ಯುವತಿಯ ಮೇಲೆ ಕ್ರೂರವಾಗಿ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾದರೂ ಮುಕ್ತವಾಗಿ ತಿರುಗುತ್ತಿದ್ದಾನೆ ಪಾತಕಿ! ಕಾರಣವೇನು?
Viral Video: ಮಹಾರಾಷ್ಟ್ರದ ಪಿಂಪ್ರಿ- ಚಿಂಚವಡ್ ನ ಮೋಶಿ ಪ್ರದೇಶದ ಅಂಗಡಿಯೊಂದರಲ್ಲಿ ಯುವಕನೊಬ್ಬ ತನ್ನ ಗೆಳತಿಗೆ ಹಲ್ಲೆ ಮಾಡಿರುವ ದೃಶ್ಯಗಳು ವೈರಲ್ ಆಗಿವೆ. ಕ್ರೂರವಾಗಿ ಹಲ್ಲೆ ಎಸಗುತ್ತಿರುವ ಸಿಸಿಟಿವಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ...
ಯುವತಿಯ ಮೇಲೆ ಕ್ರೂರವಾಗಿ ಹಲ್ಲೆ -
ಮಹಾರಾಷ್ಟ್ರ,ಮೇ 29: ಇತ್ತೀಚೆಗೆ ಮಹಿಳೆಯರ ಮೇಲೆ ಎಸಗುವ ಕಿರುಕುಳ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಎಷ್ಟೇ ಮಹಿಳಾ ಸಬಲಿಕರಣ, ಮಹಿಳಾ ಅಭಿವೃದ್ಧಿ ಎಂದು ಹೇಳಿದರೂ ಇಂತಹ ಘಟನೆಗಳಿಗೆ ಕಡಿವಾಣ ಬಿದ್ದಿಲ್ಲ. ಇದೀಗ ಮಹಾರಾಷ್ಟ್ರದ ಪಿಂಪ್ರಿ- ಚಿಂಚವಡ್ ನ ಮೋಶಿ ಪ್ರದೇಶದ ಅಂಗಡಿಯೊಂದರಲ್ಲಿ ಯುವಕನೊಬ್ಬ ತನ್ನ ಗೆಳತಿಗೆ ಹಲ್ಲೆ ಮಾಡಿರುವ ದೃಶ್ಯಗಳು ವೈರಲ್ ಆಗಿವೆ. ಕ್ರೂರವಾಗಿ ಹಲ್ಲೆ ಎಸಗುತ್ತಿರುವ ಸಿಸಿಟಿವಿ ವಿಡಿಯೋ ಸಾಮಾಜಿಕ ಮಾಧ್ಯಮ ಗಳಲ್ಲಿ ವೈರಲ್ (Viral News) ಆಗಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಈ ಘಟನೆ ಮೇ 27, 2026 ರಂದು ಸಂಜೆ 4:47 ರ ಸುಮಾರಿಗೆ ನಡೆದಿತ್ತು. ಆರೋಪಿಯು ಬಟ್ಟೆ ಅಂಗಡಿಯೊಳಗೆ ಪ್ರವೇಶಿಸಿ ಯುವತಿಯ ಕುತ್ತಿಗೆ ಹಿಡಿದು ಪದೇ ಪದೇ ಗುದ್ದಿದ್ದಾನೆ. ಆಕೆಯ ಕೂದಲು ಹಿಡಿದು ಎಳೆದಾಡಿ, ಮನಬಂದಂತೆ ಥಳಿಸಿದ್ದಾನೆ. ಈ ವೇಳೆ ಅಲ್ಲೇ ಅಂಗಡಿಯಲ್ಲಿದ್ದ ಸಣ್ಣ ಮಗುವೊಂದು ಭಯದಿಂದ ಅಂಗಡಿಯ ಕೌಂಟರ್ ಹಿಂದೆ ಅಡಗಿ ಕುಳಿತಿದೆ. ಈ ಅಘಾತಕಾರಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಕ್ರೂರತ್ವ ಮೆರೆದಿರುವ ವ್ಯಕ್ತಿಯನ್ನು ಬಂಧಿಸುವಂತೆ ಕೇಳಿಕೊಂಡಿದ್ದಾರೆ.
ವಿಡಿಯೋ ನೋಡಿ;
This is a heinous act. He should not be spared and should be treated like this in public. This is utterly unjust, inhuman, and a perverted mentality. This person, regardless of the reason, should receive the harshest punishment. https://t.co/SJgNNBfrKQ
— Param Choudhary (@Param_117) May 28, 2026
ಆದರೆ, ಇಷ್ಟೆಲ್ಲಾ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದ್ದರೂ ಪೊಲೀಸರು ಆರೋಪಿಯನ್ನು ಬಂಧಿಸಲು ಸಾಧ್ಯವಾಗಿಲ್ಲ.ಹಲ್ಲೆಗೆ ಒಳಗಾದ ಮಹಿಳೆಯೂ ದೂರು ದಾಖಲಿಸಲು ನಿರಾಕರಿಸಿದ್ದು, ಇದನ್ನು ವೈಯಕ್ತಿಕ ವಿಚಾರ ಎಂದು ಕರೆದರು. ಹೀಗಾಗಿ ಅಧಿಕಾರಿಗಳಿಗೆ ಬಂಧಿಸಲು ಯಾವುದೇ ಕಾನೂನು ಆಧಾರವಿಲ್ಲ. ಯಾವುದೇ ಎಫ್‌ಐಆರ್ ಕೂಡ ದಾಖಲಾಗಿಲ್ಲ.
Viral Video: ಬೆರಳಿನ ತುದಿಯಲ್ಲೇ ಉರಿದ ಗ್ಯಾಸ್ ಸ್ಟೌವ್: ಇದು ಪವಾಡವಲ್ಲ ವಿಜ್ಞಾನ! ಹೇಗೆ ಗೊತ್ತಾ?
ಆರೋಪಿ ಇಷ್ಟೆಲ್ಲ ಹಲ್ಲೆ ಎಸಗಿದರೂ ಯಾವುದೇ ಶಿಕ್ಷೆಯಿಲ್ಲದೆ ಮುಕ್ತವಾಗಿ ತಿರುಗುತ್ತಿದ್ದಾನೆ. ಆದರೆ ಆತನನ್ನು ಬಂಧಿಸದೇ ಇರುವುದಕ್ಕೆ ಆಕ್ರೋಶ ವ್ಯಕ್ತವಾಗಿದ್ದು ಇದು ಘೋರ ಕೃತ್ಯ. ಆತನನ್ನು ಬಿಡಬಾರದು..ಇದು ಸಂಪೂರ್ಣವಾಗಿ ಅನ್ಯಾಯ, ಅಮಾನವೀಯ ಮತ್ತು ವಿಕೃತ ಮನಸ್ಥಿತಿ. ಈ ವ್ಯಕ್ತಿಗೆ, ಕಾರಣ ಏನೇ ಇರಲಿ, ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹಲವಾರು ಕಿಡಿಕಾರಿದ್ದಾರೆ.
ಅಂಗಡಿಯಲ್ಲೇ ಇಷ್ಟೆಲ್ಲಾ ಕ್ರೂರವಾದ ಹಲ್ಲೆ ನಡೆಯುತ್ತಿದ್ದರೂ, ಅಲ್ಲಿನ ವ್ಯಾಪಾರಿಗಳಾಗಲಿ ಅಥವಾ ಸಾರ್ವಜನಿಕರಾಗಲಿ ಯಾರು ಕೂಡ ಸಹಾಯಕ್ಕೆ ಬಂದಿಲ್ಲ.. ಮಹಿಳೆಯರು ಆರ್ಥಿಕ ಅವಲಂಬನೆ, ಸಾಮಾಜಿಕ ಗೌರವದ ಭಯದಿಂದಾಗಿ ಪೊಲೀಸರಿಗೆ ದೂರು ನೀಡಲು ಹಿಂಜರಿ ಯುತ್ತಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ