ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದುಬೈ ಉದ್ಯಮಿಯಿಂದ ಬಂಪರ್‌ ಆಫರ್‌: ಮದುವೆಯಾಗುವ ಉದ್ಯೋಗಿಗಳಿಗೆ 12.5 ಲಕ್ಷ ರುಪಾಯಿ ಉಡುಗೊರೆ

Viral News: ದುಬೈಯ ಕಂಪನಿಯೊಂದು ಉದ್ಯೋಗಿಗಳಿಗೆ ಬಂಪರ್ ಆಫರ್ ಘೋಷಣೆ ಮಾಡಿದೆ. ಉದ್ಯೋಗಿಗಳ ಅನುಕೂಲಕ್ಕಾಗಿ ಅಲ್ ಹಬ್ತೂರ್ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಖಲಫ್ ಅಹ್ಮದ್ ವಿಶೇಷ ಯೋಜನೆಯನ್ನು ಜಾರಿ ಮಾಡಿದ್ದಾರೆ‌. ಕಾರ್ಮಿಕರನ್ನು ಬೆಂಬಲಿಸುವ ನಿಟ್ಟಿನಲ್ಲಿ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಯುವ ಉದ್ಯೋಗಿ ಮದುವೆಯಾದರೆ 12.5 ಲಕ್ಷ ರುಪಾಯಿ (50,000 ದಿರ್ಹಂ) ಅನುದಾನ ನೀಡುವುದಾಗಿ ಘೋಷಿಸಿದ್ದಾರೆ.

ಮದುವೆಯಾಗುವ ಉದ್ಯೋಗಿಗಳಿಗೆ 12.5 ಲಕ್ಷ ರುಪಾಯಿ ಘೋಷಿಸಿದ ಕಂಪನಿ

ಸಾಂದರ್ಭಿಕ ಚಿತ್ರ -

Profile
Pushpa Kumari Jan 27, 2026 7:55 PM

ದುಬೈ, ಜ. 27: ಇತ್ತೀಚೆಗೆ ಎಷ್ಟೇ ಶಿಕ್ಷಣ ಪಡೆದರೂ ಉದ್ಯೋಗ ಗಿಟ್ಟಿಸಿಕೊಳ್ಳುವುದು ಕಷ್ಟ. ಅದರಲ್ಲೂ ಕಂಪನಿಗಳಲ್ಲಿ ಕೆಲಸ ಸಿಕ್ಕರೂ ಕಡಿಮೆ ವೇತನ, ಕೆಲಸದ ಒತ್ತಡ ಹೀಗೆ ನಾನಾ ಕಾರಣಗಳಿಂದ ಕಷ್ಟ ಅನುಭವಿಸುವವರಿದ್ದಾರೆ. ಅದೆಲ್ಲಕ್ಕಿಂತ ಭಿನ್ನವಾಗಿ ದುಬೈಯ ಕಂಪನಿಯೊಂದು ಉದ್ಯೋಗಿಗಳಿಗೆ ಬಂಪರ್ ಆಫರ್ ಘೋಷಣೆ ಮಾಡಿದೆ. ಉದ್ಯೋಗಿಗಳ ಕಲ್ಯಾಣಕ್ಕಾಗಿ ಅಲ್ ಹಬ್ತೂರ್ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಖಲಫ್ ಅಹ್ಮದ್ (Khalaf Ahmad) ವಿಶೇಷ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಕಾರ್ಮಿಕರನ್ನು ಬೆಂಬಲಿಸುವ ನಿಟ್ಟಿನಲ್ಲಿ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಯುವ ಉದ್ಯೋಗಿಗಳಿಗೆ ಮದುವೆಯಾಗಲು ನೆರವಾಗುವ ಮೂಲಕ ಗಮನ ಸೆಳೆದಿದ್ದಾರೆ. ಯುವ ಉದ್ಯೋಗಿಗಳಿಗೆ ‌12.5 ಲಕ್ಷ ರುಪಾಯಿ (50,000 ದಿರ್ಹಂ) 'ಮದುವೆ ಅನುದಾನ' ನೀಡುವುದಾಗಿ ಘೋಷಿಸಿದ್ದಾರೆ.

ದುಬೈ ಬಿಲಿಯನೇರ್ ಖಲಾಫ್ ಅಹ್ಮದ್ ಅಲ್ ಹಬ್ತೂರ್ ಈ ವರ್ಷ ವಿವಾಹವಾಗುವ ತಮ್ಮ ಕಂಪನಿಯ ಉದ್ಯೋಗಿಗಳಿಗೆ ಈ ಪ್ರಯೋಜನ ಸಿಗಲಿದೆ ಎಂದಿದ್ದಾರೆ. ಅವರು ಯುವ ಉದ್ಯೋಗಿಗಳ ಅನುಕೂಲಕ್ಕಾಗಿ ಈ ಯೋಜನೆ ಜಾರಿ ಮಾಡಿದ್ದಾರೆ.‌ ʼʼನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಎಮಿರಾಟಿ ಉದ್ಯೋಗಿಗಳು ಮದುವೆಯಾದರೆ 12.5 ಲಕ್ಷ ರೂಪಾಯಿ (50,000 ದಿರ್ಹಂ) 'ಮದುವೆ ಅನುದಾನ' ನೀಡುತ್ತೇವೆʼʼ ಅವರು ಪ್ರಕಟಿಸಿದ್ದಾರೆ.



ಯುಎಇಯಲ್ಲಿ ಯುವಜನರ ಕುಟುಂಬಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಈ ತಿಂಗಳ ಆರಂಭದಲ್ಲಿಯೇ 'ಮದುವೆ ಅನುದಾನ'ವನ್ನು ಘೋಷಿಸಿದ್ದಾರೆ. ಮಗು ಜನಿಸಿದ ಎರಡು ವರ್ಷಗಳಲ್ಲಿ ಆರ್ಥಿಕ ಸಹಾಯವನ್ನು ದ್ವಿಗುಣಗೊಳಿಸ‌ಲಾಗುವುದು ಎಂದು ಉದ್ಯಮಿ ಹೇಳಿದ್ದಾರೆ. ಅಲ್ ಹಬ್ತೂರ್ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಖಲಫ್ ಅಹ್ಮದ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಘೋಷಣೆ ಮಾಡಿದ್ದಾರೆ.

ಮಗುವಿನ ತೂಕಕ್ಕಿಂತ ಶಾಲಾ ಬ್ಯಾಗ್ ತೂಕವೇ ಹೆಚ್ಚಾಯಿತೇ? ಪೋಸ್ಟ್ ವೈರಲ್!

ತಮ್ಮ ಪೋಸ್ಟ್‌ನಲ್ಲಿ ಅಲ್ ಹಬ್ತೂರ್ ʼʼಮದುವೆ ಮತ್ತು ಮಕ್ಕಳು ಕೇವಲ ವೈಯಕ್ತಿಕ ವಿಚಾರ ಅಲ್ಲ, ಬದಲಿಗೆ ಅವು ಸಾಮಾಜಿಕ ಮತ್ತು ರಾಷ್ಟ್ರೀಯ ಜವಾಬ್ದಾರಿಗಳಾಗಿವೆ.‌ ಈ ನಿರ್ಧಾರದ ಹಿಂದೆ ಒಂದು ಸಾಮಾಜಿಕ ಕಳಕಳಿ ಇದೆ ಎಂದು ಅಲ್ ಹಬ್ತೂರ್ ವಿವರಿಸಿದ್ದಾರೆ. ಸುಭದ್ರ ಕುಟುಂಬವು ಸುಭದ್ರ ಸಮಾಜವನ್ನು ನಿರ್ಮಿಸುತ್ತದೆ. ಆ ಮೂಲಕ ರಾಷ್ಟ್ರವು ಬಲಿಷ್ಠವಾಗುತ್ತದೆ" ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

77 ವರ್ಷದ ಅಲ್ ಹಬ್ತೂರ್ ಗ್ರೂಪ್ ಮತ್ತು ದುಬೈ ನ್ಯಾಷನಲ್ ಇನ್ಶೂರೆನ್ಸ್ ಮತ್ತು ಮರುವಿಮೆ ಕಂಪನಿಯ ಅಧ್ಯಕ್ಷರು. ಅವರು ಕಮರ್ಷಿಯಲ್ ಬ್ಯಾಂಕ್ ಆಫ್ ದುಬೈನ ಮಾಜಿ ಅಧ್ಯಕ್ಷರಾಗಿದ್ದು, ಅಲ್ ಜಲೀಲಾ ಫೌಂಡೇಶನ್ ಟ್ರಸ್ಟಿಗಳ ಮಂಡಳಿಯಲ್ಲಿ ಉಪಾಧ್ಯಕ್ಷ ಸ್ಥಾನ ಹೊಂದಿದ್ದಾರೆ. ಇವರ ಉದ್ಯಮವು ರಿಯಲ್ ಎಸ್ಟೇಟ್, ಹೋಟೆಲ್‌, ಶಿಕ್ಷಣ ಮತ್ತು ಐಷಾರಾಮಿ ಕಾರುಗಳ ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಿದೆ.