ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಿಂತಿದ್ದ ರೈಲಿಗೆ ಸೀರೆ ಸೆರಗು ಕಟ್ಟಿ ಮಹಿಳೆಯ ರೀಲ್ಸ್: ಹಿಗ್ಗಾಮುಗ್ಗಾ ಝಾಡಿಸಿದ ನೆಟ್ಟಿಗರು; ವಿಡಿಯೊ ನೋಡಿ

Viral News: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು ಎನ್ನುವ ಉದ್ದೇಶದಿಂದ ಇಂದು ಕೆಲವರು ಪ್ರಾಣಕ್ಕೂ ಅಪಾಯ ತಂದುಕೊಳ್ಳುತ್ತಿದ್ದಾರೆ. ಲೈಕ್ಸ್, ವೀವ್ಸ್‌ಗಾಗಿ ಜೀವದ ಹಂಗು ತೊರೆದು ಹುಚ್ಚಾಟ ಮೆರೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮಹಿಳೆಯೊಬ್ಬಳು ನಿಂತಿದ್ದ ರೈಲಿಗೆ ಸೀರೆಯ ಸೆರಗು ಕಟ್ಟಿ ರೈಲ್ವೆ ಹಳಿಯ ಮೇಲೆ ಡ್ಯಾನ್ಸ್ ಮಾಡಿದ್ದಾಳೆ.

ರೀಲ್ಸ್ ಹುಚ್ಚು! ನಿಂತಿದ್ದ ರೈಲಿಗೆ ಸೀರೆ ಸೆರಗು ಕಟ್ಟಿ ಮಹಿಳೆಯ ಡ್ಯಾನ್ಸ್!

ನಿಂತಿದ್ದ ರೈಲಿಗೆ ಸೀರೆ ಪಲ್ಲು ಕಟ್ಟಿ ರೀಲ್ಸ್ ಮಾಡಿದ ಮಹಿಳೆ -

Profile
Pushpa Kumari Oct 4, 2026 10:03 PM

ನವದೆಹಲಿ, ಅ. 4: ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಬೇಕು ಎನ್ನುವ ಉದ್ದೇಶದಿಂದ ಇಂದು ಕೆಲವರು ಪ್ರಾಣಕ್ಕೂ ಕುತ್ತು ತಂದುಕೊಳ್ಳುತ್ತಿದ್ದಾರೆ. ಲೈಕ್ಸ್, ವೀವ್ಸ್‌ಗಾಗಿ ಜೀವದ ಹಂಗು ತೊರೆದು ಹುಚ್ಚಾಟ ಮೆರೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ  ಮಹಿಳೆಯೊಬ್ಬಳು ಮೂರ್ಖತನದಿಂದ ವರ್ತಿಸಿದ್ದಾಳೆ. ನಿಂತಿದ್ದ ರೈಲಿಗೆ ಸೀರೆಯ ಸೆರಗು ಕಟ್ಟಿ ರೈಲ್ವೆ ಹಳಿಯ ಮೇಲೆ ಡ್ಯಾನ್ಸ್ ಮಾಡಿದ್ದಾಳೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಮಹಿಳೆಯ ವರ್ತನೆ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

ವೈರಲ್ ಆಗಬೇಕು ಎನ್ನುವ ಉದ್ದೇಶದಿಂದ ಈ ರೀತಿಯ ಅಪಾಯಕಾರಿ ರೀಲ್ಸ್ ಮಾಡುವುದು ತಪ್ಪು, ಈಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಕಣ್ಣಿಗೆ ಗ್ಲಾಸ್ ಹಾಕಿ ಸೀರೆ ಧರಿಸಿದ್ದ ಮಹಿಳೆ ನಿಂತಿದ್ದ ರೈಲಿಗೆ ಸೀರೆ ಪಲ್ಲು ಕಟ್ಟಿ ಹಳಿಯ ಮೇಲೆ ನಿಂತು ರೀಲ್ಸ್‌ ಚಿತ್ರೀಕರಣ ಮಾಡಿದ್ದಾಳೆ.

ವಿಡಿಯೊ ನೋಡಿ:



ವೈರಲ್ ವಿಡಿಯೊದಲ್ಲಿ ಮಹಿಳೆ ಸೀರೆ ಮತ್ತು ಸನ್ ಗ್ಲಾಸ್ ಧರಿಸಿ ನಿಂತಿದ್ದು ರೈಲಿನ ಪಕ್ಕದಲ್ಲಿ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಈ ವಿಡಿಯೊ ಬಳಕೆದಾರರ ಟೀಕೆಗೆ ಗುರಿಯಾಗಿದೆ. 'ರೀಲ್' ಚಿತ್ರೀಕರಣಕ್ಕಾಗಿ ರೈಲು ಹಳಿಗಳನ್ನು ಬಳಸಿಕೊಂಡ ನಿರ್ಧಾರವನ್ನು ಹಲವರು ಪ್ರಶ್ನಿಸಿದ್ದಾರೆ. ಜನಪ್ರಿಯತೆ ಪಡೆಯುವ ಉದ್ದೇಶದಿಂದ ರೈಲು ಎಂಜಿನ್‌ನ ಹತ್ತಿರ ನಿಂತು ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ.

ವಾಹನ ಸಂಚರಿಸುತ್ತಿದ್ದಂತೆ ಬಿರುಕು ಬಿಟ್ಟು ರಸ್ತೆಯಿಂದ ಜಿನುಗಿತು ನೀರು! ಕಳಪೆ ಕಾಮಗಾರಿಯ ಎಫೆಕ್ಟ್‌

​ಅನೇಕ ನೆಟ್ಟಿಗರು ರೈಲ್ವೆ ಸೇವೆ ಸಚಿವಾಲಯವನ್ನು ಟ್ಯಾಗ್ ಮಾಡಿ, ನಿಯಮ ಉಲ್ಲಂಘಿಸಿದ ಈ ಮಹಿಳೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ರೈಲು ಹಳಿಗಳು ಮತ್ತು ರೈಲುಗಳ ಸುತ್ತಮುತ್ತಲಿನ ಪ್ರದೇಶಗಳು ಚಿತ್ರೀಕರಣಕ್ಕೆ ಸುರಕ್ಷಿತ ಸ್ಥಳಗಳಲ್ಲ. ರೈಲು ನಿಂತಂತೆ ಕಂಡು ಬಂದರೂ ಗಂಭೀರ ಅಪಾಯ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.