಸ್ತಳೀಯರ ಆತಂಕ. ಒಟ್ಟಿನಲ್ಲಿ ಈ ವಿಡಿಯೊ ಮತ್ತೊಮ್ಮೆ ಹಲವರ ಕೀಳು ಮನಸ್ಥಿಯನ್ನು ಬಯಲಿಗೆಳೆದಿದೆ.