ಛೇ ಇದೆಂತಾ ಸ್ಥಿತಿ; ಮೂಲಭೂತ ಸೌಕರ್ಯವಿಲ್ಲದೆ ನದಿಯ ಮಧ್ಯೆ ಶವವನ್ನು ಹೊತ್ತು ಈಜಿದ ಗ್ರಾಮಸ್ಥರು!
Viral Video: ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ಮೂಲಭೂತ ಸೌಕರ್ಯ ಗಳ ಕೊರತೆಯಿಂದ ಇಲ್ಲಿನ ಜನರು ಪರದಾಡುವಂತೆ ಆಗಿದ್ದು ರಸ್ತೆ ಸಂಪರ್ಕ ಇಲ್ಲದೆ ಪ್ರವಾಹದ ನೀರಿನ ಮಧ್ಯೆಯೇ ಮೃತದೇಹವನ್ನು ಪ್ಲಾಸ್ಟಿಕ್ ಡ್ರಮ್ ಗಳ ಮೇಲೆ ಕಟ್ಟಿ ಸಾಗಿಸಿದ್ದಾರೆ. ಆಂಬ್ಯುಲೆನ್ಸ್ ಆ ಪ್ರದೇಶವನ್ನು ತಲುಪಲು ಸಾಧ್ಯವಾಗದೆ ಇರುವ ಕಾರಣ ಗ್ರಾಮಸ್ಥರು ಶವವನ್ನು ತಾವೇ ಜಲವೃತ ಗೊಂಡ ನೀರಿನಲ್ಲಿ ಹೊತ್ತು ಸಾಗಿದ್ದಾರೆ.
ಇಂಟರ್ ನೆಟ್ ಚಿತ್ರ -
ಭೋಪಾಲ್,ಆ.25: ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಇಲ್ಲಿನ ಜನರು ಪರದಾಡುವಂತೆ ಆಗಿದ್ದು ರಸ್ತೆ ಸಂಪರ್ಕ ಇಲ್ಲದೆ ಪ್ರವಾಹದ ನೀರಿನ ಮಧ್ಯೆಯೇ ಮೃತದೇಹವನ್ನು ಪ್ಲಾಸ್ಟಿಕ್ ಡ್ರಮ್ ಗಳ ಮೇಲೆ ಕಟ್ಟಿ ಸಾಗಿಸಿದ್ದಾರೆ. ಆಂಬ್ಯುಲೆನ್ಸ್ ಆ ಪ್ರದೇಶವನ್ನು ತಲುಪಲು ಸಾಧ್ಯವಾಗದೆ ಇರುವ ಕಾರಣ ಗ್ರಾಮಸ್ಥರು ಶವವನ್ನು ತಾವೇ ಜಲವೃತ ಗೊಂಡ ನೀರಿನಲ್ಲಿ ಹೊತ್ತು ಸಾಗಿದ್ದಾರೆ. ಈ ಮನಕಲಕುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗಿದೆ.
ನದಿ ನೀರು ತುಂಬಿ ಹೋಗಿದ್ದರಿಂದ ಗ್ರಾಮಸ್ಥರು ಎರಡು ಡ್ರಮ್‌ಗಳನ್ನು ಒಟ್ಟಿಗೆ ಕಟ್ಟಿ ಶವವನ್ನು ಅವುಗಳ ಮೇಲೆ ಇರಿಸಿ ಕೊಂಡೊಯ್ದಿದ್ದಾರೆ. ಈ ಘಟನೆಯು ಗ್ರಾಮೀಣ ಪ್ರದೇಶಗಳಲ್ಲಿನ ಮೂಲಭೂತ ಸೌಲಭ್ಯಗಳ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಉಕ್ಕಿ ಹರಿಯುವ ನದಿಗಳು ಮತ್ತು ಹಾನಿ ಗೊಳಗಾದ ರಸ್ತೆಗಳು ಸಂಚಾರಕ್ಕೆ ಅಡ್ಡಿಯಾಗಿವೆ.
ವಿಡಿಯೋ ನೋಡಿ:
बारिश-बाढ़ ने रोके रास्ते | शव को ड्रम पर रखकर पार कराई उफनाती नदी#Rewa #RewaNews #RewaMadhyaPradesh #HeavyRain #Flood #FloodSituation #RiverCrossing #RisingRiver #DeadBody #LastJourney #Monsoon #RuralIndia #GroundReality #RoadConnectivity #MadhyaPradesh pic.twitter.com/LBAKbxf1ds
— The लपेटा (@thelapeta) August 24, 2026
ರೇವಾ ಜಿಲ್ಲೆಯ ಜವಾ ತಹಸೀಲ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮಕ್ಕೆ ತೆರಳಲು ಸರಿಯಾದ ರಸ್ತೆ ಸಂಪರ್ಕ ವ್ಯವಸ್ಥೆ ಇಲ್ಲದೆ ಈ ಘಟನೆ ನಡೆದಿದೆ. ಬೇರೆ ದಿಕ್ಕು ತೋಚದೆ ಎರಡು ಖಾಲಿ ಪ್ಲಾಸ್ಟಿಕ್ ಡ್ರಮ್ ಕಟ್ಟಿ ಮೃತದೇಹವನ್ನು ಇಟ್ಟು ಪ್ರವಾಹದ ನೀರಿನಲ್ಲಿ ಸಾಗಿಸಿದ್ದಾರೆ. ಇಲ್ಲಿನ ಅಧಿಕಾರಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ನೀಡಿಲ್ಲ.
Viral Video: ಸಾರ್ವಜನಿಕರ ಮುಂದೆಯೇ ನದಿಗೆ ಕಸ ಎಸೆದ ದಂಪತಿ; ನಾಚಿಕೆಯಿಂದ ತಲೆ ತಗ್ಗಿಸಿದ ನಾಗರಿಕ ಸಮಾಜ
ನಾವು ಶಾಸಕರ ಕಡೆಯವರು, ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಇಲ್ಲಿನ ಅಧಿಕಾರಿಗಳು ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ವೀಡಿಯೊದಲ್ಲಿ, ಗ್ರಾಮಸ್ಥರು ಪ್ರವಾಹ ಪೀಡಿತ ರಸ್ತೆಯಲ್ಲಿ ನಿಂತಿರುವುದನ್ನು ಕಾಣಬಹುದು, ಆದರೆ ಮೃತದೇಹವನ್ನು ತಾತ್ಕಾಲಿಕವಾಗಿ ಕಟ್ಟಿದ ಡ್ರಮ್ ಮೇಲೆ ಇಡಲಾಗಿದೆ.
ರೇವಾ ಜಿಲ್ಲೆಯಲ್ಲಿ ಇಂತಹ ದುರಂತ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಜುಲೈ 4 ರಂದು ರಸ್ತೆ ಮತ್ತು ಅಂಬ್ಯುಲೆನ್ಸ್ ಸೌಲಭ್ಯವಿಲ್ಲದೆ, ಅನಾರೋಗ್ಯದಿಂದ ಬಳಲುತ್ತಿದ್ದ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರನ್ನು ಗ್ರಾಮಸ್ಥರು ಮಂಚದ ಮೇಲೆಯೇ ಹೊತ್ತುಕೊಂಡು ನೀರಿನಲ್ಲಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ಸಮಯಕ್ಕೆ ಸರಿಯಾಗಿ ವೈದ್ಯಕೀಯ ನೆರವು ಸಿಗದೆ ಮಾರ್ಗಮಧ್ಯದಲ್ಲೇ ಆ ಮಹಿಳೆ ಕೊನೆಯುಸಿರೆಳೆದಿದ್ದರು.