Viral News: ಘಿಬ್ಲಿ ಟ್ರೆಂಡ್‍ನಲ್ಲಿ ಕಾಣಿಸಿಕೊಂಡ ಮಹಾತ್ಮ ಗಾಂಧಿ; ನೆಟ್ಟಿಗರು ಫುಲ್ ಶಾಕ್!
ಗುಡಿ ಪಾಡ್ವಾವನ್ನು ಆಚರಿಸಿದ ಮಹಾರಾಷ್ಟ್ರದ ದಂಪತಿ ಆಚರಣೆಯ ನಂತರ ತಾವು ರೆಡಿ ಮಾಡಿದ ಗುಡಿಯ ಮುಂದೆ ಪೋಟೊ ತೆಗೆಸಿಕೊಂಡು ಅದನ್ನು ಘಿಬ್ಲಿ ಇಮೇಜ್‍ಗೆ ಬದಲಾಯಿಸಿದ್ದಾರೆ. ಆದರೆ AI ಗುಡಿಯ ಫೋಟೊದ ಬದಲು ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಧಿಯನ್ನು ಮುಖವನ್ನು ಕಾಫಿ ಮಾಡಿದೆ. ಈ ವಿಡಿಯೊ ವೈರಲ್(Viral News) ಆಗಿದೆ.


ಮುಂಬೈ: ಇತ್ತೀಚಿನ ದಿನಗಳಲ್ಲಿ ಪೋಟೊಗಳನ್ನು ಘಿಬ್ಲಿ ಇಮೇಜ್‍ಗೆ ಬದಲಾಯಿಸುವುದು ಹೆಚ್ಚು ಟ್ರೆಂಡ್ ಆಗಿದೆ. ಜನರು ತಮ್ಮ ಪೋಟೊಗಳನ್ನು ಘಿಬ್ಲಿ ಇಮೇಜ್‍ಗೆ ಬದಲಾಯಿಸಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ಘಿಬ್ಲಿ ಟ್ರೆಂಡ್‍ನಿಂದ ಸೋಶಿಯಲ್ ಮೀಡಿಯಾದಲ್ಲಿ ಆಶ್ಚರ್ಯಕರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅದೇನೆಂದರೆ ದಂಪತಿ ಗುಡಿ ಪಾಡ್ವಾವನ್ನು ಆಚರಿಸಿದ ಬಳಿಕ ಆ ಗುಡಿಯ ಮುಂದೆ ನಿಂತು ಪೋಟೊ ತೆಗೆಸಿಕೊಂಡಿದ್ದಾರೆ. ಕೊನೆಗೆ ಅದನ್ನು ಘಿಬ್ಲಿ ಇಮೇಜ್‍ಗೆ ಬದಲಾಯಿಸಿದ್ದಾರೆ. ಆದರೆ ಆ ಫೋಟೊದಲ್ಲಿ ಗುಡಿ ಬದಲು ಮಹಾತ್ಮಾ ಗಾಂಧಿಯ ಫೋಟೊ ಬಂದಿದೆಯಂತೆ. ಘಿಬ್ಲಿ ಇಮೇಜ್‍ಗಳಲ್ಲಿ ಮಹಾತ್ಮ ಗಾಂಧಿ ಇರುವುದು ಸೋಶಿಯಲ್ ಮೀಡಿಯಾ ನೆಟ್ಟಿಗರಲ್ಲಿ ಅಚ್ಚರಿಯನ್ನು ಮೂಡಿಸಿದೆ. ಈ ವಿಡಿಯೊ ಈಗ ವೈರಲ್(Viral News) ಆಗಿದೆ.
ಗುಡಿ ಪಾಡ್ವಾವನ್ನು ಮಹಾರಾಷ್ಟ್ರದಲ್ಲಿ ಆಚರಿಸುತ್ತಾರೆ.ಈ ಗುಡಿಪಾಡ್ವಾವನ್ನು ಆಚರಿಸಲು ದಂಪತಿ ಗುಡಿಯನ್ನು ರಚಿಸಿ ಅದಕ್ಕೆ ಸುಂದರವಾಗಿ ಅಲಂಕಾರ ಮಾಡಿದ್ದಾರೆ. ಆಚರಣೆಯ ನಂತರ ಅವರಿಬ್ಬರು ತಾವು ಅಲಂಕರಿಸಿದ ಗುಡಿಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಮತ್ತು ಈ ಫೋಟೋವನ್ನು ಘಿಬ್ಲಿ ಇಮೇಜ್‍ಗೆ ಪರಿವರ್ತಿಸಲು ಅವರು ಎಐ ಅನ್ನು ಕೇಳಿದ್ದಾರೆ. ಆದರೆ ಹಬ್ಬದ ಆಚರಣೆಗಳ ಭಾಗವಾಗಿ ಹಲ್ದಿ ಮತ್ತು ಕುಂಕುಮದಿಂದ ಅಲಂಕರಿಸಲ್ಪಟ್ಟ ಗುಡಿಯನ್ನು ಚಾಟ್ ಜಿಪಿಟಿ ತಪ್ಪಾಗಿ ಬದಲಾಯಿಸಿದೆ. ಅದೇನೆಂದರೆ ಗುಡಿಯ ಮೇಲ್ಭಾಗದಲ್ಲಿ ಇರಿಸಲಾಗಿದ್ದ 'ಕಲಶ'ದ ಬದಲಿಗೆ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಧಿಯನ್ನು ಹೋಲುವ ಮುಖವನ್ನಾಗಿ ಎಐ ಬದಲಾಯಿಸಿದೆ. ಇದರಿಂದ ದಂಪತಿಯ ಘಿಬ್ಲಿ ಇಮೇಜ್‍ನಲ್ಲಿ ಹಿಂದೆ ಗಾಂಧೀಜಿ ನಿಂತಿರುವುದು ಸೆರೆಯಾಗಿದೆ.
ಈ ಪೋಟೊವನ್ನು ದಂಪತಿ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಈಗ ವೈರಲ್ ಆಗಿದೆ. ಇದಕ್ಕೆ 4.6 ಮಿಲಿಯನ್ ವ್ಯೂವ್ಸ್ ಬಂದಿದೆ ಮತ್ತು ಇದಕ್ಕೆ ಅನೇಕರು ಕಾಮೆಂಟ್ ಮಾಡಿದ್ದಾರೆ.
ಗುಡಿ ಪಾಡ್ವಾ 2025
ಮಹಾರಾಷ್ಟ್ರದಲ್ಲಿ ಹೊಸ ವರ್ಷವನ್ನು ಮಾರ್ಚ್ 30, 2025 ರಂದು ಗುಡಿ ಪಾಡ್ವಾ ಎಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು 'ಗುಡಿ'ಯೊಂದಿಗೆ ಆಚರಿಸಲಾಗುತ್ತದೆ - ಕೋಲಿನ ಮೇಲೆ ಕಲಶವನ್ನು ಇರಿಸಿ ಅದಕ್ಕೆ ಬಟ್ಟೆಯನ್ನು ಸುತ್ತಿ ಹೂವುಗಳು ಮತ್ತು ಎಲೆಗಳಿಂದ ಅಲಂಕರಿಸಲಾಗುತ್ತದೆ.
ಈ ಸುದ್ದಿಯನ್ನೂ ಓದಿ:Viral News: ಇನ್‌ಸ್ಟಾದಲ್ಲಿ ಸ್ನೇಹ... ಆಮೇಲೆ ಲವ್- ಆತನ ಅಸಲಿಯತ್ತು ಬಯಲಾದಾಗ ಕಾಲ ಮಿಂಚಿತ್ತು!
ಎಐ ರಚಿಸುವ ಘಿಬ್ಲಿ ಇಮೇಜ್ ಸ್ಟೈಲ್ ಸೋಶಿಯಲ್ ಮೀಡಿಯಾ ಬಳಕೆದಾರರನ್ನು ಹೆಚ್ಚು ಆಕರ್ಷಿಸಿವೆ. ಇದನ್ನು ಬಳಸಿಕೊಂಡು ಜನರು ತಮ್ಮ ಪೋಟೊಗಳ ಜೊತೆಗೆ ತಮ್ಮ ನೆಚ್ಚಿನ ಸಿನಿಮಾತಾರೆಯರು, ರಾಜಕಾರಣಿಗಳು, ಕ್ರಿಕೆಟಿಗರ ಪೋಟೊಗಳನ್ನು ಘಿಬ್ಲಿ ಇಮೇಜ್ ಸ್ಟೈಲ್‍ಗೆ ಬದಲಾಯಿಸಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಹಾಗೇ ಹಲವಾರು ರಾಜಕೀಯ ವ್ಯಕ್ತಿಗಳು ಮತ್ತು ಸರ್ಕಾರಿ ಸಂಸ್ಥೆಗಳು ಸಹ ಈ ಸ್ಟೈಲ್ ಅನ್ನು ಬಳಸುತ್ತಿವೆ. ರ್ಯಾಲಿಗಳು, ಭಾಷಣಗಳು ಮತ್ತು ಸಾರ್ವಜನಿಕ ಸಭೆಗಳ ಎಐ-ರಚಿಸಿದ ಅನಿಮೇಟೆಡ್ ಚಿತ್ರಣಗಳನ್ನು ಹಂಚಿಕೊಂಡಿವೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ನಾಯಕರು ಈ ಕಲಾಕೃತಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ತಮ್ಮದೇ ಆದ ಘಿಬ್ಲಿ ಶೈಲಿಯ ಭಾವಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಒಟ್ಟಾರೆ ಇದು ಎಲ್ಲಾ ಕಡೆ ಟ್ರೆಂಡ್ ಆಗುತ್ತಿದೆ.