ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಕುಸಿದು ಬಿದ್ದು ಎಸ್‌ಒಜಿ ಅಧಿಕಾರಿ ಸಾವು; ಕೊನೆ ಕ್ಷಣದ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

Viral News: ಇತ್ತೀಚೆಗೆ ವರ್ಕೌಟ್ ಮಾಡುವಾಗ ಇದ್ದಕ್ಕಿದ್ದಂತೆ ಕುಸಿದು ಬೀಳುವುದು, ಹೃದಯಾಘಾತ ವಾಗುವುದು ಹೀಗೆ ಅನೇಕ ಘಟನೆಗಳು ಕಂಡು ಬಂದಿವೆ‌. ಇದೀಗ ಉತ್ತರಾಖಂಡ್‌ ಚಂಪಾವತ್ ಜಿಲ್ಲೆಯ 38 ವರ್ಷದ ಸ್ಪೆಷಲ್ ಆಪರೇಷನ್ ಗ್ರೂಪ್ ಅಧಿಕಾರಿವೊಬ್ಬರು ವರ್ಕೌಟ್ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಜಿಮ್‌ನಲ್ಲಿದ್ದ ಜನರು ತ್ವರಿತವಾಗಿ ಸಮಯ ಪ್ರಜ್ಞೆ ಮೆರೆದಿದ್ದು ಅವರನ್ನು ಚಿಕಿತ್ಸೆ ಗಾಗಿ ಖತಿಮಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದಾಗ್ಯೂ, ಪರೀಕ್ಷೆಯ ನಂತರ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.

ವರ್ಕೌಟ್ ಮಾಡುವಾಗ ಕುಸಿದು ಬಿದ್ದು ಎಸ್‌ಒಜಿ ಅಧಿಕಾರಿ ಸಾವು!

ವರ್ಕೌಟ್ ಮಾಡುವಾಗ ಕುಸಿದು ಬಿದ್ದು ಎಸ್‌ಒಜಿ ಅಧಿಕಾರಿ ಸಾವು -

Profile
Pushpa Kumari Jun 23, 2026 2:48 PM

​ಉತ್ತರಾಖಂಡ್‌,ಜೂ. 23: ಇತ್ತೀಚೆಗೆ ತೂಕ ಇಳಿಸಿಕೊಳ್ಳಲು ಜನರು ಜಿಮ್, ವರ್ಕೌಟ್ ಎಂದು ನಾನಾ ಸಾಹಸಕ್ಕೆ ಕೈ ಹಾಕುತ್ತಲೇ ಇರುತ್ತಾರೆ.‌ ಆದರೆ ಇತ್ತೀಚೆಗೆ ವರ್ಕೌಟ್ ಮಾಡುವಾಗ ಇದ್ದಕ್ಕಿದ್ದಂತೆ ಕುಸಿದು ಬೀಳುವುದು,ಹೃದಯಾಘಾತವಾಗುವುದು ಹೀಗೆ ಅನೇಕ ಘಟನೆಗಳು ಕಂಡು ಬಂದಿವೆ‌. ಇದೀಗ ಉತ್ತರಾ ಖಂಡ್‌ ಚಂಪಾವತ್ ಜಿಲ್ಲೆಯ 38 ವರ್ಷದ ಸ್ಪೆಷಲ್ ಆಪರೇಷನ್ ಗ್ರೂಪ್ ಅಧಿಕಾರಿವೊಬ್ಬರು ವರ್ಕೌಟ್ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಜಿಮ್‌ನಲ್ಲಿದ್ದ ಜನರು ತ್ವರಿತವಾಗಿ ಸಮಯ ಪ್ರಜ್ಞೆ ಮೆರೆದಿದ್ದು ಅವರನ್ನು ಚಿಕಿತ್ಸೆಗಾಗಿ ಖತಿಮಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದಾಗ್ಯೂ, ಪರೀಕ್ಷೆಯ ನಂತರ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.

ಬನ್‌ಬಸಾದ ಸ್ಥಳೀಯ ಫಿಟ್‌ನೆಸ್ ಸೆಂಟರ್ ನಲ್ಲಿ ಈ ಘಟನೆ ನಡೆದಿದೆ. ವರ್ಕೌಟ್ ಮಾಡುತ್ತಿದ್ದಾಗ ಗಿರೀಶ್ ಅವರಿಗೆ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರಾಗಿದ್ದು ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಆದರೆ ಸಾವಿಗೆ ನಿಖರ ಕಾರಣ ಏನೆಂಬುದು ವೈದ್ಯಕೀಯ ವರದಿ ಬಂದ ಬಳಿಕವಷ್ಟೇ ಅಧಿಕೃತವಾಗಿ ತಿಳಿಯಬೇಕಿದೆ. ಈ ಆಘಾತಕಾರಿ ಘಟನೆಯಿಂದ ಅವರ ಕುಟುಂಬ, ಸಹೋದ್ಯೋಗಿಗಳು ಮತ್ತು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.

ವಿಡಿಯೋ ನೋಡಿ:



ಗಿರೀಶ್ ಭಟ್ ಎಂದು ಗುರುತಿಸಲಾದ ಅಧಿಕಾರಿ ಚಂಪಾವತ್ SOG ಘಟಕದಲ್ಲಿ ಸೇವೆ ಸಲ್ಲಿ ಸುತ್ತಿದ್ದರು. ಅದೇ ರೀತಿ ಜಿಲ್ಲೆಯಲ್ಲಿ ಕಾನೂನು ಜಾರಿ ಚಟುವಟಿಕೆಗಳಿಗೆ ಅವರ ಸಮರ್ಪಣೆ ಆಗಾಧ ವಾಗಿತ್ತು. ಮೂಲತಃ ಪಿಥೋರಗಢ ಜಿಲ್ಲೆಯವರಾದ ಭಟ್ ನಂತರ ಬನ್‌ಬಾಸಾದಲ್ಲಿ ನೆಲೆಸಿದ್ದರು. ಅವರ ಪತ್ನಿ ಮತ್ತು ಇಬ್ಬರು ಪುತ್ರರನ್ನು ಆಗಲಿದ್ದಾರೆ

Viral Video: ಮೈ ಜುಮ್ಮೆನಿಸುವ ದೃಶ್ಯ; ಲಂಡನ್‌ನ ಕಟ್ಟಡದ ಮೇಲಿಂದ ಬಿದ್ದ ಮಗುವನ್ನು 'ಕ್ಯಾಚ್' ಹಿಡಿದು ಜೀವ ಉಳಿಸಿದ ಭಾರತೀಯ

ಬನ್ಬಾಸಾದ ಶಾರದಾ ಘಾಟ್ ಸ್ಮಶಾನದಲ್ಲಿ ಅಧಿಕಾರಿಯ ಅಂತಿಮ ವಿಧಿಗಳನ್ನು ಪೂರ್ಣ ಗೌರವ ಗಳೊಂದಿಗೆ ನಡೆಸಲಾಯಿತು. ಪೊಲೀಸ್ ಅಧಿಕಾರಿಗಳು, ಸ್ಥಳೀಯ ನಿವಾಸಿಗಳು ಸಾಮಾಜಿಕ ಮತ್ತು ರಾಜಕೀಯ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನರು ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿದ್ದರು.