ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಯ್ಯೊಯ್ಯೋ! 15 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಸದ ರಾಶಿಗೆ ಎಸೆದ ವ್ಯಕ್ತಿ; ಆಮೇಲೇನಾಯ್ತು?

Man accidentally throws gold: ಕುಟುಂಬ ಸದಸ್ಯರೆಲ್ಲರೂ ತೀರ್ಥಯಾತ್ರೆಗೆ ಹೋದಾಗ ಮನೆಯಲ್ಲಿ ದರೋಡೆ ನಡೆಯಬಹುದು ಎಂಬ ಭಯದಿಂದ ವ್ಯಕ್ತಿಯೊಬ್ಬರು ಚಿನ್ನಾಭರಣಗಳನ್ನು ಮುಚ್ಚಿಡಲು ಒಂದು ವಿಶಿಷ್ಟ ಮಾರ್ಗವನ್ನು ಯೋಚಿಸಿದರು. ಅದನ್ನು ಹಳೆಯ ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಿ, ಕಸ ತುಂಬಿದ ಚೀಲದೊಳಗೆ ಮರೆಮಾಡಿದರು.

ಆಕಸ್ಮಿಕವಾಗಿ ಚಿನ್ನಾಭರಣವನ್ನು ಕಸದ ರಾಶಿಗೆ ಎಸೆದ ವ್ಯಕ್ತಿ

ಆಕಸ್ಮಿಕವಾಗಿ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಸದ ರಾಶಿಗೆ ಎಸೆದ ವ್ಯಕ್ತಿ -

Priyanka P
Priyanka P Feb 20, 2026 4:34 PM

ಗುರುಗ್ರಾಮ, ಫೆ.20: ಕಬ್ಬಿಣದ ಗುಜರಿ ವ್ಯಾಪಾರಿ (scrap dealer) ಹಾಜಿ ಅಖ್ತರ್ ಖಾನ್ ಎಂಬುವವರು ತನ್ನ ಅಂಗಡಿಯಲ್ಲಿ ಕಸ ಪರಿಶೀಲಿಸುತ್ತಿದ್ದಾಗ, ಕಸದ ಗುಡ್ಡಗಳ ನಡುವೆ ಒಂದು ಹಳೆಯ ಪೆಟ್ಟಿಗೆ ಕಂಡುಬಂದಿತು. ಅದನ್ನು ತೆರೆಯುವಾಗ, ಸುಮಾರು 15 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ 100 ಗ್ರಾಂ ಚಿನ್ನಾಭರಣಗಳು ಕಂಡುಬಂದವು. ಹರಿಯಾಣದ (Haryana) ಫರಿದಾಬಾದ್‌ನಲ್ಲಿ ಈ ಘಟನೆ ನಡೆದಿದೆ.

ಜನವರಿ 2024 ರಲ್ಲಿ ಫರಿದಾಬಾದ್ ನಿವಾಸಿ ಅಶೋಕ್ ಶರ್ಮಾ ತನ್ನ ಕುಟುಂಬದೊಂದಿಗೆ ಪವಿತ್ರ ಕುಂಭಮೇಳದಲ್ಲಿ ಭಾಗವಹಿಸಲು ಪ್ರಯಾಗ್‌ರಾಜ್‌ಗೆ ಪ್ರಯಾಣಿಸಿದರು. ಕುಟುಂಬ ಸದಸ್ಯರೆಲ್ಲರೂ ತೀರ್ಥಯಾತ್ರೆಗೆ ಹೋದಾಗ ಮನೆಯಲ್ಲಿ ದರೋಡೆ ನಡೆಯಬಹುದು ಎಂಬ ಭಯದಿಂದ, ಶರ್ಮಾ ಚಿನ್ನಾಭರಣಗಳನ್ನು ಮುಚ್ಚಿಡಲು ಒಂದು ವಿಶಿಷ್ಟ ಮಾರ್ಗವನ್ನು ಯೋಚಿಸಿದರು. ಅದನ್ನು ಹಳೆಯ ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಿ, ಕಸ ತುಂಬಿದ ಚೀಲದೊಳಗೆ ಮರೆಮಾಡಿದರು.

ಬಳಿಕ ತೀರ್ಥಯಾತ್ರೆಯಿಂದ ಕುಟುಂಬವು ಸುರಕ್ಷಿತವಾಗಿ ಹಿಂತಿರುಗಿತು. ಕಸ ತುಂಬಿದ ಚೀಲದಲ್ಲಿ ಇಟ್ಟಿದ್ದ ಪೆಟ್ಟಿಗೆ ಮರೆತೇ ಹೋಗಿತ್ತು. ಸುಮಾರು ಹತ್ತು ತಿಂಗಳ ನಂತರ, ದೀಪಾವಳಿಗೆ ಮುನ್ನ ಮನೆಯನ್ನು ಸ್ವಚ್ಛಗೊಳಿಸುವಾಗ, ಶರ್ಮಾ ಕುಟುಂಬವು ಚಿನ್ನಾಭರಣಗಳನ್ನಿಟ್ಟಿದ್ದ ಪೆಟ್ಟಿಗೆ ಸೇರಿದಂತೆ ಕಸದ ಚೀಲವನ್ನು ಮಾರಿತು. ಕೆಲವು ದಿನಗಳ ನಂತರ, ದೀಪಾವಳಿ ಪೂಜೆಗೆ ತಮ್ಮ ನಗದು ಮತ್ತು ಆಭರಣಗಳನ್ನು ಹೊರತೆಗೆಯಲು ಮುಂದಾದಾಗ, ಕುಟುಂಬಕ್ಕೆ ತಮ್ಮ ತಪ್ಪಿನ ಅರಿವಾಯಿತು.

Delhi Blast: ಉಗ್ರರ ಜೊತೆ ಲಿಂಕ್ ಆರೋಪ- ವಿಚಾರಣೆ ಬಳಿಕ ವೈದ್ಯೆ ರಿಲೀಸ್

ನಂತರ ಶರ್ಮಾ ಚಿನ್ನಾಭರಣಗಳನ್ನು ಹುಡುಕುತ್ತಾ ಖಾನ್ ಅವರ ಗೋದಾಮಿಗೆ ಧಾವಿಸಿದರು. ಆದರೆ, ಅಲ್ಲೆಲ್ಲೂ ಅವರಿಗೆ ಚಿನ್ನಾಭರಣವಿದ್ದ ಪೆಟ್ಟಿಗೆ ಸಿಗಲಿಲ್ಲ. ಕಳ್ಳರಿಂದ ಆಭರಣಗಳನ್ನು ರಕ್ಷಿಸಲು ಪ್ರಯತ್ನಿಸಿ, ಅವರು ತಿಳಿಯದೆ ಅದನ್ನು ಗುಜಿರಿ ವ್ಯಾಪಾರಿಗೆ ನೀಡಿದ್ದರು.

ತಿಂಗಳುಗಳ ನಂತರ, ಖಾನ್ ಅವರು ಚಿನ್ನದ ಆಭರಣಗಳಿಂದ ತುಂಬಿದ ಪೆಟ್ಟಿಗೆಯನ್ನು ಗಮನಿಸಿದರು. ತಕ್ಷಣವೇ ಶರ್ಮಾ ಅವರ ನೆನಪಾಯಿತು. ಖಾನ್ ಹೆಚ್ಚುವರಿ ಪೊಲೀಸ್ ಆಯುಕ್ತ ಜಿತೇಶ್ ಮಲ್ಹೋತ್ರಾ ಅವರ ಸಮ್ಮುಖದಲ್ಲಿ 15 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಶರ್ಮಾಗೆ ಹಿಂದಿರುಗಿಸಿದರು. ಖಾನ್ ಅವರ ಪ್ರಾಮಾಣಿಕತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಬೆಂಗಳೂರಿನಲ್ಲಿ ಖತರ್ನಾಕ್ ಕಳ್ಳನ ಬಂಧನ

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದ ಕುಖ್ಯಾತ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ನಾಲ್ಕು ಕಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ ಖತರ್ನಾಕ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಮಾಹಿತಿಯ ಪ್ರಕಾರ, ಈ ಕುಖ್ಯಾತ ಕಳ್ಳ ಸುಮಾರು 1.75 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಕದ್ದಿದ್ದಾನೆ. ರಾತ್ರಿ ಕಳ್ಳತನ ಘಟನೆಗಳಲ್ಲಿ ಭಾಗಿಯಾಗುತ್ತಿದ್ದ. ಕದ್ದಿದ್ದ 1 ಕೆಜಿ 232 ಗ್ರಾಂ ಚಿನ್ನಾಭರಣವನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ.

ಪೊಲೀಸರು ಬಂಧಿಸಿದ ಕಳ್ಳನನ್ನು ರಾಜ ಎಂದು ಗುರುತಿಸಲಾಗಿದೆ. ಪೊಲೀಸರು ಬಹಳ ದಿನಗಳಿಂದ ಈ ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಕಳೆದ ವರ್ಷ, ಅಕ್ಟೋಬರ್ 20, 2025 ರಂದು, ಎನ್‌ಜಿಇಎಫ್ ಲೇಔಟ್‌ನ ಸದಾನಂದ ನಗರದ ನಿವಾಸಿಯೊಬ್ಬರು, ಅಕ್ಟೋಬರ್ 18, 2025 ರಂದು ಕುಟುಂಬವು ಬೆಂಗಳೂರಿನಿಂದ ತಮ್ಮ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದಾಗ ತಮ್ಮ ಮನೆಗೆ ಕಳ್ಳತನ ನಡೆದಿದೆ ಎಂದು ದೂರು ದಾಖಲಿಸಿದರು. ಕಳ್ಳ 783 ಗ್ರಾಂ ಚಿನ್ನ ಮತ್ತು ರೂ. 8 ಲಕ್ಷ ನಗದೊಂದಿಗೆ ಪರಾರಿಯಾಗಿದ್ದ.