ಅಂತ್ಯಕ್ರಿಯೆ ನಡೆಯುವಾಗಲೇ ಯುವಕನಿಗೆ ಬಂತು ಜೀವ ; ಪವಾಡಕ್ಕೆ ಗ್ರಾಮಸ್ಥರು ಶಾಕ್!
Viral News: ಮೃತ ವ್ಯಕ್ತಿ ಎದ್ದು ಕುಳಿತರೇ ಹೇಗಿರಬೇಡ? ನಿಜಕ್ಕೂ ಊಹಿಸಲು ಅಸಾಧ್ಯ..ಆದರೆ ಇಂತಹ ಪವಾಡ ಘಟನೆಯೊಂದು ಲಕ್ನೋದಲ್ಲಿ ನಡೆದಿದೆ. 20 ವರ್ಷದ ಯುವಕನೊಬ್ಬ ವೈದ್ಯರೇ ಮೃತ ಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಆದರೆ ಯುವಕ ಅಂತ್ಯಕ್ರಿಯೆ ವೇಳೆ ಜೀವಂತ ಇರುವುದು ತಿಳಿದು ಬಂದಿದೆ. ಈ ಘಟನೆ ಇಡೀ ಕುಟುಂಬವನ್ನೇ ಅಚ್ಚರಿ ಗೊಳಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಸಂಗ್ರಹ ಚಿತ್ರ -
ಲಕ್ನೋ,ಮೇ 7: ವ್ಯಕ್ತಿ ಮೃತಪಟ್ಟಿದ್ದಾನೆಂದು ತಿಳಿದು ಶವ ಸಂಸ್ಕಾರಕ್ಕೆ ಕೊಂಡೊಯ್ಯುವಾಗ ಮೃತ ವ್ಯಕ್ತಿ ಎದ್ದು ಕುಳಿತರೇ ಹೇಗಿರಬೇಡ? ನಿಜಕ್ಕೂ ಊಹಿಸಲು ಅಸಾಧ್ಯ..ಆದರೆ ಇಂತಹ ಪವಾಡ ಘಟನೆಯೊಂದು ಲಕ್ನೋದಲ್ಲಿ ನಡೆದಿದೆ. 20 ವರ್ಷದ ಯುವಕನೊಬ್ಬ ವೈದ್ಯರೇ ಮೃತ ಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಆದರೆ ಯುವಕ ಅಂತ್ಯಕ್ರಿಯೆ ವೇಳೆ ಜೀವಂತ ಇರುವುದು ತಿಳಿದು ಬಂದಿದೆ. ಈ ಘಟನೆ ಇಡೀ ಕುಟುಂಬವನ್ನೇ ಅಚ್ಚರಿಗೊಳಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗಿದೆ.
ಜುಲೈ 2019 ರಲ್ಲಿ ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದೆ. ಅಂತ್ಯಕ್ರಿಯೆಯ ಮೆರವಣಿಗೆ ನಡೆಯುವ ಸಂದರ್ಭದಲ್ಲಿ ವ್ಯಕ್ತಿಯು ಮತ್ತೆ ಜೀವಂತವಾಗುವ ಮೂಲಕ ಪವಾಡ ಸದೃಶವೇ ನಡೆದಿದೆ. ಜೂನ್ 21 ರಂದು ಯುವಕ ನೊಬ್ಬನಿಗೆ ಅಪಘಾತವಾಗಿದ್ದು ನಂತರ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವು ದಿನಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಈತನ ಚಿಕಿತ್ಸೆಗಾಗಿ ಮನೆಯವರು ಸುಮಾರು 7 ಲಕ್ಷ ರೂಪಾಯಿ ಖರ್ಚು ಮಾಡಿದ್ದರು.
Viral News: ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!
ಇನ್ನು ಚಿಕಿತ್ಸೆಗೆ ಹೆಚ್ಚಿನ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲ ಎಂದು ಅವರು ಆಸ್ಪತ್ರೆಗೆ ತಿಳಿಸಿದ ನಂತರ, ವೈದ್ಯರು ಯುವಕ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಯುವಕನನ್ನು 20 ವರ್ಷದ ಮೊಹಮ್ಮದ್ ಫರ್ಖಾನ್ ಎಂದು ಗುರುತಿಸಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಈತ ಮೃತ ಪಟ್ಟಿರುವುದಾಗಿ ಘೋಷಿಸಿ ಅಂತ್ಯಕ್ರಿಯೆಗಾಗಿ ಅವರ ಕುಟುಂಬಕ್ಕೆ ಹಿಂತಿರುಗಿಸಲಾಗಿತ್ತು.
ಕುಟುಂಬವು ಅಂತ್ಯಕ್ರಿಯೆ ಸಮಾರಂಭವನ್ನು ಆಯೋಜಿಸಲು ಆತನನ್ನು ಸಮಾಧಿ ಮಾಡಲು ಗುಂಡಿ ತೋಡಿದ್ದರು,.ಆದರೆ ಇಲ್ಲಿ ನಡೆದದ್ದೇ ಬೇರೆ, ಹಠಾತ್ತನೆ ಯುವಕನ ದೇಹದಲ್ಲಿ ಚಲನೆ ಕಂಡುಬಂದಿದೆ. ಆ ಕೂಡಲೇ ಫರ್ಖಾನ್ ಅವರನ್ನು ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಇಲ್ಲಿ, ವೈದ್ಯರು ಅವರ ನಾಡಿಮಿಡಿತ, ರಕ್ತದೊತ್ತಡ ಪರಿಶೀಲನೆ ನಡೆಸಿದಾಗ ಯುವಕ ಜೀವಂತ ಇರುವುದು ಕಂಡು ಬಂದಿದೆ. ಹೀಗಾಗಿ ಯುವಕನನ್ನು ವೆಂಟಿ ಲೇಟರ್‌ಗೆ ಸ್ಥಳಾಂತರಿಸಿದರು. ಆತನಿಗೆ 'ಬ್ರೈನ್ ಡೆಡ್' ಆಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯ ಈ ಬೇಜವಾಬ್ದಾರಿತನದ ವರ್ತನೆಯ ಬಗ್ಗೆ ಲಕ್ನೋ ಮುಖ್ಯ ವೈದ್ಯಕೀಯ ಅಧಿಕಾರಿ (CMO) ತನಿಖೆಗೆ ನಿರ್ದೇಶನ ನೀಡಿದ್ದಾರೆ..