ಮದುವೆ ಮಂಟಪದಲ್ಲಿ ವಧು-ವರನ ರೊಮ್ಯಾನ್ಸ್; ಕ್ಲಾಸ್ ತೆಗೆದುಕೊಂಡ ಪುರೋಹಿತರು, ವಿಡಿಯೋ ನೋಡಿ
Viral Video: ಇತ್ತೀಚೆಗೆ ಲಕ್ಷ ಘಟ್ಟಲೆ ಹಣ ವ್ಯಯಿಸಿ ಮದುವೆಯಾಗುವುದು ಟ್ರೆಂಡ್ ಆಗಿದೆ. ಮದುವೆ ಹುಡುಗಿ ಮೆರವಣೆಗೆಯ ಮೂಲಕ ಮಂಟಪಕ್ಕೆ ಬರುವುದು, ವರನಿಗೆ ಪ್ರಪೋಸ್ ಮಾಡುವುದು, ಮಂಟಪದಲ್ಲೆ ವಧು -ವರರು ಕುಣಿದು ಕುಪ್ಪಳಿಸುವುದು ಇತ್ಯಾದಿ..ಆದರೆ ಆದರೆ ಇಲ್ಲೊಂದು ಕಡೆ ವಧು-ವರರು ಪ್ರಪೋಸ್ ಮಾಡಲು ಮುಂದಾದಾಗ ಪುರೋಹಿತರು ಅಡ್ಡಿಪಡಿಸಿದ ಘಟನೆ ನಡೆದಿದ್ದು ಭಾರೀ ವೈರಲ್ ಆಗಿದೆ.
ಸಂಗ್ರಹ ಚಿತ್ರ -
ಬೆಂಗಳೂರು,ಜ. 31: ಮದುವೆ ಬಗ್ಗೆ ಹೆಚ್ಚಿನವರು ಕನಸು ಕಾಣುತ್ತಾರೆ. ತಮ್ಮ ಮದುವೆ ಗ್ರ್ಯಾಂಡ್ ಆಗಿ ನಡೆಯಬೇಕು, ವಿಶೇಷವಾಗಿ ಇರಬೇಕು ಹೀಗೆ ನಾನಾ ರೀತಿಯ ಪ್ಲಾನ್ ಮಾಡಿಕೊಳ್ಳುತ್ತಾರೆ. ಅದರಲ್ಲೂ ಇತ್ತೀಚೆಗೆ ಲಕ್ಷ ಘಟ್ಟಲೆ ಹಣ ವ್ಯಯಿಸಿ ಮದುವೆಯಾಗುವುದು ಟ್ರೆಂಡ್ ಆಗಿದೆ. ಮದುವೆ ಹುಡುಗಿ ಮೆರವಣೆಗೆಯ ಮೂಲಕ ಮಂಟಪಕ್ಕೆ ಬರುವುದು, ವರನಿಗೆ ಪ್ರಪೋಸ್ ಮಾಡುವುದು, ಮಂಟಪದಲ್ಲೆ ವಧು -ವರರು ಕುಣಿದು ಕುಪ್ಪಳಿಸುವುದು ಇತ್ಯಾದಿ..ಆದರೆ ಆದರೆ ಇಲ್ಲೊಂದು ಕಡೆ ವಧು-ವರರು ಪ್ರಪೋಸ್ ಮಾಡಲು ಮುಂದಾದಾಗ ಪುರೋಹಿತರು ಅಡ್ಡಿಪಡಿಸಿದ ಘಟನೆ ನಡೆದಿದ್ದು ಭಾರೀ ವೈರಲ್ (Viral Video) ಆಗಿದೆ.
ಈ ವೀಡಿಯೊವನ್ನು ವಧು ಸ್ವತಃ ಹಂಚಿಕೊಂಡಿದ್ದು, ಅವಳು ತನ್ನ ವರನ ಕಡೆಗೆ ಬರುವಾಗ ಆತ ವಿಶೇಷ ರೀತಿಯಲ್ಲಿ ಸ್ವಾಗತಿಸುತ್ತಾನೆ. ಮೊಣಕಾಲೂರಿ ಅವಳಿಗೆ ಹೂಗುಚ್ಛವನ್ನು ನೀಡುತ್ತಾನೆ. ಈ ದೃಶ್ಯಕ್ಕೆ ವಧು ಭಾವುಕಳಾಗಿದ್ದು ದಂಪತಿಗಳು ಪ್ರೀತಿಯಿಂದ ಅಪ್ಪಿಕೊಳ್ಳುತ್ತಾರೆ .ಈ ಸಂದರ್ಭದಲ್ಲಿ ವರನು ಆಕೆಯ ಕೆನ್ನೆಗೆ ಮುತ್ತಿಡುತ್ತಾನೆ. ಅತಿಥಿಗಳೆಲ್ಲೂ ಇದಕ್ಕೆ ಬೆಂಬಲ ನೀಡಿ ಪ್ರೀತಿಗೆ ಚಪ್ಪಾಳೆ ತಟ್ಟುತ್ತಿದ್ದರೆ ಅಲ್ಲಿಯೇ ಇದ್ದ ಪುರೋಹಿತರು ಮಾತ್ರ ಈ ನಡೆಯಿಂದ ಕೋಪಗೊಂಡಿದ್ದಾರೆ.
ವಿಡಿಯೋ ನೋಡಿ:
Panditji stopped the groom and bride from kissing on the stage.
— ︎ ︎venom (@venom1s) January 29, 2026
Feminist girls will say he’s a bad person.
But he is old, he grew up with religion and values. He was brought there to conduct their marriage and he did so.
Society has changed, while he still holds his values. pic.twitter.com/Z1WmbRo8Wq
ಕೆಲವೇ ಸೆಕೆಂಡುಗಳ ನಂತರ, ಸಮಾರಂಭವನ್ನು ನಡೆಸುವ ಪುರೋಹಿತರು ಮಧ್ಯಪ್ರವೇಶಿಸಿ, ದಂಪತಿಗಳನ್ನು ದೈಹಿಕವಾಗಿ ಬೇರ್ಪಡಿಸಿದ್ದಾರೆ. ಮದುವೆಯ ವಿಧಿವಿಧಾನಗಳು ನಡೆಯುವ ಮುನ್ನ ಇಂತಹ ವರ್ತನೆ ಸರಿಯಲ್ಲ ಎಂದು ಫುಲ್ ಗರಂ ಆಗಿದ್ದಾರೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ವಿಡಿಯೋ ಚಿತ್ರೀಕರಿಸುತ್ತಿದ್ದ ಕ್ಯಾಮೆರಾಮನ್‌ಗಳಿಗೂ ರೆಕಾರ್ಡಿಂಗ್ ನಿಲ್ಲಿಸುವಂತೆ ಗದರಿಸಿದ್ದಾರೆ.
Viral Video: ಅಯ್ಯಯ್ಯೋ! ಅಂತ್ಯಕ್ರಿಯೆ ವೇಳೆ ಶವಪೆಟ್ಟಿಗೆಯಿಂದ ಜೀವಂತವಾಗಿ ಎದ್ದು ಬಂದ ಮಹಿಳೆ: ವಿಡಿಯೋ ನೋಡಿ
ಈ ದೃಶ್ಯಗಳು ವ್ಯಾಪಕವಾಗಿ ಪ್ರಸಾರವಾಗಿದ್ದು, ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿವೆ .ಕೆಲವು ಬಳಕೆದಾರರು ಪುರೋಹಿತರನ್ನು ಬೆಂಬಲಿಸಿದರೆ ಧಾರ್ಮಿಕ ಆಚರಣೆಗಳು ಗೌರವ ಮತ್ತು ಶಿಸ್ತಿಗೆ ಅರ್ಹವಾಗಿವೆ ಎಂದು ವಾದಿಸಿದರೆ, ಇನ್ನೂ ಕೆಲವರು ಇದನ್ನು ಟೀಕಿಸಿದರು. ಬಳಕೆದಾರರೊಬ್ಬರು ಪ್ರೀತಿ ವ್ಯಕ್ತಪಡಿಸುವುದು ತಪ್ಪಲ್ಲ. ಪುರೋಹಿತರು ಅಷ್ಟು ಕೋಪ ಗೊಂಡು ಒರಟಾಗಿ ವರ್ತಿಸುವ ಬದಲು ಸಂಯಮದಿಂದ ಇರಬಹುದಿತ್ತು ಎಂದಿದ್ದಾರೆ. ಮದುವೆ ಸಂಭ್ರಮದ ಕ್ಷಣದಲ್ಲೇ ಈ ರೀತಿ ಮಾಡಿದ್ದು ತಪ್ಪು ಎಂದು ಮತ್ತೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.