ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಕ್ರೀದ್‌ಗೆ ಬಲಿ ನಿಲ್ಲಿಸಿ ಮಾನವೀಯತೆ ಮೆರೆದ ಕುಟುಂಬ; ಮೇಕೆ ಚಿತ್ರದ ಕೇಕ್ ಕತ್ತರಿಸಿ ಆಚರಣೆ!

Viral News: ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ಬಕ್ರೀದ್ ಆಚರಣೆಯೂ ಎಲ್ಲರನ್ನು ಅಚ್ಚರಿ ಪಡುವಂತೆ ಮಾಡಿದೆ. ಮುಸ್ಲಿಂ ಕುಟುಂಬವೊಂದು ಪ್ರಾಣಿಯನ್ನು ಬಲಿಕೊಡುವುದನ್ನು ನಿರಾಕರಿಸಿ ವಿಭಿನ್ನವಾಗಿ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಿದೆ. ಮೇಕೆ ಚಿತ್ರಿರುವ ಕೇಕ್ ಅನ್ನು ಕತ್ತರಿಸುವ ಮೂಲಕ ಹಬ್ಬವನ್ನು ಈ ಕುಟುಂಬ ಆಚರಿಸಿಕೊಂಡಿದೆ. ಇದರ ವಿಡಿಯೊ ಸೋಷಿಯಲ್ ಮೀಡಿ ಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದು ದೇವರು ನಿಮಗೆ ಆಶೀರ್ವಾದಿಸಲಿ ಎಂದು ಶುಭ ಹಾರೈಕೆಗಳನ್ನು ನೀಡಿದ್ದಾರೆ..

ಬಕ್ರೀದ್‌ಗೆ ಮೇಕೆ ಚಿತ್ರದ ಕೇಕ್ ಕತ್ತರಿಸಿ ಆಚರಣೆ ಮಾಡಿದ ಮುಸ್ಲಿಂ ಕುಟುಂಬ

ಬಕ್ರೀದ್‌ಗೆ ಮೇಕೆ ಚಿತ್ರದ ಕೇಕ್ ಕತ್ತರಿಸಿದ ಮುಸ್ಲಿಂ ಕುಟುಂಬ -

Profile
Pushpa Kumari May 29, 2026 4:05 PM

ಆಗ್ರಾ,ಮೇ 29: ಸಾಮಾನ್ಯವಾಗಿ ಬಕ್ರೀದ್ ಹಬ್ಬ ಅಂದಾಗ ಮೇಕೆ, ಕುರಿಯನ್ನು ಬಲಿಕೊಡುವ ಸಂಪ್ರದಾಯವನ್ನು ಹಲವಾರು ಆಚರಿಸುತ್ತಾರೆ. ಆದರೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ಬಕ್ರೀದ್ ಆಚರಣೆಯೂ ಎಲ್ಲರನ್ನು ಅಚ್ಚರಿ ಪಡುವಂತೆ ಮಾಡಿದೆ. ಮುಸ್ಲಿಂ ಕುಟುಂಬವೊಂದು ಪ್ರಾಣಿಯನ್ನು ಬಲಿಕೊಡುವುದನ್ನು ನಿರಾಕರಿಸಿ ವಿಭಿನ್ನವಾಗಿ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಿದೆ. ಮೇಕೆ ಚಿತ್ರಿರುವ ಕೇಕ್ ಅನ್ನು ಕತ್ತರಿಸುವ ಮೂಲಕ ಹಬ್ಬವನ್ನು ಈ ಕುಟುಂಬ ಆಚರಿಸಿಕೊಂಡಿದೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದು ದೇವರು ನಿಮಗೆ ಆಶೀರ್ವಾದಿಸಲಿ ಎಂದು ಶುಭ ಹಾರೈಕೆ ಗಳನ್ನು ನೀಡಿದ್ದಾರೆ.

ಈ ಹಬ್ಬದಲ್ಲಿ ಮುಂಜಾನೆಯಿಂದಲೇ ಮುಸ್ಲಿಂ ಬಾಂಧವರು ಹೊಸ ಬಟ್ಟೆಗಳನ್ನು ಧರಿಸಿ ಮಸೀದಿಗಳಿಗೆ ತೆರಳಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ‌‌. ಅದೇ ರೀತಿ ತ್ಯಾಗ ಬಲಿದಾನವಾಗಿ ಕುರಿ, ಆಡು ಅಥವಾ ದನಗಳಂತಹ ಪ್ರಾಣಿಗಳನ್ನು ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಬಲಿ ನೀಡುತ್ತಾರೆ.‌ ಆದರೆ ಆಗ್ರಾದಲ್ಲಿ ವಕೀಲ ಗುಲ್ ಚಮನ್ ಶೇರ್ವಾನಿ ಮತ್ತು ಅವರ ಕುಟುಂಬವು ಸಾಂಪ್ರದಾಯಿಕ ತ್ಯಾಗವನ್ನು ತ್ಯಜಿಸಿ ಮೇಕೆ ಥೀಮ್ ನ ಕೇಕ್ ಅನ್ನು ಕತ್ತರಿಸುವ ಮೂಲಕ ಬಕ್ರೀದ್ ಆಚರಣೆ ಮಾಡಿದೆ.

ವಿಡಿಯೋ ನೋಡಿ:



ಕುಟುಂಬವು ಪ್ರೀತಿ ಮತ್ತು ಮಾನವೀಯತೆಯನ್ನು ಸಾರಿರುವ ಬಗ್ಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಆಚರಣೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕಾರ್ಯಕ್ರಮದ ಸಮಯದಲ್ಲಿ, ಕುಟುಂಬವು ಆಡಿನ ಚಿತ್ರದಿಂದ ಅಲಂಕರಿಸಲ್ಪಟ್ಟ ಕೇಕ್ ಅನ್ನು ತಂದು ಕುಟುಂಬ ಸಮೇತರಾಗಿ ಕತ್ತರಿಸಿದ್ದಾರೆ.

Viral Video: ಅವಹೇಳನ ಮೆಟ್ಟಿ ನಿಂತು ಯಶಸ್ಸು ಕಂಡ ಸಿಲೇಂದ್ರನ್ ಅರುಣಗಿರಿ: ಜೀವನದ ಗುಟ್ಟು ಹೇಳಿದ ಐಐಎಂ ಪದವೀಧರ

ಈ ಬಗ್ಗೆ ಮಾತನಾಡಿದ ವಕೀಲ ಗುಲ್ ಚಮನ್ ಶೇರ್ವಾನಿ, ಅಲ್ಲಾಹನು ಪ್ರದರ್ಶನಕ್ಕಿಂತ ಇಂತಹ ಆಚರಣೆಯನ್ನು ಗೌರವಿಸುತ್ತಾನೆ. ನಿಜವಾದ ತ್ಯಾಗವು ದುರಾಸೆ, ದ್ವೇಷ ಮತ್ತು ಅಹಂಕಾರದಂತಹ ಆಂತರಿಕ ದುಷ್ಟತನಗಳನ್ನು ತ್ಯಜಿಸುವುದು..ಇಂದು ಹಬ್ಬದ ಹೆಸರಿನಲ್ಲಿ ಅನೇಕರು ತಮ್ಮ ಹಣ ಹಾಗೂ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಿದ್ದಾರೆ. ಆದರೆ ಇದನ್ನೇ ಬಡವರಿಗೆ ದಾನ ಮಾಡಿದರೆ ದೇವರಿಗೆ ತಲುಪುತ್ತದೆ ಎಂದು ಹೇಳಿಕೊಂಡಿದ್ದಾರೆ.

ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಬಳಕೆದಾರ ರೊಬ್ಬರು ಮಾನವೀಯತೆ ಸಾರುವ ಆಚರಣೆ ಎಂದು ಬರೆದಿದ್ದಾರೆ. ಮತ್ತೊಬ್ಬರು ನಿಜಕ್ಕೂ ನಿಮ್ಮಂತ ಹೃದಯವಂತರಿಂದ ಭಾರತ ಮತ್ತಷ್ಟು ಗೆಲ್ಲುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.