ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Viral Video: ಡೈಪರ್‌ ಹಾರ ತಯಾರಿಸಿದ ಮಹಿಳೆ; ನೆಟ್ಟಿಗರ ಅಚ್ಚರಿಯ ಕಾಮೆಂಟ್‌ ವೈರಲ್‌

ಭಾರತೀಯ ಮೂಲದ ವಿಜ್ಞಾನಿ ಮತ್ತು ಇನ್‌ಸ್ಟಾಗ್ರಾಮರ್‌ ಡಾ.ಕವಿತಾ ಶರ್ಮಾ ಡೈಪರ್‌ ಅನ್ನು ವಾಸನೆ ಬರದೆ ಬಳಸುವ ವಿಧಾನವನ್ನು ತಿಳಿಸಿಕೊಟ್ಟಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಈ ವಿಡಿಯೊ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಅಚ್ಚರಿಯಿಂದ ಪ್ರತಿಕ್ರಿಯಿಸಿದ್ದಾರೆ.

ಡೈಪರ್‌ ವಾಸನೆ ಸಮಸ್ಯೆಗೆ ಈ ಮಹಿಳೆ ಮಾಡಿದ್ದೇನು?

diaper mala

Profile pavithra Feb 22, 2025 11:03 AM

ಹೊಸದಿಲ್ಲಿ: ಮಕ್ಕಳಿಗೆ ಬಳಸುವ ಡೈಪರ್ ಅನ್ನು ಕಸದ ಬುಟ್ಟಿಗೆ ಹಾಕುವುದರಿಂದ ಕೆಟ್ಟ ವಾಸನೆ ಬರುತ್ತದೆ. ಹಾಗಾಗಿ ಆ ಡೈಪರ್‌ಗಳನ್ನು ವಿಲೇವಾರಿ ಮಾಡುವುದು ಎಲ್ಲರಿಗೂ ತಲೆನೋವಿನ ವಿಚಾರ. ಇನ್ನು ಈ ಡೈಪರ್‌ ವಾಸನೆಗೆ ಕೆಲವರು ಮುಖ ಸಿಂಡರಿಸುತ್ತಾರೆ. ಈ ಸಮಸ್ಯೆಗೆ ಮಹಿಳೆಯೊಬ್ಬಳು ಪರಿಹಾರವನ್ನು ನೀಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಪ್ಲಾಸ್ಟಿಕ್ ಕಸದ ಚೀಲಗಳಿಂದ ತಯಾರಿಸಿದ ಡೈಪರ್ ಹಾರವನ್ನು ಹಿಡಿದ ಮಹಿಳೆಯ ವಿಡಿಯೊ ಇನ್‌ಸ್ಟಾಗ್ರಾಂನಲ್ಲಿ ಎಲ್ಲರ ಗಮನ ಸೆಳೆದಿದೆ.

ಈ ರೀಲ್ ಅನ್ನು ಭಾರತೀಯ ಮೂಲದ ವಿಜ್ಞಾನಿ ಮತ್ತು ಇನ್‌ಸ್ಟಾಗ್ರಾಮರ್‌ ಡಾ.ಕವಿತಾ ಶರ್ಮಾ ಪೋಸ್ಟ್ ಮಾಡಿದ್ದಾಳೆ. ಡೈಪರ್‌ಗಳಿಂದ ತಯಾರಿಸಿದ ಉದ್ದನೆಯ ಹಾರದೊಂದಿಗೆ ಕ್ಯಾಮೆರಾಗೆ ಪೋಸ್ ನೀಡಿದ ವಿಡಿಯೊ ಈಗ ವೈರಲ್ ಆಗಿದೆ. ವಿಡಿಯೊದಲ್ಲಿ ಆಕೆ ಅದನ್ನು "ಡಯಾಪರ್ ಕಿ ಮಾಲಾ" ಎಂದು ಕರೆದಿದ್ದಾಳೆ.

ಈ ವಿಡಿಯೊದಲ್ಲಿ ಕಸದ ಬುಟ್ಟಿಯನ್ನು ಹೋಲುವ ಡೈಪರ್ ಡಿಸ್ಪೆನ್ಸರ್ ಅನ್ನು ತೋರಿಸಿದ್ದಾರೆ. ಸಾಮಾನ್ಯವಾಗಿ ಕಸದ ಬುಟ್ಟಿಯಲ್ಲಿ ಡೈಪರ್‌ ಹಾಕಿದಾಗ ಅದರಿಂದ ಕೆಟ್ಟ ವಾಸನೆ ಬರುತ್ತದೆ. ಈ ವಾಸನೆಯನ್ನು ಬಾರದಂತೆ ತಡೆಯಲು ಈ ಡೈಪರ್ ಡಿಸ್ಪೆನ್ಸರ್ ಪರಿಣಾಮಕಾರಿ ಮಾರ್ಗ ಎಂದು ಹೇಳಿದ್ದಾರೆ.

ರೀಲ್‍ನಲ್ಲಿ ಆಕೆ ಡೈಪರ್ ಡಿಸ್ಪೆನ್ಸರ್ ಅನ್ನು ಹೇಗೆ ಬಳಸುವುದು ಎಂದು ತಿಳಿಸಿಕೊಟ್ಟಿದ್ದಾರೆ. ಅವರು ಆ ಡಬ್ಬಿಯೊಳಗೆ ಡೈಪರ್‌ ಅನ್ನು ಹಾಕಿ ನಂತರ ಅದನ್ನು ತಿರುಗಿಸಿದ್ದಾರೆ. ಡೈಪರ್‌ಗಳು ರಾಶಿಯಾಗುತ್ತಿದ್ದಂತೆ, ಡಿಸ್ಪೆನ್ಸರ್‌ನಿಂದ ಉದ್ದನೆಯ ಹಾರ ತಯಾರಾಗಿದೆ.

ಈ ವಿಡಿಯೊವನ್ನು ಈ ಜನವರಿಯಲ್ಲಿ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದು ಈಗಾಗಲೇ 1.6 ಮಿಲಿಯನ್ ವ್ಯೂವ್ಸ್‌ನೊಂದಿಗೆ ವೈರಲ್ ಆಗಿದೆ. ನೆಟ್ಟಿಗರು 'ಸ್ಮೈಲ್' ಎಮೋಜಿಗಳೊಂದಿಗೆ ವಿಡಿಯೊಗೆ ಕಾಮೆಂಟ್ ಮಾಡಿದ್ದಾರೆ. ಪ್ಲಾಸ್ಟಿಕ್‍ನ ಅತಿಯಾದ ಬಳಕೆಯಿಂದಾಗಿ ಹಲವಾರು ನೆಟ್ಟಿಗರು ಈ ಉತ್ಪನ್ನದ ಬಳಕೆಯನ್ನು ಖಂಡಿಸಿದ್ದಾರೆ.

Kimberly-Clark: ಈ ವಯಸ್ಕರ ಡೈಪರ್ಸ್‌ ರೇಟ್‌ ಕೇಳಿದ್ರೆ ಶಾಕ್‌ ಆಗ್ತಿರಾ! ಇದರ ಜಾಹೀರಾತು ಕಂಡು ನೆಟ್ಟಿಗರು ಹೇಳಿದ್ದೇನು ಗೊತ್ತಾ?

ಕೆಲವೊಮ್ಮೆ ತುಂಬಾ ಹೊತ್ತಿನ ಸಂಗೀತ ಕಚೇರಿಗಳು, ಪಾರ್ಟಿಗಳು ಮತ್ತು ಪ್ರದರ್ಶನಗಳಲ್ಲಿ  ಮೂತ್ರ ವಿಸರ್ಜನೆ ಹೋಗಲು ಸಮಸ್ಯೆಯಾಗುತ್ತದೆ. ಅಂಥವರಿಗಾಗಿ ಮಾರುಕಟ್ಟೆಗಳಲ್ಲಿ  250 ರಿಂದ 600 ರೂ.ಗಳಿಗೆ ಸಿಗುವಂತಹ ವಯಸ್ಕ ಡಯಾಪರ್ ಪ್ಯಾಡ್‍ಗಳು ಲಭ್ಯವಿದೆ. ಆದರೆ ಅದೂ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎಂಬುದೇ ಅನುಮಾನ. ಹೀಗಿರುವಾಗ ಯುಎಸ್ಎಯ ಕಿಂಬರ್ಲಿ-ಕ್ಲಾರ್ಕ್(Kimberly-Clark) ಬ್ರಾಂಡ್ ತನ್ನ ದುಬಾರಿ ಒಳ ಉಡುಪುಗಳನ್ನು ಬಿಡುಗಡೆ ಮಾಡಿ ಈಗ ಸುದ್ಧಿಯಲ್ಲಿದೆ. ಇದರ ಬೆಲೆ ಬರೋಬ್ಬರಿ 6,000 ರೂ.ಗಿಂತಲೂ ಹೆಚ್ಚು. ಈ ಉತ್ಪನ್ನದ ಜಾಹೀರಾತಿನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗುತ್ತಿದೆ.

"ಪ್ರದರ್ಶನದಲ್ಲಿ ಅತ್ಯಂತ ಭಯಾನಕ ಸ್ಥಳವೆಂದರೆ ಮೋಶ್ ಪಿಟ್ ಅಲ್ಲ. ಅದು ಬಾತ್‌ ರೂಂ – ಯಾಕೆಂದರೆ ಅಲ್ಲಿ ಮೈಲಿ ಉದ್ದದ ಸಾಲುಗಳು,  ಜಾರಿ ಬೀಳುವುದು, ಶೌಚಾಲಯಗಳು ಗಲೀಜಿನಿಂದ ತುಂಬಿರುವುದು” ಎಂದು ಬ್ರಾಂಡ್ ಪ್ರಚಾರ ಮಾಡುತ್ತಿದೆ. ಈ ಎಲ್ಲಾ ಸಮಸ್ಯೆಗೆ ಪಿಟ್‌ ಡೈಪರ್‌ ಒಂದು ಹೊಸ ಪರಿಹಾರವಾಗಿದೆ ", ಎಂದು ಬ್ರಾಂಡ್ ಹೇಳಿದೆ.

ವೈರಲ್ ಆಗುತ್ತಿರುವ ಜಾಹೀರಾತಿನಲ್ಲಿ ಸಂಗೀತಗಾರ ಬೆನ್ ಕೊಲ್ಲರ್ ಮೂತ್ರ ವಿಸರ್ಜನೆಗಾಗಿ ಮೋಶ್ ಪಿಟ್ ಬಳಿ ಓಡಾಡುತ್ತಿರುವ ದೃಶ್ಯ, ನಂತರ ಅವರು ಬಳಸಿದ ಡೈಪರ್ ಅನ್ನು ವಿಡಿಯೊ ಬಹಿರಂಗಪಡಿಸಿದೆ. ಪಾರ್ಟಿಗೆ ಹೋಗುವವರು ಮತ್ತು ಸಂಗೀತ ಕಚೇರಿ ಪ್ರಿಯರಿಗೆ ಮೀಸಲಾದ ಈ ಡೈಪರ್ ಕಂಡು  ನೆಟ್ಟಿಗರು ಶಾಕ್‌ ಆಗಿದ್ದಾರೆ. “ ಇನ್ನು ಮುಂದೆ ತಮ್ಮ ಮೋಶ್ ಪಿಟ್ ಅನ್ನು ಬಿಟ್ಟು ಮಧ್ಯದಲ್ಲಿ  ಮೂತ್ರ ವಿಸರ್ಜನೆಗೆ  ಹೋಗಬೇಕೆಂದಿಲ್ಲ. ಇದು ತುಂಬಾ ಅದ್ಭುತವಾಗಿದೆ " ಎಂದು ಕಾಮೆಂಟ್‍ಗಳಲ್ಲಿ ಒಬ್ಬರು ಬರೆದಿದ್ದಾರೆ.