ಉತ್ತರ ಪತ್ರಿಕೆಯೇ ನಾಪತ್ತೆ, ಮರುಮೌಲ್ಯಮಾಪನಕ್ಕೆ ಅಡ್ಡಿ: ದ್ವಿತೀಯ ಪಿಯುಸಿ ಸಿಬಿಎಸ್ಇ ವಿದ್ಯಾರ್ಥಿ ಅಳಲು
ಮರುಮೌಲ್ಯ ಮಾಪನಕ್ಕೆಂದು ಉತ್ತರ ಪತ್ರಿಕೆಯನ್ನು ಕೇಳಲಾಗಿದ್ದು, ಅದರಲ್ಲಿ ಒಂದು ಉತ್ತರ ಪತ್ರಿಕೆ ನಾಪತ್ತೆಯಾಗಿದೆ ಎಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಸಾಮಾಜಿಕ ಮಾಧ್ಯಮದ ಮೂಲಕ ಅಳಲು ತೋಡಿಕೊಂಡಿದ್ದಾನೆ. ಈ ಘಟನೆ ದೆಹಲಿಯಲ್ಲಿ ನಡೆದಿದ್ದು, ಸಿಬಿಎಸ್ಇ ವಿದ್ಯಾರ್ಥಿ ತನಿಷ್ಕ್ ವ್ಯಾಟ್ಸ್ ಅವರ ಜೀವಶಾಸ್ತ್ರ ಉತ್ತರ ಪತ್ರಿಕೆ ಕಾಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಂಗ್ರಹ ಚಿತ್ರ -
ನವದೆಹಲಿ: ಸಿಬಿಎಸ್ಇ ವಿದ್ಯಾರ್ಥಿಯೊಬ್ಬನ (CBSE student) ಉತ್ತರ ಪತ್ರಿಕೆ ನಾಪತ್ತೆಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಮರುಮೌಲ್ಯ (Re-evaluation) ಮಾಪನಕ್ಕೆಂದು ಉತ್ತರ ಪತ್ರಿಕೆಯನ್ನು (Answer sheet missing) ಕೇಳಲಾಗಿದ್ದು, ಅದರಲ್ಲಿ ಒಂದು ವಿಷಯದ ಉತ್ತರ ಪತ್ರಿಕೆ ನಾಪತ್ತೆಯಾಗಿದೆ ಎಂದು ಸಿಬಿಎಸ್ಇಯ ದ್ವಿತೀಯ ಪಿಯುಸಿ (2nd puc) ವಿದ್ಯಾರ್ಥಿ ತನಿಷ್ಕ್ ವ್ಯಾಟ್ಸ್ ದೂರಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ (Viral news) ವಿಷಯ ಹಂಚಿಕೊಂಡ ಅವರು ಅಂಕಗಳಲ್ಲಿ ಗೊಂದಲ ಇದ್ದಿದ್ದರಿಂದ ಉತ್ತರ ಪತ್ರಿಕೆಗೆ ವಿನಂತಿ ಸಲ್ಲಿಸಲಾಗಿತ್ತು. ಅದರಲ್ಲಿ ಜೀವಶಾಸ್ತ್ರ ಉತ್ತರ ಪತ್ರಿಕೆ ನಾಪತ್ತೆಯಾಗಿದೆ ಎಂದು ಹೇಳಿದ್ದಾರೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿ ತನಿಷ್ಕ್ ವ್ಯಾಟ್ಸ್ ಅವರ ಜೀವಶಾಸ್ತ್ರ ಉತ್ತರ ಪತ್ರಿಕೆ ನಾಪತ್ತೆಯಾಗಿರುವುದರಿಂದ ಮರುಮೌಲ್ಯಮಾಪನಕ್ಕೆ ತೊಂದರೆಯಾಗಿದೆ ಎಂದು ಅವರ ತಂದೆ ಹೇಳಿಕೊಂಡಿದ್ದು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಕೊನೆ ಎಂದು? ಮುಂಬೈಯಲ್ಲಿ ಅಸಭ್ಯವಾಗಿ ವರ್ತಿಸಿದ ಆಟೋ ಚಾಲಕನ ವಿಡಿಯೊ ವೈರಲ್
ದೆಹಲಿಯ 12ನೇ ತರಗತಿಯ ವಿದ್ಯಾರ್ಥಿ ತನಿಷ್ಕ್ ವ್ಯಾಟ್ಸ್ ಅವರು ತಮ್ಮ ಸಿಬಿಎಸ್ಇ ಫಲಿತಾಂಶದ ಅಂಕಗಳಲ್ಲಿ ವ್ಯತ್ಯಾಸವಿರುವುದನ್ನು ಗಮನಿಸಿ ಉತ್ತರ ಪತ್ರಿಕೆಗೆ ವಿನಂತಿ ಮಾಡಿಕೊಂಡಿದ್ದನು. ಇದರಲ್ಲಿ ಅವರ ಜೀವಶಾಸ್ತ್ರ ಉತ್ತರ ಪತ್ರಿಕೆ ಕಾಣೆಯಾಗಿದೆ. ಮರುಮೌಲ್ಯಮಾಪನಕ್ಕಾಗಿ ಆರು ಉತ್ತರ ಪತ್ರಿಕೆಗಳನ್ನು ಕೇಳಲಾಗಿದ್ದು, ಇದರಲ್ಲಿ ಕೇವಲ ಐದು ಮಾತ್ರ ನೀಡಲಾಗಿದೆ. ಈ ಕುರಿತು ಅವರ ತಂದೆ ಸಚಿನ್ ದೂರು ನೀಡಿದ್ದು, ಸಿಬಿಎಸ್ಇ ತ್ವರಿತ ಕ್ರಮ ಕೈಗೊಂಡಿದೆ. ಆದರೆ ಇದರಿಂದಾಗಿ ಮರುಮೌಲ್ಯಮಾಪನ ಪ್ರಕ್ರಿಯೆ ವಿಳಂಬವಾಗಿದೆ ಎಂದು ಅವರು ತಿಳಿಸಿದ್ದಾರೆ.
ತನಿಷ್ಕ್ ಆರಂಭದಲ್ಲಿ ಖಾಲಿ ಅಂಕಪಟ್ಟಿ ಪಡೆದಿದ್ದಾರೆ. ಇದರಲ್ಲಿ ವಿಷಯವಾರು ಅಂಕಗಳನ್ನು ನೀಡಿರಲಿಲ್ಲ. ಹೀಗಾಗಿ ಉತ್ತರ ಪತ್ರಿಕೆಗೆ ವಿನಂತಿ ಮಾಡಲಾಗಿತ್ತು. ಅಂಕಪಟ್ಟಿಯ ಆರಂಭಿಕ ದಾಖಲೆಯಲ್ಲಿ ಮೂರು ವಿಷಯಗಳ ಹೆಸರುಗಳು ಮತ್ತು ಸ್ಥಾನಿಕ ಶ್ರೇಣಿಗಳನ್ನು ಹೊಂದಿದ್ದು, ಕೆಳಭಾಗದಲ್ಲಿ "RL" ಉಲ್ಲೇಖಿಸಲಾಗಿತ್ತು. ಇದರ ಅರ್ಥ ಫಲಿತಾಂಶ ಮತ್ತೆ ಪ್ರಕಟಿಸಲಾಗುವುದು ಎಂಬುದಾಗಿದೆ.
CBSE Issues Missing Answer Sheet After Class 12 Student's Complaint Goes Viral#cbsehttps://t.co/sUcM73AB9I
— Jaano Junction (@JaanoJunction) June 6, 2026
ಈ ಕುರಿತು ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಸಮಸ್ಯೆಯನ್ನು ಪರಿಹರಿಸಲಾಗಿದೆ. ನಾಪತ್ತೆಯಾಗಿದ್ದ ಜೀವಶಾಸ್ತ್ರದ ಉತ್ತರ ಪತ್ರಿಕೆಯನ್ನು ಈಗ ವಿದ್ಯಾರ್ಥಿಗೆ ನೀಡಲಾಗಿದೆ. ಫಲಿತಾಂಶಗಳ ಘೋಷಣೆಯ ಐದು ದಿನಗಳ ಅನಂತರ ಮೇ 18 ರಂದು ಸರಿಪಡಿಸಿದ ಅಂಕಪಟ್ಟಿಯನ್ನು ಕೂಡ ನೀಡಿರುವುದಾಗಿ ಅವರು ಹೇಳಿದ್ದಾರೆ.
ತನಿಷ್ಕ್ ಅವರು 12ನೇ ತರಗತಿ ಪರೀಕ್ಷೆಗಳಲ್ಲಿ ಶೇಕಡಾ 81 ಅಂಕಗಳನ್ನು ಗಳಿಸಿದ್ದು, ಆರಂಭದಲ್ಲಿ ಅಂಕಪಟ್ಟಿಯಲ್ಲಿ ಈ ಕುರಿತು ಉಲ್ಲೇಖಗಳು ಇಲ್ಲದೇ ಇದ್ದುದರಿಂದ ಕುಟುಂಬ ಕಳವಳಗೊಂಡಿತ್ತು.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ತನಿಷ್ಕ್ ತಂದೆ ಸಚಿನ್, ಹಲವಾರು ಬಾರಿ ಶಾಲೆಗೆ ಭೇಟಿ ನೀಡಿದ್ದೇನೆ. ಅಧಿಕಾರಿಗಳನ್ನು ಸಂಪರ್ಕಿಸಿದೆ. ಆದರೆ ಯಾವುದೇ ಪರಿಹಾರ ಸಿಗಲಿಲ್ಲ. ಸುಮಾರು ಒಂದು ವಾರದ ಬಳಿಕ ಪರಿಷ್ಕೃತ ಅಂಕಪಟ್ಟಿಯನ್ನು ನೀಡಲಾಯಿತು. ಎಲ್ಲಾ ಆರು ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳಿಗಾಗಿ ಅರ್ಜಿ ಸಲ್ಲಿಸಿದಾಗ ಮರುಮೌಲ್ಯಮಾಪನದಲ್ಲಿ ಸಮಸ್ಯೆ ಕಂಡು ಬಂದಿದೆ. ಇದರಲ್ಲಿ ಜೀವಶಾಸ್ತ್ರದ ಉತ್ತರ ಪತ್ರಿಕೆ ಕಾಣೆಯಾಗಿದ್ದು, ಕೇವಲ ಐದು ಉತ್ತರ ಪತ್ರಿಕೆಗಳು ಮಾತ್ರ ಲಭ್ಯವಾಗಿದ್ದವು. ಅರ್ಜಿ ಸಲ್ಲಿಸಲು ಜೂನ್ 6 ಕೊನೆಯ ದಿನವಾಗಿದ್ದರಿಂದ ಎಲ್ಲಾ ವಿಷಯಗಳಿಗೆ ಮರುಮೌಲ್ಯಮಾಪನವನ್ನು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.
ವಿದ್ಯಾರ್ಥಿಗೆ ಮರುಮೌಲ್ಯಮಾಪನದ ಹಕ್ಕನ್ನು ಸಂಪೂರ್ಣವಾಗಿ ನೀಡಲು ಎಲ್ಲಾ ಉತ್ತರ ಪತ್ರಿಕೆಗಳು ಕೊಡಿಸುವಂತೆ ಅವರು ಸಿಬಿಎಸ್ಇ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.