ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆಭರಣ ಮಳಿಗೆಯಲ್ಲಿ ಕುಸಿದು ಬಿದ್ದ ಉದ್ಯಮಿ; ಮಾಲೀಕನ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರು

ಇತ್ತೀಚೆಗಷ್ಟೆ ಉದ್ಯಮಿಯೊಬ್ಬರು ಆಭರಣ ಮಳಿಗೆಯಲ್ಲಿ ವ್ಯವಹಾರ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದ ಘಟನೆ ಜೈಪುರದಲ್ಲಿ ನಡೆದಿದೆ. ಆ ವ್ಯಕ್ತಿ ನೋಡ ನೋಡುತ್ತಿದ್ದಂತೆ ಕುಸಿದುಬಿದ್ದಿದ್ದು ಆಭರಣ ಮಳಿಗೆಯವರ ಸಮಯಪ್ರಜ್ಞೆಯಿಂದ ಪ್ರಾಣಾಪಾಯ ತಪ್ಪಿದಂತಾಗಿದೆ. ಉದ್ಯಮಿಯು ಕುಸಿದು ಬಿದ್ದಂತೆ ಅಲ್ಲಿದ್ದವರೆಲ್ಲ ಒಮ್ಮೆಲ್ಲೆ ಗೊಂದಲಗೊಂಡಿದ್ದು ಏನು ಮಾಡಬೇಕೆಂದು ತೋಚದಂತಾದರು ಬಳಿಕ ಕುಸಿದುಬಿದ್ದ ವ್ಯಕ್ತಿಯನ್ನು ನೆಲದ ಮೇಲೆ ಮಲಗಿಸಿ ಸಿಪಿಆರ್ ಪ್ರೊಸೆಸ್ ಮಾಡುವ ಮೂಲಕ ಆ ವ್ಯಕ್ತಿಯನ್ನು ಬದುಕಿಸಿದ್ದಾರೆ. ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೃದಯಾಘಾತದಿಂದ ಕುಸಿದು ಬಿದ್ದ ವ್ಯಕ್ತಿಯ ರಕ್ಷಣೆ

ಆಭರಣ ಮಳಿಗೆಯಲ್ಲಿ ಕುಸಿದು ಬಿದ್ದ ಉದ್ಯಮಿ -

Profile
Pushpa Kumari Dec 15, 2025 5:29 PM

ಜೈಪುರ, ಡಿ. 15: ಇತ್ತೀಚಿನ ವರ್ಷದಿಂದ ಹೃದಯಾಘಾತ ಆಗುವ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರಿಗೂ ಈ ಹೃದಯಾಘಾತ ಕಾಡುತ್ತದೆ. ಬದಲಾದ ಜೀವನ ಶೈಲಿ, ಪೌಷ್ಟಿಕಾಂಶಯುಕ್ತ ಆಹಾರ ಸಮಸ್ಯೆ, ಜಂಕ್ ಫುಡ್ ಸೇವನೆ, ದೈಹಿಕ ಮತ್ತು ಮಾನಸಿಕ ಒತ್ತಡ ಇತರ ಸಮಸ್ಯೆಗಳು ಹೃದಯಾಘಾತಕ್ಕೆ ಮುಖ್ಯ ಕಾರಣ ಎನನುತ್ತಾರೆ ತಜ್ಞರು. ಇತ್ತೀಚೆಗಷ್ಟೆ ಉದ್ಯಮಿಯೊಬ್ಬರು ಆಭರಣ ಮಳಿಗೆಯಲ್ಲಿ ವ್ಯವಹಾರ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದ ಘಟನೆ ಜೈಪುರದಲ್ಲಿ ನಡೆದಿದೆ. ಅವರು ನೋಡ ನೋಡುತ್ತಿದ್ದಂತೆ ಕುಸಿದುಬಿದ್ದಿದ್ದು, ಆಭರಣ ಮಳಿಗೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಪ್ರಾಣಾಪಾಯ ತಪ್ಪಿದೆ. ಉದ್ಯಮಿಯು ಕುಸಿದು ಬಿದ್ದಂತೆ ಅಲ್ಲಿದ್ದವರೆಲ್ಲ ಗೊಂದಲಕ್ಕೊಳಗಾಗಿದ್ದಾರೆ. ಬಳಿಕ ಕುಸಿದು ಬಿದ್ದ ವ್ಯಕ್ತಿಯನ್ನು ನೆಲದ ಮೇಲೆ ಮಲಗಿಸಿ ಸಿಪಿಆರ್ ಪ್ರೊಸೆಸ್ ಮಾಡುವ ಮೂಲಕ ಆ ವ್ಯಕ್ತಿಯನ್ನು ಬದುಕಿಸಿದ್ದಾರೆ. ಸದ್ಯ ಘಟನೆಯ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral video) ಆಗುತ್ತಿದೆ.

ಜೈಪುರದ ರಾಂಪುರ ಬಜಾರ್‌ನಲ್ಲಿರುವ ವರ್ಧಮಾನ್ ಜ್ಯುವೆಲ್ಲರ್ಸ್‌ಗೆ ಡಿಸೆಂಬರ್ 11ರ ಮಧ್ಯಾಹ್ನ 1.58ರ ಸುಮಾರಿಗೆ 60 ವರ್ಷದ ಜೈಪುರದ ಉದ್ಯಮಿಯೊಬ್ಬರು ಭೇಟಿ ನೀಡಿದರು. ಈ ವೇಳೆ ಮಾಲಕರು ಆ ಉದ್ಯಮಿಯೊಂದಿಗೆ ಚರ್ಚಿಸುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಅವರು ನಿಶ್ಯಕ್ತಿ ಸಮಸ್ಯೆಗೆ ಒಳಗಾಗಿ ಬಳಿಕ ಕುಸಿದುಬಿದ್ದಿದ್ದ ಆಘಾತಕಾರಿ ದೃಶ್ಯಗಳು ಆಭರಣ ಮಳಿಗೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಡಿಯೊ ನೋಡಿ:

ಆ ಉದ್ಯಮಿಯು ಜೈಪುರದ ಜೋತ್ವಾರಾ ಪ್ರದೇಶದ ರತ್ನದ ವ್ಯಾಪಾರಿ ರಾಜ್‌ಕುಮಾರ್ ಸೋನಿ ಎಂದು ಗುರುತಿಸಲಾಗಿದೆ. ಉದ್ಯಮಿ ಕುಸಿದು ಬಿದ್ದಿರುವುದನ್ನು ನೋಡಿ ಸಿಬ್ಬಂದಿ ಮತ್ತು ಗ್ರಾಹಕರು ಭಯಭೀತರಾಗಿದ್ದ ದೃಶ್ಯವನ್ನು ಕಾಣಬಹುದು. ಇಂತಹ ಗೊಂದಲದ ನಡುವೆಯೂ ಅಂಗಡಿ ಮಾಲಕ ವಿಮಲ್ ಕುಮಾರ್ ಜೈನ್ ಅವರ ಮಗ ವರುಣ್ ಜೈನ್ (37) ಸಮಯ ಪ್ರಜ್ಞೆಯಿಂದ ಉದ್ಯಮಿಯನ್ನು ರಕ್ಷಿಸಲಾಗಿದೆ. ಅವರು ಹೃದಯಾಘಾತದಿಂದ ಬಿದ್ದಿರಬಹುದು ಎಂದು ಯೋಚಿಸಿ ಪ್ರಾಥಮಿಕ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ವರುಣ್ ಉದ್ಯಮಿ ರಾಜ್‌ಕುಮಾರ್ ಅವರನ್ನು ನೆಲದ ಮೇಲೆ ಮಲಗಿಸಿ ಸಿಪಿಆರ್ ಅನ್ನು ವಿಧಾನ ಮಾಡಿದರು. ಇದರಿಂದಾಗಿ ಕೆಲವೇ ಕ್ಷಣದಲ್ಲಿ ಅವರ ಪ್ರಜ್ಞೆ ಮರುಕಳಿಸಿದೆ.

ಇಂಡಿಗೋ ವಿಮಾನ ರದ್ದು; ಪುತ್ರನಿಗಾಗಿ 800 ಕಿ.ಮೀ. ದೂರ ಕಾರು ಚಲಾಯಿಸಿದ ತಂದೆ!

ಸುಮಾರು 2.5 ನಿಮಿಷಗಳ ಕಾಲ ವರುಣ್ ಆ ವ್ಯಕ್ತಿಯ (ಉದ್ಯಮಿ) ಎದೆಯನ್ನು ಒತ್ತುತ್ತಲೇ ಇದ್ದರು. ಇದನ್ನು ಉಳಿದ ಗ್ರಾಹಕರು ಮತ್ತು ಆಭರಣ ಮಳಿಗೆಯ ಸಿಬಂದಿ ಆಶ್ಚರ್ಯದಿಂದಲೇ ನೋಡುತ್ತಿದ್ದರು. ಕೆಲವೇ ಕ್ಷಣಗಳ ಬಳಿಕ ರಾಜ್‌ ಕುಮಾರ್ ಅವರ ದೇಹದ ಸ್ಥಿತಿ ಸುಧಾರಿಸಿದೆ. ಅವರು ಮಲಗಿದ್ದಲಿಂದ ಎದ್ದು ಅಲ್ಲೆ ಕುಳಿತ್ತಿದ್ದ ದೃಶ್ಯಗಳನ್ನು ವಿಡಿಯೊದಲ್ಲಿ ಕಾಣಬಹುದು. ಬಳಿಕ ರಾಜ್‌ ಕುಮಾರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸದ್ಯ ಆಭರಣ ಮಳಿಗೆಯವರ ನಡೆಗೆ ಎಲ್ಲೆಡೆ ಮೆಚ್ಚುಗೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ವಿಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು ನಾನಾ ತರನಾಗಿ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಇಂತಹ ಸಂದರ್ಭದಲ್ಲಿ ಜನರಿಗೆ ಏನು ಮಾಡಬೇಕು ಎಂದೆ ತೋಚಲಾರದು. ಹಾಗಾಗಿ ಪ್ಯಾನಿಕ್ ಆಗದೆ ಇಂತಹ ಪ್ರಜ್ಞೆಯಿಂದ ವರ್ತಿಸಿದರೆ ಪ್ರಾಣಾಪಾಯ ತಪ್ಪುತ್ತದೆ. ಈ ವಿಡಿಯೊ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಹೃದಯಾಘಾತ ಆದ ಸಂದರ್ಭದಲ್ಲಿ ಸಿಪಿಆರ್‌ನಂತಹ ಕಾರ್ಯ ವಿಧಾನ ಮಾಡುವುದು ಹೇಗೆ ಎಂಬ ಅರಿವು ಎಲ್ಲರಲ್ಲೂ ಇರಬೇಕು ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.