ಹೆತ್ತಮ್ಮನೇ ದೂರ ಮಾಡಿದ ಮೇಲೆ ಗೊಂಬೆಯೇ ಕೋತಿ ಮರಿಗೆ ಆಶ್ರಯ ; ಕಣ್ಣಂಚಲ್ಲಿ ನೀರು ತರಿಸುವಂತಿದೆ ಈ ವಿಡಿಯೋ
Viral Video: ಇಲ್ಲೊಂದು ಪುಟ್ಟ ಮಂಗವೊಂದು ತಾಯಿಯಿಂದ ದೂರವಾಗಿದ್ದು ಬೊಂಬೆಯನ್ನೆ ತಾಯಿ ಎಂದು ಭಾವಿಸಿ ಕೊಂಡು ಬದುಕುತ್ತಿದೆ. ಇಚಿಕಾವಾ ಸಿಟಿ ಮೃಗಾಲಯದ ಏಳು ತಿಂಗಳ ಪುಟ್ಟ ಮಂಗ ಹುಟ್ಟಿದ ಕೂಡಲೇ ತಾಯಿಯಿಂದ ದೂರವಾಗಿದ್ದು ಒಂಟಿಯಾಗಿ ಬದುಕುತ್ತಿದೆ. ಇದರ ದೃಶ್ಯವು ಪ್ರಪಂಚದಾದ್ಯಂತದ ಪ್ರಾಣಿ ಪ್ರಿಯರ ಕಣ್ಣು ಒದ್ದೆಯಾಗುವಂತೆ ಮಾಡಿದೆ.
ಆಟಿಕೆಯನ್ನು ತಾಯಿಯಾಗಿ ಸ್ವೀಕರಿಸಿದ ಮರಿ ಪಂಚ್ -
ಜಪಾನ್,ಫೆ.20: ಅಮ್ಮ ಮತ್ತು ಮಗುವಿನ ಸಂಬಂಧವು ಜಗತ್ತಿನಲ್ಲಿ ಸ್ವಾರ್ಥ ಇಲ್ಲದೆ ಇರುವಂತದ್ದು. ಅದು ಮನುಷ್ಯರಾಗಲಿ ಅಥವಾ ಪ್ರಾಣಿಗಳೆ ಆಗಿರಲಿ. ಇದೊಂದು ಭಾವನಾತ್ಮಕ ಬೆಸುಗೆಯಾಗಿದ್ದು ತಾಯಿ ಮಗುವಿನ ಸಂಬಂಧಕ್ಕೆ ಬೆಲೆ ಕಟ್ಟಲಾಗದು. ಆದರೆ ಇಲ್ಲೊಂದು ಪುಟ್ಟ ಕೋತಿ ಮರಿಯೊದು (Monkey Punch) ತಾಯಿಯಿಂದ ದೂರವಾಗಿದ್ದು ಬೊಂಬೆಯನ್ನೇ ತಾಯಿ ಎಂದು ಭಾವಿಸಿಕೊಂಡು ಬದುಕುತ್ತಿದೆ. ಇಚಿಕಾವಾ ಸಿಟಿ ಮೃಗಾಲಯದ ಏಳು ತಿಂಗಳ ಪುಟ್ಟ ಕೋತಿ ಹುಟ್ಟಿದ ಕೂಡಲೇ ತಾಯಿಯಿಂದ ದೂರವಾಗಿದ್ದು ಒಂಟಿಯಾಗಿ ಬದುಕುತ್ತಿದೆ. ಇದರ ದೃಶ್ಯವು ಪ್ರಪಂಚದಾದ್ಯಂತದ ಪ್ರಾಣಿ ಪ್ರಿಯರ ಕಣ್ಣು ಒದ್ದೆಯಾಗುವಂತೆ ಮಾಡಿದೆ.
ಜಪಾನ್‌ನ ಇಚಿಕಾವಾ ಸಿಟಿ ಮೃಗಾಲಯದಲ್ಲಿ, ಏಳು ತಿಂಗಳ ವಯಸ್ಸಿನ ಪಂಚ್ ಎಂಬ ಮರಿಯನ್ನು ಅದರ ತಾಯಿಯು ತಿರಸ್ಕಾರ ಮಾಡಿತ್ತು. ಈ ಅನಾಥ ಮರಿಯನ್ನು ಒಂಟಿಯಾಗಿ ಬಿಟ್ಟುಹೋಗಿದ್ದು ಅಲ್ಲಿನ ಸಿಬ್ಬಂದಿಯೂ ಅದಕ್ಕೆ ಸ್ವಾಂತನ ನೀಡಲು ಗೊಂಬೆಯನ್ನು ನೀಡಿದ್ದಾರೆ. ಈ ಬೊಂಬೆಯನ್ನೇ ತನ್ನ ತಾಯಿ ಎಂದು ಭಾವಿಸಿದ ಪಂಚ್ ಬದುಕು ಸಾಗಿಸಿದೆ.
ವಿಡಿಯೋ ನೋಡಿ:
Meet Punch, a monkey in a Japanese zoo with a sad story. His mother left him when he was a baby, so caretakers raised him. He struggled to live with other monkeys. Staff gave him a soft toy for comfort, and now he holds it close, spending most of his time alone. pic.twitter.com/hQxptQ8kZs
— The Page Z (@ThePageZ_) February 16, 2026
ಜುಲೈ 2025 ರಲ್ಲಿ ಜನಿಸಿದ ಪಂಚ್ ಅನ್ನು ತಾಯಿಯೂ ಹುಟ್ಟಿದ ಸ್ವಲ್ಪ ಸಮಯದಲ್ಲೆ ತಿರಸ್ಕರಿಸಿತು. ಮರಿಯನ್ನು ಸಮಾಧಾನ ಪಡಿಸಲು, ಮೃಗಾಲಯದ ಪಾಲಕರು ಪ್ಲಶ್ ಒರಾಂಗುಟನ್ ಆಟಿಕೆಯನ್ನು ನೀಡಿದರು. ಅದು ಬೇಗನೆ ಆ ಗೊಂಬೆಯ ಜೊತೆ ಬೆರೆಯಲು ಆರಂಭ ಮಾಡಿದೆ. ಮರಿ ಮಕಾಕ್ ಆಟಿಕೆಯನ್ನು ಎಲ್ಲೆಡೆ ಕೊಂಡೊಯ್ದಿತು, ಮಲಗಿರುವಾಗ ಅದನ್ನು ಹಿಡಿದುಕೊಂಡು ಬಿಗಿಯಾಗಿ ತಬ್ಬಿಕೊಳ್ಳಲು ಪ್ರಾರಂಭಿಸಿತು.
viral video: ಬಾಂಗ್ಲಾದಲ್ಲಿ ನಿಲ್ಲದ ದೌರ್ಜನ್ಯ; ಹಿಂದೂ ಶಿಕ್ಷಕನ ಮನೆಗೆ ಬೆಂಕಿ
ಈ ದೃಶ್ಯ ನೋಡುಗರ ಕರುಳು ಹಿಂಡುವಂತಿದೆ. ಬೊಂಬೆಯ ಜೊತೆಗಿನ ಜೀವನ ಕೇವಲ ಸಾಂತ್ವನ ಕ್ಕಾಗಿತ್ತೇ ಹೊರತು, ಪಂಚ್ ಇತರ ಮಂಗಗಳ ಜೊತೆಗೆ ಬದುಕುವುದು ಅನಿವಾರ್ಯವಾಗಿತ್ತು. ಹಾಗಾಗಿ ಪಾಲಕರು ಅದನ್ನು ಮೃಗಾಲಯದ 'ಮಂಕಿ ಮೌಂಟೇನ್' ಎಂಬ ದೊಡ್ಡ ಆವರಣಕ್ಕೆ ಕೊಂಡೊಯ್ದರು.
ಆರಂಭದಲ್ಲಿ ಅದಕ್ಕೆ ಬೆರೆಯಲು ಕಷ್ಟ ವಾದರೂ ಈಗ ಯುವ ಮಂಗಗಳೊಂದಿಗೆ ತಮಾಷೆಯ ಸಂವಹನದಲ್ಲಿ ತೊಡಗಿದ್ದು, ಅವುಗಳ ಮೇಲೆ ಹತ್ತುವುದು, ಉರುಳುವುದು ಮಾಡುತ್ತಿದೆ. ಪಂಚ್ ತನ್ನ ಬೊಂಬೆಯನ್ನು ಬದಿಗಿಟ್ಟು, ತನ್ನದೇ ಇತರ ಮರಿಗಳ ಜೊತೆ ಸಮಯ ಕಳೆಯುತ್ತಿದ್ದಾನೆ.