ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜೈಪುರ ಮೆಟ್ರೋದ ಸ್ವಚ್ಛತಾ ನಿರ್ವಹಣೆಗೆ ರಷ್ಯನ್ ಮಹಿಳೆ ಫಿದಾ: ದುಬೈ ಮೆಟ್ರೋದಂತಿದೆ ಎಂದು ಪ್ರಶಂಸೆ

Viral News: ಭಾರತದ ಪ್ರವಾಸಿ ಸ್ಥಳಗಳ ಬಗ್ಗೆ ಈಗಾಗಲೇ ಹಲವಾರು ವಿದೇಶಿ ಪ್ರವಾಸಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇಲ್ಲಿನ ಸಾರಿಗೆ ಸೌಲಭ್ಯ, ಆನ್ ಲೈನ್ ಆ್ಯಪ್ ಗಳು, ವೈದ್ಯಕೀಯ ಸೇವೆ ಹೀಗೆ ಭಾರತದಲ್ಲಿ ವಿಶೇಷ ಸೌಲಭ್ಯಗಳ ಬಗ್ಗೆ ಕೊಂಡಾಡಿದ್ದಾರೆ.

ಜೈಪುರ ಮೆಟ್ರೋದ ಸ್ವಚ್ಛತಾ ನಿರ್ವಹಣೆಗೆ ರಷ್ಯನ್ ಮಹಿಳೆ ಮೆಚ್ಚುಗೆ

ಜೈಪುರ ಮೆಟ್ರೋದ ಸ್ವಚ್ಛತಾ ನಿರ್ವಹಣೆಗೆ ರಷ್ಯನ್ ಮಹಿಳೆಯರಿಂದ ಮೆಚ್ಚುಗೆ -

Profile
Pushpa Kumari Sep 27, 2026 7:59 PM

ಜೈಪುರ, ಸೆ. 27: ಭಾರತದ ಪ್ರವಾಸಿ ಸ್ಥಳಗಳ ಬಗ್ಗೆ ಈಗಾಗಲೇ ಹಲವು ವಿದೇಶಿ ಪ್ರವಾಸಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇಲ್ಲಿನ ಸಾರಿಗೆ ಸೌಲಭ್ಯ, ಕ್ವಿಕ್‌ ಕಮರ್ಷಿಯಲ್‌ ಆ್ಯಪ್, ಯುಪಿಐ ವ್ಯವಸ್ಥೆ, ವೈದ್ಯಕೀಯ ಸೇವೆ ಹೀಗೆ ಭಾರತದಲ್ಲಿನ ವಿಶೇಷ ಸೌಲಭ್ಯಗಳ ಬಗ್ಗೆ ಕೊಂಡಾಡಿದ್ದಾರೆ. ಇದೀಗ ರಷ್ಯನ್ ಮಹಿಳೆಯೊಬ್ಬರು ಭಾರತದ ಮೆಟ್ರೋ ಸೌಲಭ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಲ್ಲಿನ ಉತ್ತಮ ನಿರ್ವಹಣೆ ಹಾಗೂ ಸಿಬ್ಬಂದಿ ನಡವಳಿಕೆಗೆ ಫಿದಾ (Viral News) ಆಗಿದ್ದಾರೆ.

ಭಾರತದಲ್ಲಿ ಮೆಟ್ರೋ ಸೇವೆ ಆಧುನಿಕ ಮೂಲ ಸೌಕರ್ಯ, ಸ್ವಚ್ಛತೆ ಹಾಗೂ ಗುಣಮಟ್ಟದ ಸೌಲಭ್ಯಗಳಿಂದ ಗಮನ ಸೆಳೆದಿದೆ. ಇದು ಅಂತಾರಾಷ್ಟ್ರೀಯ ಪ್ರಯಾಣಿಕರಿಂದಲೂ ಪ್ರಶಂಸೆಯನ್ನು ಗಳಿಸುತ್ತಲೇ ಇದೆ. ಇದೀಗ ರಾಜಸ್ಥಾನದ ಜೈಪುರದಲ್ಲಿ ಮೆಟ್ರೋ ಸೇವೆಯನ್ನು ಮೊದಲ ಬಾರಿಗೆ ಅನುಭವಿಸಿದ ರಷ್ಯನ್ ಮಹಿಳೆ ಅಚ್ಚರಿಗೊಂಡಿದ್ದಾರೆ.

ವಿಡಿಯೊ ನೋಡಿ:

ವೆರಾ ಪ್ರೊಕೊಫೇವಾ ಎಂಬ ರಷ್ಯನ್ ಮಹಿಳೆ ತಮ್ಮ ಸ್ನೇಹಿತೆಯೊಂದಿಗೆ ಮೊದಲ ಬಾರಿಗೆ ರಾಜಸ್ಥಾನದ ಜೈಪುರಕ್ಕೆ ಆಗಮಿಸಿದ್ದರು. ಹವಾ ಮಹಲ್‌ಗೆ ತೆರಳಲು ಟಿಕೆಟ್ ಪಡೆದ ಅವರು, ಮೆಟ್ರೋ ನಿಲ್ದಾಣದ ಸ್ವಚ್ಛತೆ ಸಿಬ್ಬಂದಿಯ ನಡವಳಿಕೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ಲಿಪ್‌ನ ಆರಂಭದಲ್ಲಿ ಮೆಟ್ರೋ ನಿಲ್ದಾಣದಲ್ಲಿ ಸ್ನೇಹಿತೆಯೊಂದಿಗೆ ಮಾತನಾಡುತ್ತಾ ವೆರಾ ಪ್ರೊಕೊಫೇವಾ ಪ್ಲಾಟ್ ಫಾರ್ಮ್ ಕಡೆಗೆ ಧಾವಿಸುವುದು ಕಾಣಬಹುದು.

ಈ ಟ್ಯಾಕ್ಸಿಯಲ್ಲಿದೆ ಮಿನಿ ಮಾರ್ಟ್; ನೀವು ಪ್ರಯಾಣ ಮಾಡ್ತಾ ಶಾಪಿಂಗ್‌ ಮಾಡಬಹುದು

ಮೆಟ್ರೋ ರೈಲು ಹಾಗೂ ಪ್ಲಾಟ್‌ಫಾರ್ಮ್‌ನ ಸ್ವಚ್ಛತೆ ಮತ್ತು ಮೂಲಸೌಕರ್ಯಕ್ಕೆ ಈ ಇಬ್ಬರೂ ಮಹಿಳೆಯರು 10/10 ರೇಟಿಂಗ್ ನೀಡಿದ್ದಾರೆ. ಜೈಪುರ ಮೆಟ್ರೋದ ವ್ಯವಸ್ಥೆಯನ್ನು ಕಂಡ ವೆರಾ "ಇದು ನೋಡಲು ದುಬೈ ಮೆಟ್ರೋದಂತೆಯೇ ಇದೆ" ಎಂದು ಹೊಗಳಿದ್ದಾರೆ. ಈ ವಿಡಿಯೊಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ʼʼವಿದೇಶಿಗರು ನಮ್ಮ ದೇಶದ ಸೌಲಭ್ಯಗಳ ಬಗ್ಗೆ ಮಾತ ನಾಡುತ್ತಿರುವುದು ನಿಜಕ್ಕೂ ಹೆಮ್ಮೆʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.