ರೈಲಿನಲ್ಲಿ ಸಮೋಸ ಬುಟ್ಟಿ ಮೇಲೆ ಕಾಲಿಟ್ಟು ಕುಳಿತ ವ್ಯಾಪಾರಿ: ಆಹಾರ ಸುರಕ್ಷತೆ ಬಗ್ಗೆ ಮೂಡಿದೆ ಕಳವಳ
Viral Video: ಚಲಿಸುವ ರೈಲಿನಲ್ಲಿ ಸಮೋಸ ಮಾರಾಟಗಾರನೊಬ್ಬ ತಿಂಡಿಯ ಬುಟ್ಟಿಯ ಮೇಲೆಯೇ ಕಾಲುಗಳನ್ನು ಇಟ್ಟುಕೊಂಡು ಕುಳಿತುಕೊಂಡಿದ್ದ ದೃಶ್ಯವೊಂದು ವೈರಲ್ ಆಗಿದೆ. ಮಾರಾಟಗಾರನು ಸಮೋಸದ ಬುಟ್ಟಿಯ ಮೇಲೆ ತನ್ನ ಪಾದಗಳನ್ನು ಇಟ್ಟುಕೊಂಡು ಫೋನ್‌ನಲ್ಲಿ ಮಾತನಾಡುತ್ತ ಸಮಯ ಕಳೆದಿದ್ದಾನೆ.
ತಿಂಡಿಯ ಬುಟ್ಟಿಯ ಮೇಲೆ ಕಾಲಿಟ್ಟು ಕುಳಿತ ವ್ಯಾಪಾರಿ -
ದೆಹಲಿ, ಮೇ 27: ಇತ್ತೀಚೆಗೆ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಆಹಾರ ಗುಣಮಟ್ಟ ಹಾಗೂ ನೈರ್ಮಲ್ಯ ಕಾಪಾಡದೇ ಇರುವ ಬಗ್ಗೆ ಅನೇಕ ದೂರುಗಳು ಕೇಳಿಬರುತ್ತಿವೆ. ಇದೀಗ ರೈಲಿನಲ್ಲಿ ಸಮೋಸ ಮಾರಾಟಗಾರನೊಬ್ಬ ತಿಂಡಿಯ ಬುಟ್ಟಿಯ ಮೇಲೆ ಕಾಲುಗಳನ್ನು ಇಟ್ಟುಕೊಂಡು ಕುಳಿತುಕೊಂಡಿದ್ದ ದೃಶ್ಯವೊಂದು ವೈರಲ್ (Viral News) ಆಗಿದೆ. ಮಾರಾಟಗಾರನು ಸಮೋಸದ ಬುಟ್ಟಿಯ ಮೇಲೆ ತನ್ನ ಪಾದಗಳನ್ನು ಇಟ್ಟು ಕೊಂಡು ಫೋನ್‌ನಲ್ಲಿ ಮಾತನಾಡುತ್ತ ಸಮಯ ಕಳೆದಿದ್ದಾನೆ.
ರೈಲಿನೊಳಗೆ ಸಮೋಸ ಮಾರಾಟಗಾರನು ತಿಂಡಿಯ ಬುಟ್ಟಿಯ ಮೇಲೆ ಕಾಲುಗಳನ್ನು ಇಟ್ಟು ವಿಶ್ರಾಂತಿ ಪಡೆಯುತ್ತಿದ್ದಾನೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಹಲವರು ಆಹಾರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನು ಖರೀದಿಸಿ ತಿಂದವರಿಗೆ ಎಷ್ಟು ಅಸಹ್ಯ ಏನಿಸಿರಬೇಡ? ಬೇರೆಯವರ ಆರೋಗ್ಯ ಜತೆ ಆಟವಾಡುವವರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋ ನೋಡಿ:
🚨Train Shocker: Railway Vendor Caught Resting Leg Over Samosa Tray
— Ramesh Tiwari (@rameshofficial0) May 26, 2026
This viral video exposes a railway vendor casually resting his bare leg directly over a tray of samosas meant for passengers. This gross violation of basic hygiene is a serious health hazard pic.twitter.com/jRrzgXwb3Y
ಪ್ರವೇಶ ದ್ವಾರದ ಬಳಿ ಕುಳಿತಿದ್ದ ಮಾರಾಟಗಾರನು ಸಮೋಸಗಳ ಬುಟ್ಟಿಯ ಮೇಲೆ ತನ್ನ ಪಾದಗಳನ್ನು ಇಟ್ಟುಕೊಂಡು ಫೋನ್‌ನಲ್ಲಿ ಮಾತನಾಡುತ್ತರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಈ ಘಟನೆಯು ಮತ್ತೊಮ್ಮೆ ಪ್ರಯಾಣಿಕರ ಸುರಕ್ಷತೆ ಮತ್ತು ಆಹಾರದ ಗುಣಮಟ್ಟವನ್ನು ಪ್ರಶ್ನಿಸಿದೆ. ನಿಯಮಿತ ತಪಾಸಣೆಗಳ ಹೊರತಾಗಿಯೂ ಇಂತಹ ಮಾರಾಟಗಾರರು ರೈಲುಗಳ ಒಳಗೆ ಹೇಗೆ ಮುಕ್ತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅನೇಕರು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಧ್ಯರಾತ್ರಿ ಆಟೋದಲ್ಲಿ ಸಂಚರಿಸಿದ ಮಹಿಳೆ ಹೇಳಿದ್ದೇನು?
ಈ ದೃಶ್ಯವನನು ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿದ್ದಾರೆ. ರೈಲು ಪ್ರಯಾಣಿಕರು ಹೆಚ್ಚಾಗಿ ಆನ್‌ಬೋರ್ಡ್‌ನಲ್ಲಿ ಮಾರಾಟವಾಗುವ ತಿಂಡಿಗಳು ಮತ್ತು ಊಟಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದರೆ ಇಂತಹ ಗಲೀಜು ಆಹಾರ ಖರೀದಿಸಿದ ಪ್ರಯಾಣಿಕರ ಗತಿಯೇನು? ಎಂದು ಅನೇಕರು ಆಕ್ರೋಸ ವ್ಯಕ್ತಪಡಿಸಿದ್ದಾರೆ.
ಈ ಕ್ಲಿಪ್ ವೈರಲ್ ಆದ ನಂತರ, ರೈಲ್ವೆ ಅಧಿಕಾರಿಗಳು ತನಿಖೆ ಆರಂಭಿಸಿದರು. ವಿಡಿಯೊದಲ್ಲಿ ಕಂಡು ಬರುವ ವ್ಯಕ್ತಿಯು ರೈಲ್ವೆ ಇಲಾಖೆಯ ಅಧಿಕೃತ ಕ್ಯಾಟರಿಂಗ್ ಸಿಬ್ಬಂದಿ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆತ ರೈಲಿನಲ್ಲಿ ಕಾನೂನುಬಾಹಿರವಾಗಿ ವ್ಯಾಪಾರ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಮುಂದಿನ ದಿನದಲ್ಲಿ ಇಂತಹ ಘಟನೆ ತಪ್ಪಿಸಲು ಕ್ರಮಗಳನ್ನು ಬಲಪಡಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ನೆಟ್ಟಿಗರು ಹೇಳಿದ್ದೇನು?
ಈ ಬಗ್ಗೆ ನೆಟ್ಟಿಗರು ಕಮೆಂಟ್ ಮಾಡಿ ಅಸಮಾಧಾನ ತೋಡಿಕೊಂಡಿದ್ದಾರೆ. ಒಬ್ಬರು, ʼʼಇದಕ್ಕಾಗಿಯೆ ಜನರು ರೈಲುಗಳಲ್ಲಿ ಆಹಾರವನ್ನು ಖರೀದಿಸಲು ಹಿಂಜರಿಯುತ್ತಾರೆʼʼ ಎಂದಿದ್ದಾರೆ. ಮತ್ತೊಬ್ಬರು, ʼʼಈ ವ್ಯಕ್ತಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕುʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.