Viral Video: ವಾಕಿಂಗ್ ಮಾಡುತ್ತಿದ್ದ ಮಹಿಳೆಯ ಮೇಲೆ ಭೀಕರ ದಾಳಿ ಮಾಡಿದ ಶ್ವಾನ; ಶಾಕಿಂಗ್ ವಿಡಿಯೊ ವೈರಲ್!
ಗ್ರೇಟರ್ ನೋಯ್ಡಾ ಪಶ್ಚಿಮದ ಇಕೋ ವಿಲೇಜ್ -1 ಸೊಸೈಟಿಯಲ್ಲಿ ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದ 37 ವರ್ಷದ ಮಹಿಳೆಯ ಮೇಲೆ ಇದ್ದಕ್ಕಿದ್ದಂತೆ ಸಾಕು ನಾಯಿಯೊಂದು ದಾಳಿ ಮಾಡಲು ಪ್ರಯತ್ನಿಸಿದ್ದು, ಅದರಿಂದ ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಮಹಿಳೆ 20 ಅಡಿಯಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾಳೆ. ಇಡೀ ಘಟನೆಯನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಲಖನೌ: ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿಗಿಂತ ಸಾಕು ನಾಯಿಗಳ ಹಾವಳಿ ಹೆಚ್ಚಾಗಿದೆ. ಇದ್ದಕ್ಕಿದ್ದಂತೆ ಸಾಕು ನಾಯಿಗಳು ಮನೆಯವರ ಮೇಲೆ ಅಥವಾ ಹೊರಗಿನವರ ಮೇಲೆ ದಾಳಿ ಮಾಡುವ ಅನೇಕ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ಗ್ರೇಟರ್ ನೋಯ್ಡಾ ಪಶ್ಚಿಮದ ಇಕೋ ವಿಲೇಜ್ -1 ಸೊಸೈಟಿಯಲ್ಲಿ ಸಾಕುನಾಯಿಯೊಂದು ದಾಳಿ ಮಾಡಿದ ಆಘಾತಕಾರಿ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಇಲ್ಲಿನ 37 ವರ್ಷದ ಮಹಿಳೆಯೊಬ್ಬಳು ಸೊಸೈಟಿ ಆವರಣದಲ್ಲಿ ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಸಾಕು ನಾಯಿಯೊಂದು ಅವಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದು, ಅದರಿಂದ ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಮಹಿಳೆ 20 ಅಡಿಯಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾಳೆ. ಇಡೀ ಘಟನೆಯನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಗಾಯಗೊಂಡ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದ್ದು, ತಕ್ಷಣ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯ ಬೆನ್ನುಮೂಳೆಗೆ ಗಾಯವಾಗಿದ್ದು, ಆಕೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯಂತೆ. ಸಂತ್ರಸ್ತೆ ಎಸ್ -2 ಟವರ್ ನಿವಾಸಿಯಾಗಿದ್ದು, ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಒಬ್ಬನಿಗೆ ಆರು ವರ್ಷ ಮತ್ತು ಇನ್ನೊಬ್ಬನಿಗೆ ಕೇವಲ ನಾಲ್ಕು ತಿಂಗಳು ಎನ್ನಲಾಗಿದೆ. ನಾಯಿ ಇದ್ದಕ್ಕಿದ್ದಂತೆ ಮಹಿಳೆಯ ಮೇಲೆ ಹಾರಿದ ಕಾರಣ ಭಯಗೊಂಡ ಆಕೆ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದಿರುವುದು ವಿಡಿಯೊದಲ್ಲಿ ರೆಕಾರ್ಡ್ ಆಗಿದೆ.
ವರದಿ ಪ್ರಕಾರ, ಸಂತ್ರಸ್ತೆ ಸುಮಾರು ಒಂಬತ್ತು ಗಂಟೆ ಸುಮಾರಿಗೆ, ಎಂದಿನಂತೆ ಸೊಸೈಟಿಯ ಪೋಡಿಯಂ ಮೇಲೆ ಬೆಳಿಗ್ಗೆ ವಾಕಿಂಗ್‍ಗೆ ಹೋಗಿದ್ದಳಂತೆ. ಅಲ್ಲಿ ಇನ್ನೊಬ್ಬ ಮಹಿಳೆ ತನ್ನ ಸಾಕು ನಾಯಿಯನ್ನು ಜೊತೆ ನಡೆದುಕೊಂಡು ಬರುವಾಗ ಆ ನಾಯಿ ಅವಳ ಮೇಲೆ ದಾಳಿ ಮಾಡಿತಂತೆ. ನಾಯಿ ಮಾಲೀಕಳಿಗೂ ಕೂಡ ನಾಯಿಯನ್ನು ಕಂಟ್ರೋಲ್ ಮಾಡುವುದಕ್ಕೆ ಸಾಧ್ಯವಾಗಲಿಲ್ಲವಂತೆ. ನಾಯಿಯ ದಾಳಿಯ ಸಂದರ್ಭದಲ್ಲಿ ಮಹಿಳೆ ಬ್ಯಾಲೆನ್ಸ್ ತಪ್ಪಿ ಸುಮಾರು 20 ಅಡಿ ಕೆಳಗೆ ಬಿದ್ದಿದ್ದಾಳೆ.
ವಿಡಿಯೊ ಇಲ್ಲಿದೆ ನೋಡಿ...
ग्रेटर नोएडा वेस्ट की सुपरटेक इको विलेज-1 सोसायटी में बड़ा हादसा!
— Greater Noida West (@GreaterNoidaW) May 5, 2025
पोडियम पर कुत्ते के पीछे भागने से एक महिला बाउंड्री से नीचे गिर गई और गंभीर रूप से घायल हो गई।
आरोप है कि कुत्ते को टहला रही महिला उसे काबू में नहीं रख सकी, जिससे ये हादसा हुआ। pic.twitter.com/TCHUHFiQGJ
ಘಟನೆಯ ಬಗ್ಗೆ ಸೊಸೈಟಿಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಗ್ಗಕ್ಕೆ ಕಟ್ಟಿದ ನಾಯಿಯನ್ನು ನಿಭಾಯಿಸಲು ಮಾಲೀಕರಿಗೆ ಸಾಧ್ಯವಾಗದಿದ್ದಾಗ, ಅವುಗಳನ್ನು ಹೊರಗೆ ಏಕೆ ಕರೆದುಕೊಂಡು ಬರುತ್ತೀರಿ ಎಂದು ಜನರು ಪ್ರಶ್ನಿಸಿದ್ದಾರೆ. ಈ ದುರಂತದ ಹೊಣೆಯನ್ನು ಯಾರು ಹೊರುತ್ತಾರೆ? ಸಾಕು ನಾಯಿಗಳಿಗೆ, ವಿಶೇಷವಾಗಿ ಆಕ್ರಮಣಕಾರಿ ತಳಿಗಳನ್ನು ಸಾಕುವ ಬಗ್ಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಮತ್ತು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಅಂಗಡಿಯವನ ಮೇಲೆ ಡೆಡ್ಲಿ ಆಟ್ಯಾಕ್ ಮಾಡಿದ ಹುಡುಗಿ- ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಿ!
ಈ ಘಟನೆ ವರದಿಯಾದ ಕೂಡಲೇ ಬಿಸ್ರಾಖ್ ಪೊಲೀಸ್ ಠಾಣೆ ತಂಡ ಸ್ಥಳಕ್ಕೆ ಬಂದು ಮಾಹಿತಿ ಕಲೆಹಾಕಿದ್ದಾರೆ. ಮಾಹಿತಿ ಪಡೆಯಲು ಪೊಲೀಸ್ ತಂಡವು ಇಡೀ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಮತ್ತು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ಪುರಾವೆಗಳ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ನಾಯಿಯ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.