ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಚಲಿಸುತ್ತಿರುವ ಬೈಕ್‌ನಲ್ಲಿ ಫುಲ್‌ ಮೂಡ್‌ನಲ್ಲಿ ಜೋಡಿಯ ರೊಮ್ಯಾನ್ಸ್! ವಿಡಿಯೊ ವೈರಲ್‌

ಸುಹಾಗ್‌ನಗರಿ ಫಿರೋಜಾಬಾದ್‌ನ ಆಗ್ರಾ-ಕಾನ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚೆಗೆ ಯುವಕ ಮತ್ತು ಯುವತಿ ಚಲಿಸುವ ಬೈಕ್‌ನಲ್ಲಿ ರೊಮ್ಯಾನ್ಸ್ ಮಾಡಿದ್ದಾರೆ. ಈ ದೃಶ್ಯವನ್ನು ದಾರಿಹೋಕರೊಬ್ಬರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ವೈರಲ್(Viral News) ಆಗಿದೆ ಮತ್ತು ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ದಂಪತಿಗೆ 53,000 ರೂ.ಗಳ ದಂಡ ವಿಧಿಸಿದ್ದಾರೆ.

ಬೈಕ್‌ನಲ್ಲೇ ಜೋಡಿಯ ರೊಮ್ಯಾನ್ಸ್‌! ಶಾಕಿಂಗ್‌ ವಿಡಿಯೊ ವೈರಲ್‌

Profile pavithra Jun 28, 2025 8:23 PM

ಲಖನೌ: ಇತ್ತೀಚಿನ ದಿನಗಳಲ್ಲಿ ಸೋಶಿಯಲ್‌ ಮೀಡಿಯಾ ತೆರೆದರೆ ನೂರಾರು ರೀಲ್ಸ್‌ಗಳು ಕಣ್ಮುಂದೆ ಬರುತ್ತವೆ. ಬೈಕ್‌ನಲ್ಲಿ ಕುಳಿತು ರೊಮ್ಯಾನ್ಸ್‌ ಮಾಡುವುದು, ಕಾರಿನ ಸನ್‌ರೂಫ್‌ ತೆಗೆದು ಕಿಸ್‌ ಮಾಡುವುದು ಇತ್ಯಾದಿ ವಿಡಿಯೊಗಳು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿವೆ. ಇದೀಗ ಸುಹಾಗ್ನಗರಿ ಫಿರೋಜಾಬಾದ್‌ನಲ್ಲಿ ಚಲಿಸುವ ಬೈಕ್‌ನಲ್ಲಿ ದಂಪತಿ ರೊಮ್ಯಾನ್ಸ್ ಮಾಡಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಅವರಿಗೆ ದಂಡ ವಿಧಿಸಿದ್ದಾರೆ.

ವರದಿ ಪ್ರಕಾರ, ಈ ಘಟನೆ ಆಗ್ರಾ-ಕಾನ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದ್ದು, ಯುವಕ ಮತ್ತು ಯುವತಿ ಚಲಿಸುವ ಬೈಕ್‌ನಲ್ಲಿ ರೊಮ್ಯಾನ್ಸ್ ಮಾಡಿದ್ದಾರೆ. ದಾರಿಹೋಕನೊಬ್ಬ ಮೊದಲು ಅವರನ್ನು ತಡೆಯಲು ಪ್ರಯತ್ನಿಸಿದ್ದಾನೆ. ಆದರೆ ಅವರು ಅವನ ಮಾತನ್ನು ಕೇಳದಿದ್ದಾಗ, ಅವನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊ ಪೊಲೀಸರ ಗಮನಕ್ಕೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಿದ್ದಾರೆ. ನಂತರ ಪೊಲೀಸರು ಬೈಕ್‌ನಲ್ಲಿ ಪ್ರಣಯ ಮಾಡಿದ ಯುವಕ ಮತ್ತು ಯುವತಿಗೆ 53,000 ರೂ.ಗಳ ಚಲನ್ ನೀಡಿದ್ದಾರೆ.



ವೈರಲ್ ಆದ ವಿಡಿಯೊದಲ್ಲಿ ಯುವತಿ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಮಲಗಿದ್ದಳು ಮತ್ತು ಯುವಕ ಬೈಕನ್ನು ಚಲಾಯಿಸುತ್ತಿದ್ದ. ಆಗ್ರಾ-ಕಾನ್ಪುರ ಹೆದ್ದಾರಿಯಲ್ಲಿ ಬೈಕ್‌ನಲ್ಲಿ ಜೋಡಿಯ ಈ ಅಪಾಯಕಾರಿ ಪ್ರಣಯವು ರಸ್ತೆ ಸುರಕ್ಷತೆಯ ಬಗ್ಗೆ ಕಳವಳವನ್ನುಂಟುಮಾಡಿದೆ. ಇಂತಹ ಅಜಾಗರೂಕತೆಯು ಅವರ ಜೀವಗಳನ್ನು ಮಾತ್ರವಲ್ಲದೆ ಇತರರ ಜೀವಗಳನ್ನು ಸಹ ಅಪಾಯಕ್ಕೆ ಸಿಲುಕಿಸುತ್ತದೆ.

ವಿಡಿಯೊ ನೋಡಿದ ನೆಟ್ಟಿಗರು ಈ ಜೋಡಿಯ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬ ನೆಟ್ಟಿಗರು, 'ಪ್ರೀತಿಯನ್ನು ಸರಿಯಾದ ಜಾಗದಲ್ಲಿ ಮಾಡಿದರೆ ಒಳ್ಳೆಯದು. ಆದರೆ ರಸ್ತೆಯನ್ನು ಪ್ರಣಯ ವಲಯವನ್ನಾಗಿ ಮಾಡಬೇಡಿ' ಎಂದು ಬರೆದಿದ್ದಾರೆ. ಮತ್ತೊಬ್ಬರು, 'ಈ ಪ್ರೇಮಿಗಳನ್ನು ನಿಯಂತ್ರಿಸಬೇಕು' ಎಂದು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ರೈಲ್ವೆ ಹಳಿಯ ಮೇಲೆ ಕಾರು ಚಲಾಯಿಸಿದ ಮಹಿಳೆ; ರೈಲು ಸೇವೆಯಲ್ಲಿ ವ್ಯತ್ಯಯ

ಇಂತಹ ಕೃತ್ಯ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ನೋಯ್ಡಾ-ಗ್ರೇಟರ್ ನೋಯ್ಡಾದ ಎಕ್ಸ್‌ಪ್ರೆಸ್‌ವೇಯಲ್ಲಿ ಚಲಿಸುವ ಬೈಕ್‌ನಲ್ಲಿ ದಂಪತಿ ಹೆಲ್ಮೆಟ್ ಕೂಡ ಧರಿಸದೆ ಸ್ಟಂಟ್ ಮಾಡಿದ್ದರು. ಗಂಡ ಬೈಕ್‌ ಓಡಿಸುತ್ತಿದ್ದರೆ, ಹೆಂಡತಿ ಇಂಧನದ ಟ್ಯಾಂಕ್ ಮೇಲೆ ಕುಳಿತಿದ್ದಳು. ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ದಂಪತಿಯ ಈ ಕೃತ್ಯಕ್ಕಾಗಿ ನೋಯ್ಡಾ ಸಂಚಾರ ಪೊಲೀಸರು ಭಾರಿ ದಂಡ ವಿಧಿಸಿದ್ದರು.