ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಗುವಿನಂತೆ ಕಾಗೆಗೆ ಲಾಲನೆ, ಪಾಲನೆ ಮಾಡಿದ ಮಹಿಳೆ; ವಿಡಿಯೋ ವೈರಲ್!

Viral Video: ಮಹಿಳೆಯೊಬ್ಬರು ಕಾಗೆಯೊಂದಿಗೆ ಪ್ರೀತಿಯ ಬಂಧವನ್ನು ಬೆಳೆಸಿಕೊಂಡಿರುವ ವಿಡಿಯೊವೊಂದು ವೈರಲ್ ಆಗಿದೆ. ಮಹಿಳೆಯೂ ಕಾಗೆಯನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡು ಅದಕ್ಕೆ ಮಸಾಜ್ ಮಾಡುತ್ತಾ ಕುಳಿತಿದ್ದಾರೆ. ಈ ವಿಡಿಯೊ ಪ್ರಾಣಿ ಪ್ರಿಯರ ಮನ ಗೆದ್ದಿದ್ದು ತಾಯಿಯ ಮಮತೆಗೆ ಮನ ಸೋತಿದ್ದಾರೆ..

ಮಗುವಿನಂತೆ ಕಾಗೆಗೆ ಲಾಲನೆ, ಪಾಲನೆ ಮಾಡಿದ ಮಹಿಳೆ

ಕಾಗೆಗೆ ಪ್ರೀತಿಯಿಂದ ಮಸಾಜ್ ಮಾಡಿದ ಮಹಿಳೆ -

Profile
Pushpa Kumari Jun 23, 2026 3:33 PM

ನವದೆಹಲಿ,ಜೂ.23: ಸಾಮಾನ್ಯವಾಗಿ ಸಾಕು ಪ್ರಾಣಿ ಅಂದಾಗ ನಾಯಿ, ಬೆಕ್ಕು, ದನ ಇತ್ಯಾದಿ ಪ್ರಾಣಿಗಳನ್ನು ಸಲಹುವುದು ಮುದ್ದು ಮಾಡುವುದು ನೀವು ನೋಡಿರಬಹುದು. ಆದರೆ ಕಾಗೆಯನ್ನು ಸಾಕುವುದು ನೀವು ಎಲ್ಲದರೂ ಕಂಡಿದ್ದೀರಾ? ಈ ಮಾತು ನಿಮಗೆ ಆಶ್ಚರ್ಯ ಎನಿಸಬಹುದು... ಆದರೆ ಮಹಿಳೆಯೊಬ್ಬರು ಕಾಗೆಯೊಂದಿಗೆ ಪ್ರೀತಿಯ ಬಂಧವನ್ನು ಬೆಳೆಸಿಕೊಂಡಿರುವ ವಿಡಿಯೊವೊಂದು ವೈರಲ್ (Viral News) ಆಗಿದೆ. ಮಹಿಳೆಯೂ ಕಾಗೆಯನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡು ಅದಕ್ಕೆ ಮಸಾಜ್ ಮಾಡುತ್ತಾ ಕುಳಿತಿರುವ ಈ ವಿಡಿಯೊ ಪ್ರಾಣಿ ಪ್ರಿಯರ ಮನ ಗೆದ್ದಿದೆ.

ಹೊರಾಂಗಣದ ಅಂಗಳದಲ್ಲಿ ಕಾಗೆಯನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಮಹಿಳೆಯೂ ಆರಾಮದಾಯಕವಾಗಿ ವಿಶ್ರಾಂತಿ ಪಡೆಯುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಕಾಗೆಯೂ ಮಹಿಳೆಯ ಮಡಿಲಿಲ್ಲಿ ನಿರಾಳವಾಗಿ ಕಾಣಿಸಿಕೊಂಡಿದೆ. ಯಾವುದೇ ರೀತಿ ಹಾನಿ ಮಾಡದೆ ತನ್ನನ್ನು ಮುದ್ದಿಸಲು ಮತ್ತು ಮುದ್ದಾಡಲು ಅವಕಾಶ ಮಾಡಿಕೊಟ್ಟಿದೆ. ಕಾಗೆಗಳು ಸಾಮಾನ್ಯವಾಗಿ ಮನುಷ್ಯರನ್ನು ಕಂಡರೆ ದೂರ ಹಾರುತ್ತವೆ. ಆದರೆ ಇಲ್ಲಿ ಕಾಗೆ ಮಾತ್ರ ಮಹಿಳೆಯ ಮಡಿಲಲ್ಲಿ ಆರಾಮವಾಗಿ ಮಲಗಿದೆ.

ವಿಡಿಯೋ ನೋಡಿ:



ಮಗುವನ್ನು ರಂಜಿಸುವ ರೀತಿಯಲ್ಲಿ ತಮಾಷೆಯ ಶಬ್ದಗಳನ್ನು ಮಾಡುತ್ತಾ ಮಹಿಳೆಯೂ ಕಾಗೆಯ ಹೊಟ್ಟೆಗೆ ನಿಧಾನವಾಗಿ ಕಚಗುಳಿ ಇಡುವುದು ಕಂಡುಬಂದಿದೆ. ಆದರೆ ಕಾಗೆ ಹಾರಿ ಹೋಗುವ ಬದಲು, ಶಾಂತವಾಗಿ ತನ್ನ ಮಡಿಲಲ್ಲಿಯೇ ಇದ್ದು ಆನಂದಿಸುತ್ತಿರುವಂತೆ ಕಂಡುಬಂದಿದೆ. ಒಂದು ಹಂತದಲ್ಲಂತೂ ಮಹಿಳೆಯ ಬೆರಳುಗಳನ್ನು ತನ್ನ ಉಗುರುಗಳಿಂದ ಅತ್ಯಂತ ಮೃದುವಾಗಿ ಹಿಡಿದುಕೊಂಡಿದ್ದು ಯಾವುದೇ ರೀತಿ ನೋವು ಮಾಡದೇ ಕಾಗೆ ನಂಬಿಕೆ ಉಳಿಸಿಕೊಂಡಿದೆ.

Viral Video: ಬ್ಯಾಂಕ್‍ನಲ್ಲಿ ಹಣವಿಟ್ಟರೆ ಸುರಕ್ಷಿತ ಅಂದುಕೊಂಡಿದ್ದೀರಾ? ಗ್ರಾಹಕರ ದುಡ್ಡನ್ನೇ ಕದ್ದ ಕ್ಯಾಶಿಯರ್, ಮುಂದೇನಾಯ್ತು?

ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಆಕರ್ಷಣೆಯನ್ನು ಗಳಿಸಿದ್ದು, ಕಾಗೆ ಸಾಕು ಪ್ರಾಣಿಯಂತೆ ವರ್ತಿಸುವುದನ್ನು ನೋಡಿದ ಜನರು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಇಂತಹ ಕೆಲಸಗಳನ್ನು ಕೇವಲ ಭಾರತೀಯ ಅಮ್ಮಂದಿರು ಮಾತ್ರ ಮಾಡಲು ಸಾಧ್ಯ ಎಂಬ ಶೀರ್ಷಿಕೆ ಯೊಂದಿಗೆ ಈ ವಿಡಿಯೊ ಶೇರ್ ಮಾಡಲಾಗಿದೆ. ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಕಾಮೆಂಟ್ ಮಾಡಿದ್ದು ಬಳಕೆದಾರರೊಬ್ಬರು "ಕರುಣಾಮಯಿ ತಾಯಿ" ಎಂದು ಬರೆದಿದ್ದಾರೆ. ಮತ್ತೊಬ್ಬರು "ಮಹಿಳೆ ಹಾಗೂ ಕಾಗೆಯ ಭಾಂದವ್ಯ ಮೆಚ್ಚಲೇಬೇಕು" ಎಂದು ಪ್ರತಿಕ್ರಿಯೆ ನೀಡಿದ್ದಾರೆ.