ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ಭಾರತೀಯರಲ್ಲಿ ನಾಗರಿಕ ಪ್ರಜ್ಞೆ ಮರೆಯಾಗಿದೆ": ಸಿಂಗಾಪುರದ ನೀರಿನಲ್ಲಿ ತೇಲಿದ 'ಕುರ್ಕುರೆ' ಪ್ಯಾಕೆಟ್ ನೋಡಿ ನೆಟ್ಟಿಗರು ಕೆಂಡಾಮಂಡಲ

Viral Video: ಸಾರ್ವಜನಿಕ ಸ್ಥಳ, ಪ್ರವಾಸಿ ಸ್ಥಳ ತಮ್ಮದೇ ಎಂಬ ರೀತಿಯಲ್ಲಿ ಹಲವರು ವರ್ತಿಸುತ್ತಾರೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯುವುದು ಮೂಲಕ ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರಸಿದ್ಧ ಪ್ರವಾಸಿ ತಾಣ ಸಿಂಗಾಪುರದಲ್ಲಿನ ಸಣ್ಣದೊಂದು ಕಸ ಇಡೀ ಸ್ಥಳದಲ್ಲಿ ಹೇಗೆ ಎದ್ದು ತೋರುತ್ತಿತ್ತು ಎಂಬುದನ್ನು ವಿವರಿಸುವ ವಿಡಿಯೊವೊಂದು ವೈರಲ್ ಆಗಿದೆ. ಶುದ್ಧ ನೀರಿನಲ್ಲಿ ಸಣ್ಣ ಹೂವಿನ ಎಸಳು, ಕೊಂಬೆಯ ಜತೆಗೆ 'ಕುರ್ಕುರೆ' ಪ್ಯಾಕೆಟ್ ಕೂಡ ಕಂಡು ಬಂದಿದೆ.

ಸಿಂಗಾಪುರದಲ್ಲಿ ನೀರಿನಲ್ಲಿ ತೇಲಿದ ʼಕುರ್ಕುರೆʼ ಪ್ಯಾಕೆಟ್; ವಿಡಿಯೊ ಇಲ್ಲಿದೆ

ಸಿಂಗಾಪುರದ ಪ್ರವಾಸಿ ಸ್ಥಳದಲ್ಲಿ ನೀರಿನಲ್ಲಿ ತೇಲಿದ ಕುರ್ಕುರೆ ಪ್ಯಾಕೆಟ್ -

Profile
Pushpa Kumari Jul 18, 2026 10:11 PM

ಸಿಂಗಾಪುರ, ಜು. 18: ಇತ್ತೀಚೆಗೆ ಶಿಕ್ಷಣವಂತರಲ್ಲೂ ನಾಗರಿಕ ಪ್ರಜ್ಞೆ ಅನ್ನೋದು ಮರೆಯಾಗಿ ಬಿಟ್ಟಿದೆ. ಸಾರ್ವಜನಿಕ ಸ್ಥಳ, ಪ್ರವಾಸಿ ಸ್ಥಳ ತಮ್ಮದೇ ಎಂಬ ರೀತಿಯಲ್ಲಿ ವರ್ತಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯುವುದರ ಮೂಲಕ ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರಸಿದ್ಧ ಪ್ರವಾಸಿ ತಾಣ ಸಿಂಗಾಪುರದ ಕೊಳವೊಂದರಲ್ಲಿ ಕಂಡುಬಂದ ಸಣ್ಣದೊಂದು ಕಸ ಇಡೀ ಸ್ಥಳದಲ್ಲಿ ಹೇಗೆ ಎದ್ದು ತೋರುತ್ತಿತ್ತು ಎಂದನ್ನು ಈ ವಿಡಿಯೊಯೊ ವಿವರಿಸಿದೆ. ಸದ್ಯ ಈ ವಿಡಿಯೊ ವೈರಲ್ (Viral News) ಆಗಿದೆ. ಹರಿಯುವ ಶುದ್ಧ ನೀರಿನಲ್ಲಿ ಸಣ್ಣ ಹೂವಿನ ಎಸಳು ಜತೆಗೆ 'ಕುರ್ಕುರೆ' ಪ್ಯಾಕೆಟ್ ಒಂದು ತೇಲುತ್ತಿತ್ತು.

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಭಾರತೀಯರು ನಾಗರಿಕ ಪ್ರಜ್ಞೆಯನ್ನು ಎಷ್ಟರ ಮಟ್ಟಿಗೆ ಕಡೆಗಣಿಸುತ್ತಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ಸಿಂಗಾಪುರದಲ್ಲಿ ನೆಲೆಸಿರುವ ಭಾರತೀಯ ಮೂಲದ ಕಂಟೆಂಟ್ ಕ್ರಿಯೇಟರ್ ಜೂಹಿಸಿಂಗ್ ಈ ವಿಡಿಯೊ ಶೇರ್ ಮಾಡಿದ್ದಾರೆ. ಖ್ಯಾತ ತಾಣ ಸಿಂಗಾಪುರದ ವಿಶ್ವದ ಮೊದಲ ತೇಲುವ ಆ್ಯಪಲ್ ಸ್ಟೋರ್ ಹತ್ತಿರ ಈ ದೃಶ್ಯ ಕಂಡು ಬಂದಿದೆ.

ವಿಡಿಯೊ ನೋಡಿ:

ವಿಡಿಯೊದಲ್ಲಿ ಶುದ್ಧವಾದ ನೀರು, ಕೆಲವು ಕೊಂಬೆಗಳು ಮತ್ತು ಹೂವಿನ ದಳಗಳನ್ನು ಹೊರತುಪಡಿಸಿ 'ಕುರ್ಕುರೆ' ಪ್ಯಾಕೆಟ್ ತೇಲುತ್ತಿರುವುದನ್ನು ತೋರಿಸಲಾಗಿದೆ. ಇದನ್ನು ನೋಡಿ ಬೇಸರಗೊಂಡ ಮಹಿಳೆ, ʼʼನಿಜಕ್ಕೂ ಇದು ಬೇಸರದ ಸಂಗತಿ. ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಅದನ್ನು ಬಿಟ್ಟು ಹಾನಿಗೆಡವುದು ಸರಿಯಲ್ಲʼʼ ಎಂದು ಬೇಸರ ಹೊರ ಹಾಕಿದ್ದಾರೆ.

ಮಳೆಯಿಂದ ಜಲಾವೃತಗೊಂಡ ಮದುವೆ ಮಂಟಪ: ವಧುವನ್ನು ಎತ್ತಿಕೊಂಡು ಹೆಜ್ಜೆಹಾಕಿದ ವರ

"ಪ್ರವಾಸಿಗರು ತಿಂಡಿಗಳನ್ನು ತಂದರೆ ದಯವಿಟ್ಟು ಡಸ್ಟ್‌ಬಿನ್‌ ಬಳಸಿ. ಬೇಜವಾಬ್ದಾರಿತನದ ಈ ವರ್ತನೆ ಸರಿಯಲ್ಲ" ಎಂದು ಬರೆದುಕೊಂಡಿದ್ದಾರೆ. ​ಈ ವಿಡಿಯೊ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಪ್ರತಿಕ್ರಿಯೆ ನೀಡಿತ್ತಿದ್ದಾರೆ. ನೆಟ್ಟಿಗರೊಬ್ಬರು, ʼʼವಿದೇಶಗಳಲ್ಲಿ ಭಾರತೀಯರ ಇಂತಹ ವರ್ತನೆ ನಮ್ಮ ದೇಶದ ಹೆಸರನ್ನೇ ಹಾಳು ಮಾಡುತ್ತಿದೆʼʼ ಎಂದಿದ್ದಾರೆ. ಮತ್ತೊಬ್ಬರು, ʼʼಇಂತವರಿಗೆ ಸರಿಯಾದ ದಂಡ ವಿಧಿಸಬೇಕುʼʼ ಎಂದು ಬರೆದುಕೊಂಡಿದ್ದಾರೆ.